ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ಪುನರ್ ರಚನೆ ಬಗ್ಗೆ ಸಚಿವರ ಒಗ್ಗಟ್ಟಿನ ಹೇಳಿಕೆ ಗುಟ್ಟು!

|
Google Oneindia Kannada News

ಬೆಂಗಳೂರು, ಜ. 27: ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾದ ಉಪ ಚುನಾವಣೆಯ ಫಲಿತಾಂಶ ಬಂದು ಎರಡು ತಿಂಗಳು ಆಗುತ್ತಾ ಬಂದಿದೆ. ಆದರೆ ಸಂಪಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಗಮನವನ್ನೇ ಕೊಡದೆ ನಿಗೂಢವಾಗಿರುವುದು ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಮಾತ್ರವಲ್ಲ, ಹಾಲಿ ಸಚಿವರುಗಳ ಆತಂಕಕ್ಕೂ ಕಾರಣವಾಗಿದೆ ಎನ್ನಲಾಗಿದೆ. ಯಾಕೆಂದರೆ ಸಚಿವ ಸಂಪುಟ ವಿಸ್ತರಣೆ ಬದಲು ಸಂಪುಟ ಪುನರ್ ರಚನೆ ಮಾಡಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ.

ಇದೇ ಹಿನ್ನೆಲೆಯಲ್ಲಿ ಹಾಲಿ ಸಚಿವರೆಲ್ಲರೂ ಒಗ್ಗಟ್ಟಿನ ಹೇಳಿಕೆ ಕೊಡುತ್ತಿದ್ದಾರೆ. ಸಂಪುಟ ಪುನರ್ ರಚನೆ ಮಾಡಲ್ಲ. ಸಂಪುಟ ವಿಸ್ತರಣೆ ಆಗುತ್ತದೆ. ಆದರೆ ಯಾವಾಗ ಆಗುತ್ತದೆ ಎಂಬುದು ನಮಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ಸಚಿವರ ಆರು ತಿಂಗಳುಗಳ ಕಾರ್ಯವೈಖರಿಯ ಬಗ್ಗೆ ವರದಿ ಸಂಗ್ರಹಿಸಿರುವುದು ಸಚಿವರ ಆತಂಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಉಪ ಚುನಾವಣೆಯ ಫಲಿತಾಂಶ ಬಂದು ಎರಡು ತಿಂಗಳು ಆಗುತ್ತಾ ಬಂದಿದ್ದರೂ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಹಸಿರು ನಿಶಾನೆ ತೋರಿಸದೆ ಇರುವುದು ಹಾಲಿ ಸಚಿವರನ್ನು ಚಿಂತೆಗೆ ದೂಡಿದೆ. ಫಲಿತಾಂಶ ಬಂದು 24 ಗಂಟೆಗಳಲ್ಲಿ ರಾಜೀನಾಮೆ ಕೊಟ್ಟು ಬಂದಿದ್ದವರನ್ನು ಮಂತ್ರಿ ಮಾಡಿಯೇ ಸಿದ್ಧ ಎಂಬ ಭರವಸೆಯನ್ನು ಪ್ರಚಾರದಲ್ಲಿ ಸಿಎಂ ಯಡಿಯೂರಪ್ಪ ಕೊಟ್ಟಿದ್ದರು.

ಸಂಪುಟ ವಿಸ್ತರಣೆ ವಿಳಂಬ ಹಾಲಿ ಸಚಿವರಿಗೂ ಶುರುವಾಯ್ತು ಆತಂಕ

ಸಂಪುಟ ವಿಸ್ತರಣೆ ವಿಳಂಬ ಹಾಲಿ ಸಚಿವರಿಗೂ ಶುರುವಾಯ್ತು ಆತಂಕ

ಉಪ ಚುನಾವಣೆಯ ಫಲಿತಾಂಶ ಬಂದು 24 ಗಂಟೆಗಳಲ್ಲಿ ರಾಜೀನಾಮೆ ಕೊಟ್ಟು ಬಂದಿದ್ದವರನ್ನು ಮಂತ್ರಿ ಮಾಡಿಯೇ ಸಿದ್ಧ ಎಂಬ ಭರವಸೆಯನ್ನು ಪ್ರಚಾರದಲ್ಲಿ ಸಿಎಂ ಯಡಿಯೂರಪ್ಪ ಕೊಟ್ಟಿದ್ದರು. ಆದರೆ ಅವರೂ ಕೂಡ ಇದೀಗ ಸಂಪುಟ ವಿಸ್ತರಣೆ ಬಗ್ಗೆ ಆಗುತ್ತದೆ ಎಂದು ಮಾತ್ರ ಹೇಳುತ್ತಿದ್ದಾರೆ. ಯಾವಾಗ ಸಂಪುಟ ವಿಸ್ತರಣೆ ಎಂಬುದರ ಬಗ್ಗೆ ಯಡಿಯೂರಪ್ಪ ಅವರೂ ಬಾಯಿ ಬಿಡುತ್ತಿಲ್ಲ.

ಸಿದ್ದರಾಮಯ್ಯ ಹುಲಿಯಾ ಆದರೆ ಸಿಎಂ ಯಡಿಯೂರಪ್ಪ ರಾಜಾಹುಲಿಸಿದ್ದರಾಮಯ್ಯ ಹುಲಿಯಾ ಆದರೆ ಸಿಎಂ ಯಡಿಯೂರಪ್ಪ ರಾಜಾಹುಲಿ

ಇದೀಗ ಬಿಜೆಪಿ ಹೈಕಮಾಂಡ್ ಸಂಪುಟ ವಿಸ್ತರಣೆಗಿಂತ ಸಂಪುಟ ಪುನರ್ ರಚನೆಯತ್ತ ಗಮನ ಕೊಟ್ಟಿದೆ ಎಂಬುದು ಹಾಲಿ ಸಚಿವರ ಆತಂಕಕ್ಕೆ ಕಾರಣವಾಗಿದೆ. ಸಂಪುಟ ಪುನರ್ ರಚನೆ ಮಾಡಿದರೆ ಕಾರ್ಯ ನಿರ್ವಹಣೆ ಆಧಾರದಲ್ಲಿ ಹಲವು ಸಚಿವರನ್ನು ಸಂಪುಟದಿಂದ ಕೈಬಿಡಲಾಗುವುದು ಎನ್ನಲಾಗಿದೆ. ಆದರಿಂದ ಹಿರಿಯ ಸಚಿವರಿಗೆ ಆತಂಕ ಶುರುವಾಗಿದೆ. ಅದರಿಂದಾಗಿ ಒಗ್ಗಟ್ಟಾಗಿ ಸಂಪುಟ ಪುನರ್ ರಚನೆ ಬಗ್ಗೆ ಮಾತನಾಡಿದ್ದಾರೆ.

ಸಚಿವರು ಸಂಪುಟ ಪುನರ್ ರಚನೆ ಇಲ್ಲ ಎನ್ನುತ್ತಿರುವುದು ಏಕೆ?

ಸಚಿವರು ಸಂಪುಟ ಪುನರ್ ರಚನೆ ಇಲ್ಲ ಎನ್ನುತ್ತಿರುವುದು ಏಕೆ?

ಸಂಪುಟ ವಿಸ್ತರಣೆ ಕುರಿತು ಮಾತನಾಡಿರುವ ಸಚಿವರು, ಸಂಪುಟ ವಿಸ್ತರಣೆ ಮಾತ್ರ ಆಗುತ್ತದೆ. ಸಂಪುಟ ಪುನರ್ ರಚನೆ ಆಗುತ್ತಿಲ್ಲ ಎಂದು ಒತ್ತಿಒತ್ತಿ ಹೇಳಿದ್ದಾರೆ. ಸಂಪುಟ ಪುನರ್ ರಚನೆ ಪುನರ್ ರಚನೆ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದು ವಿಧಾನಸೌಧದಲ್ಲಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ. ನಿನ್ನೆಯಷ್ಟೆ ಪಕ್ಷ ಬಯಸಿದರೆ ಸಂಪುಟಕ್ಕೆ ರಾಜೀನಾಮೆ ಕೊಡುವುದಾಗಿ ಮಾಧುಸ್ವಾಮಿ ಹೇಳಿಕೆ ಕೊಟ್ಟಿದ್ದರು.

ಇನ್ನು ಬೆಂಗಳೂರಿನಲ್ಲಿ ಮಾತನಾಡಿರುವ ಕಂದಾಯ ಸಚಿವ ಆರ್. ಅಶೋಕ್ ಕೂಡ ಪುನರ್ ರಚನೆ ಪ್ರಸ್ತಾಪವೇ ಇಲ್ಲ ಎಂದಿದ್ದಾರೆ. ಇದೇ ವಿಚಾರಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಆರೋಗ್ಯ ಸಚಿವ ಶ್ರೀರಾಮುಲು ಅವರು ಕೂಡ ಸಂಪುಟ ಪುನರ್ ರಚನೆ ಆಗುತ್ತಿಲ್ಲ, ವಿಸ್ತರಣೆ ಆಗುತ್ತದೆ ಎಂದಿದ್ದಾರೆ.

ಕಾರ್ಯವೈಖರಿ ವರದಿ ಆಧರಿಸಿ ಹಲವು ಮಂತ್ರಿಗಳಿಗೆ ಕೋಕ್?

ಕಾರ್ಯವೈಖರಿ ವರದಿ ಆಧರಿಸಿ ಹಲವು ಮಂತ್ರಿಗಳಿಗೆ ಕೋಕ್?

ಕಳೆದ ಆರು ತಿಂಗಳುಗಳಲ್ಲಿ 16 ಮಂತ್ರಿಗಳ ಕೆಲಸ, ಸಾಧನೆಗಳ ವರದಿಯನ್ನು ತರಿಸಿಕೊಂಡಿದೆ ಎನ್ನಲಾಗಿದೆ. ವರಧಿ ಆಧರಿಸಿ 7 ರಿಂದ 8 ಮಂತ್ರಿಗಳನ್ನು ಸಂಪುಟದಿಂದ ಕೈಬಿಡುತ್ತಾರೆ ಎನ್ನಲಾಗಿದೆ. ಅದರಲ್ಲಿ ನಾಲ್ಕೈದು ಹಿರಿಯ ಸಚಿವರೂ ಸೇರಿದ್ದಾರೆ ಎಂಬುದು ಮಂತ್ರಿಗಳ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿದೆ.

'ಸೋತವರಿಗೇಕೆ ಮಂತ್ರಿಸ್ಥಾನ' ಚರ್ಚೆಯ ಹಿಂದೆ ಎಂಟಿಬಿ ಹಣಿಯುವ ತಂತ್ರ?'ಸೋತವರಿಗೇಕೆ ಮಂತ್ರಿಸ್ಥಾನ' ಚರ್ಚೆಯ ಹಿಂದೆ ಎಂಟಿಬಿ ಹಣಿಯುವ ತಂತ್ರ?

ಹೀಗಾಗಿಯೆ ಹಲವು ಮಂತ್ರಿಗಳು ಸಂಪುಟ ಪುನರ್ ರಚನೆ ಆಗುವುದಿಲ್ಲ, ಸಂಪುಟ ವಿಸ್ತರಣೆ ಮಾತ್ರ ಆಗುತ್ತಿದೆ ಎಂದು ಒಗ್ಗಟ್ಟಿನ ಹೇಳಿಕೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾಧುಸ್ವಾಮಿ ಅವರ ಕಚೇರಿಯಲ್ಲಿ ನಡೆದ ಸಭೆ

ಮಾಧುಸ್ವಾಮಿ ಅವರ ಕಚೇರಿಯಲ್ಲಿ ನಡೆದ ಸಭೆ

ಬಹುತೇಕ ಮಂತ್ರಿಗಳು ಸಂಪುಟ ಪುನರ್ ರಚನೆ ಆಗಲ್ಲ, ವಿಸ್ತರಣೆ ಆಗುತ್ತದೆ ಎಂಬ ಹೇಳಿಕೆ ಕೊಟ್ಟಿರುವ ಸಂದರ್ಭದಲ್ಲೆ ಮೂವರು ಸಚಿವರು ಸಭೆ ನಡೆಸಿದ್ದಾರೆ ಎಂಬ ಮಾಹಿತಿ ಬಂದಿದೆ. ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರ ವಿಧಾನಸೌಧದ ಕೊಠಡಿಯಲ್ಲಿ ಮಾತುಕತೆ ನಡೆಸಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಜೆ.ಸಿ. ಮಾಧುಸ್ವಾಮಿ ಅವರು ಚರ್ಚೆ ನಡೆಸಿದ್ದಾರೆ.

ಜನರಿಗಾಗಿ ಆರೋಗ್ಯ ಸಚಿವ ಶ್ರೀರಾಮುಲು ಇಟ್ಟ ಬೇಡಿಕೆ ಏನು?ಜನರಿಗಾಗಿ ಆರೋಗ್ಯ ಸಚಿವ ಶ್ರೀರಾಮುಲು ಇಟ್ಟ ಬೇಡಿಕೆ ಏನು?

ಸಚಿವ ಸಂಪುಟ ಉಪಸಮಿತಿ ಸಭೆಯ ಬಳಿಕ ಪ್ರತ್ಯೇಕವಾಗಿ ಮೂವರು ಸಚಿವರು ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಶೀಘ್ರ ಸಂಪುಟ ವಿಸ್ತರಣೆ ಆಗದಿದ್ದಲ್ಲಿ ಪುನರ್ ರಚನೆ ಪಕ್ಕಾ?

ಶೀಘ್ರ ಸಂಪುಟ ವಿಸ್ತರಣೆ ಆಗದಿದ್ದಲ್ಲಿ ಪುನರ್ ರಚನೆ ಪಕ್ಕಾ?

ಜನವರಿ 29 ರಂದು ಸಂಪುಟ ವಿಸ್ತರಣೆ ಮಾಡಲು ಹೈಕಮಾಂಡ್ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂದೇಶ ರವಾನಿಸಿದೆ ಎಂಬ ಮಾಹಿತಿಯೂ ಇದೆ. ಆದರೆ ನಾಳೆ ಸಂಪುಟ ವಿಸ್ತರಣೆ ಆಗದೇ ಇದ್ದರೆ ಸಂಪುಟ ಪುನರ್ ರಚನೆ ಮಾಡುವುದು ಪಕ್ಕಾ ಎಂದೇ ಹೇಳಲಾಗುತ್ತಿದೆ. ಒಟ್ಟಾರೆ ಬಿಜೆಪಿ ಹೈಕಮಾಂಡ್ ನಿರ್ಧಾರದ ಮೇಲೆ ಸಂಪುಟದ ಭವಿಷ್ಯ ನಿಂತಿದೆ ಎನ್ನಬಹುದು.

ಬಿಜೆಪಿ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಗೆ ಹೊಸ ಸೇರ್ಪಡೆಬಿಜೆಪಿ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಗೆ ಹೊಸ ಸೇರ್ಪಡೆ

English summary
BJP high command going to reshuffle instead of cabinet expansion, so cabinet ministers showing their unity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X