ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3ನೇ ಅಲೆಯ ಎಚ್ಚರಿಕೆಯ ನಡುವೆಯೂ ದೆಹಲಿಯಲ್ಲೇ ಸಿಎಂ: ಹಳೆಯ ಪಾಠದಿಂದ ಕಲಿಯುವುದು ಯಾವಾಗ?

|
Google Oneindia Kannada News

ಎರಡು ವರ್ಷಗಳ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ, ಸಂಪುಟ ರಚನೆ ಮಾಡಲು ಬಿಜೆಪಿ ವರಿಷ್ಠರು ಅವರನ್ನು ಸುಮಾರು ಎರಡು ತಿಂಗಳು ಸತಾಯಿಸಿದ್ದರು. ಅದೂ, ಭೀಕರ ಉತ್ತರ ಕರ್ನಾಟಕದ ಪ್ರವಾಹದ ವೇಳೆ. ಆ ನೋವನ್ನು, ಬಿಎಸ್ವೈ ತಮ್ಮ ವಿದಾಯ ಭಾಷದಲ್ಲೂ ಪ್ರಸ್ತಾವಿಸಿದ್ದರು.

ಈಗ, ನೂತನ ಸಿಎಂ ಬಸವರಾಜ ಬೊಮ್ಮಾಯಿಯವರ ಸರದಿ. ಅಂದು ನೆರೆಯ ಹಾವಳಿ, ಈಗ ಸಂಭಾವ್ಯ ಮೂರನೇ ಕೊರೊನಾ ಹಾವಳಿ. ಸಿಎಂ ಆದ ನಂತರ ಎರಡು ಬಾರಿ ಬೊಮ್ಮಾಯಿಯವರು ದೆಹಲಿಗೆ ಪ್ರವಾಸ ಮಾಡಿದ್ದಾರೆ. ಭಾನುವಾರ ರಾತ್ರಿ ದೆಹಲಿಗೆ ಹೋದವರು, ಮಂಗಳವಾರ ರಾತ್ರಿಯಾದರೂ ದೆಹಲಿಯಲ್ಲಿದ್ದಾರೆ.

ಬೊಮ್ಮಾಯಿ ಸರಕಾರ ಅಲ್ಪಾಯುಶಿ: ಮೈಲಾರ ದೈವವಾಣಿಯಲ್ಲಿ ಉಲ್ಲೇಖವಾದ ಗಡ್ಡದಾರಿ ಸಿಎಂ ಯಾರು?ಬೊಮ್ಮಾಯಿ ಸರಕಾರ ಅಲ್ಪಾಯುಶಿ: ಮೈಲಾರ ದೈವವಾಣಿಯಲ್ಲಿ ಉಲ್ಲೇಖವಾದ ಗಡ್ಡದಾರಿ ಸಿಎಂ ಯಾರು?

ಯಾರನ್ನು ಸಚಿವರನ್ನಾಗಿ ಮಾಡಬೇಕು, ಯಾರನ್ನು ಮಾಡದಿದ್ದರೂ ಸಮಾಧಾನ ಪಡಿಸಬಹುದು, ಯಾರನ್ನೆಲ್ಲಾ ಸಂಪುಟದಲ್ಲಿ ಸೇರಿಸಿಕೊಂಡರೆ, ಆಡಳಿತ ಯಂತ್ರವನ್ನು ಚುರುಕುಗೊಳಿಸಬಹುದು, ಜನರ ವಿಶ್ವಾಸವನ್ನು ಹೇಗೆ ಪಡೆದುಕೊಳ್ಳಬಹುದು, ಸರಕಾರವನ್ನು ಹೇಗೆ ಉಳಿಸಿಕೊಳ್ಲಬಹುದು ಎನ್ನುವ ಲೆಕ್ಕಾಚಾರ ಮುಖ್ಯಮಂತ್ರಿಯಾದವರಿಗೆ ಇರುವುದಿಲ್ಲವೇ? ವರಿಷ್ಠರಿಂದಲೇ ಕಲಿಯಬೇಕೇ?

 ಬೊಮ್ಮಾಯಿ ನೂತನ ಸಂಪುಟದಲ್ಲಿ ಬ್ರಾಹ್ಮಣ ಕೋಟಾದ ಲೆಕ್ಕಾಚಾರ ಹೀಗಿದೆ ಬೊಮ್ಮಾಯಿ ನೂತನ ಸಂಪುಟದಲ್ಲಿ ಬ್ರಾಹ್ಮಣ ಕೋಟಾದ ಲೆಕ್ಕಾಚಾರ ಹೀಗಿದೆ

ಈ ಕಾರಣಕ್ಕಾಗಿಯೋ ಏನೋ ಇತ್ತೀಚಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷಗಳ ಮಹತ್ವ ಮುನ್ನಲೆಗೆ ಬರುತ್ತಿರುವುದು. ಆದರೆ, ಜೆಡಿಎಸ್ ಪಕ್ಷ ಇನ್ನೂ ಹೊಂದಾಣಿಕೆ ರಾಜಕೀಯದಲ್ಲೇ ತೃಪ್ತಿ ಕಾಣುತ್ತಿರುವುದರಿಂದ, ರಾಷ್ಟ್ರೀಯ ಪಕ್ಷಗಳ ಹಿಡಿತ ಹೆಚ್ಚಾಗುತ್ತಿರುವುದು. ಬೊಮ್ಮಾಯಿ ಸರಕಾರಕ್ಕೆ ಸಂಖ್ಯಾಬಲದ ಕೊರತೆ ಎದುರಾದರೆ, ಜೆಡಿಎಸ್ ಬೆಂಬಲ ನೀಡಬಹುದು ಎನ್ನುವ ಮಾತು ಚಾಲ್ತಿಯಲ್ಲಿದೆ.

 ವರಿಷ್ಠರ ಜೊತೆಗಿನ ಹಲವು ಸುತ್ತಿನ ಮಾತುಕತೆಯ ನಂತರವೂ, ಸಂಪುಟ ರಚನೆ ಫೈನಲ್ ಆಗಿಲ್ಲ

ವರಿಷ್ಠರ ಜೊತೆಗಿನ ಹಲವು ಸುತ್ತಿನ ಮಾತುಕತೆಯ ನಂತರವೂ, ಸಂಪುಟ ರಚನೆ ಫೈನಲ್ ಆಗಿಲ್ಲ

ಬಿಜೆಪಿ ವರಿಷ್ಠರ ಜೊತೆಗಿನ ಹಲವು ಸುತ್ತಿನ ಮಾತುಕತೆಯ ನಂತರವೂ, ಸಂಪುಟ ರಚನೆಯ ಕಸರತ್ತು ಫೈನಲ್ ಆದಂತಿಲ್ಲ. ಮಂಗಳವಾರ (ಆ 3) ರಾತ್ರಿ 9.15ಕ್ಕೆ ದೆಹಲಿಯಿಂದ ಸಿಎಂ ಬೊಮ್ಮಾಯಿ ಹೊರಡಬೇಕಾಗಿತ್ತು. ಆದರೆ, ಫ್ಲೈಟ್ ಟಿಕೆಟ್ ಅನ್ನು ಬೊಮ್ಮಾಯಿ ಕ್ಯಾನ್ಸಲ್ ಮಾಡಿದ್ದಾರೆ. ಅಲ್ಲಿಗೆ, ದೆಹಲಿಗೆ ಹೋಗಿ 48 ಗಂಟೆಯಾದರೂ, ಸಂಪುಟ ರಚನೆಯ ಗೊಂದಲಕ್ಕೆ ತೆರೆಬಿದ್ದಂತಿಲ್ಲ. ಬುಧವಾರ ಸಂಜೆ ನೂತನ ಸಚಿವರ ಪ್ರಮಾಣವಚನ ನಡೆಯುವುದು ಬಹುತೇಕ ಖಚಿತ ಎನ್ನುವ ವಿಚಾರಕ್ಕೆ ಸದ್ಯಕ್ಕಂತೂ ಸ್ಪಷ್ಟ ಉತ್ತರವಿಲ್ಲ. ಬುಧವಾರ ಮಧ್ಯಾಹ್ನ ಪದಗ್ರಹಣ ಸಮಾರಂಭ ನಡೆಯಬಹುದು ಎಂದು ಹೇಳಲಾಗುತ್ತಿದೆ.

 ರಾಜ್ಯ ಸರಕಾರಕ್ಕೆ ಸದ್ಯದ ಮಟ್ಟಿಗೆ ವಾರಸುದಾರ ಅಂತ ಇರುವುದು ಮುಖ್ಯಮಂತ್ರಿಗಳೊಬ್ಬರೇ

ರಾಜ್ಯ ಸರಕಾರಕ್ಕೆ ಸದ್ಯದ ಮಟ್ಟಿಗೆ ವಾರಸುದಾರ ಅಂತ ಇರುವುದು ಮುಖ್ಯಮಂತ್ರಿಗಳೊಬ್ಬರೇ

ರಾಜ್ಯ ಸರಕಾರಕ್ಕೆ ಸದ್ಯದ ಮಟ್ಟಿಗೆ ಇರುವ ಏಕೈಕ ವ್ಯಕ್ತಿಯೆಂದರೆ ಅದು ಮುಖ್ಯಮಂತ್ರಿಗಳೊಬ್ಬರೇ. ಎಲ್ಲಾ ಇಲಾಖೆಯ ಜವಾಬ್ದಾರಿಯನ್ನು ಇವರೇ ನಿರ್ವಹಿಸಬೇಕಿದೆ, ನೆರೆ ಪೀಡಿತ ಪ್ರದೇಶಗಳಲ್ಲಿ ವಾರ್ ಫೂಟ್ ನಲ್ಲಿ ಪರಿಹಾರ ಕೆಲಸ ನಡೆಯಬೇಕಿದೆ. ಇದು ಒಂದು ಕಡೆಯಾದರೆ, ಸಂಭಾವ್ಯ ಮೂರನೇ ಅಲೆಯ ಎಚ್ಚರಿಕೆಯನ್ನು ಎಕ್ಸ್ ಪರ್ಟ್ ಗಳು ನೀಡಿದ್ದಾರೆ. ಎರಡನೇ ಅಲೆಯ ಕೆಟ್ಟ ನಿರ್ವಹಣೆ ಈ ಬಾರಿ ಮತ್ತೆ ರಿಪೀಟ್ ಆಗಬಾರದು. ಬೊಮ್ಮಾಯಿ ಸರಕಾರಕ್ಕೆ ಈ ಗುರುತರ ಜವಾಬ್ದಾರಿಯಿದೆ.

 ಕೊರೊನಾಕ್ಕೆ ಸಂಬಂಧ ಪಟ್ಟಂತೆ ತೆಗೆದುಕೊಳ್ಳುವ ಯಾವುದೇ ಕ್ರಮಗಳು ನೇರವಾಗಿ ಸಾರ್ವಜನಿಕರಿಗೆ ಎಫೆಕ್ಟ್

ಕೊರೊನಾಕ್ಕೆ ಸಂಬಂಧ ಪಟ್ಟಂತೆ ತೆಗೆದುಕೊಳ್ಳುವ ಯಾವುದೇ ಕ್ರಮಗಳು ನೇರವಾಗಿ ಸಾರ್ವಜನಿಕರಿಗೆ ಎಫೆಕ್ಟ್

ಕೊರೊನಾಕ್ಕೆ ಸಂಬಂಧ ಪಟ್ಟಂತೆ ತೆಗೆದುಕೊಳ್ಳುವ ಯಾವುದೇ ಕ್ರಮಗಳು ನೇರವಾಗಿ ಸಾರ್ವಜನಿಕರಿಗೆ ಮತ್ತು ದೈನಂದಿನ ಜೀವನ, ಆರ್ಥಿಕತೆಗೆ ಕಾರಣವಾಗುವುದರಿಂದ, ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳುವ ಸಮಯವಿದು. ಯಾಕೆಂದರೆ, ಹದಿನಾರು ತಿಂಗಳಿನಿಂದ ಜನರು ಹೈರಾಣವಾಗಿ ಹೋಗಿದ್ದಾರೆ. ಇಂತಹ ಸಮಯದಲ್ಲಿ ನಾಡಿನ ದೊರೆಗಳು ದೆಹಲಿಯಲ್ಲಿ ಸಂಪುಟ ರಚನೆಯ ವಿಚಾರದಲ್ಲಿ ಮಗ್ನರಾಗಿ, ದೆಹಲಿಯಲ್ಲೇ ಸಮಯ ಕಳೆದರೆ, ಆಡಳಿತ ವ್ಯವಸ್ಥೆ ಏನಾಗಬೇಡ ಎನ್ನುವ ಅರಿವು ವರಿಷ್ಠರಿಗೆ ಯಾಕಿಲ್ಲ ಎನ್ನುವುದಿಲ್ಲಿ ಪ್ರಶ್ನೆ.

Recommended Video

CM ಗೆ ಶುರು ಆಯ್ತು ಹೊಸ ತಲೆನೋವು !! | Oneindia Kannada
 3ನೇ ಅಲೆಯ ಎಚ್ಚರಿಕೆ, ಹಳೆಯ ಪಾಠದಿಂದ ಕಲಿಯುವುದು ಯಾವಾಗ?

3ನೇ ಅಲೆಯ ಎಚ್ಚರಿಕೆ, ಹಳೆಯ ಪಾಠದಿಂದ ಕಲಿಯುವುದು ಯಾವಾಗ?

ಅತ್ತ ಸಂಪುಟ ರಚನೆಯಾಗದಿದ್ದರೆ, ಲಾಬಿ ನಡೆಸುತ್ತಿರುವ ಡಜನ್ ಗಟ್ಟಲೆ ಶಾಸಕರು ದೆಹಲಿಯಲ್ಲೋ, ಬೆಂಗಳೂರಿನಲ್ಲೋ ಬೀಡು ಬಿಡುತ್ತಾರೆ. ತಮ್ಮತಮ್ಮ ಕ್ಷೇತ್ರದ ಜವಾಬ್ದಾರಿಯನ್ನು ಬದಿಗೊತ್ತಿ, ವರಿಷ್ಠರ, ಸಂಘಟನೆಯ ಪ್ರಮುಖರನ್ನು ಓಲೈಸುವುದರಲ್ಲೇ ಕಾಲ ಕಳೆಯುತ್ತಾರೆ. ಕೊರಾನಾ ಮೂರನೇ ಅಲೆಯ ಬಗ್ಗೆ ಎಕ್ಸ್ ಪರ್ಟ್ ಗಳು ಎಚ್ಚರ ತಪ್ಪದಂತೆ ಸಲಹೆಯನ್ನು ನೀಡಿದ್ದಾರೆ. ಆಕ್ಸಿಜನ್, ಬೆಡ್, ಅಂಬುಲೆನ್ಸ್ ಮುಂತಾದ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಬೇಕಿದೆ. ಹಾಗಾಗಿ, ಸಿಎಂ ಬೊಮ್ಮಾಯಿಯವರು ದೆಹಲಿಯಿಂದ ರಾಜ್ಯಕ್ಕೆ ಬಂದು ಸಮಾರೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕಿದೆ. ಆಡಳಿತ ಯಂತ್ರ ತುರ್ತಾಗಿ ಚುರುಕುಗೊಳಿಸಬೇಕಾಗಿರುವುದನ್ನು ನಮ್ಮನ್ನು ಆಳುವವರು ಅರಿಯುವುದು ಯಾವಾಗಲೋ?

English summary
BJP High Command Yet To Give Green Signal, CM Bommai In Delhi Amid Corona 3rd Wave Alert. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X