• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಕಸಭೆ ಚುನಾವಣೆ ನಂತರ ಯಡಿಯೂರಪ್ಪ ಮೂಲೆಗುಂಪಾಗಲಿದ್ದಾರಾ?

|
   ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಸ್ಥಾನಕ್ಕೆ ಕುತ್ತು ಬಂದಿದ್ಯಾ? | Oneindia Kannada

   ಬೆಂಗಳೂರು, ಸೆಪ್ಟೆಂಬರ್ 25: ಲೋಕಸಭೆ ಚುನಾವಣೆ ನಂತರ ರಾಜ್ಯ ಬಿಜೆಪಿಗೆ ಮೇಜರ್ ಸರ್ಜರಿ ಮಾಡಲಿದ್ದು, ಬಿಜೆಪಿಯ ಪ್ರಮುಖ ವಿಕೆಟ್‌ ಒಂದನ್ನು ಹಿನ್ನೆಲೆಗೆ ಕಳುಹಿಸುವ ಎಲ್ಲ ಸಾಧ್ಯತೆ ಇದೆ.

   ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಲೋಕಸಭೆ ಚುನಾವಣೆ ನಂತರ ಪಕ್ಷದ ಹಿಂದಿನ ಸೀಟಿಗೆ ವರ್ಗ ಮಾಡಲಾಗುತ್ತದೆ ಎಂದು ಬಿಜೆಪಿಯಲ್ಲೇ ಮಾತುಗಳು ಕೇಳಿಬರುತ್ತಿವೆ. ಲೋಕಸಭೆ ಚುನಾವಣೆ ನಂತರ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಹೊಸಬರ ಹೆಗಲೇರಲಿದೆ ಎಂಬ ಮಾತುಗಳು ಬಿಜೆಪಿಯಲ್ಲಿ ಹರಿದಾಡುತ್ತಿವೆ.

   ಬಿಎಸ್ ವೈಗೆ ಢವಢವ: ನ.14ಕ್ಕೆ ಡಿನೋಟಿಫಿಕೇಷನ್ ಪ್ರಕರಣ ವಿಚಾರಣೆ

   ಬಿಜೆಪಿ ಹೈಕಮಾಂಡ್ ಈ ಬಗ್ಗೆ ಯೋಜನೆ ಮಾಡಿದ್ದು, ಬದಲಾವಣೆಯ ನಿರ್ಣಯಕ್ಕೆ ಯಡಿಯೂರಪ್ಪ ಅವರ ವಯಸ್ಸು ಹಾಗೂ ಅವರ ಮಲತಾಯಿ ಧೋರಣೆಗಳೇ ಕಾರಣ ಎನ್ನಲಾಗುತ್ತಿದೆ. ಜೊತೆಗೆ ಈಗಿನ ರಾಜ್ಯ ರಾಜಕೀಯ ಪರಿಸ್ಥಿತಿಯನ್ನು ನಿಭಾಯಿಸಲು ಯಡಿಯೂರಪ್ಪ ವಿಫಲರಾಗಿದ್ದಾರೆ ಎಂದೂ ಸಹ ಬಿಜೆಪಿ ಹೈಕಮಾಂಡ್ ಅಸಮಾಧಾನಗೊಂಡಿದೆ.

   ಲೋಕಸಭೆ ಚುನಾವಣೆ ಬಳಿಕ ಬಿಎಸ್‌ವೈ ಮೂಲೆಗೆ?

   ಲೋಕಸಭೆ ಚುನಾವಣೆ ಬಳಿಕ ಬಿಎಸ್‌ವೈ ಮೂಲೆಗೆ?

   ಯಡಿಯೂರಪ್ಪ ಅವರು ತಮ್ಮ ಆಪ್ತೇಷ್ಟರಿಗೆ ಮಾತ್ರವೇ ಮಣೆ ಹಾಕುತ್ತಾರೆ ಎಂಬ ಆರೋಪ ಮೊದಲಿನಿಂದಲೂ ಇದೆ. ಅಷ್ಟೆ ಅಲ್ಲದೆ ಅವರ ಹೊಂದಾಣಿಕೆ ರಾಜಕಾರಣದ ಬಗ್ಗೆಯೂ ಹೈಕಮಾಂಡ್‌ಗೆ ಅಸಮಾಧಾನವಿದೆ ಹಾಗಾಗಿ ಲೋಕಸಭೆ ಚುನಾವಣೆ ನಂತರ ಪಕ್ಷದ ಅಧ್ಯಕ್ಷ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಸಾಧ್ಯತೆ ದಟ್ಟವಾಗಿದೆ.

   ರಾಜ್ಯ ಬಿಜೆಪಿ ಬಗ್ಗೆ ಹೈಕಮಾಂಡ್ ಅಸಮಾಧಾನ

   ರಾಜ್ಯ ಬಿಜೆಪಿ ಬಗ್ಗೆ ಹೈಕಮಾಂಡ್ ಅಸಮಾಧಾನ

   ಇತ್ತೀಚೆಗಷ್ಟೆ ಬಿಜೆಪಿ ಮುಖಂಡ ಲೆಹರ್ ಸಿಂಗ್ ಅವರು ರಾಜ್ಯ ಬಿಜೆಪಿಗೆ ಬರೆದಿದ್ದ ಪತ್ರದಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದರು. ರಾಷ್ಟ್ರ ಬಿಜೆಪಿ ನಾಯಕರ 'ಸ್ಟಾಂಡರ್ಡ್‌'ಗೆ ತಕ್ಕ ಹಾಗೆ ರಾಜ್ಯ ಬಿಜೆಪಿ ವರ್ತಿಸುತ್ತಿಲ್ಲ ಎಂಬ ಭಾವ ಅವರ ಪತ್ರದಲ್ಲಿ ಎದ್ದು ಕಾಣುತ್ತಿತ್ತು. ಇದೇ ಅಭಿಪ್ರಾಯವನ್ನು ಹೈಕಮಾಂಡ್ ಸಹ ಬಿಜೆಪಿ ಮೇಲೆ ಹೊಂದಿದೆ.

   ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬದಲಾಯಿಸಿ, ಅಮಿತ್‌ ಶಾಗೆ ಪತ್ರ!

   ಯಡಿಯೂರಪ್ಪ ಅವರ ವಯಸ್ಸು ಸಹ ಕಾರಣ

   ಯಡಿಯೂರಪ್ಪ ಅವರ ವಯಸ್ಸು ಸಹ ಕಾರಣ

   ಯಡಿಯೂರಪ್ಪ ಅವರ ವಯಸ್ಸು ಸಹ ಬಿಜೆಪಿಯ ನಿರ್ಣಯಕ್ಕೆ ಇಂಬು ನೀಡಿದೆ. ಯಡಿಯೂರಪ್ಪ ಅವರ ವಯಸ್ಸು 75 ಮೀರಿದ್ದು, ಬಿಜೆಪಿಯ ಆಂತರಿಕ ನಿಯಮದ ಅನ್ವಯ 75 ವಯಸ್ಸು ದಾಟಿದವರಿಗೆ ಪ್ರಮುಖ ಹುದ್ದೆಗಳನ್ನು ನೀಡುವಂತಿಲ್ಲ. ಆದರೆ ಕರ್ನಾಟಕ ರಾಜ್ಯದಲ್ಲಿ ಯಡಿಯೂರಪ್ಪ ಅವರಿಗೆ ಸರಿಸಮಾನವಾದ ಮತ್ತೊಬ್ಬ ನಾಯಕ ಸಿಗದ ಕಾರಣ ಯಡಿಯೂರಪ್ಪ ಅವರನ್ನೇ ಮುಂದುವರೆಸಲಾಗಿತ್ತು. ಅಲ್ಲದೆ ಅವರನ್ನೇ ಸಿಎಂ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು.

   ಯಡಿಯೂರಪ್ಪ ಅವರೇ ಬಿಜೆಪಿಯ ಪ್ರಭಾವಿ ಮುಖ

   ಯಡಿಯೂರಪ್ಪ ಅವರೇ ಬಿಜೆಪಿಯ ಪ್ರಭಾವಿ ಮುಖ

   ಪ್ರಸ್ತುತ ಸಮಯದಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಅಷ್ಟು ಪ್ರಭಾವಿ ನಾಯಕ ಮತ್ತೊಬ್ಬರಿಲ್ಲ ಹಾಗಾಗಿ ಲೋಕಸಭೆ ಚುನಾವಣೆಯ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ. ಕನಿಷ್ಟ 20 ಸ್ಥಾನ ಗೆಲ್ಲುವ ಗುರಿ ನೀಡಲಾಗಿದೆ. ಚುನಾವಣೆ ಮುಗಿದ ನಂತರ ಫಲಿತಾಂಶ ಏನೇ ಬರಲಿ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಕಾರ್ಯವನ್ನು ಬಿಜೆಪಿ ಹೈಕಮಾಂಡ್ ಮಾಡಲಿದೆ.

   ಕರ್ನಾಟಕ ಬಿಜೆಪಿ ನಾಯಕರಿಗೆ ಬುದ್ಧಿವಾದ ಹೇಳಿ ಲೆಹರ್ ಸಿಂಗ್ ಪತ್ರ!

   ಯಡಿಯೂರಪ್ಪ ವಿರುದ್ಧ ಪಕ್ಷದಲ್ಲೇ ಅಸಮಾಧಾನ?

   ಯಡಿಯೂರಪ್ಪ ವಿರುದ್ಧ ಪಕ್ಷದಲ್ಲೇ ಅಸಮಾಧಾನ?

   ಯಡಿಯೂರಪ್ಪ ಅವರ ಅನಭಿಶಿಕ್ತತೆ ಹಾಗೂ ಆಪ್ತರಿಗೆ ಮಾತ್ರ ಮಣೆ ಹಾಕುವ ವರ್ತನೆ ಬಗ್ಗೆ ಬಿಜೆಪಿಯಲ್ಲಿ ಹಲವರ ವಿರೋಧವೂ ಇದೆ. ಹಾಗಾಗಿ ಇತ್ತೀಚೆಗಷ್ಟೆ ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಹೈಕಮಾಂಡ್‌ಗೆ ಪತ್ರ ಸಹ ಬರೆಯಲಾಗಿತ್ತು ಅದು ಮಾಧ್ಯಮಗಳಿಗೆ ದೊರೆತಿತ್ತು. ಅಷ್ಟೆ ಅಲ್ಲದೆ ರಾಜ್ಯದ ಕೆಲವು ಮುಖಂಡರು ನೇರವಾಗಿ ಹೈಕಮಾಂಡ್‌ ಬಳಿ ಈ ಬಗ್ಗೆ ದೂರು ಸಹ ನೀಡಿದ್ದಾರೆ ಎನ್ನಲಾಗಿದೆ.

   ಯಡಿಯೂರಪ್ಪ ನಂತರ ಯಾರು?

   ಯಡಿಯೂರಪ್ಪ ನಂತರ ಯಾರು?

   ರಾಜ್ಯ ಬಿಜೆಪಿಯ ಪ್ರಭಾವಿ ಮುಖಂಡ ಯಡಿಯೂರಪ್ಪ. ಅವರಿಗಿರುವ ವರ್ಚಸ್ಸು ಪಕ್ಷದಲ್ಲಿ ಇನ್ನಾರಿಗೂ ಇಲ್ಲ. ಹಾಗಾಗಿ ಯಡಿಯೂರಪ್ಪ ನಂತರ ರಾಜ್ಯ ಬಿಜೆಪಿಗೆ ದಿಕ್ಕು ಯಾರು ಎಂಬುದು ಸಹ ಪ್ರಮುಖ ಪ್ರಶ್ನೆಯಾಗಿದೆ. ಕೇಂದ್ರದಲ್ಲಿ ಸಕ್ರಿಯರಾಗಿರುವ ಅನಂತ್‌ಕುಮಾರ್ ಅಥವಾ ಸದಾನಂದಗೌಡ ಅವರನ್ನು ರಾಜ್ಯ ರಾಜಕಾರಣಕ್ಕೆ ಮರಳಿ ಕರೆತರಲಾಗುವುದು ಎನ್ನಲಾಗುತ್ತಿದೆ. ಅಥವಾ ಈಶ್ವರಪ್ಪ , ಶ್ರೀರಾಮುಲು, ಆರ್‌.ಅಶೋಕ್‌ ಅವರಿಗೆ ರಾಜ್ಯದ ಚುಕ್ಕಾಣಿ ನೀಡುವ ಬಗ್ಗೆ ಸಹ ಹೈಕಮಾಂಡ್ ಚಿಂತನೆ ನಡೆಸಬಹುದಾಗಿದೆ. ಸಂತೋಶ್ ಜೀ ಸಹ ಹೈಕಮಾಂಡ್‌ನ ಆಯ್ಕೆ ಆಗುವ ಸಾಧ್ಯತೆ ಇದೆ.

   English summary
   BJP high command may remove Yeddyurappa from BJP state president position after the Lok Sabha elections 2019. High command taking this decision considering his age and other factors
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X