ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಸಂಪುಟ ವಿಸ್ತರಣೆ: ಸಂತಸದೊಂದಿಗೆ ಅಘಾತವನ್ನೂ ಕೊಟ್ಟ ಬಿಜೆಪಿ ಹೈಕಮಾಂಡ್!

|
Google Oneindia Kannada News

ಬೆಂಗಳೂರು, ಜ. 12: ಸಂಪುಟ ವಿಸ್ತರಣೆ ಮಾತ್ರ ಎಂದು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದ ರಾಜ್ಯ ಸಚಿವ ಸಂಪುಟದ ಸದಸ್ಯರಿಗೆ ಬಿಜೆಪಿ ಹೈಕಮಾಂಡ್ ಅಘಾತ ನೀಡಿದೆ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಳಿಕ ಸಚಿವರ ಖಾತೆ ಬದಲಾವಣೆ ಮಾಡಲು ಹೈಕಮಾಂಡ್, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಪೂರ್ಣ ಸ್ವಾತಂತ್ರ ಕೊಟ್ಟಿದೆ. ಹೀಗಾಗಿ ನಾಳೆ (ಜ.13) ರಂದು ಸಚಿವ ಸಂಪುಟ ವಿಸ್ತರಣೆ ಬಳಿಕ ತಮ್ಮ ಬಳಿ ಇರುವ ಖಾತೆಗಳನ್ನು ಹಂಚುವುದರೊಂದಿಗೆ ಹಲವು ಸಚಿವರ ಖಾತೆ ಬದಲಾವಣೆಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತೀರ್ಮಾನ ಮಾಡಿದ್ದಾರೆ ಎಂಬ ಮಾಹಿತಿಯಿದೆ.

ಪ್ರಮುಖವಾಗಿ ಹಿರಿಯ ಸಚಿವರುಗಳ ಖಾತೆಗಳನ್ನು ಬದಲಾಯಿಸುವ ಲೆಕ್ಕಾಚಾರವನ್ನು ಸಿಎಂ ಯಡಿಯೂರಪ್ಪ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಬಿಜೆಪಿ ಸರ್ಕಾರ ರಚನೆಯಲ್ಲಿ ಕೈ ಜೋಡಿಸಿದವರಿಗೆ ಬಯಸಿದ ಖಾತೆಗಳನ್ನು ನೀಡುವುದು ಹಾಗೂ ಹಾಲಿ ಸಚಿವರಲ್ಲಿ ಕೆಲವರಿಗೆ ಹಂಚಿಕೆ ಮಾಡಲಾಗಿರುವ ಖಾತೆಗಳನ್ನು ಬದಲಾವಣೆ ಮಾಡುವ ನಿರ್ಧಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿದ್ದಾರೆ ಎನ್ನಲಾಗಿದೆ.

ಹಲವು ಸಚಿವರು ತಮ್ಮ ಖಾತೆಗಳ ಬದಲಾವಣೆಗೆ ಬೇಡಿಕೆ ಇಟ್ಟಿರುವುದು ಕೂಡ ಯಡಿಯೂರಪ್ಪ ಅವರು ಈ ನಿರ್ಧಾರಕ್ಕೆ ಬರಲು ಕಾರಣ ಎನ್ನಲಾಗಿದೆ. ಯಾವ ಸಚಿವರ ಯಾವ ಖಾತೆ ಬದಲಾವಣೆ? ಇಲ್ಲಿದೆ ಮಾಹಿತಿ!

ಯಾರ ಖಾತೆಗಳ ಬದಲಾವಣೆ?

ಯಾರ ಖಾತೆಗಳ ಬದಲಾವಣೆ?

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಗೃಹ ಇಲಾಖೆ ಬದಲು ಜಲಸಂಪನ್ಮೂಲ ಖಾತೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಹಿಂದೆ ಜಲಸಂಪನ್ಮೂಲ ಸಚಿವರಾಗಿ ಬಸವರಾಜ್ ಬೊಮ್ಮಾಯಿ ಇಲಾಖೆ ನಿರ್ವಹಿಸಿದ್ದರು. ಆದರೆ, ಯಡಿಯೂರಪ್ಪ ಅವರು ರಮೇಶ್ ಜಾರಕಿಹೊಳಿ ಅವರಿಗೆ ಪಕ್ಷ ಸೇರ್ಪಡೆ ಸಂದರ್ಭದಲ್ಲಿಯೇ ಜಲಸಂಪನ್ಮೂಲ ಇಲಾಖೆ ನೀಡುವ ಭರವಸೆ ಮೇಲೆ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು. ಹೀಗಾಗಿ ಜಲಸಂಪನ್ಮೂಲ ಖಾತೆ ಬಸವರಾಜ್ ಬೊಮ್ಮಾಯಿ ಅವರ ಕೈತಪ್ಪಿದೆ. ಹೀಗಾಗಿ ಸಿಎಂ ಯಡಿಯೂರಪ್ಪ ಅವರು ಬೊಮ್ಮಾಯಿ ಅವರ ಗೃಹ ಖಾತೆ ಬದಲಿಸಿ, ಕಂದಾಯ ಇಲಾಖೆ ನೀಡುವ ಆಲೋಚನೆ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಕಂದಾಯ ಇಲಾಖೆ ಬದಲಾವಣೆ?

ಕಂದಾಯ ಇಲಾಖೆ ಬದಲಾವಣೆ?

ಇನ್ನು ಕಂದಾಯ ಸಚಿವ ಅಶೋಕ್ ಅವರಿಗೆ ಮತ್ತೆ ಗೃಹ ಇಲಾಖೆ ಕೊಡುವ ಆಲೋಚನೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹೊಂದಿದ್ದಾರೆ ಎನ್ನಲಾಗಿದೆ. ಆದರೆ ಮೊದಲಿನಿಂದಲೂ ಆರ್. ಅಶೋಕ್ ಅವರು ಬೆಂಗಳೂರು ನಗರಾಭಿವೃದ್ಧಿಗೆ ಖಾತೆಗೆ ಪಟ್ಟು ಹಿಡಿದಿದ್ದಾರೆ. ಅವರೊಂದಿಗೆ ಅದೇ ಖಾತೆ ತಮಗೆ ಬೇಕೆಂದು ಆರ್‌.ಆರ್. ನಗರದ ಶಾಸಕರ ಮುನಿರತ್ನ ಕೂಡ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ.

ಮತ್ತೆ ಕಗ್ಗಂಟಾದ ಬೆಂಗಳೂರು ಅಭಿವೃದ್ಧಿ

ಮತ್ತೆ ಕಗ್ಗಂಟಾದ ಬೆಂಗಳೂರು ಅಭಿವೃದ್ಧಿ

ಮತ್ತೊಂದು ಒತ್ತಡ ಕೂಡ ಸಿಎಂ ಯಡಿಯೂರಪ್ಪ ಅವರ ಮೇಲಿದೆ. ಮುನಿರತ್ನ ಅವರಿಗೆ ಬೆಂಗಳೂರು ಅಭಿವೃದ್ಧಿಯಂತಹ ದೊಡ್ಡ ಖಾತೆ ನೀಡಬಾರದು ಎಂದು ಆರ್. ಅಶೋಕ್ ಹಾಗೂ ಡಾ. ಅಶ್ವಥ್ ನಾರಾಯಣ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುನಿರತ್ನಗೆ ಬೆಂಗಳೂರು ನಗರಾಭಿವೃದ್ದಿ ಕೈತಪ್ಪುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಬೆಂಗಳೂರು ಶಾಸಕರಲ್ಲಿ ಅಸಮಾಧಾನ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು ಸಿಎಂ ತಮ್ಮ ಬಳಿಯೆ ಇಟ್ಟುಕೊಳ್ಳಲಿದ್ದಾರೆ ಎಂಬ ಮಾಹಿತಿಯಿದೆ.

ಸಚಿವ ಈಶ್ವರಪ್ಪ ಅವರಿಗೆ ಯಾವ ಖಾತೆ?

ಸಚಿವ ಈಶ್ವರಪ್ಪ ಅವರಿಗೆ ಯಾವ ಖಾತೆ?

ಕೆಲ ದಿನಗಳಿಂದ ಸಿಎಂ ಯಡಿಯೂರಪ್ಪ ಅವರೊಂದಿಗೆ ಮುನಿಸಿಕೊಂಡಂತಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಇಂಧನ ಖಾತೆ ನೀಡುವ ಬಗ್ಗೆ ಸಿಎಂ ಒಲವು ಹೊಂದಿದ್ದಾರೆ. ಈಶ್ವರಪ್ಪ ಅವರ ಬಳಿ ಇರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯನ್ನು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ನೀಡುವ ಆಲೋಚನೆಯನ್ನು ಯಡಿಯೂರಪ್ಪ ಹೊಂದಿದ್ದಾರೆ ಎನ್ನಲಾಗುತ್ತಿದೆ. ಕೈಗಾರಿಕಾ ಖಾತೆಯನ್ನು ಹೊಸದಾಗಿ ಸಂಪುಟ ಸೇರುವವರಲ್ಲಿ ಯಾರಿಗಾದರೂ ಕೊಡಬೇಕು ಎನ್ನುವ ಲೆಕ್ಕಾಚಾರ ಸಿಎಂ ಅವರದ್ದು ಎಂದು ಹೇಳಲಾಗುತ್ತಿದೆ.


ಸಂಪುಟ ವಿಸ್ತರಣೆಯ ನಂತರ ಸಚಿವ ಸುಧಾಕರ್ ಬಳಿ ಇರುವ ವೈದ್ಯಕೀಯ ಶಿಕ್ಷಣ ಖಾತೆ ಹಾಗೂ ಶಿವರಾಮ್ ಹೆಬ್ಬಾರ್ ಬಳಿ ಇರುವ ಸಕ್ಕರೆ ಖಾತೆಯನ್ನು ವಾಪಸ್ ಪಡೆದು ನೂತನ ಸಚಿವರಿಗೆ ಹಂಚಿಕೆ ಮಾಡಲು ಯಡಿಯೂರಪ್ಪ ಅವರು ಚಿಂತನೆ ನಡೆಸಿದ್ದಾರೆ.

English summary
The BJP High Command has given Chief Minister Yediyurappa the freedom to change ministers portfolio after the Cabinet expansion or reshuffle. According to Sources, Chief Minister Yediyurappa has decided to change the portfolios of several ministers after the Cabinet expansion tomorrow (Jan. 13). Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X