ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಜನ್ಮದಿನಕ್ಕೆ ಹೈಕಮಾಂಡ್ ಶುಭಕೋರಲಿಲ್ಲವಾ?

|
Google Oneindia Kannada News

ಬೆಂಗಳೂರು, ಫೆ. 28: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅದ್ದೂರಿಯಾಗಿ ಆಚರಿಸಿಕೊಂಡ 78ನೇ ಹುಟ್ಟುಹಬ್ಬಕ್ಕೆ ಪಕ್ಷಾತೀತವಾಗಿ ಎಲ್ಲ ರಾಜಕೀಯ ನಾಯಕರು ಶುಭಹಾರೈಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿಪಕ್ಷ ನಾಯಕ ಸಿದ್ಧರಾಮಯ್ಯ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು ಪಕ್ಷಾತೀತವಾಗಿ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಆದರೆ ಅದ್ಯಾಕೊ ಬಿಜೆಪಿ ರಾಷ್ಟ್ರೀಯ ಮಾಜಿ ಅಧ್ಯಕ್ಷ ಅಮಿತ್ ಶಾ ಹಾಗೂ ಹಾಲಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮಾತ್ರ ಸಿಎಂ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿಲ್ಲ. ದಕ್ಷಿಣ ಭಾರತದಲ್ಲಿ ಕಮಲ ಅರಳುವಂತೆ ಮಾಡಿದ್ದವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ.

ಹತ್ತು ಶಾಸಕರ ರಾಜೀನಾಮೆ ಕೊಡಿಸ್ತೀನಿ: ಯಡಿಯೂರಪ್ಪಗೆ ಸ್ವಾಮೀಜಿ ಬೆದರಿಕೆಹತ್ತು ಶಾಸಕರ ರಾಜೀನಾಮೆ ಕೊಡಿಸ್ತೀನಿ: ಯಡಿಯೂರಪ್ಪಗೆ ಸ್ವಾಮೀಜಿ ಬೆದರಿಕೆ

ಹಿಂದಿ ಮಾತ್ರ ಭಾಷೆ ಅಲ್ಲ ಎನ್ನುವ ಒಂದೇ ಕಾರಣಕ್ಕೆ ರಾಜ್ಯ ರಾಜಕೀಯಕ್ಕೆ ಸೀಮಿತರಾದವರು ಯಡಿಯೂರಪ್ಪ ಅವರು. ಹೀಗಿದ್ದಾಗ್ಯೂ ಬಿ.ಎಸ್. ಯಡಿಯೂರಪ್ಪ ಅವರಿಗೆ ಉದ್ದೇಶಪೂರ್ವಕವಾಗಿಯೆ ಹೈಕಮಾಂಡ್ ಶುಭಾಶಯ ಕೋರಲಿಲ್ಲವಾ ಎಂಬ ಚರ್ಚೆಗಳು ನಡೆದಿವೆ. ಅದಕ್ಕೆ ಕಾರಣವೂ ಇದೆ.

ಯಡಿಯೂರಪ್ಪ@78: ಬಿಜೆಪಿ ಅಲಿಖಿತ ನಿಯಮ ಮೀರಿದ ಸಿಎಂ

ಯಡಿಯೂರಪ್ಪ@78: ಬಿಜೆಪಿ ಅಲಿಖಿತ ನಿಯಮ ಮೀರಿದ ಸಿಎಂ

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಹುಟ್ಟುಹಬ್ಬದ ಶುಭಾಶಯ ಹೇಳದೇ ಇರುವುದಕ್ಕೂ ಕಾರಣವಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಜಾರಿಗೆ ತಂದಿದ್ದ ಅಲಿಖಿತ ನಿಯಮವನ್ನೂ ಮೀರಿ ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕ ಮುಖ್ಯಮಂತ್ರಿಯಾಗಿದ್ದು ಇದಕ್ಕೆ ಕಾರಣ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ 75 ವರ್ಷ ವಯೋಮಿತಿ ಮೀರಿದವರಿಗೆ ಬಿಜೆಪಿ ಟಿಕೆಟ್ ಇಲ್ಲ ಎಂಬ ಅಲಿಖಿತ ನಿಯಮವನ್ನು ಬಿಜೆಪಿಯಲ್ಲಿ ಜಾರಿಗೆ ತಮದಿದ್ದರು. ಅಮಿತ್ ಶಾ ಜಾರಿಗೆ ತಂದಿದ್ದ ನಿಯಮವನ್ನು ಬಿಜೆಪಿ ಭಿಷ್ಮ ಎಲ್ ಕೆ ಆಡ್ವಾಣಿ ಅವರೂ ಒಪ್ಪಿಕೊಂಡಿದ್ದರು. ಆದರೆ ಆ ನಿಮಯವನ್ನು ಇಡೀ ದೇಶದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಮಾತ್ರ ಒಪ್ಪಿಕೊಳ್ಳಲಿಲ್ಲ. ಬಿಜೆಪಿ ಹೈಕಮಾಂಡ್‌ಗೆ ಪರ್ಯಾಯ ಆಯ್ಕೆಯೂ ಕರ್ನಾಟಕದಲ್ಲಿ ಇರಲಿಲ್ಲ. ಹೀಗಾಗಿ ಒಂದು ರೀತಿಯಲ್ಲಿ ಯಡಿಯೂರಪ್ಪ ಅವರು ಹೈಕಮಾಂಡ್ ಮೀರಿದ ನಾಯಕರಾಗಿ ಬಿಟ್ಟರು.

ದೇಶದಲ್ಲಿ ಬಿಜೆಪಿ ಇನ್ನೂ 11 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಆ ಎಲ್ಲ ರಾಜ್ಯಗಳಲ್ಲಿ 75 ವರ್ಷ ವಯೋಮಿತಿ ಮೀರಿದವರು ಒಬ್ಬೆ ಒಬ್ಬ ಸಿಎಂ ಇಲ್ಲ.

ಹೀಗಾಗಿಯೆ ಹ್ಯಾಪಿ ಬರ್ತ್ಡೆ ಎಂದು ಬಿಎಸ್‌ವೈಗೆ ಹೇಳದ ಹೈಕಮಾಂಡ್

ಹೀಗಾಗಿಯೆ ಹ್ಯಾಪಿ ಬರ್ತ್ಡೆ ಎಂದು ಬಿಎಸ್‌ವೈಗೆ ಹೇಳದ ಹೈಕಮಾಂಡ್

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರು ಜಾರಿಗೆ ತಂದಿದ್ದ 75 ವರ್ಷ ವಯೋಮಿತಿ ಮೀರಿದವರಿಗೆ ಬಿಜೆಪಿ ಟಿಕೆಟ್ ಇಲ್ಲ, ಎಂಬ ನಿಯಮದಿಂದ ದೇಶಾದ್ಯಂತ ಪ್ರಭಾವಿ ನಾಯಕರು ಸಕ್ರೀಯ ರಾಜಕೀಯದಿಂದ ದೂರವಾಗಬೇಕಾಯಿತು. ಹಿರಿಯ ನಾಯಕರಾದ ಎಲ್ ಕೆ ಆಡ್ವಾಣಿ, ನಜ್ಮಾ ಹೆಪ್ತುಲ್ಲಾ, ಯಶವಂತ್ ಸಿನ್ಹಾ, ಕಲ್‌ರಾಜ್ ಮಿಶ್ರಾ, ಶಾಂತಕುಮಾರ್, ಭಗತ್ ಸಿಂಗ್ ಕೋಶಿಯಾರಿ, ಕರಿಯಾ ಮುಂಡಾ, ಬಿ.ಸಿ. ಖಂಡೂರಿ, ಮುರಳಿ ಮನೋಹರ್ ಜೋಶಿ ಸೇರಿದಂತೆ ಬಿಜೆಪಿಯನ್ನು ಜನಸಂಘದಿಂದ ಕಟ್ಟಿಬೆಳೆಸಿದ್ದ ಹಿರಿಯ ತಲೆಮಾರು ಸಕ್ರೀಯ ರಾಜಕಾರಣದಿಂದ ದೂರವಾಗಬೇಕಾಯ್ತು.

ಆದರೆ ಯಡಿಯೂರಪ್ಪ ಅವರು ಮಾತ್ರ ರಾಜ್ಯದಲ್ಲಿ, ರಾಜ್ಯ ಬಿಜೆಪಿಯ ಮೇಲೆ ತನ್ನ ಹಿಡಿತ ಬಿಡಲಿಲ್ಲ. ಎಲ್ಲರಿಗೂ ಅನ್ವಯವಾದ ನಿಯಮಕ್ಕೇ ಯಡಿಯೂರಪ್ಪ ಅವರು ಅಪವಾದ ವಾಗಿಬಿಟ್ಟರು. ಈಗ 78ನೇ ವಸಂತಕ್ಕೆ ಕಾಲಿಟ್ಟ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರೆ ಉಳಿದ ಹಿರಿಯರ ಕೋಪಕ್ಕೆ ತುತ್ತಾಗುವ ಭಯ ಅಮಿತ್ ಶಾ ಅವರನ್ನು ಕಾಡಿತಾ ಎಂಬುದು ಪ್ರಶ್ನೆ!

ಬಿಜೆಪಿ ಆಡಳಿತ 11 ರಾಜ್ಯಗಳಲ್ಲಿ ಯಡಿಯೂರಪ್ಪ ಹಿರಿಯರು

ಬಿಜೆಪಿ ಆಡಳಿತ 11 ರಾಜ್ಯಗಳಲ್ಲಿ ಯಡಿಯೂರಪ್ಪ ಹಿರಿಯರು

ಇನ್ನು ಬಿಜೆಪಿ ಆಡಳಿತವಿರುವ 11 ರಾಜ್ಯಗಳನ್ನು ನೋಡುವುದಾದರೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಎಲ್ಲರಿಗಿಂತ ಹಿರಿಯರು. ಬಿಜೆಪಿ ಅಧಿಕಾರದಲ್ಲಿರುವ ಇತರ ರಾಜ್ಯಗಳಲ್ಲಿ ಹೆಚ್ಚಿನ ಮುಖ್ಯಮಂತ್ರಿಗಳು 50 ರಿಂದ 60 ವರ್ಷಗಳ ವಯೋಮಿತಿಯಲ್ಲಿದ್ದಾರೆ. ಇದು ಬಿಜೆಪಿಯ 75 ವರ್ಷ ಮೀರಿದವರಿಗೆ ಅಧಿಕಾರವಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಆದರೆ ಇದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಾತ್ರ ಅನ್ವಯವಾಗಲಿಲ್ಲ.

ಉತ್ತರ ಪ್ರದೇಶ, ಗೋವಾ, ತ್ರಿಪುರ ಹಾಗೂ ಅರುಣಾಚಲ ಪ್ರದೇಶ, ಈ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ವಯಸ್ಸು 50 ವರ್ಷಗಳಿಗಿಂತ ಕಡಿಮೆಯಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ್, ಮಣಿಪು ಹಾಗೂ ಆಸ್ಸೋಂ, ಈ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ವಯಸ್ಸು 60 ವರ್ಷಕ್ಕಿಂತ ಕಡಿಮೆಯಿದೆ. ಉಳಿದಂತೆ ಗುಜರಾತ್ ಸಿಎಂ ವಿಜಯ್ ರೂಪಾನಿ, ಹರಿಯಾಣಾ ಸಿಎಂ ಮನೋಹರ್ ಲಾಲ್ ಕಟ್ಟರ್ ಇಬ್ಬರೂ 70ಕ್ಕಿಂತ ಕಡಿಮೆ ವಯೋಮಿತಿಯಲ್ಲಿದ್ದಾರೆ.

ಶಾ ಲೆಕ್ಕಾಚಾರಕ್ಕಿಲ್ಲ ದೇಶದಲ್ಲಿ ಬೆಲೆ; 70 ವರ್ಷ ಮೀರಿದ 7 ಸಿಎಂಗಳು

ಶಾ ಲೆಕ್ಕಾಚಾರಕ್ಕಿಲ್ಲ ದೇಶದಲ್ಲಿ ಬೆಲೆ; 70 ವರ್ಷ ಮೀರಿದ 7 ಸಿಎಂಗಳು

ಇನ್ನು ದೇಶದಲ್ಲಿ ಯಡಿಯೂರಪ್ಪ ಅವರೂ ಸೇರಿದಂತೆ 70 ವರ್ಷ ವಯೋಮಿತಿ ಮೀರಿದ 7 ಜನರು ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾರೆ. ಆದರೆ ಅವರೆಲ್ಲರಿಗಿಂತಲೂ ಸಿಎಂ ಯಡಿಯೂರಪ್ಪ ಅವರೆ ಹಿರಿಯರು ಎಂಬುದು ವಿಶೇಷ.

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರಿಗೆ ಈಗ 77 ವರ್ಷ ವಯಸ್ಸು, ಮಿಝೋರಾಂ ಸಿಎಂ ಝೋರಾಮ್‌ಥಂಗ್ ಅವರಿಗೆ 75 ವರ್ಷ, ಕೇರಳದ ಸಿಎಂ ಪಿಣರಾಯಿ ವಿಜಯನ್ ಅವರಿಗೆ 74 ವರ್ಷ, ಹಾಗೆಯೆ ಓಡಿಸ್ಸಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರಿಗೆ 74 ವರ್ಷ, ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಅವರಿಗೆ ಈಗ 73 ವರ್ಷ ವಯಸ್ಸು ಹಾಗೂ ಪಾಂಡಿಚೇರಿ ಸಿಎಂ ನಾರಾಯಣಸ್ವಾಮಿ ಅವರಿಗೆ ಈಗ 72ರ ಹರೆಯ. ಹೀಗಾಗಿ ವಯಸ್ಸಿಗೂ ಸಿಎಂ ಗಾದಿಗೂ ಯಾವುದೆ ಸಂಬಂಧವಿಲ್ಲ ಎಂಬುದನ್ನು ಯಡಿಯೂರಪ್ಪ ಅವರು ಇದೀಗ ತೋರಿಸುತ್ತಿದ್ದಾರೆ.

ಹೈಕಮಾಂಡ್ ಅಲಿಖಿತ ನಿಯಮ ಮೀರಿ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಿರುವುದು ಬಿಜೆಪಿ ಹೈಕಮಾಂಡ್‌ಗೆ ಇಷ್ಟವಿಲ್ಲದೆ ಹೀಗೆ ಹುಟ್ಟುಹಬ್ಬದ ಶುಭಾಶಯ ಹೇಳುವುದನ್ನು ನಿರ್ಲಕ್ಷ ಮಾಡಿದ್ದಾರೆ ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಬಿಜೆಪಿ ಹಿರಿಯ ನಾಯಕರೊಬ್ಬರು.

English summary
BJP High Command did not wish the 78th Birthday of Chief Minister BS Yeddyurappa. It is debated that Yeddyurappa has broken the unwritten rule that BJP's 75-year-old has no power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X