• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀರಾಮುಲುಗೆ ಹೈಕಮಾಂಡ್ ಬುಲಾವ್: ಹೊಗಳಿಕೆಯೋ? ತೆಗಳಿಕೆಯೋ?

|
   ಬಿ ಶ್ರೀರಾಮುಲುಗೆ ಬಿಜೆಪಿ ಹೈ ಕಮಾಂಡ್ ನಿಂದ ಬುಲಾವ್ | ಕಾರಣ? | Oneindia Kannada

   ಬೆಂಗಳೂರು, ನವೆಂಬರ್ 08: ಬಳ್ಳಾರಿಯಲ್ಲಿ ಹೀನಾಯವಾಗಿ ಸೋತು ಆತ್ಮವಿಮರ್ಶೆಯಲ್ಲಿ ತೊಡಗಿರುವ ಬಿಜೆಪಿ ಪ್ರಮುಖ ಮುಖಂಡ ಶ್ರೀರಾಮುಲು ಗೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ.

   ಬಳ್ಳಾರಿಯಲ್ಲಿ ಹೀನಾಯವಾಗಿ ಸೋತಿದ್ದಕ್ಕೆ ತೆಗಳಲು ಕರೆದಿದಯೋ, ಒಂಟಿಯಾಗಿ ಹೋರಾಡಿದ್ದಕ್ಕೆ ಹೊಗಳಲಿಕ್ಕೆ ಕರೆಯಲಾಗಿದೆಯೋ ಅಥವಾ ಉಪಚುನಾವಣೆಯ ಸಂಪೂರ್ಣ ಚಿತ್ರಣದ ಮಾಹಿತಿಯನ್ನು ಕೇಳಲು ಕರೆದಿದ್ದಾರಾ ಸ್ಪಷ್ಟವಾಗಿಲ್ಲ.

   ಶ್ರೀರಾಮುಲುಗೆ ಅತಿಯಾದ ಆತ್ಮವಿಶ್ವಾಸವೇ ಮುಳ್ಳಾಗಿ ಪರಿಣಮಿಸಿತೇ..?

   ಜನಾರ್ದನ ರೆಡ್ಡಿ ಅವರಿಗೆ ಸಿಸಿಬಿ ಗಂಡಾಂತರ ಒದಗಿ ಬಂದಿರುವ ಕಾರಣ ಇಂದು ರಾಮುಲು ಅವರು ದೆಹಲಿಗೆ ತೆರಳಿಲ್ಲ ಆದರೆ ರೆಡ್ಡಿ ಅವರಿಗೆ ನಿರೀಕ್ಷಾ ಜಾಮೀನು ದೊರಕಿದ ನಂತರ ದೆಹಲಿಗೆ ಹೋಗಿ ಅಮಿತ್ ಶಾ ಅವರನ್ನೇ ರಾಮುಲು ಅವರು ಭೇಟಿ ಆಗಿದ್ದಾರೆ ಎನ್ನಲಾಗಿದೆ.

   ರಾಜ್ಯ ನಾಯಕರ ವಿರುದ್ಧ ದೂರು ನೀಡಲಿದ್ದಾರೆ ರಾಮುಲು

   ರಾಜ್ಯ ನಾಯಕರ ವಿರುದ್ಧ ದೂರು ನೀಡಲಿದ್ದಾರೆ ರಾಮುಲು

   ಕೆಲವು ಬಿಜೆಪಿ ಪ್ರಮುಖ ನಾಯಕರು ಬಳ್ಳಾರಿಗೆ ಪ್ರಚಾರಕ್ಕೆ ಬರದೆ ಅಂತರ ಕಾಯ್ದುಕೊಂಡರು, ಉತ್ತರ ಕರ್ನಾಟಕದ ಕೆಲವು ಮುಖಂಡರೇ ಪ್ರಚಾರದಲ್ಲಿ ಭಾಗವಹಿಸಲಿಲ್ಲ, ಯಡಿಯೂರಪ್ಪ ಸಹ ಕೇವಲ ನಾಮ್‌ ಕೆ ವಾಸ್ತೆ ಎಂಬಂತೆ ಹಾಗೆ ಬಂದು ಹೀಗೆ ಹೋದರು ಇದೆಲ್ಲದುರ ಬಗ್ಗೆ ರಾಮುಲು ಅವರು ಹೈಕಮಾಂಡ್‌ ಬಳಿ ದೂರು ನೀಡುವ ಸಾಧ್ಯತೆ ಇದೆ.

   ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಬದಲಾವಣೆ

   ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಬದಲಾವಣೆ

   ಶಾಂತಾ ಅವರು ಭಾರಿ ಅಂತರದಲ್ಲಿ ಸೋತಿರುವ ಕಾರಣ ಲೋಕಸಭಾ ಚುನಾವಣೆಗೆ ಬಳ್ಳಾರಿಗೆ ಬೇರೆ ಅಭ್ಯರ್ಥಿಯನ್ನು ಚುನಾವಣೆಗೆ ಆಯ್ಕೆ ಮಾಡುವಂತೆ ಸೂಚಿಸುವ ಮತ್ತು ಈಗಿನಿಂದಲೇ ತಯಾರಿ ನಡೆಸಲು ಹೈಕಮಾಂಡ್ ರಾಮುಲು ಅವರಿಗೆ ಆದೇಶ ನೀಡಲಿದೆ.

   ಶತ್ರು ಪಾಳೆಯಕ್ಕೆ ಮಿತ್ರನನ್ನು ನುಗ್ಗಿಸಿ ಡಿಕೆ-ಹೆಚ್ಡಿಕೆ ಬಾಂಬು ಹಾಕಿದ ರಿಯಲ್ ಸ್ಟೋರಿ

   ಹಿಂದುಳಿದವರ ಮುಖಂಡ ಸ್ಥಾನಕ್ಕೆ ಕುತ್ತು

   ಹಿಂದುಳಿದವರ ಮುಖಂಡ ಸ್ಥಾನಕ್ಕೆ ಕುತ್ತು

   ಹೈಕಮಾಂಡ್ ರಾಮುಲು ಅವರನ್ನು ಸಿದ್ದರಾಮಯ್ಯ ಅವರ ಎದುರಿಗೆ ಹಿಂದುಳಿದ ಸಮುದಾಯಗಳ ನಾಯಕ ಎಂಬಂತೆ ಬಿಂಬಿಸುವ ಯತ್ನವನ್ನು ಮಾಡಿತ್ತು ಆದರೆ ಅದರ ಲೆಕ್ಕಾಚಾರ ಈಗ ಉಲ್ಟಾ ಆಗಿದೆ. ಬಳ್ಳಾರಿ ಸೋಲನ್ನು ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್‌ ರಾಮುಲು ಅವರನ್ನು ಕಾರಣ ಕೇಳಲಿದೆ ಹಾಗೂ ಲೋಕಸಭೆ ಚುನಾವಣೆಗೆ ಅನುಸರಿಸಬೇಕಿರುವ ತಂತ್ರದ ಬಗ್ಗೆ ಸೂಚನೆಗಳನ್ನು ನೀಡಲಿದೆ.

   ಬಳ್ಳಾರಿಯಲ್ಲಿ ಬಿದ್ದ ಬಿಜೆಪಿಯ ಗಾಯಕ್ಕೆ ಉಪ್ಪು ಸವರಿದ ಸಿದ್ದರಾಮಯ್ಯ ಟ್ವೀಟ್‌

   ಡಿ.ಕೆ.ಶಿವಕುಮಾರ್ ಕಟ್ಟಿ ಹಾಕಲು ತಂತ್ರ

   ಡಿ.ಕೆ.ಶಿವಕುಮಾರ್ ಕಟ್ಟಿ ಹಾಕಲು ತಂತ್ರ

   ಬಳ್ಳಾರಿಯಲ್ಲಿ ಬಿಜೆಪಿ ಸೋಲಲು ಪ್ರಮುಖ ಕಾರಣ ಡಿ.ಕೆ.ಶಿವಕುಮಾರ್ ಕಾರ್ಯತಂತ್ರ ಹಾಗಾಗಿ ಅವರನ್ನು ಲೋಕಸಭೆ ಚುನಾವಣೆ ವೇಳೆಗೆ ಕಟ್ಟಿ ಹಾಕುವುದು ಹೇಗೆ ಎಂಬ ಬಗ್ಗೆ ಹೈಕಮಾಂಡ್‌ ರಾಮುಲು ಜೊತೆ ಮಾತನಾಡದೆ ಎನ್ನಲಾಗಿದೆ. ಜೊತೆಗೆ ಶಿವಕುಮಾರ್ ಅವರನ್ನು ಕಟ್ಟಿಹಾಕುವ ಜವಾಬ್ದಾರಿಯನ್ನು ಹೈಕಮಾಂಡ್‌ ರಾಮುಲು ಅವರಿಗೆ ವಹಿಸಲಿದೆ.

   ಸೋತ ಶ್ರೀರಾಮುಲುಗೆ ಅಭಿನಂದನೆ ಸಲ್ಲಿಸಿದ ಡಿಕೆ ಶಿವಕುಮಾರ್‌

   English summary
   BJP high command called Sriramulu to Delhi to discuss about Ballari by election defeat. Ramulu may go to Delhi tomorrow or day after tomorrow.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X