ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಕಮಾಂಡ್ ಬುಲಾವ್, ಸಿಎಂ ದೆಹಲಿಗೆ ದೌಡು: ಈ 3 ಕಾರಣಕ್ಕೆ?

|
Google Oneindia Kannada News

ಬೆಂಗಳೂರು, ಮೇ 20: ಮಳೆಯಿಂದ ಹಾನಿಯಾಗಿರುವ ರಾಜಧಾನಿಯ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ, ಹೈಕಮಾಂಡ್ ನಿಂದ ತುರ್ತು ಬುಲಾವ್ ಬಂದಿದೆ. ಇಂದು ಮಧ್ಯಾಹ್ನದ ನಂತರ ಸಿಎಂ ದೆಹಲಿಗೆ ಹೊರಡಲಿದ್ದಾರೆ ಎಂದು ವರದಿಯಾಗಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಕಚೇರಿಯಿಂದಲೇ ದೂರವಾಣಿ ಕರೆ ಬಂದಿದ್ದು, ಇಂದು ಸಂಜೆ ನಡ್ಡಾ ಅವರನ್ನು ಸಿಎಂ ಬೊಮ್ಮಾಯಿ ಭೇಟಿಯಾಗುವ ಸಾಧ್ಯತೆಯಿದೆ. ಜೊತೆಗೆ, ಅಪಾಯಿಂಟ್ಮೆಂಟ್ ಸಿಕ್ಕಿದರೆ ಅಮಿತ್ ಶಾ ಅವರನ್ನೂ ಬೊಮ್ಮಾಯಿ ಭೇಟಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

'ಬಿಎಸ್ವೈ ಹೇಳಿದಂತೆ ಬೆಂಗಳೂರಿನ ಚಿತ್ರಣವೇ ಬದಲು': ಸಿದ್ದರಾಮಯ್ಯ ವ್ಯಂಗ್ಯ'ಬಿಎಸ್ವೈ ಹೇಳಿದಂತೆ ಬೆಂಗಳೂರಿನ ಚಿತ್ರಣವೇ ಬದಲು': ಸಿದ್ದರಾಮಯ್ಯ ವ್ಯಂಗ್ಯ

ಬೊಮ್ಮಾಯಿಯವರ ದಿಢೀರ್ ಪ್ರವಾಸ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ. ಸಚಿವ ಸ್ಥಾನದ ಆಕಾಂಕ್ಷಿಗಳ ಆಸೆ ಮತ್ತೆ ಚಿಗುರೊಡೆದಿದೆ. ಯಾವ ಕಾರಣಕ್ಕಾಗಿ, ಮುಖ್ಯಮಂತ್ರಿಗಳಿಗೆ ಬುಲಾವ್ ಕಳುಹಿಸಲಾಗಿದೆ ಎನ್ನುವುದರ ಬಗ್ಗೆ ಸ್ಪಷ್ಟತೆಯಿಲ್ಲ.

ಮರಳಿ ರಾಜ್ಯ ರಾಜಕಾರಣಕ್ಕೆ? ಶೋಭಾ ಕರಂದ್ಲಾಜೆ ಸ್ಪಷ್ಟನೆಮರಳಿ ರಾಜ್ಯ ರಾಜಕಾರಣಕ್ಕೆ? ಶೋಭಾ ಕರಂದ್ಲಾಜೆ ಸ್ಪಷ್ಟನೆ

ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಗುರುವಾರವಷ್ಟೇ (ಮೇ 19) ದೆಹಲಿ ಪ್ರವಾಸದಿಂದ ವಾಪಸ್ ಬಂದಿದ್ದರು. ಶನಿವಾರ ತಡರಾತ್ರಿ ಮುಖ್ಯಮಂತ್ರಿ ಬೊಮ್ಮಾಯಿಯವರ ದಾವೋಸ್ ಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಮೂರು ಕಾರಣಕ್ಕಾಗಿ ಸಿಎಂ ಬೊಮ್ಮಾಯಿಗೆ ಬುಲಾವ್ ಬಂದಿದೆ ಎಂದು ಹೇಳಲಾಗುತ್ತಿದೆ.

 ಮಳೆಯಿಂದಾಗಿ ಆಗಿರುವ ಅನಾಹುತವನ್ನು ಸಿಎಂ ಸತತವಾಗಿ ವೀಕ್ಷಣೆ

ಮಳೆಯಿಂದಾಗಿ ಆಗಿರುವ ಅನಾಹುತವನ್ನು ಸಿಎಂ ಸತತವಾಗಿ ವೀಕ್ಷಣೆ

ಮುಖ್ಯಮಂತ್ರಿಗಳ ಐದು ದಿನಗಳ ವಿದೇಶ ಪ್ರವಾಸಕ್ಕೆ ಮುನ್ನ ಅವರನ್ನು ಹೈಕಮಾಂಡ್ ಕರೆಸಿಕೊಳ್ಳುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಎರಡು ದಿನಗಳ ಹಿಂದಿನ ಭಾರೀ ಮಳೆಯಿಂದಾಗಿ ಆಗಿರುವ ಅನಾಹುತವನ್ನು ಸಿಎಂ ಸತತವಾಗಿ ವೀಕ್ಷಣೆಯನ್ನು ಮಾಡುತ್ತಿದ್ದಾರೆ. ಮಳೆಯ ಹಾನಿಯು ಸರಕಾರಕ್ಕೆ ಮುಜುಗರ ತರುತ್ತಿರುವುದರಿಂದ ಸಿಎಂ ಬೊಮ್ಮಾಯಿ ಆ ಕೆಲಸಕ್ಕೆ ಆದ್ಯತೆಯನ್ನು ನೀಡುತ್ತಿದ್ದಾರೆ. ಇದರ ಮಧ್ಯೆ ಬುಲಾವ್ ಬಂದಿರುವುದರಿಂದ ಸಹಜವಾಗಿಯೇ ಬಿಜೆಪಿ ವಲಯದಲ್ಲಿ ಕುತೂಹಲ ಮನೆಮಾಡಿದೆ.

 ಬಿಜೆಪಿ ಹೈಕಮಾಂಡ್ ಮಾತುಕತೆ ನಡೆಸುವ ಸಾಧ್ಯತೆ

ಬಿಜೆಪಿ ಹೈಕಮಾಂಡ್ ಮಾತುಕತೆ ನಡೆಸುವ ಸಾಧ್ಯತೆ

ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಬಿಜೆಪಿ ಹೈಕಮಾಂಡ್ ಮಾತುಕತೆ ನಡೆಸುವ ಸಾಧ್ಯತೆಯಿದೆ. ಮುಂಬರುವ ಚುನಾವಣೆದ ದೃಷ್ಟಿಯಿಂದ ವರಿಷ್ಠರು ಅಂತಿಮ ನಿರ್ಧಾರಕ್ಕೆ ಬರಬಹುದು ಎಂದು ಹೇಳಲಾಗುತ್ತಿದೆ. ಸಂಪುಟ ವಿಸ್ತರಣೆಯೋ, ಪುನರ್ ರಚನೆಯೋ ಅಥವಾ ಯಥಾಸ್ಥಿತಿ ಕಾಪಾಡಿಕೊಳ್ಳುವುದೋ ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರಕ್ಕೆ ಒಂದೆರಡು ದಿನಗಳಲ್ಲಿ ಬರುವ ಸಾಧ್ಯತೆಯಿದೆ.

 ರವಾಗುತ್ತಿರುವ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ

ರವಾಗುತ್ತಿರುವ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ

ರಾಜ್ಯದಿಂದ ತೆರವಾಗುತ್ತಿರುವ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಬರುವ ಜೂನ್ ಹತ್ತರಂದು ನಡೆಯಲಿದೆ. ಎರಡು ಕ್ಷೇತ್ರವನ್ನು ಬಿಜೆಪಿ ನಿರಾಯಾಸವಾಗಿ ಗೆಲ್ಲಬಹುದು. ಮೂರನೇ ಅಭ್ಯರ್ಥಿಯ ಬಗ್ಗೆಯೂ ಸಿಎಂ ಜೊತೆ ಚರ್ಚೆ ನಡೆಯುವ ಸಾಧ್ಯತೆಯಿದೆ. ನಿರ್ಮಲಾ ಸೀತಾರಾಮನ್ ಮತ್ತು ಕೆ.ಸಿ.ರಾಮಮೂರ್ತಿಯವರ, ರಾಜ್ಯಸಭಾ ಅವಧಿ ಮುಕ್ತಾಯಗೊಳ್ಳಲಿದೆ. ಇದರ ಜೊತೆಗೆ, ಪಕ್ಷದ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ಲೆಹರ್ ಸಿಂಗ್, ಉದ್ಯಮಿಗಳಾದ ಪ್ರಕಾಶ್ ಶೆಟ್ಟಿ, ಲಹರಿ ವೇಲು ಮೊದಲಾದವರ ಹೆಸರನ್ನು ರಾಜ್ಯ ಬಿಜೆಪಿಯ ಕೋರ್ ಕಮಿಟಿ ಕಳುಹಿಸಿಕೆೊಟ್ಟಿದೆ.

 ವಿಧಾನ ಪರಿಷತ್ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ?

ವಿಧಾನ ಪರಿಷತ್ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ?

ಇನ್ನು ವಿಧಾನ ಪರಿಷತ್ ಅಭ್ಯರ್ಥಿಗಳ ಆಯ್ಕೆ ಸಂಬಂಧವೂ ಮುಖ್ಯಮಂತ್ರಿಗಳ ಜೊತೆ ಜೆ.ಪಿ.ನಡ್ಡಾ ಮಾತುಕತೆ ನಡೆಸುವ ಸಾಧ್ಯತೆಯಿದೆ. ರಾಜ್ಯ ಬಿಜೆಪಿ ಕೋರ್ ಕಮಿಟಿ, ಪಕ್ಷದ ಟಿಕೆಟ್ ಆಕಾಂಕ್ಷಿತರ ಪಟ್ಟಿಯನ್ನು ವರಿಷ್ಠರಿಗೆ ರವಾನಿಸಿತ್ತು. ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಬಿ.ವೈ. ವಿಜಯೇಂದ್ರ ಸೇರಿದಂತೆ 30 ಮಂದಿಯ ಹೆಸರನ್ನು ಶಿಫಾರಸು ಮಾಡಿ ಪಟ್ಟಿಯನ್ನು ಕಳುಹಿಸಲಾಗಿತ್ತು. ಈ ಬಗ್ಗೆಯೂ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ. ಒಂದೆರಡು ದಿನಗಳಲ್ಲಿ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

English summary
BJP High Command Called CM Basavaraj Bommai Into New Delhi, Three Reasons. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X