ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಸರ್ಕಾರಕ್ಕೆ ಒಂದು ವರ್ಷ; ಯಾರಿಗೂ ಇಲ್ಲ ಹರ್ಷ!

|
Google Oneindia Kannada News

ಬೆಂಗಳೂರು, ಜುಲೈ 26 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರ 1 ವರ್ಷ ಪೂರೈಸಿದೆ. ಮುಖ್ಯಮಂತ್ರಿಗಳು ಸರ್ಕಾರದ ಸಾಧನೆಯನ್ನು ನಾಡಿನ ಜನರಿಗೆ ಸೋಮವಾರ ಹೇಳಲಿದ್ದಾರೆ. ಸಾಧನೆಗಳ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.

Recommended Video

Sonu Sood gifts tractor for Andhra Pradesh farmer | Oneindia Kannada

ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎಚ್. ಸಿ. ಮಹದೇವಪ್ಪ "ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು 1 ವರ್ಷ ಯಾರಿಗೂ ಇಲ್ಲ ಹರ್ಷ" ಎಂದು ಕರ್ನಾಟಕ ಸರ್ಕಾರವನ್ನು ಟೀಕಿಸಿದ್ದಾರೆ. ಸರ್ಕಾರ ಯಾವ ಯಾವ ವಿಚಾರಗಳಲ್ಲಿ ವಿಫಲವಾಗಿದೆ ಎಂದು ಸುಧೀರ್ಘ ಪೋಸ್ಟ್‌ ಅನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ.

ಕೊಟ್ಟ ಮಾತು ಉಳಿಸಿಕೊಂಡ ಸಿಎಂ ಬಿ.ಎಸ್. ಯಡಿಯೂರಪ್ಪ!ಕೊಟ್ಟ ಮಾತು ಉಳಿಸಿಕೊಂಡ ಸಿಎಂ ಬಿ.ಎಸ್. ಯಡಿಯೂರಪ್ಪ!

"ರಾಜ್ಯ ಸರ್ಕಾರದವು ಆಡಳಿತಕ್ಕೆ ಬಂದು 1 ವರ್ಷ ಪೂರೈಸಿದ್ದು ಬಹುತೇಕ ಎಲ್ಲಾ ಪತ್ರಿಕೆಗಳಲ್ಲೂ ದೊಡ್ಡ ಪ್ರಮಾಣದಲ್ಲಿ ಸರ್ಕಾರದ ಸಾಧನೆಯ ಹೆಸರಲ್ಲಿ ದೊಡ್ಡ ದೊಡ್ಡ ಜಾಹೀರಾತುಗಳು ಪ್ರಕಟಗೊಂಡಿವೆ. ಆದರೆ, ವಾಸ್ತವವಾಗಿ ನೋಡುವುದಾದರೆ ಈ ಸರ್ಕಾರ ಸಂಪುಟ ವಿಸ್ತರಣೆಯನ್ನು ಮಾಡಿ ಸರ್ಕಾರ ಟೇಕಾಫ್ ಆಗಲು 6 ತಿಂಗಳು ಹಿಡಿಯಿತು" ಎಂದು ಟೀಕಿಸಿದ್ದಾರೆ.

2000 ಕೋಟಿ ರೂ. ನುಂಗಿ ಹಾಕಿತಾ ಬಿಜೆಪಿ ಸರ್ಕಾರ? 2000 ಕೋಟಿ ರೂ. ನುಂಗಿ ಹಾಕಿತಾ ಬಿಜೆಪಿ ಸರ್ಕಾರ?

"ಬರೀ ಇವರ ಅಧಿಕಾರದ ಗುದ್ದಾಟದಲ್ಲಿ ಅಧಿಕಾರಿ ವರ್ಗವೇ ತನ್ನ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಯಿತು" ಎಂದು ಎಚ್. ಸಿ. ಮಹದೇವಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಕೊವಿಡ್ 19 ಹಗರಣ: ಉತ್ತರ ಕೊಡಿ ಬಿಜೆಪಿ ಟ್ವಿಟ್ಟರಲ್ಲಿ ಟ್ರೆಂಡಿಂಗ್ ಕೊವಿಡ್ 19 ಹಗರಣ: ಉತ್ತರ ಕೊಡಿ ಬಿಜೆಪಿ ಟ್ವಿಟ್ಟರಲ್ಲಿ ಟ್ರೆಂಡಿಂಗ್

ಭ್ರಷ್ಟಾಚಾರಕ್ಕೆ ಇಳಿಯಿತು

ಭ್ರಷ್ಟಾಚಾರಕ್ಕೆ ಇಳಿಯಿತು

ಕೊರೊನಾ ಸೋಂಕಿನ ಪರಿಸ್ಥಿತಿ ತಲೆದೋರಿದ ಪರಿಣಾಮ ಇಡೀ ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಜನ ಸಾಮಾನ್ಯರ ಬದುಕಿನ ಪರಿಸ್ಥಿತಿ ತೀರಾ ಇಕ್ಕಟಿಗೆ ಸಿಲುಕಿತು. ಆರಂಭಿಕ ಹಂತದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಒಂದಿಷ್ಟು ಕೆಲಸಗಳನ್ನು ಮಾಡಲು ಪ್ರಯತ್ನಿಸಿದರೂ ಸಹ ತದ ನಂತರ ಸರ್ಕಾರವು ಸಂದರ್ಭವನ್ನು ಬಳಸಿಕೊಂಡು ಭ್ರಷ್ಟಾಚಾರಕ್ಕೆ ಇಳಿಯಿತು" ಎಂದು ಎಚ್. ಸಿ. ಮಹದೇವಪ್ಪ ದೂರಿದ್ದಾರೆ.

ಸಹಕಾರ ನೀಡಬೇಕು ಅಂತಾರೆ

ಸಹಕಾರ ನೀಡಬೇಕು ಅಂತಾರೆ

"ಜನರ ಜೀವ ಮತ್ತು ಜೀವನಕ್ಕೆ ಅಗತ್ಯವಾದ ಆರೋಗ್ಯ ಸಾಮಾಗ್ರಿಗಳು ಮತ್ತು ಮೂಲ ಸೌಕರ್ಯಗಳ ಖರೀದಿಯಲ್ಲೇ ಅಕ್ರಮಗಳನ್ನು ನಡೆಸುತ್ತಿರುವ ಸರ್ಕಾರವು ತನ್ನ ಬೊಕ್ಕಸದಲ್ಲಿ ಹಣವಿಲ್ಲ ಎಂದು ಹೇಳುತ್ತಲೇ ಹಗರಣಗಳನ್ನು ಮಾಡಲು ಮುಂದಾಗಿದೆ" ಎಂದು ದೂರಿದ್ದಾರೆ.

"ಈ ಬಗ್ಗೆ ಪ್ರಶ್ನಿಸಿದರೆ ಕೊರೊನಾ ಸಂದರ್ಭದಲ್ಲಿ ವಿಪಕ್ಷಗಳು ರಾಜಕೀಯ ಮಾಡದೇ ಸರ್ಕಾರದೊಡನೆ ಸಹಕರಿಸಬೇಕು ಎಂದು ಹೇಳುತ್ತಾರೆ ಅಂದರೆ ಇವರ ಪ್ರಕಾರ ಹಗರಣಗಳನ್ನು ಒಪ್ಪಿಕೊಂಡು ಚಪ್ಪಾಳೆ ತಟ್ಟಿದರೆ ಮಾತ್ರವೇ ಸರ್ಕಾರದೊಡನೆ ಸಹಕರಿಸಿದಂತೆಯೇನು?" ಎಂದು ಮಹದೇವಪ್ಪ ಪ್ರಶ್ನಿಸಿದರು.

ನಮ್ಮ ಸಹಕಾರವಿಲ್ಲ

ನಮ್ಮ ಸಹಕಾರವಿಲ್ಲ

"ಉತ್ತಮ ಕೆಲಸಕ್ಕೆ ನಮ್ಮೆಲ್ಲರ ಬೆಂಬಲ ಮತ್ತು ಸಹಕಾರವಿದೆ. ಆದರೆ ಜನರ ಜೀವದ ಜೊತೆ ಚೆಲ್ಲಾಟವಾಡುವ ಇವರ ಹಗರಣಗಳಿಗೆ ಎಂದಿಗೂ ಸಹ ನಮ್ಮ ಸಹಕಾರವಿಲ್ಲ ಎಂಬುದನ್ನು ನಾನು ಸ್ಪಷ್ಟವಾಗಿ ತಿಳಿಸುತ್ತೇನೆ. ಒಂದು ವರ್ಷದ ತನ್ನ ಆಡಳಿತದ ಅವಧಿಯಲ್ಲಿ ಈ ರಾಜ್ಯ ಸರ್ಕಾರವು ಮೊದಲರ್ಧ ವರ್ಷ ಸರ್ಕಾರವನ್ನು ಆರಂಭಿಸಲು ಕಾಲ ಕಳೆದರೆ ಇನ್ನರ್ಧ ವರ್ಷ ಹಗರಣಗಳನ್ನು ಮಾಡುವುದರಲ್ಲಿ ಕಾಲ ಕಳೆದಿದೆ" ಎಂದು ಮಹದೇವಪ್ಪ ಆರೋಪಿಸಿದರು.

ಯಡಿಯೂರಪ್ಪ ಎಚ್ಚೆತ್ತುಕೊಳ್ಳಬೇಕು

ಯಡಿಯೂರಪ್ಪ ಎಚ್ಚೆತ್ತುಕೊಳ್ಳಬೇಕು

"ರೈತ ವಿರೋಧಿಯಾದ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡುವಂತಹ ಕೆಟ್ಟ ಕೆಲಸಗಳನ್ನೂ ಸಹ ಸರ್ಕಾರ ಮಾಡಿದೆ. ಇನ್ನಾದರೂ ಸಹ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಚ್ಚೆತ್ತುಕೊಂಡು ತಮ್ಮ ಸಚಿವ ಸಂಪುಟದಲ್ಲಿರುವ ಶ್ರೀರಾಮುಲು ಅಂತಹ ಸಚಿವರನ್ನು ಸರಿಯಾಗಿ ರಿಪೇರಿ ಮಾಡದಿದ್ದರೆ ಸರ್ಕಾರವು ಮುಂದೆ ಜನಾಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ" ಎಂದು ಮಹದೇವಪ್ಪ ಎಚ್ಚರಿಕೆ ನೀಡಿದ್ದಾರೆ.

English summary
B. S. Yediyurappa lead Karnataka BJP government completes one year in office no one is happy about government said former minister and Congress leader H. C. Mahadevappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X