ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸರ್ಕಾರ ರಚನೆಗೆ ಆಹ್ವಾನ ಕೊಟ್ಟಿರುವುದು ಸರಿಯಲ್ಲ : ಉಗ್ರಪ್ಪ

|
Google Oneindia Kannada News

ಬೆಂಗಳೂರು, ಜುಲೈ 26 : "ಪಕ್ಷ 112 ಸದಸ್ಯರ ಬಲವನ್ನು ಹೊಂದಿದ್ದರೆ ಮಾತ್ರ ಸರ್ಕಾರ ರಚನೆಗೆ ಆಹ್ವಾನ ಕೊಡಬಹುದು. 105 ಸದಸ್ಯ ಬಲ ಹೊಂದಿರುವ ಬಿಜೆಪಿಗೆ ರಾಜ್ಯಪಾಲರು ಆಹ್ವಾನ ಕೊಟ್ಟಿರುವುದು ಸರಿಯಲ್ಲ" ಎಂದು ಕಾಂಗ್ರೆಸ್ ನಾಯಕ ವಿ. ಎಸ್. ಉಗ್ರಪ್ಪ ಹೇಳಿದರು.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ ವಿ. ಎಸ್. ಉಗ್ರಪ್ಪ ಪತ್ರಿಕಾಗೋಷ್ಠಿ ನಡೆಸಿದರು. "ಬಿಜೆಪಿ ಮತ್ತು ರಾಜ್ಯಪಾಲರು ಸೇರಿ ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.

ಸಿಎಂ ಯಡಿಯೂರಪ್ಪ (ಆದರೆ) ಮುಂದಿರುವ 5 ಪ್ರಮುಖ ಸವಾಲುಗಳುಸಿಎಂ ಯಡಿಯೂರಪ್ಪ (ಆದರೆ) ಮುಂದಿರುವ 5 ಪ್ರಮುಖ ಸವಾಲುಗಳು

"ಕಾಂಗ್ರೆಸ್-ಜೆಡಿಎಸ್ ಸರ್ಕಾರವಿದ್ದಾಗ ಸದನ ನಡೆಯುವಾಗ ರಾಜ್ಯಪಾಲರು ವಿಶ್ವಾಸಮತ ನಿರ್ಣಯದ ಬಗ್ಗೆ ತರಾತುರಿ ತೋರಿದರು. ಈಗ ಹೊಸ ಸರ್ಕಾರ ರಚನೆ ಮಾಡುವುದರಲ್ಲೂ ತರಾತುರಿ ತೋರುತ್ತಿದ್ದಾರೆ" ಎಂದು ಉಗ್ರಪ್ಪ ದೂರಿದರು.

ಬಿಜೆಪಿಗೆ ಎಲ್ಲಿದೆ ಬಹುಮತ? ಜೆಡಿಎಸ್, ಕಾಂಗ್ರೆಸ್ ಪ್ರಶ್ನೆಬಿಜೆಪಿಗೆ ಎಲ್ಲಿದೆ ಬಹುಮತ? ಜೆಡಿಎಸ್, ಕಾಂಗ್ರೆಸ್ ಪ್ರಶ್ನೆ

V.S.Ugrappa

"112 ಸದಸ್ಯರ ಬಲ ಇದ್ದರೆ ಮಾತ್ರ ಸರ್ಕಾರ ರಚನೆಗೆ ಆಹ್ವಾನ ಮಾಡಬಹುದು. ಆದರೆ, 105 ಸಂಖ್ಯಾಬಲ ಇರುವ ಬಿಜೆಪಿಗೆ ಆಹ್ವಾನ ಕೊಟ್ಟಿದ್ದು ಸರಿಯಲ್ಲ. ಹೊಸ ಸಂಪ್ರದಾಯವನ್ನು ರಾಜ್ಯಪಾಲರು ಆರಂಭಿಸಿದ್ದಾರೆ" ಎಂದು ಉಗ್ರಪ್ಪ ಹೇಳಿದರು.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ; ಸಿದ್ದರಾಮಯ್ಯ ಹೇಳಿದ್ದೇನು?ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ; ಸಿದ್ದರಾಮಯ್ಯ ಹೇಳಿದ್ದೇನು?

"ಸದಸ್ಯ ಬಲ 112 ಆಗಬೇಕು ಅಂದರೆ ಕುದರೆ ವ್ಯಾಪಾರ ಮಾಡುವುದು ಒಂದೇ ಇವರ ಮುಂದೆ ಇರುವ ದಾರಿ. ಇದಕ್ಕೆ ರಾಜ್ಯಪಾಲರು ಕುಮ್ಮಕ್ಕು ಕೊಡುತ್ತಿದ್ದಾರೆ. ಹೊಸ ಸಂಪ್ರದಾಯ ಆರಂಭ ಮಾಡುವುದು ಬಿಟ್ಟು ಜನಾದೇಶಕ್ಕೆ ಹೋಗೋಣ ಬನ್ನಿ" ಎಂದು ಉಗ್ರಪ್ಪ ಆಹ್ವಾನ ನೀಡಿದರು.

ಕರ್ನಾಟಕದಲ್ಲಿ ಮಂಗಳವಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿತ್ತು. ಶುಕ್ರವಾರ ಬಿಜೆಪಿ ಸರ್ಕಾರ ರಚನೆಯಾಗುತ್ತಿದೆ. ಬಿ. ಎಸ್. ಯಡಿಯೂರಪ್ಪ ಅವರು ಸಂಜೆ 6 ಗಂಟೆಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ.

English summary
BJP all set to form government in Karnataka. Congress leader V.S.Ugrappa upset with Governor for inviting party to form government with just 105 members in assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X