ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆನಪಿರಲಿ, ನಮ್ಮ ತ್ಯಾಗದಿಂದಲೇ ಬಿಜೆಪಿ ಸರ್ಕಾರ ಬಂದಿದ್ದು!

|
Google Oneindia Kannada News

ಬೆಂಗಳೂರು, ಫೆಬ್ರವರಿ. 02: ನೆನಪಿರಲಿ, ನಮ್ಮ ತ್ಯಾಗದಿಂಲೇ ಬಿಜೆಪಿ ಸರ್ಕಾರ ಬಂದಿದ್ದು. ಮಂತ್ರಿ ಮಾಡುವ ಮಾತು ಉಳಿಸಿಕೊಳ್ಳದಿದ್ದರೆ, ಬಿಜೆಪಿ ಮತ್ತು ಬಿಜೆಪಿ ನಾಯಕರ ಬಗ್ಗೆ ಕೆಟ್ಟ ಸಂದೇಶ ರವಾನೆಯಾಗುತ್ತೆ ಎಂದು ಅಥಣಿ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಎಚ್ಚರಿಕೆ ಕೊಟ್ಟಿದ್ದಾರೆ. ಮೊದಲ ಬಾರಿ ಮೌನ ಮುರಿದು ಬಿಜೆಪಿ ನಾಯಕರ ಮೇಲೆ ಗರಂ ಆಗಿ ಮಾತನಾಡಿದ್ದಾರೆ. ಶಾಸಕ ಸ್ಥಾನ ಹಗೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿ ಮೌನಮುರಿದು ಮಾತನಾಡಿದ್ದಾರೆ.

ಗುರುವಾರ ಮಂತ್ರಿ ಮಂಡಲ ವಿಸ್ತರಣೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡುತ್ತಿದ್ದಂತೆಯೆ ಬಿಜೆಪಿ ಪಾಳೆಯದಲ್ಲ ಅಸಮಾಧಾನ ಶುರುವಾಗಿದೆ. ಕೊಟ್ಟ ಮಾತು ಉಳಿಸಿಕೊಳ್ಳ ಬೇಕು ಎಂಬ ಒತ್ತಾಯ ದಟ್ಟವಾಗಿ ಕೇಳಿ ಬರುತ್ತಿದೆ. ಸಂಪುಟ ವಿಸ್ತರಣೆ ಬಳಿಕ ಮತ್ತೊಂದು ಹಂತದ ರಾಜಕೀಯ ಮೇಲಾಟ ನಡೆಯುವ ಸ್ಪಷ್ಟ ಮುನ್ಸೂಚನೆಗಳು ಶಾಸಕರ ಮಾತಿನಲ್ಲಿ ಕಾಣಿಸುತ್ತಿವೆ.

ಮೊದಲು ಬನ್ನಿ ಬನ್ನಿ ಎಂದರು, ಈಗ ಮಾತನಾಡುತ್ತಿಲ್ಲ

ಮೊದಲು ಬನ್ನಿ ಬನ್ನಿ ಎಂದರು, ಈಗ ಮಾತನಾಡುತ್ತಿಲ್ಲ

ಬಿಜೆಪಿ ಸರ್ಕಾರ ರಚನೆಗೆ ಮೊದಲು ಬಿಜೆಪಿಯ ಹಿರಿಯ, ಕಿರಿಯ ಶಾಸಕರು ನೀವೆಲ್ಲ ಬನ್ನಿ. ಸರ್ಕಾರ ರಚನೆ ಆಗಲಿ. ನಮ್ಮ ಕ್ಷೇತ್ರಗಳು ಅಭಿವೃದ್ಧಿ ಆಗಲಿ ಎನ್ನುತ್ತಿದ್ದರು. ಇದೀಗ ಅವರೆಲ್ಲರೂ ವರಸೆ ಬದಲಿಸಿದ್ದಾರೆಂದು ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಆರೋಪಿಸಿದ್ದಾರೆ. ಬಿಜೆಪಿಗೆ ಬಂದವರೆಲ್ಲರಿಗೂ ಮಂತ್ರಿಸ್ಥಾನದ ವಾಗ್ದಾನ ಮಾಡಿದ್ದರು. ಆದರೆ ಇದೀಗ ಬಿಜೆಪಿ ನಾಯಕರು ಮಾತು ಬದಲಿಸಿದ್ದಾರೆ. ನನಗೆ ಕ್ಷೇತ್ರ ಮುಖ್ಯ, ಮಂತ್ರಿಸ್ಥಾನ ಸಿಗದೇ ಇದ್ದರೂ ಬೇಡ. ಬಿಜೆಪಿ ಪಕ್ಷದ ಕಚೇರಿಯಲ್ಲಿ ಕಸ ಗೂಡಿಸೋ ಕೆಲಸ ಕೊಟ್ರೂ ಮಾಡ್ತೇನೆ. ಆದರೆ ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೆ, ಬಿಜೆಪಿ ಮತ್ತು ನಾಯಕರ ಬಗ್ಗೆ ಕೆಟ್ಟ ಜನರಲ್ಲಿ ರವಾನೆ ಆಗುತ್ತದೆ ಎಂದು ಎಚ್ಚರಿಸಿದ್ದಾರೆ.

ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ಕೈತಪ್ಪುವ ಬಗ್ಗೆ ಸವದಿ ಏನಂದ್ರು?ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ಕೈತಪ್ಪುವ ಬಗ್ಗೆ ಸವದಿ ಏನಂದ್ರು?

ನಮ್ಮ ತ್ಯಾಗದಿಂದ ಸರ್ಕಾರ ಬಂದಿದ್ದು

ನಮ್ಮ ತ್ಯಾಗದಿಂದ ಸರ್ಕಾರ ಬಂದಿದ್ದು

ಅಥಣಿ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಸಹನೆ ಕಳೆದುಕೊಂಡಿದ್ದಾರೆ. ಒಂದೆಡೆ ತಮ್ಮ ನಾಯಕ ರಮೇಶ್ ಜಾರಕಿಹೊಳಿ ಅವರಿಗೆ ಕೈತಪ್ಪಿದ ಡಿಸಿಎಂ ಹುದ್ದೆ, ಮತ್ತೊಂದೆಡೆ ತನಗೇ ಸಿಗದ ಮಂತ್ರಿಸ್ಥಾನ, ಬಿಜೆಪಿ ನಡೆಯಿಂದ ಕುಮಟಳ್ಳಿ ಗರಂ ಆಗಿ ಮಾತನಾಡಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ ಅವರ ವಿರುದ್ಧ ನಾನು ಕಾಂಗ್ರೆಸ್‌ ಪಕ್ಷದಿಂದ ಚುನಾವಣೆ ಎದುರಿಸಿದ್ದೇನೆ.

ನಂತರ ಬಿಜೆಪಿಗೆ ಬಂದು ಗೆದ್ದಿದ್ದೇನೆ. ಈಗ ಸಾರ್ವತ್ರಿಕ ಚುನಾವಣೆ ನಡೆದಿಲ್ಲ. ಎಲ್ಲರೂ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ರಾಜಕೀಯ ಪುನರ್ಜನ್ಮ ಪಡೆದಿದ್ದೇವೆ. ಲಕ್ಷ್ಮಣ ಸವದಿ ಡಿಸಿಎಂ ಆಗಿಯೇ ಇರಲಿ, ನನ್ನನ್ನು ಮಂತ್ರಿ ಮಾಡಲಿ. ಒಂದೇ ಕ್ಷೇತ್ರದಲ್ಲಿ ಇಬ್ಬರು ಸಚಿವರಾಗೋದು ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ. ನಮ್ಮ ತ್ಯಾಗದಿಂದ ಸರ್ಕಾರ ಬಂದಿದ್ದು ಎಂದು ಬಿಜೆಪಿ ನಾಯಕರಿಗೆ ಕುಮಟಳ್ಳಿ ನೆನಪಿಸಿದ್ದಾರೆ.

ಬಿಜೆಪಿ ಮೋಸ ಮಾಡಿತು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ

ಬಿಜೆಪಿ ಮೋಸ ಮಾಡಿತು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ

ಮಂತ್ರಿ ಸ್ಥಾನಕ್ಕೆ ನಮ್ಮನ್ನ ಪರಿಗಣಿಸದೇ ಇದ್ದರೆ ಬಿಜೆಪಿ ಮನಗೆ ಮೋಸ ಮಾಡಿತು ಎಂದು ಜನರೇ ಮಾತನಾಡಿಕೊಳ್ಳುತ್ತಾರೆ. ಇನ್ನುಮುಂದೆ ಬಿಜೆಪಿಗೆ ಬರುವ ಮನಸ್ಸು ಇರುವವರಿಗೂ ಭಯ ಶುರುವಾಗುತ್ತದೆ. ಹೀಗಾಗಿ ನಮಗೆ ಹೇಳಿದ ರೀತಿ ನಡೆದುಕೊಳ್ಳಲಿ ಎಂದು ಮಹೇಶ್ ಕುಮಟಳ್ಳಿ ಆಗ್ರಹಿಸಿದ್ದಾರೆ.

ಲಕ್ಷ್ಮಣ ಸವದಿಗೆ ಬಿಜೆಪಿ ಟಿಕೆಟ್; ಆರ್. ಶಂಕರ್‌ಗೆ ನಿರಾಸೆಲಕ್ಷ್ಮಣ ಸವದಿಗೆ ಬಿಜೆಪಿ ಟಿಕೆಟ್; ಆರ್. ಶಂಕರ್‌ಗೆ ನಿರಾಸೆ

ಮಾಜಿ ಸಚಿವ ಎಚ್. ವಿಶ್ವನಾಥ ಸೋತಿರಬಹುದು, ಆದರೆ ಅವರನ್ನ ಮಂತ್ರಿ ಮಾಡಬೇಕು. ಮುಂದಿನ ದಿನದಲ್ಲಿ ಪಕ್ಷವನ್ನ ನಂಬದ ಸ್ಥಿತಿಗೆ ಬರಬೇಕಾಗುತ್ತೆ. ಜೊತೆಗೆ ಸೋತಿರುವ, ಗೆದ್ದಿರುವ ಎಲ್ಲರನ್ನೂ ಮಂತ್ರಿ ಮಾಡಲೇ ಬೇಕು ಎಂದು ಕುಮಟಳ್ಳಿ ಒತ್ತಾಯಿಸಿದ್ದಾರೆ.

17 ಜನರ ಕೈಯಲ್ಲಿದೆ ಬಿಜೆಪಿ ಸರ್ಕಾರದ ಭವಿಷ್ಯ

17 ಜನರ ಕೈಯಲ್ಲಿದೆ ಬಿಜೆಪಿ ಸರ್ಕಾರದ ಭವಿಷ್ಯ

ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ಬಂದಿರುವ 17 ಜನರ ಕೈಯಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಭವಿಷ್ಯ ಇದೆ ಎಂದರೂ ತಪ್ಪಾಗಲಾರದು. ಮಂತ್ರಿ ಸ್ಥಾನದ ಆಸೆಯಿಂದಲೇ ಸ್ವಪಕ್ಷಗಳಿಗೆ ರಾಜೀನಾಮೆ ಕೊಟ್ಟು ಇವರೆಲ್ಲರೂ ಬಿಜೆಪಿ ಸೇರಿದ್ದಾರೆ. ಜೊತೆಗೆ ಆಗಾಗ ಶಾಸಕ ಎಸ್.ಟಿ. ಸೋಮಶೇಖರ್ ಸೇರಿದಂತೆ ಎಲ್ಲರೂ ನಾವು ಒಗ್ಗಟ್ಟಾಗಿದ್ದೇವೆ ಎಂಬ ಬಹಿರಂಗ ಹೇಳಿಕೆ ಕೊಡುತ್ತಲೇ ಇದ್ದಾರೆ.

ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ

ಇದೀಗ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಡಿಸಿಎಂ ಹುದ್ದೆ ಕೈತಪ್ಪಿರುವುದು, ಹಲವರಿಗೆ ಮಂತ್ರಿಸ್ಥಾನ ಇಲ್ಲ ಎಂದಿರುವುದರ ನೇರ ಪರಿಣಾಮ ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಆಗಲಿದೆ. ಇದೆಲ್ಲವನ್ನು ಸರಿಪಡಿಸಿಕೊಂಡು ಹೋಗದಿದ್ದರೆ ಮೈತ್ರಿ ಸರ್ಕಾರಕ್ಕೆ ಬಂದ ಸ್ಥಿತಿ ಬಿಜೆಪಿ ಸರ್ಕಾರಕ್ಕೂ ಬರುವ ಸಾಧ್ಯತೆಗಳು ದಟ್ಟವಾಗಿವೆ.

English summary
The BJP government came into existence with our resignation. If we don't make ministers, the BJP will have a bad opinion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X