• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಸೂಲಿಬೆಲೆ ದೇಶದ್ರೋಹಿ': ಸದಾನಂದಗೌಡ ವಿರುದ್ಧ ಮುಗಿಬಿದ್ದ ಬಿಜೆಪಿ ಬೆಂಬಲಿಗರು

|
   ಚಕ್ರವರ್ತಿ ಪರ, ಸದಾನಂದ ಗೌಡರ ವಿರುದ್ಧ ನಿಂತ ಬಿಜೆಪಿ ಕಾರ್ಯಕರ್ತರು. | Chakravarty Sulibele

   ಬೆಂಗಳೂರು, ಅಕ್ಟೋಬರ್ 3: ರಾಜ್ಯದ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿ ಎರಡು ತಿಂಗಳು ಕಳೆದರೂ ಸಂತ್ರಸ್ತರ ನೆರವಿಗೆ ಧಾವಿಸದ ಕೇಂದ್ರ ಸರ್ಕಾರದ ವಿರುದ್ಧ ಜನರಲ್ಲಿ ಆಕ್ರೋಶ ಹೆಚ್ಚುತ್ತಿದೆ. ಅದರಲ್ಲಿಯೂ ರಾಜ್ಯದ ಸಂಸದರು ಕೇಂದ್ರದಿಂದ ಪರಿಹಾರ ತರುವ ಯಾವುದೇ ಪ್ರಯತ್ನಗಳನ್ನು ಮಾಡದೆಯೇ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.

   ಪ್ರತಿ ಚುನಾವಣೆಯಲ್ಲಿಯೂ ಬಿಜೆಪಿಯ ಪರವಾಗಿ ಪ್ರಚಾರ ಮಾಡುತ್ತಿದ್ದ ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ರಾಜ್ಯದ ಬಿಜೆಪಿ ಸಂಸದರ ವಿರುದ್ಧ ಹರಿಹಾಯ್ದಿರುವುದು ಮತ್ತು ಅದಕ್ಕೆ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಪ್ರತಿಕ್ರಿಯೆ ನೀಡಿರುವ ಬಗೆ ಬಿಜೆಪಿ ಅನುಯಾಯಿಗಳನ್ನೇ ಕೆರಳಿಸಿದೆ. ಸೂಲಿಬೆಲೆ ಅವರನ್ನು 'ದೇಶದ್ರೋಹಿ' ಎಂದು ಸದಾನಂದ ಗೌಡ ಪರೋಕ್ಷವಾಗಿ ಟೀಕಿಸಿರುವುದಕ್ಕೆ ಬಿಜೆಪಿ ಬೆಂಬಲಿಗರು ಅವರ ವಿರುದ್ಧ ಮುಗಿಬಿದ್ದಿದ್ದಾರೆ.

   ಚಕ್ರವರ್ತಿ ಸೂಲಿಬೆಲೆ ದೇಶದ್ರೋಹಿ: ಡಿವಿಎಸ್ ಪರೋಕ್ಷ ಆರೋಪ

   ಉತ್ತರ ಕರ್ನಾಟಕದ ಭಾಗದಲ್ಲಿ ಬಿಜೆಪಿಯ ಪರವಾಗಿ ಚುನಾವಣಾ ಪ್ರಚಾರಗಳನ್ನು ನಡೆಸಿ ಅವರ ಗೆಲುವಿಗೆ ಶ್ರಮಿಸಿದ್ದ ಕಾರ್ಯಕರ್ತರು ಈಗ ತಮ್ಮ ಕಷ್ಟಕ್ಕೆ ಸ್ಪಂದಿಸದ ಸಚಿವರು ಮತ್ತು ಸಂಸದರ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ಅತ್ತ ಬಿಜೆಪಿಯ ಟೀಕಾಕಾರರು ಈ ತಿಕ್ಕಾಟವನ್ನು ಲೇವಡಿ ಮಾಡುತ್ತಿದ್ದು, ಸೂಲಿಬೆಲೆ ಮತ್ತು ಸಚಿವರ ನಡುವಿನ ಸಂಘರ್ಷ ಅವರಿಗೆ ಅಣಕಿಸುವ ಅಸ್ತ್ರವಾಗಿ ಸಿಕ್ಕಿದೆ. ಬಿಜೆಪಿಯ ಕಟ್ಟಾ ಬೆಂಬಲಿಗರು ಸರ್ಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪೋಸ್ಟ್‌ಗಳನ್ನು ಹಂಚಿಕೊಂಡು ವ್ಯಂಗ್ಯವಾಡುತ್ತಿದ್ದಾರೆ. ಡಿವಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನೂರಾರು ಮಂದಿ ಟ್ವೀಟ್ ಮಾಡಿದ್ದಾರೆ. ಅವುಗಳಲ್ಲಿ ಕೆಲವು ಇಲ್ಲಿವೆ.

   ಪರಿಹಾರದ ಹಣ ನಮ್ಮದು

   ಪರಿಹಾರದ ಹಣ ನಮ್ಮದು

   ವೈಯಕ್ತಿಕ ದಾಳಿಯ ಉದ್ದೇಶ, ನಿಮ್ಮ ನಾಲಿಗೆಯ ಹಾಗೂ ಬುದ್ಧಿಶಕ್ತಿ ಮೇಲೆ ಅಧಿಕಾರದ‌ ಮದವೇರಿದೆ. ಪ್ರಶ್ನೆ ಕೇಳಿದವರ ಮೇಲೆ ದೇಶದ್ರೋಹಿ ಎಂದು ವಾಗ್ದಾಳಿ ಮಾಡ್ತಿರಾ? ನೀವು ಕೊಡುತ್ತಿರುವ ಪರಿಹಾರದ ಹಣ ನಮ್ಮಂಥವರಿಂದ ಜಿಎಸ್‌ಟಿ, ಇತರೆ ಕರ ವಸೂಲಿ ಮಾಡಿ ಸಂಗ್ರಹಿಸಿದ ಹಣ. ಅದನ್ನು ನಿಮ್ಮ ಮನೆಯಿಂದ ತಂದು ಕೊಡುವುದಲ್ಲ. ಊಟಕ್ಕಿಲ್ಲದ ಉಪ್ಪಿನಕಾಯಿ ಮತ್ಯಾಕೆ?- ರಾಮದಾಸ್

   ಚಕ್ರವರ್ತಿ ಸೂಲಿಬೆಲೆಗೆ ದೇಶದ್ರೋಹ ಪಟ್ಟ: ಟ್ವಿಟ್ಟಿಗರ ಅಭಿಪ್ರಾಯವೇನು?

   ನಿಮ್ಮ ಯೋಗ್ಯತೆ ಸ್ಪಷ್ಟವಾಯಿತು

   ನಿಮ್ಮ ಯೋಗ್ಯತೆ ಸ್ಪಷ್ಟವಾಯಿತು

   ಹಿಂದೊಮ್ಮೆ ನಾನು ನನ್ನ ಜಾತಿಯಿಂದಾನೆ ಗೆದ್ದಿದ್ದು, ಮಂತ್ರಿ ಆಗಿದ್ದು ಅಂತ ಹೇಳಿದ ಗೌಡ್ರು, ಇವತ್ತು ಚಕ್ರವರ್ತಿ ಅಣ್ಣನನ್ನು ದೇಶದ್ರೋಹಿ ಅಂದಿದ್ರಲ್ಲಿ ಅಚ್ಚರಿ ಏನಿಲ್ಲ. ಜಾತಿವಾದಿ ಆದ ನಿಮಗೆ ರಾಷ್ಟ್ರವಾದಿಗಳೆಲ್ಲರೂ ದೇಶದ್ರೋಹಿಗಳ ಥರಾನೆ ಕಾಣ್ತಾರೆ ಬಿಡಿ. ನಿಮ್ಮ ಯೋಗ್ಯತೆ ಗೊತ್ತಾಗಿತ್ತು. ಮತ್ತೊಮ್ಮೆ ಸ್ಪಷ್ಟವಾಯ್ತು.- ಶ್ರೀನಿಧಿ

   ಇಷ್ಟು ದಿನ ಕಷ್ಟ ಕಾಣಿಸಲಿಲ್ವಾ?

   ಇಷ್ಟು ದಿನ ಕಷ್ಟ ಕಾಣಿಸಲಿಲ್ವಾ?

   ನಿನ್ನೆಯ ಟ್ವೀಟ್‌ಗೆ ಸಾಕ್ಷಿ ಹಾಕಿದ್ದೀರಿ. ಇಷ್ಟು ದಿನ ಪ್ರವಾಹ ಪೀಡಿತರ ಕಷ್ಟ ನಿಮಗೆ ಕಾಣಲಿಲ್ವಾ? ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡೋವರೆಗೆ ರಾಜ್ಯದ ಜನರ ಪರಿಸ್ಥಿತಿ ನಿಮಗೆ ಕಾಣಿಸಿರಲಿಲ್ವಾ? ಚಕ್ರವರ್ತಿ ಸೂಲಿಬೆಲೆ ಅವರ ಟ್ವೀಟ್‌ಗೆ ಇಷ್ಟು ತಲೆಕೆಡಿಸಿಕೊಂಡಿರೊ ನೀವು, ಇದೇ ಗಮನವನ್ನು ಪರಿಹಾರ ಕೊಡಿಸೋದ್ರಲ್ಲಿ ತೋರಿಸಿದ್ರೆ ಇಷ್ಟೊತ್ತಿಗೆ ಪರಿಹಾರ ಬರ್ತಿತ್ತು- ಕುಸುಮಾ ಆಚಾರ್ಯ

   ಸಂಸದರು ಇದ್ದೂ ಇಲ್ಲದಂತೆ

   ಸಂಸದರು ಇದ್ದೂ ಇಲ್ಲದಂತೆ

   ಥೂ ನಿಮ್ಮ ನಾಚಿಕೆ ಅಗೊಲ್ವ? ಅನಂತಕುಮಾರ್ ಕೇಂದ್ರದ ಮಂತ್ರಿ ಆಗಿದ್ದಾಗ ಕರ್ನಾಟಕದ ಬಗ್ಗೆ ದ್ವನಿಯಾಗಿದ್ದರು. ನಿಮಗೇನು ದೊಡ್ಡ ರೋಗ? ಕರ್ನಾಟಕದ ನೆರೆ ಪರಿಹಾರ ಕೇಳೋಕೆ ಧೈರ್ಯ ಇಲ್ಲದೇ ಇರೋ 25 ಸಂಸದರು ಇದ್ದೂ ಇಲ್ಲದೆ ಇರೋ ಹಾಗೇ. ಸ್ಮೈಲ್ ಗೌಡ್ರೆ, ಬೇರೆಯವರ ಸಮರ್ಥನೆ ಮಾಡೋದು ಬಿಟ್ಟು ನಮ್ಮ ಕನ್ನಡಿಗರ ಬಗ್ಗೆ ಯೋಚ್ನೆ ಮಾಡಿ- ನವೀನ್ ಸುಂದಾರ್ಕರ್

   ಮೋದಿಯನ್ನು ಬೈದರೆ ಆಕಾಶಕ್ಕೆ ಉಗುಳಿದಂತೆ: ಪ್ರತಾಪ್ ಸಿಂಹ

   ಪರಿಹಾರ ಬರೋದು ಯಾವಾಗ?

   ಪರಿಹಾರ ಬರೋದು ಯಾವಾಗ?

   ಇಲ್ಲದ ಕಥೆ ಹೇಳಿಕೊಂಡು ಪುಂಗಿ ಊದಿಕೊಂಡು ತಿರುಗುತ್ತಾ ಇರೋರು ನೀವು. 60 ದಿನಗಳೇ ಕಳೆದಿವೆ, ಇನ್ನೂ ಯಾವಾಗ ಪರಿಹಾರ ಕೊಡುವುದು. ವರದಿ ಮಾತು ಬಿಡಪ್ಪಾ, ತಕ್ಷಣ ಪರಿಹಾರ ಕೊಡಲು ಇಷ್ಟು ದಿನವಾಗಿಯೂ ಸಾಧ್ಯವಾಗಿಲ್ಲ ಅಂದ್ರೇ, ನಿಮ್ಮ ದೀರ್ಘ ಪರಿಹಾರ ಬರೋದು ಯಾವಾಗ ಮುಂದಿನ ಪ್ರವಾಹಕ್ಕಾ.? ಪ್ರಶ್ನೆ ಮಾಡಿದವರಿಗೆ ದೇಶದ್ರೋಹಿ ಅಂತಿರಲ್ಲಾ ಯಾಕೇ???- ಮಲ್ಲಿಕಾರ್ಜುನ ದಣ್ಣೂರ್

   ಬಿಜೆಪಿ ಬೆಂಬಲಿಗರು, ನಿಮ್ಮ ಗುಲಾಮರಲ್ಲ

   ಬಿಜೆಪಿ ಬೆಂಬಲಿಗರು, ನಿಮ್ಮ ಗುಲಾಮರಲ್ಲ

   ಸ್ವಾಮಿ ನಿಮ್ಮ ಮುಖ ನೋಡಿ 100 ವೋಟ್ ಕೂಡ ಬಿದ್ದಿಲ್ಲ. ಅದು ನಿಮಗೂ ಗೊತ್ತು. ನೀವು ಕೇಂದ್ರ ಮಂತ್ರಿ ನಮ್ಮ ಕರ್ಮಕ್ಕೆ. ಕೇಂದ್ರ ಪರಿಹಾರದ ಬಗ್ಗೆ 2 ತಿಂಗಳಿಂದ ಎಷ್ಟು ಪ್ರಯತ್ನಿಸಿದ್ದೀರಿ? ನಾವು ಬಿಜೆಪಿ ಬೆಂಬಲಿಗರು. ಆದರೆ ನಿಮಗೆ ಗುಲಾಮರಲ್ಲ. ನಮಗೆ ನಮ್ಮ ಜನ ಮುಖ್ಯ. ನಮ್ಮ ರಾಜ್ಯ ಮುಖ್ಯ.- ಗುರುಮೂರ್ತಿ ಹೆಗ್ಡೆ

   ಗಾಂಧೀಜಿ ಎಲ್ಲಿ ಹೇಳಿದ್ದಾರೆ?

   ಗಾಂಧೀಜಿ ಎಲ್ಲಿ ಹೇಳಿದ್ದಾರೆ?

   ಹಾರಿಕೆ ಸುದ್ದಿ ಹರಡುವವರು ದೇಶ ದ್ರೋಹಿಗಳು ಅಂತ ಗಾಂಧೀಜಿ ಎಲ್ಲಿ ಹೇಳಿದ್ದಾರೆ ದಯವಿಟ್ಟು ಉಲ್ಲೇಖಿಸಿ. ಇಲ್ಲದಿದ್ದರೆ ಚಕ್ರವರ್ತಿ ಸೂಲಿಬೆಲೆ ಅವರ ಕ್ಷಮೆ ಕೋರಿ. ನರೇಂದ್ರ ಮೋದಿ ಅವರೇ? ಇವು ನಿಮ್ಮ ಸಂಪುಟದ ಸಚಿವರೇ? ದಯವಿಟ್ಟು ಒಮ್ಮೆ ಪರಿಶೀಲಿಸಿ- ವರ್ಧಮಾನ್ ತ್ಯಾಗಿ

   ನಾವು ಕಾಂಗ್ರೆಸ್-ಜೆಡಿಎಸ್ ಬೆಂಬಲಿಗರಂತಲ್ಲ

   ನಾವು ಕಾಂಗ್ರೆಸ್-ಜೆಡಿಎಸ್ ಬೆಂಬಲಿಗರಂತಲ್ಲ

   ನಮ್ಮನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಅಥವಾ ಇನ್ನಿತರ ಪಕ್ಷಗಳ ಕಾರ್ಯಕರ್ತರ ಅಥವಾ ಬೆಂಬಲಿಗರ ಹಾಗೆ ನಾವೇನು ಮಾಡಿದರೂ ಬಿಜೆಪಿ ಬೆಂಬಲಿಗರು ಸುಮ್ಮನೆ ಜೀ ಹುಜೂರ್ ಅಂತ ಸುಮ್ಮನಿದ್ದುಬಿಡುತ್ತಾರೆ ಅಂತ ಅಂದುಕೊಂಡುಬಿಟ್ಟಿದ್ದಾರೆ. ನಮಗೆ ಬೆಂಬಲಿಸೋದು ಗೊತ್ತು, ಮೈ ಮರೆತು ಇದ್ದಾಗ ಜಾಡಿಸೋದು ಗೊತ್ತು ಅಂತ ಇವರಿಗೆ ಗೊತ್ತಿಲ್ಲ ಅಂತ ಕಾಣುತ್ತದೆ.- ನಿತೇಶ್ ಪೂಜಾರಿ

   ಸ್ನೇಹಿತರು ಹೇಳಿದ್ದು ನಿಜವಾಯ್ತು

   ಸ್ನೇಹಿತರು ಹೇಳಿದ್ದು ನಿಜವಾಯ್ತು

   ಉ.ಕ ಭಾಷೆಯಲ್ಲಿ ಜಾಡ್ಸಿದ್ರೆ ಗೊತ್ತಾಗುತ್ತೆ. ನಮ್ಮ ಗೆಳೆಯರು ಹೇಳ್ತಿದ್ರು, ಬಿಜೆಪಿ ಪರವಾಗಿ ಅಷ್ಟು ದುಡಿಬೇಡಲೇ. ನಾಳೆ ನಿನ್ನ ಮತ್ತು ವೋಟ್ ಹಾಕಿದವ್ರನ ಖಂಡಿತವಾಗಿ ಜಾಡ್ಸಿ ಒದೀತಾರೆ ಅಂತ, ಅದು ನಿಜವಾಯ್ತು. ಮುಂದಿನ ಚುನಾವಣೇಲಿ ನನ್ನ ಮತ್ತು ನಮ್ಮ ಕುಟುಂಬದ 63 ವೋಟ್‌ಗಳು (ಸ್ನೇಹಿತರು ಮತ್ತು ಊರಲ್ಲಿ ಬೇಕಾದವರ ಬಿಟ್ಟು) ಪರರಿಗೆ ಮಾತ್ರ ಮೀಸಲು- ಮಂಜುನಾಥ ಹಟ್ಟಿ

   English summary
   Karnataka BJP followers hits back at union minister DV Sadananda Gowda over his comment against Yuva Brigade Chakravarty Sulibele on Uttara Karnataka flood relief.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more