ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ಬಜೆಟ್ ಮಂಡನೆ: ಬಿಜೆಪಿ ತಂತ್ರವೇನು?

|
Google Oneindia Kannada News

Recommended Video

karnataka budget 2019 : ಬಜೆಟ್ ಗೂ ಮುನ್ನ ಬಿಜೆಪಿ ವಿಶೇಷ ಮನವಿ..! | Oneindia Kannada

ಬೆಂಗಳೂರು, ಫೆಬ್ರವರಿ 08: ಇಂದು (ಫೆಬ್ರವರಿ 08) ರಂದು ಮಧ್ಯಾಹ್ನ 12:30 ಕ್ಕೆ ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದ ಎರಡನೇ ಬಜೆಟ್ ಮಂಡಿಸಲಿದ್ದಾರೆ. ಎರಡು ದಿನದಿಂದ ಅಧಿವೇಶನದಲ್ಲಿ ಗದ್ದಲ ಎಬ್ಬಿಸಿರುವ ಬಿಜೆಪಿ ಮೂರನೇ ದಿನ ಯಾವ ತಂತ್ರ ಅನುಸರಿಸುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

ಬಜೆಟ್ ಭಾಷಣ ಆರಂಭ ಆಗುವ ಮುನ್ನವೇ ಬಿಜೆಪಿಯು ಸದನದಲ್ಲಿ ಗದ್ದಲ ಎಬ್ಬಿಸಲಿದೆ ಎನ್ನಲಾಗಿದೆ. ಬಜೆಟ್ ಪ್ರತಿಗಳನ್ನು ಮುಂದಾಗಿ ನೀಡುವುದು ಬೇಡವೆಂಬ ನಿರ್ಣಯವನ್ನು ಎಚ್‌ಡಿಕೆ ಮಾಡಿದ್ದು, ಇದರ ವಿರುದ್ಧ ನಾಳೆ ಬಜೆಟ್ ಭಾಷಣೆ ಆರಂಭಕ್ಕೂ ಮುನ್ನವೇ ಬಿಜೆಪಿ ಪ್ರತಿಭಟಿಸಲಿದೆ.

BJP demanding budget copies before the budget presentation

ಬಜೆಟ್ ಭಾಷಣ ಆರಂಭಕ್ಕೂ ಮುನ್ನವೇ ಎಲ್ಲಾ ಸದಸ್ಯರಿಗೂ ಬಜೆಟ್ ಪ್ರತಿಯನ್ನು ನೀಡುವುದು ಸಂಪ್ರದಾಯ. ಆದರೆ ಈ ಬಾರಿ ಸಂಪ್ರದಾಯವನ್ನು ಮುರಿಯುವ ನಿರ್ಣಯವನ್ನು ಎಚ್‌ಡಿಕೆ ಮಾಡಿದ್ದಾರೆ. ಸರ್ಕಾರದ ವಿರುದ್ಧ ಹರಿಹಾಯಲು ಸಿದ್ಧವಾಗಿರುವ ಬಿಜೆಪಿಗೆ ಕುಮಾರಸ್ವಾಮಿ ಅವರ ಈ ನಿರ್ಣಯ ಗದ್ದಲಕ್ಕೆ ವಸ್ತು ಒದಗಿಸಿದ ಹಾಗೆ ಆಗಿದೆ.

ಬಜೆಟ್ ಮಂಡನೆ ಬಳಿಕವೇ ಬಿಜೆಪಿಗೆ ಬಜೆಟ್ ಪ್ರತಿ: ಎಚ್‌ಡಿಕೆ ತಂತ್ರಬಜೆಟ್ ಮಂಡನೆ ಬಳಿಕವೇ ಬಿಜೆಪಿಗೆ ಬಜೆಟ್ ಪ್ರತಿ: ಎಚ್‌ಡಿಕೆ ತಂತ್ರ

ಬಜೆಟ್‌ಗೆ ಮುನ್ನವೇ ಪ್ರತಿಗಳನ್ನು ನೀಡಬೇಕು ಎಂದು ಈಗಾಗಲೇ ಯಡಿಯೂರಪ್ಪ ಅವರು ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಒಂದೊಮ್ಮೆ ಬಜೆಟ್ ಪ್ರತಿಗಳು ಭಾಷಣಕ್ಕೆ ಮುನ್ನಾ ವಿತರಣೆ ಆಗಲಿಲ್ಲವೆಂದರೆ ಗದ್ದಲ ಆಗುವುದು ಖಂಡಿತ.

ಶಾಸಕರ ಸರಣಿ ರಾಜೀನಾಮೆ? ಸ್ಪೀಕರ್ ರಮೇಶ್ ಕುಮಾರ್ ಮುಂದಿನ ಆಯ್ಕೆಗಳು?ಶಾಸಕರ ಸರಣಿ ರಾಜೀನಾಮೆ? ಸ್ಪೀಕರ್ ರಮೇಶ್ ಕುಮಾರ್ ಮುಂದಿನ ಆಯ್ಕೆಗಳು?

ಒಂದೊಮ್ಮೆ ಬಜೆಟ್ ಭಾಷಣ ಸುಸೂತ್ರವಾಗಿ ನಡೆದರೆ ಬಜೆಟ್ ಪ್ರತಿಗಳನ್ನು ಹರಿದುಹಾಕಿ ಬಜೆಟ್ ವಿರುದ್ಧ ಪ್ರತಿಭಟನೆಯನ್ನು ಬಿಜೆಪಿ ಮಾಡಲಿದೆ. ನಂತರ ಬಜೆಟ್ ಮೇಲಿನ ಚರ್ಚೆಯಲ್ಲಿ ಬಜೆಟ್ ಅನ್ನು ಟೀಕಿಸಿ. ಹಾಗೂ ಅನುಮೋದನೆ ಸಮಯ ಕಾಂಗ್ರೆಸ್‌ನ ಕೆಲವು ಶಾಸಕರಿಂದಲೂ ಬಜೆಟ್ ವಿರುದ್ಧವಾಗಿ ಮತಹಾಕಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರವನ್ನು ಬಿಜೆಪಿ ಹೆಣೆದಿದೆ ಎನ್ನಲಾಗಿದೆ.

ರೈತರು, ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಕೊಡಲಿದೆ ಕುಮಾರಸ್ವಾಮಿ ಬಜೆಟ್ ರೈತರು, ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಕೊಡಲಿದೆ ಕುಮಾರಸ್ವಾಮಿ ಬಜೆಟ್

English summary
Karnataka BJP demanding budget copies before the budget speech. CM Kumaraswamy planing to not give budget copies before the speech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X