ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ಸಿಂಗಪುರ ಪ್ರವಾಸವನ್ನು ಟೀಕಿಸಿದ ಬಿಜೆಪಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 29 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿದೇಶ ಪ್ರವಾಸವನ್ನು ಬಿಜೆಪಿ ಟೀಕಿಸಿದೆ. ಕುಟುಂಬ ಸಮೇತರಾಗಿ ನಾಲ್ಕು ದಿನಗಳ ಪ್ರವಾಸಕ್ಕೆ ಕುಮಾರಸ್ವಾಮಿ ಅವರು ಸಿಂಗಪುರಕ್ಕೆ ತೆರಳಿದ್ದಾರೆ.

ಡಿಸೆಂಬರ್ 28ರ ಶುಕ್ರವಾರ ಎಚ್.ಡಿ.ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ಸಿಂಗಪುರಕ್ಕೆ ಪ್ರಯಾಣಿಸಿದ್ದಾರೆ. ಜನವರಿ 1ರಂದು ಅವರು ರಾಜ್ಯಕ್ಕೆ ವಾಪಸ್ ಆಗಲಿದ್ದಾರೆ.

ನಿಗಮ-ಮಂಡಳಿ ನೇಮಕ ಮಾಡದೆ ವಿದೇಶ ಪ್ರವಾಸಕ್ಕೆ ತೆರಳಿದ ಸಿಎಂ ನಿಗಮ-ಮಂಡಳಿ ನೇಮಕ ಮಾಡದೆ ವಿದೇಶ ಪ್ರವಾಸಕ್ಕೆ ತೆರಳಿದ ಸಿಎಂ

ಪ್ರತಿಪಕ್ಷ ಬಿಜೆಪಿ ಕುಮಾರಸ್ವಾಮಿ ಅವರ ವಿದೇಶ ಪ್ರವಾಸವನ್ನು ಟೀಕಿಸಿದೆ. ಮಣ್ಣಿನ ಮಗ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳು ಹೊಸ ವರ್ಷಾಚರಣೆಗಾಗಿ ಸಿಂಗಪುರಕ್ಕೆ ಪ್ರವಾಸ ತೆರಳಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

BJP criticises Chief Minister HD Kumaraswamy Singapore trip

'ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾದ ಬಳಿಕ 377 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 156 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ರೈತರ ಸಾಲಮನ್ನಾ ಭರವಸೆ ಈಡೇರಿಲ್ಲ. ರಾಜ್ಯ ಸಾಲದಲ್ಲಿ ಮುಳುಗಿದೆ. ಆದರೆ, ಮಣ್ಣಿನ ಮಗ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳು ಹೊಸ ವರ್ಷಾಚರಣೆಗಾಗಾಗಿ ಸಿಂಗಾಪುರಕ್ಕೆ ತೆರಳಿದ್ದಾರೆ' ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಆಕ್ಸಿಡೆಂಟಲ್ ಸಿಎಂ ಎಂದು ಸಿನಿಮಾ ಮಾಡಿದರೆ ಯಾರು? ಪಾತ್ರ ಮಾಡಬಹುದು ಎಂದು ಬಿಜೆಪಿ ವ್ಯಂಗ್ಯವಾಡಿದೆ.

English summary
Karnataka BJP criticises Chief Minister H.D.Kumaraswamy Singapore trip during new year. H.D.Kumaraswamy went for Singapore trip on December 28 and will return on January 1, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X