ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯತ್ನಾಳ್, ಸಿಪಿವೈ ಸುಮ್ಮನಿದ್ದರೂ ಇದೇನಿದು ಕಾಂಗ್ರೆಸ್ಸಿನ ಪ್ರಚೋದನೆ!

|
Google Oneindia Kannada News

ಬೆಂಗಳೂರು, ಮೇ 29: ಯಡಿಯೂರಪ್ಪನವರು ಇನ್ನೇನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎನ್ನುವಷ್ಟರಲ್ಲಿ ಬಿಜೆಪಿ ಭಿನ್ನಮತೀಯರ ಕೂಗು ಕ್ಷೀಣಿಸಲಾರಂಭಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಡ್ಯಾಮೇಜ್ ಕಂಟ್ರೋಲಿಗೆ ಮುಂದಾಗಿದ್ದಾರೆ.

"ಕೊರೊನಾದ ಈ ಸಮಯದಲ್ಲಿ ಅನಗತ್ಯ ಚರ್ಚೆಗಳು ಬೇಡ, ನಾಯಕತ್ವ ಬದಲಾವಣೆ ಎನ್ನುವ ಯಾವ ಚರ್ಚೆಯೂ ಹೈಕಮಾಂಡ್ ಮಟ್ಟದಲ್ಲಿ ನಡೆದಿಲ್ಲ. ಪೂರ್ಣಾವಧಿಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿಗಳು. ಸಿ.ಪಿ.ಯೋಗೇಶ್ವರ್ ಅವರನ್ನು ಕರೆದು ಚರ್ಚಿಸುತ್ತೇನೆ" ಎಂದು ಕಟೀಲ್ ಹೇಳಿದ್ದರು.

 ಬಿಎಸ್ವೈ ಸದ್ಯಕ್ಕೆ ಬದಲಾವಣೆಯಿಲ್ಲ: ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ ಬಿಎಸ್ವೈ ಸದ್ಯಕ್ಕೆ ಬದಲಾವಣೆಯಿಲ್ಲ: ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ

ಈ ಬಗ್ಗೆ ಟ್ವೀಟ್ ಮಾಡಿರುವ ಕೆಪಿಸಿಸಿ, ಯತ್ನಾಳ್ ಅವರನ್ನಂತೂ ಏನೂ ಮಾಡಲಿಕ್ಕೆ ಆಗಲಿಲ್ಲ, ಯೋಗೇಶ್ವರ್ ಅವರ ವಿರುದ್ದವಾದರೂ ಕ್ರಮ ತೆಗೆದುಕೊಳ್ಳಿ ಎಂದು ಲೇವಡಿ ಮಾಡಿದೆ.

Karnataka BJP Crisis Over Change In Leadership, Karnataka Pradesh Congress Committee(KPCC) Tweet

ಕೆಪಿಸಿಸಿ ಮಾಡಿರುವ ಟ್ವೀಟ್ ಹೀಗಿದೆ, "@BJP4Karnataka ಸರ್ಕಾರದ ಆದ್ಯತೆ ಕೊರೊನಾ ಕಂಟ್ರೋಲ್ ಅಲ್ಲ ಡ್ಯಾಮೇಜ್ ಕಂಟ್ರೋಲ್! ಜನರ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲದ ಬಿಜೆಪಿಗೆ ತನ್ನ ಒಡೆದ ಮನೆಯ ಬಗ್ಗೆ ಚಿಂತೆ. ಯತ್ನಾಳ್‌ರನ್ನಂತೂ ಏನೂ ಮಾಡಲಾಗಲಿಲ್ಲ, ಯೋಗೀಶ್ವರ್‌ರವರ ವಿರುದ್ಧವಾದರೂ ಕ್ರಮ ಕೈಗೊಂಡು ತಮ್ಮ ಬೆನ್ನುಮೂಳೆ ಗಟ್ಟಿ ಇದೆ ಎಂದು ನಿರೂಪಿಸುವಿರಾ
@nalinkateel ಅವರೇ!?" ಎಂದು ಕಾಂಗ್ರೆಸ್ ಅಣಕವಾಡಿದೆ.

'ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಜನರಿಗೆ ಲಸಿಕೆ ನೀಡಲು ವಿಫಲವಾಗಿದ್ದು, ‌ಕೊರೊನ ಮಹಾಮಾರಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾಂಗ್ರೆಸ್ ಜನರ ಜೀವ ಉಳಿಸಲು ಮುಂದಾಗಿದೆ. ಉಚಿತ ಲಸಿಕೆ ನೀಡುವ ಕಾಂಗ್ರೆಸ್‌ನ ₹100 ಕೋಟಿ ಯೋಜನೆಗೆ ಸರ್ಕಾರ ಅನುಮತಿ ನೀಡಲಿ' ಎಂದು ಕಾಂಗ್ರೆಸ್ ಮತ್ತೆ ಸರಕಾರವನ್ನು ಒತ್ತಾಯಿಸಿದೆ.

ಶಾಸಕ ರೇಣುಕಾಚಾರ್ಯಗೆ ಎಚ್ಚರಿಕೆ ನೀಡಿದ ಸಿಪಿವೈ ಬೆಂಬಲಿಗರುಶಾಸಕ ರೇಣುಕಾಚಾರ್ಯಗೆ ಎಚ್ಚರಿಕೆ ನೀಡಿದ ಸಿಪಿವೈ ಬೆಂಬಲಿಗರು

Recommended Video

China ಆರ್ಥಿಕತೆಯಲ್ಲಿ ಮೊದಲನೇ ಸ್ಥಾನ!! | Oneindia Kannada

"ಕೊರೊನಾ ಇಲ್ಲದೆ ಇದ್ದರೆ ಇಷ್ಟು ಹೊತ್ತಿಗಾಗಲೇ ಬಿಜೆಪಿ ಶಾಸಕರು ರೆಸಾರ್ಟ್ ಸೇರಿರುತ್ತಿದ್ದರು! ಇಷ್ಟು ದಿನ ಕರೋನಾ ನಿರ್ವಹಣೆಗೆ ಹೊರಬರದೆ ಅಡಗಿದ್ದ ಬಿಜೆಪಿ ಸಚಿವ ಶಾಸಕರೆಲ್ಲ ಈಗ ಕುರ್ಚಿ ಕದನಕ್ಕಾಗಿ ದಿಡೀರ್ ಪ್ರತ್ಯಕ್ಷರಾಗಿದ್ದಾರೆ. ತನಗೆ ಸಿಕ್ಕ ಅಧಿಕಾರವಧಿಯಲ್ಲೆಲ್ಲ ಕುರ್ಚಿ ಕಾಳಗದಲ್ಲಿ ಮುಳುಗುವ ಬಿಜೆಪಿಯಿಂದ ಜನರ ರಕ್ಷಣೆ ಸಾಧ್ಯವಿಲ್ಲ"ಎಂದು ಕೆಪಿಸಿಸಿ ಟ್ವೀಟ್ ಮೂಲಕ, ಕಾಂಗ್ರೆಸ್ಸಿನ ಕಾಲೆಳೆದಿದೆ.

English summary
Karnataka BJP Crisis Over Change In Leadership, Karnataka Pradesh Congress Committee(KPCC) Tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X