ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪರೇಷನ್ ಕಮಲದ ಆಡಿಯೋ : ಬಿಜೆಪಿ ನೀಡಿದ ಸ್ಪಷ್ಟನೆ

|
Google Oneindia Kannada News

Recommended Video

ಬಿ ಎಸ್ ಯಡಿಯೂರಪ್ಪ ಧ್ವನಿ ಹಾಗು ಆಪರೇಷನ್ ಕಮಲ ಆಡಿಯೋ ಬಗ್ಗೆ ಬಿಜೆಪಿ ಸ್ಪಷ್ಟನೆ

ಬೆಂಗಳೂರು, ಫೆಬ್ರವರಿ 11 : ಕರ್ನಾಟಕದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವುದು ಆಪರೇಷನ್ ಕಮಲದ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಆಡಿಯೋ. ಸೋಮವಾರದ ವಿಧಾನಸಭೆ ಕಲಾಪದಲ್ಲಿಯೂ ಆಡಿಯೋ ಕುರಿತು ವಿವರವಾದ ಚರ್ಚೆ ನಡೆದಿದೆ.

ಬಜೆಟ್ ಮಂಡನೆಗೂ ಮುನ್ನ ಫೆ.8ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 2 ಆಡಿಯೋ ಟೇಪ್ ಬಿಡುಗಡೆ ಮಾಡಿದ್ದರು. ಕರ್ನಾಟಕ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಜೆಡಿಎಸ್ ಶಾಸಕರ ಜೊತೆ ಆಪರೇಷನ್ ಕಮಲದ ಕುರಿತು ಮಾತನಾಡಿದ್ದಾರೆ ಎಂದು ಆರೋಪಿಸಿದ್ದರು.

ಆಡಿಯೋ ಹಿಂದೆ ಕುಮಾರಸ್ವಾಮಿ ಕುತಂತ್ರ ರಾಜಕೀಯವಿದೆ : ಬಿಎಸ್‌ವೈಆಡಿಯೋ ಹಿಂದೆ ಕುಮಾರಸ್ವಾಮಿ ಕುತಂತ್ರ ರಾಜಕೀಯವಿದೆ : ಬಿಎಸ್‌ವೈ

ಸೋಮವಾರ ವಿಧಾನಸಭೆ ಕಲಾಪದಲ್ಲಿಯೂ ಈ ವಿಚಾರದ ಬಗ್ಗೆ ವಿವರವಾದ ಚರ್ಚೆ ನಡೆಯಿತು. ಆಡಿಯೋದಲ್ಲಿನ ಸತ್ಯಾಂಶದ ಕುರಿತು ತನಿಖೆ ನಡೆಸಲು ಸ್ಪೀಕರ್ ರಮೇಶ್ ಕುಮಾರ್ ಅವರು ಎಸ್‌ಐಟಿ ರಚನೆ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಿದರು.

ಶಾಸಕರನ್ನು ಖರೀದಿ ಮಾಡುವಷ್ಟು ಹಣ ಇಲ್ಲ : ಎಚ್.ಡಿ.ಕುಮಾರಸ್ವಾಮಿಶಾಸಕರನ್ನು ಖರೀದಿ ಮಾಡುವಷ್ಟು ಹಣ ಇಲ್ಲ : ಎಚ್.ಡಿ.ಕುಮಾರಸ್ವಾಮಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಶರಣಗೌಡ ಅವರೊಂದಿಗೆ ಮಾತುಕತೆ ನಡೆಸಿದ್ದು ನಿಜ. ಆದರೆ ಆಡಿಯೋದಲ್ಲಿರುವುದು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸುಳ್ಳು ಮತ್ತು ಕಟ್ಟುಕಥೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಈ ವಿಚಾರದ ಬಗ್ಗೆ ಇನ್ನೂ ಚರ್ಚೆ ಮುಂದುವರೆದಿದೆ.....ಈ ಕುರಿತು ಬಿಜೆಪಿ ತನ್ನ ಫೇಸ್‌ಬುಕ್ ಪುಟದಲ್ಲಿ ಸ್ಪಷ್ಟನೆ ನೀಡಿದೆ.....

ಯಡಿಯೂರಪ್ಪ ಆತ್ಮಸಾಕ್ಷಿಗೆ ಅಭಿನಂದನೆ ಸಲ್ಲಿಸಿದ ಡಿ.ಕೆ.ಶಿವಕುಮಾರ್ಯಡಿಯೂರಪ್ಪ ಆತ್ಮಸಾಕ್ಷಿಗೆ ಅಭಿನಂದನೆ ಸಲ್ಲಿಸಿದ ಡಿ.ಕೆ.ಶಿವಕುಮಾರ್

ಸುಳ್ಳು ಮತ್ತು ಕಟ್ಟು ಕಥೆ

ಸುಳ್ಳು ಮತ್ತು ಕಟ್ಟು ಕಥೆ

* ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪನವರು ತಾವು ಶರಣಗೌಡ ಅವರೊಂದಿಗೆ ಮಾತುಕತೆ ನಡೆಸಿದ್ದು ನಿಜ, ಆದರೆ ಆಡಿಯೋದಲ್ಲಿರುವುದು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸುಳ್ಳು ಮತ್ತು ಕಟ್ಟುಕಥೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಸ್ವತಃ ಯಡಿಯೂರಪ್ಪನವರು ಭೇಟಿಯಾಗಿರುವುದನ್ನು ಮಾತ್ರ ಒಪ್ಪಿಕೊಂಡಿದ್ದಾರೆ ಅಷ್ಟೇ.

* ಮಧ್ಯರಾತ್ರಿ ಶರಣಗೌಡ ಅವರನ್ನು ಬಿ.ಎಸ್‌.ಯಡಿಯೂರಪ್ಪ ಅವರ ಬಳಿ ಕಳಿಸುವ ಸಂಚು ರೂಪಿಸಿದವರೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು. ಮಧ್ಯರಾತ್ರಿ ಭೇಟಿ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸುವ ಮೂಲಕ ತನ್ನದೇನೂ ಪಾತ್ರವಿಲ್ಲ ಎನ್ನುವ ಮಹಾನ್‌ ನಾಟಕ ಮಾಡುವ ಮುಖ್ಯಮಂತ್ರಿಗಳು ಎಷ್ಟು ಸಾಚಾ ಎಂಬುದು ಸಾಬೀತಾಯಿತು.

ಮಾತನಾಡಿದ್ದು ನಿಜ

ಮಾತನಾಡಿದ್ದು ನಿಜ

* ನಾನು ಶಾಸಕನ ಪುತ್ರನ ಜೊತೆ ಮಾತನಾಡಿದ್ದು ನಿಜ. ಆದರೆ ಸ್ಪೀಕರ್, ಹಾಗೂ ಜಡ್ಜ್ ಗಳನ್ನು ಬುಕ್ ಮಾಡಿದ್ದೇನೆ ಎಂದು ಮಾತನಾಡಿದ್ದು ನಿಜ ಎಂದು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುವೆ ಎಂದು ಹೇಳಿದ್ದೇನೆ. ಆ ಹೇಳಿಕೆಗೆ ಈಗಲೂ ಯಡಿಯೂರಪ್ಪನವರು ಬದ್ಧರಾಗಿದ್ದಾರೆ. ಆದರೂ ಕಾಂಗ್ರೆಸ್‌ ನಾಯಕರು ಯಡಿಯೂರಪ್ಪ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವುದು ಹಾಸ್ಯಾಸ್ಪದ.

* ದೇಶದ ಇತಿಹಾಸದಲ್ಲೇ ಮೊದಲಬಾರಿಗೆ ಹೀಗೆ ಮಧ್ಯರಾತ್ರಿ ತಮ್ಮ ರಾಜಕೀಯ ವಿರೋಧಿಯನ್ನು ಬ್ಲಾಕ್‌ ಮೇಲ್‌ ಮಾಡಲು ರಾಜ್ಯದ ಮುಖ್ಯಮಂತ್ರಿಯೊಬ್ಬರು ನಕಲಿ ಆಡಿಯೋಗೆ ಶರಣಾದ ನಿದರ್ಶನ ಮತ್ತೊಂದಿಲ್ಲ.

ಕಾಂಗ್ರೆಸ್ ನಾಯಕರು ಮೌನವಾಗಿದ್ದಾರೆ

ಕಾಂಗ್ರೆಸ್ ನಾಯಕರು ಮೌನವಾಗಿದ್ದಾರೆ

* ವಿಧಾನ ಪರಿಷತ್ತಿಗೆ ನಾಮಕರಣ ಮಾಡಲು ವಿಜುಗೌಡ ಅವರಲ್ಲಿ 25 ಕೋಟಿ ರೂ. ಕೇಳಿದ್ದ ಕುಮಾರಸ್ವಾಮಿಯವರ ಬಗ್ಗೆ ಕಾಂಗ್ರೆಸ್‌ ನಾಯಕರು ಮೌನವಾಗಿದ್ದಾರೆ. ಜೆಡಿಎಸ್‌ ಪಕ್ಷದಲ್ಲಿ ಸೂಟ್‌ಕೇಸ್‌ ಇಲ್ಲದೇ ಯಾವುದೇ ಕೆಲಸವಾಗುವುದಿಲ್ಲ ಎಂದು ಪ್ರಜ್ವಲ್‌ ರೇವಣ್ಣ ಹೇಳಿದ್ದನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಲಿಲ್ಲವೇಕೆ?

* ಸಚಿವ ಪುಟ್ಟರಂಗ ಶೆಟ್ಟಿ ಅವರಿಗೆ ಸೇರಿದ್ದೆನ್ನಲಾದ 25 ಲಕ್ಷ ರೂಗಳು ವಿಧಾನಸೌಧದ ಸಚಿವರ ಕೊಠಡಿಯಲ್ಲೇ ಪತ್ತೆಯಾದರೂ ಅವರ ಬಗ್ಗೆ ತನಿಖೆಯಾಗಲಿಲ್ಲ.

ಜೆಡಿಎಸ್ ವಿರುದ್ಧ ಆರೋಪ

ಜೆಡಿಎಸ್ ವಿರುದ್ಧ ಆರೋಪ

* ಈ ಹಿಂದೆ ಮುಖ್ಯಮಂತ್ರಿಗಳೇ ರಾಜ್ಯ ಸಭಾ ಸ್ಥಾನಕ್ಕೆ ಗೆಲ್ಲಿಸಲು ತಮ್ಮ ಪಕ್ಷದ ಶಾಸಕರು ತಲಾ 1 ಕೋಟಿ ರೂಗಳಿಗೆ ಬೇಡಿಕೆ ಇಟ್ಟಿದ್ದರೆಂದು ಸ್ವತಃ ಕುಮಾರಸ್ವಾಮಿಯವರೇ ಒಪ್ಪಿಕೊಂಡಿದ್ದಾರೆ. ಇವೆಲ್ಲವೂ ಜಾತ್ಯಾತೀತ ಜನತಾದಳದ ಹಣಕಾಸು ವ್ಯವಹಾರಗಳಿಗೆ ಕನ್ನಡಿ.

* ಕುಮಾರಸ್ವಾಮಿ-ಡಿ.ಕೆ.ಶಿವಕುಮಾರ್‌ ಜೋಡಿ ರಾಮನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಇಲ್ಲದಂತೆ ಮಾಡಿದ ಷಡ್ಯಂತ್ರವನ್ನು ರಾಜ್ಯದ ಜನತೆಯೇ ನೋಡಿದೆ.

* ಸರ್ಕಾರದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದ ಪಾರಾಗಲು ತಮ್ಮ ಕುತಂತ್ರವನ್ನು ಈಗಲೂ ಮುಂದುವರಿಸಿದ್ದಾರೆ. ಇದು ಖಂಡನೀಯ.

English summary
In a official Facebook page Karnataka BJP clarified the operation kamala CD issue and Party state president B.S.Yeddyurappa voice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X