ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ವೈ ಬದಲಾವಣೆಗೆ ಯತ್ನಿಸುತ್ತಿರುವ ಬಿಜೆಪಿಯ ಆ ರಾಷ್ಟ್ರ ನಾಯಕರಾರು?

|
Google Oneindia Kannada News

ಕೊರೊನಾ ವೈರಸ್ ಹಾವಳಿ ಇಲ್ಲದೇ ಇದ್ದಲ್ಲಿ, ಕರ್ನಾಟಕ ಬಿಜೆಪಿಯ ಆಂತರಿಕ ಬೇಗುದಿ ಕೆಲವು ತಿಂಗಳ ಹಿಂದೆಯೇ ಸ್ಪೋಟಗೊಳ್ಳುತ್ತಿತ್ತೋ ಏನೋ?

ಜೋಳದ ರೊಟ್ಟಿ ಊಟದ ಹೆಸರಿನಲ್ಲಿ ಪ್ರಮುಖವಾಗಿ, ಬಿಜೆಪಿಯ ಸ್ಟ್ರಾಂಗ್ ಬೇಸ್ ಎಂದೇ ಹೇಳಬಹುದಾದ ಉತ್ತರ ಕರ್ನಾಟಕ ಭಾಗದ ನಾಯಕರು ಯಡಿಯೂರಪ್ಪ ವಿರುದ್ದ ಸಿಡಿದಿದ್ದಾರೆ. ಈ ಮುಖಂಡರ ಅಸಮಾಧಾನದ ಸ್ಫೋಟತೆಯ ತೀವ್ರತೆ ಕೇಂದ್ರ ಗೃಹ ಸಚಿವರನ್ನೂ ಎಬ್ಬಿಸಿದೆ.

ಬಿಜೆಪಿ ಬಂಡಾಯ ಚಿವುಟಿ ಹಾಕಿತಾ ದೆಹಲಿಯ ಆ ಒಂದು ದೂರವಾಣಿ ಕರೆ?ಬಿಜೆಪಿ ಬಂಡಾಯ ಚಿವುಟಿ ಹಾಕಿತಾ ದೆಹಲಿಯ ಆ ಒಂದು ದೂರವಾಣಿ ಕರೆ?

"ಇಪ್ಪತ್ತಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ" ಎನ್ನುವ ಜಲಸಂಪನ್ಮೂಲ ಖಾತೆಯ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದು ಸಂಚಲವನ್ನು ಮೂಡಿಸಿದೆ. ಆದರೂ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೀಡಿದ ಹೇಳಿಕೆ, ಬಿಜೆಪಿಯ ಆಂತರಿಕ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ಯಡಿಯೂರಪ್ಪ ವಿರುದ್ಧ ಆಪ್ತರಿಂದಲೇ ಅಸಮಾಧಾನ ಸ್ಪೋಟ, ಬಂಡಾಯ ಸಭೆ!ಯಡಿಯೂರಪ್ಪ ವಿರುದ್ಧ ಆಪ್ತರಿಂದಲೇ ಅಸಮಾಧಾನ ಸ್ಪೋಟ, ಬಂಡಾಯ ಸಭೆ!

"ಮುಖ್ಯಮಂತ್ರಿ ಯಡಿಯೂರಪ್ಪನವರ ಬದಲಾವಣೆಗೆ ಬಿಜೆಪಿಯ ಕೇಂದ್ರ ಮಟ್ಟದ ನಾಯಕರೇ ಯತ್ನಿಸುತಿದ್ದಾರೆ" ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಯಾರನ್ನು ಸಿಎಂ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದೂ ಸತೀಶ್ ಜಾರಕಿಹೊಳಿ ಬಾಯಿ ಬಿಟ್ಟಿದ್ದಾರೆ.

ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದ ಸತೀಶ್ ಜಾರಕಿಹೊಳಿ ಹೇಳಿಕೆ

ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದ ಸತೀಶ್ ಜಾರಕಿಹೊಳಿ ಹೇಳಿಕೆ

ಬಿಜೆಪಿಯ ಆ ರಾಷ್ಟ್ರ ನಾಯಕರ ಹೆಸರನ್ನು ಸತೀಶ್ ಜಾರಕಿಹೊಳಿ ಉಲ್ಲೇಖಿಸಿಲ್ಲವಾದರೂ, ಅದಕ್ಕೆ ಉತ್ತರ ಕರ್ನಾಟಕ ಭಾಗದ ಶಾಸಕರು/ಮುಖಂಡರು ಮತ್ತು ಕಾಂಗ್ರೆಸ್ಸಿನಿಂದ ಬಿಜೆಪಿಗೆ ಹೋಗಿರುವ ಶಾಸಕರೇ ಇದಕ್ಕೆ ಬೆಂಬಲ ನೀಡುತ್ತಿದ್ದಾರೆ ಎನ್ನುವ ಸತೀಶ್ ಹೇಳಿಕೆ, ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದೆ.

ಉಮೇಶ್ ಕತ್ತಿಯವರು ಈ ಆಂತರಿಕ ಬೇಗುದಿ ಹಿಂದಿನ ಪ್ರಮುಖ ರೂವಾರಿ

ಉಮೇಶ್ ಕತ್ತಿಯವರು ಈ ಆಂತರಿಕ ಬೇಗುದಿ ಹಿಂದಿನ ಪ್ರಮುಖ ರೂವಾರಿ

ಉಮೇಶ್ ಕತ್ತಿಯವರು ಈ ಆಂತರಿಕ ಬೇಗುದಿ ಹಿಂದಿನ ಪ್ರಮುಖ ರೂವಾರಿ ಎಂದಿರುವ ಸತೀಶ್ ಜಾರಕಿಹೊಳಿ, ಮುಂದಿನ ದಿನಗಳಲ್ಲಿ ಇನ್ನೂ ತೀವ್ರತೆ ಪಡೆಯುವ ಸಾಧ್ಯತೆಯಿಲ್ಲದಿಲ್ಲ. ಇದೊಂದು ಬಿಜೆಪಿಯ ಆಂತರಿಕ ವಿಚಾರ, ಕತ್ತಿಗೆ ಉತ್ತರ ಕರ್ನಾಟಕದ ಭಾಗದ ಶಾಸಕರಿಂದ ಬೆಂಬಲ ಸಿಗುತ್ತಿದೆ ಎಂದು ಜಾರಕಿಹೊಳಿ ಹೇಳಿದ್ದಾರೆ.

ಪ್ರಲ್ಹಾದ್ ಜೋಶಿ ಅಥವಾ ಜಗದೀಶ್ ಶೆಟ್ಟರ್

ಪ್ರಲ್ಹಾದ್ ಜೋಶಿ ಅಥವಾ ಜಗದೀಶ್ ಶೆಟ್ಟರ್

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಥವಾ ಮಾಜಿ ಸಿಎಂ, ಹಾಲೀ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಬಿಜೆಪಿಯ ಕೇಂದ್ರ ಮಟ್ಟದ ನಾಯಕರು ಇದಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಯಡಿಯೂರಪ್ಪನವರಿಗೆ ಅಮಿತ್ ಶಾ ಅವರಿಂದ ಅಭಯ

ಯಡಿಯೂರಪ್ಪನವರಿಗೆ ಅಮಿತ್ ಶಾ ಅವರಿಂದ ಅಭಯ

ಆದರೆ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅಮಿತ್ ಶಾ ಅವರಿಂದ ಅಭಯ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ, ಅಮಿತ್ ಶಾ, ಬಿಎಸ್ವೈ ಅವರನ್ನು ದೂರವಾಣಿ ಮೂಲಕ ಚರ್ಚಿಸಿದ್ದಾರೆ. ಯಾವುದೇ ಟೆನ್ಸನ್ ಇಲ್ಲದೇ ಕೆಲಸ ಮುಂದುವರಿಸಿ ಎಂದು ಅಮಿತ್ ಶಾ ಅವರು ಬಿಎಸ್ವೈಗೆ ಸೂಚಿಸಿದ್ದಾರೆ.

English summary
BJP Central Leader Trying To Pull Yediyurappa From CM Chair: KPCC Working President Statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X