• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಕಲಿ Vs ಮತ್ತೊಂದು ತಿದ್ದಿದ ನಕಲಿ ಡೈರಿ: ಕಾಂಗ್ರೆಸ್‌ಗೆ ಬಿಎಸ್‌ವೈ ಟಾಂಗ್

|

ಬೆಂಗಳೂರು, ಮಾರ್ಚ್ 23: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷದ ಮುಖಂಡರಿಗೆ ಒಟ್ಟು 1,800 ಕೋಟಿ ರೂಪಾಯಿ ನೀಡಿರುವುದಾಗಿ ಡೈರಿ ಬಿಡುಗಡೆ ಮಾಡಿರುವ ಕಾಂಗ್ರೆಸ್, ದೇಶದ ರಾಜಕೀಯದಲ್ಲಿ ದೊಡ್ಡ ಸಂಚಲನ ಉಂಟುಮಾಡಿದೆ.

ಆದರೆ, ಈ ಡೈರಿ ನಕಲಿ ಎಂದು ಬಿಜೆಪಿ ವಾದಿಸಿದೆ. ಇದು ಕಾಂಗ್ರೆಸ್ ಸೃಷ್ಟಿಸಿರುವ ನಕಲಿ ಡೈರಿ ಎಂದು ಆರೋಪಿಸಲಾಗಿದೆ.

ಯಾರಾದರೂ ಡೈರಿಯಲ್ಲಿ ಈ ರೀತಿ ವಿವರಗಳನ್ನು ಬರೆದು ಸಹಿ ಮಾಡುತ್ತಾರೆಯೇ ಎಂದು ಅನೇಕರು ಪ್ರಶ್ನಿಸಿದ್ದಾರೆ. ಡೈರಿಯ ಆರಂಭದಲ್ಲಿ 'ಯಡಿಯೂರಪ್ಪ ಆದ ನಾನು' ಎಂದು ಬರೆಯಲಾಗಿದೆ. ತಮ್ಮ ಡೈರಿಯಲ್ಲಿ ಈ ರೀತಿ ಯಾರಾದರೂ ಬರೆದುಕೊಳ್ಳುತ್ತಾರೆಯೇ? ಅದೇನು ಪ್ರಮಾಣವಚನ ಸ್ವೀಕಾರ ಮಾಡುವ ಬರಹವೇ? ಎಂದು ಅನೇಕರು ಪ್ರಶ್ನಿಸಿದ್ದಾರೆ. ಅಲ್ಲದೆ ಡೈರಿಯ ಕೊನೆಯಲ್ಲಿ ಯಡಿಯೂರಪ್ಪ ಸಹಿ ಮಾಡಿದ್ದಾರೆ. ಡೈರಿಯಲ್ಲಿ ಹೀಗೆ ಬರೆದು ಯಾಕೆ ಸಹಿ ಮಾಡುತ್ತಾರೆ? ಎಂಬ ಅನುಮಾನ ವ್ಯಕ್ತವಾಗಿದೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಬಿಜೆಪಿ ಬೆಂಬಲಿಗರು ಕೂಡ ಈ ರೀತಿಯ ಅನೇಕ ಪ್ರಶ್ನೆಗಳನ್ನು ಮುಂದಿಟ್ಟು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಷ್ಟು ವರ್ಷದಿಂದ ರಾಜಕೀಯದಲ್ಲಿರುವ ಯಡಿಯೂರಪ್ಪ ಹೀಗೆ ಡೈರಿಯಲ್ಲಿ ಲೆಕ್ಕ ಬರೆದಿಟ್ಟುಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.

ಕಾಂಗ್ರೆಸ್ ಬಿಡುಗಡೆ ಮಾಡಿದ ಡೈರಿ ನಕಲಿ, ಆರೋಪವೆಲ್ಲ ಸುಳ್ಳು: ಯಡಿಯೂರಪ್ಪ

ಕಾಂಗ್ರೆಸ್‌ನ ಡೈರಿ ಆರೋಪವನ್ನು ಯಡಿಯೂರಪ್ಪ ಅಲ್ಲಗಳೆದಿದ್ದಾರೆ. ಈ ಡೈರಿ ಹಾಳೆಯಲ್ಲಿ ಬರೆದಿರುವುದು ಸುಳ್ಳು. ಇದು ನಕಲಿ. ಈ ನಕಲಿಯನ್ನೇ ತಿದ್ದಿ ಮತ್ತೊಂದು ನಕಲಿ ಡೈರಿ ಸಿದ್ಧಪಡಿಸಲಾಗಿದೆ ಎಂದು ಆರೋಪಿಸಿದ್ದಾರೆ.

ನಕಲಿ ಮತ್ತು ತಿದ್ದಿದ ನಕಲಿ ಡೈರಿ

ನಕಲಿ ಡೈರಿ Vs ಮತ್ತೊಂದು ತಿದ್ದಿದ ನಕಲಿ ಡೈರಿ,

ನಕಲಿ ಡೈರಿಯು ಶ್ರೀ ಗಡ್ಕರಿ ಅವರ ಮಗನ ಮದುವೆಗೆ 1,000 ಕೋಟಿ ರೂಪಾಯಿ ನೀಡಿದ್ದಾಗಿ ಹೇಳುತ್ತದೆ. ಮತ್ತು ಸಂಪಾದಿತ ಡೈರಿಯು ಅದನ್ನು 10 ಕೋಟಿ ರೂ. ಎನ್ನುತ್ತದೆ.

ಮುದ್ರಣವಾಗುವ ಮೊದಲೇ ಯಾರೋ ತೀರಾ ಗಡಿಬಿಡಿಯಿಂದ ಇದನ್ನು ಮಾಡಿದ್ದಾರೆ ಎನಿಸುತ್ತದೆ. ನಿನ್ನೆ ಅತ್ಯಂತ ಕೆಳಮಟ್ಟದ ರಾಜಕೀಯ ವ್ಯಕ್ತವಾಗಿದೆ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಹೈಕಮಾಂಡಿಗೆ ಕಪ್ಪ ಕೊಟ್ಟ ಯಡಿಯೂರಪ್ಪ ವಿರುದ್ಧ ಲೋಕಪಾಲ ತನಿಖೆಗೆ ಆಗ್ರಹ

ಸಾಮಾನ್ಯ ಜ್ಞಾನ ಕಳೆದುಕೊಂಡಿರಬೇಕು

ಜಿಂದ್ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ರಣ್‌ದೀಪ್ ಸುರ್ಜೇವಾಲ ಕಾಂಗ್ರೆಸ್‌ನಲ್ಲಿ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿಕೊಳ್ಳುವ ಹೆಣಗಾಟದಲ್ಲಿ ತಮ್ಮ ಸಾಮಾನ್ಯ ಜ್ಞಾನವನ್ನು ಕಳೆದುಕೊಂಡಿದ್ದಾರೆ ಎನಿಸುತ್ತದೆ. ಯಾವುದೇ ವಾಸ್ತವಾಂಶಗಳಿಲ್ಲದೆ ಸುದ್ದಿ ಬಿತ್ತುವ ಸಲುವಾಗಿಯೇ ಸುದ್ದಿಗೋಷ್ಠಿ ನಡೆಸುತ್ತಾರೆ ಎಂದರೆ ಅವರ ಹತಾಶೆ ಮತ್ತು ಗೊಂದಲದ ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ ಎಂದು ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿತ್ತು.

ಹೈಕಮಾಂಡಿಗೆ ಕಪ್ಪ ಆರೋಪ: ಸಾಕ್ಷಿ ನೀಡಿ ಉತ್ತರಿಸಿದ ಬಿಜೆಪಿ

ಸುಳ್ಳಿನಿಂದ ನಕಲಿಗೆ ಇಳಿದರು

ಎಲ್ಲ ಸುಳ್ಳು ಸುದ್ದಿಗಳನ್ನು ಹರಡಿಸುವ ಪ್ರಯತ್ನಗಳು ಕೈಕೊಟ್ಟ ಬಳಿಕ ಈಗ ಹತಾಶೆಯಿಂದ ನಕಲಿ ದಾಖಲೆಗಳ ಮೇಲೆ ಅವಲಂಬಿತರಾಗಿದ್ದಾರೆ. ಕಾಂಗ್ರೆಸ್‌ನ ಪ್ರಚಾರ ಈಗ ಕಸಾಯಿಖಾನೆಯಲ್ಲಿದೆ. ಈಗ ನಕಲಿಯೂ ಅವರನ್ನು ಕಾಪಾಡುವುದಿಲ್ಲ. ಕೆಲವು ಕಾಗದದ ತುಣುಕುಗಳನ್ನು ಕಾಂಗ್ರೆಸ್ ಸಚಿವರೊಬ್ಬರು ನೀಡಿದ್ದಾರೆ. ಅದು ರಾಹುಲ್ ಗಾಂಧಿ ಅವರ ನಾಯಕತ್ವದ ಕೌಶಲದಷ್ಟೇ ವಿಶ್ವಾಸಾರ್ಹ ಮತ್ತು ನಂಬುವಂತಹದ್ದಾಗಿದೆ ಎಂದು ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.

ಈ ರೀತಿ ಆರೋಪ ನಿರೀಕ್ಷಿತ

ಮೋದಿಯವರನ್ನು ನೈತಿಕವಾಗಿ ಎದುರಿಸಲು ಆಗದಿದ್ದಾಗ ಕಾಂಗ್ರೆಸ್ ಈ ರೀತಿಯ ಸುಳ್ಳು ಆರೋಪ ಮಾಡುತ್ತಿರುವುದು ನಿರೀಕ್ಷಿತ! ಬಿಜೆಪಿಯ ಮೊದಲ ಪಟ್ಟಿ ನೋಡಿ ಇಷ್ಟೊಂದು ಹೆದರಿಕೊಳ್ಳುವುದಾ? ಕಾಂಗ್ರೆಸ್ ಡೈರಿಯಲ್ಲಿ ಬರಿಯೋಕೆ ಏನೂ ಉಳಿದಿಲ್ಲ ಅನಿಸುತ್ತೆ! ಈ ರೀತಿ ಸುಳ್ಳಾದರೂ ಬರೆದುಕೊಂಡು ಡೈರಿ ತುಂಬಿಸಿಕೊಳ್ಳಿ! ಎಂದು ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP leader BS Yedyyurappa called the diary released by Congress is fake and one more edited fake diary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more