• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ಹೊಸ ಸಾಮಾಜಿಕ ಮಾಧ್ಯಮ ಮುಖ್ಯಸ್ಥರ ನೇಮಕ

|
Google Oneindia Kannada News

ಬೆಂಗಳೂರು, ನವೆಂಬರ್‌ 24: ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷವು ತನ್ನ ಯುವ ಮೋರ್ಚಾ ಕಾರ್ಯಕರ್ತ ವಿಕಾಸ್ ಪುತ್ತೂರು ಅವರನ್ನು ಚುನಾವಣಾ ಹೊಸ್ತಲಿನಲ್ಲಿರುವ ಕರ್ನಾಟಕದಲ್ಲಿ ಪಕ್ಷದ ಸಾಮಾಜಿಕ ಮಾಧ್ಯಮ ಮುಖ್ಯಸ್ಥರನ್ನಾಗಿ ನೇಮಿಸಿದೆ.

37 ವರ್ಷದ ವಿಕಾಸ್ ಅವರು ಕರ್ನಾಟಕದಲ್ಲಿ ಚುನಾವಣೆಗೆ ಕೇವಲ ಆರು ತಿಂಗಳಿರುವಾಗ ದೊಡ್ಡ ಹೆಜ್ಜೆ ಹಾಕಲಿದ್ದಾರೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳು ಮತಗಳನ್ನು ಸೆಳೆಯಲು ಪ್ರಮುಖ ಅಸ್ತ್ರವಾಗಿಯೂ ಬಳಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯವರಾದ ವಿಕಾಸ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇಮಕ ಮಾಡಿದ್ದಾರೆ. ಕಟೀಲು ಕೂಡ ಇದೇ ಜಿಲ್ಲೆಯವರು.

ಮತದಾರರ ಪಟ್ಟಿ ಪರಿಷ್ಕರಣೆ; ಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿ: ಸಿದ್ದರಾಮಯ್ಯಮತದಾರರ ಪಟ್ಟಿ ಪರಿಷ್ಕರಣೆ; ಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿ: ಸಿದ್ದರಾಮಯ್ಯ

"ನಾನು ಸಾಕಷ್ಟು ಸವಾಲನ್ನು ನಿರೀಕ್ಷಿಸುತ್ತೇನೆ. ನಾವು ಸದ್ಯ ಮೂಲಸೌಕರ್ಯವನ್ನು ಹೊಂದಿದ್ದೇವೆ. ಇದನ್ನು ಹೆಚ್ಚಾಗಿ ಸುಗಮಗೊಳಿಸುವ ಅಗತ್ಯವಿದೆ'' ಎಂದು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ವಿಕಾಸ್ ಡೆಕ್ಕನ್‌ ಹೆರಾಲ್ಡ್‌ಗೆ ತಿಳಿಸಿದ್ದಾರೆ. ವಿಕಾಸ್ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ವಕ್ತಾರರೂ ಆಗಿದ್ದರು.

ವಿಕಾಸ್ ಅಡಿಯಲ್ಲಿ, ಬಿಜೆಪಿಯು ಬೂತ್ ಮಟ್ಟದಲ್ಲಿ ಮತದಾರರೊಂದಿಗೆ ನೇರ ಸಂಪರ್ಕವನ್ನು ಸ್ಥಾಪಿಸಲು ನೋಡುತ್ತದೆ. ''ಪ್ರತಿ ಬೂತ್‌ನಲ್ಲಿ ಕನಿಷ್ಠ 25% ಮತದಾರರೊಂದಿಗೆ ನೇರ ಸಂಪರ್ಕವನ್ನು ಇಟ್ಟುಕೊಳ್ಳಲು ನಾವು ಬಯಸುತ್ತೇವೆ. ಇದು ಸಂಭವಿಸಲು ನಾವು ಚಾನಲ್ ಅನ್ನು ನಿರ್ಮಿಸಲು ಬಯಸುತ್ತೇವೆ'' ಎಂದು ವಿಕಾಸ್ ಹೇಳಿದ್ದಾರೆ.

BJP Appoints New Social Media head for Karnataka

ಕರ್ನಾಟಕ ಬಿಜೆಪಿ ಈಗಾಗಲೇ ದೊಡ್ಡ ಸಾಮಾಜಿಕ ಮಾಧ್ಯಮವನ್ನು ನಿರ್ವಹಣೆ ಮಾಡುತ್ತಿದೆ. ಟ್ವಿಟ್ಟರ್‌ನಲ್ಲಿ 4.52 ಲಕ್ಷ, ಫೇಸ್‌ಬುಕ್‌ನಲ್ಲಿ 9.40 ಲಕ್ಷ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 53,000 ಕ್ಕೂ ಹೆಚ್ಚು ಅನುಯಾಯಿಗಳು ಈಗ ಬಿಜೆಪಿಗೆ ಇದ್ದಾರೆ. ''ನಮ್ಮ ಗಮನ ರಚನಾತ್ಮಕ ವಿಷಯದ ಮೇಲೆ ಇರುತ್ತದೆ. ನಮ್ಮ ಸರ್ಕಾರಗಳು ನೀಡಿದ ಯೋಜನೆಗಳು ಮತ್ತು ಅವರು ಜನರಿಗೆ ಏನು ಮಾಡಿದ್ದಾರೆ ಎಂಬುದನ್ನು ತಿಳಿಸುವುದನ್ನು ನಾವು ಮುಂದುವರಿಸುತ್ತೇವೆ'' ವಿಕಾಸ್ ಹೇಳಿದರು.

English summary
The ruling BJP in Karnataka has appointed its Yuva Morcha activist Vikas Puttur as the party's social media chief in poll-bound Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X