ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಿಜೆಪಿ ಜಿಲ್ಲೆಗಳ ಪ್ರಭಾರಿಗಳ ಪಟ್ಟಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 17 : ಕರ್ನಾಟಕ ರಾಜ್ಯ ಬಿಜೆಪಿ ಘಟಕ ಪಕ್ಷ ಸಂಘಟನೆ ಹಿನ್ನಲೆಯಲ್ಲಿ ವಿವಿಧ ಜಿಲ್ಲೆಗಳಿಗೆ ಪ್ರಭಾರಿಗಳನ್ನು ನೇಮಕ ಮಾಡಿದೆ. ವಿವಿಧ ಪ್ರಕೋಷ್ಠಗಳಿಗೆ ಸಂಚಾಲಕರನ್ನು ಸಹ ನೇಮಿಸಿ ಆದೇಶ ಹೊರಡಿಸಿದೆ.

ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂಘಟನಾತ್ಮಕ ಜಿಲ್ಲೆಗಳ ಪ್ರಭಾರಿಗಳು ಮತ್ತು ಸಹ ಪ್ರಭಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಪಕ್ಷ ನೇಮಕಾತಿ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ದೇಶದ ಯುವಕರನ್ನು ರಕ್ಷಿಸಿ: ಸರ್ಕಾರಕ್ಕೆ ಬಿಜೆಪಿ ಸಂಸದನ ಮನವಿದೇಶದ ಯುವಕರನ್ನು ರಕ್ಷಿಸಿ: ಸರ್ಕಾರಕ್ಕೆ ಬಿಜೆಪಿ ಸಂಸದನ ಮನವಿ

ಸಂಸದರು, ಹಾಲಿ ಶಾಸಕರು, ಮಾಜಿ ಶಾಸಕರಿಗೆ ಪಕ್ಷ ಸಂಘಟನೆಯಲ್ಲಿ ಅವಕಾಶ ನೀಡಲಾಗಿದೆ. ಪ್ರಭಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಪ್ರಭಾರಿಗಳ ಜೊತೆಗೆ ಪ್ರಕೋಷ್ಠಗಳಿಗೆ ಸಂಚಾಲಕರು, ಸಹ ಸಂಚಾಲಕರನ್ನು ನೇಮಿಸಲಾಗಿದೆ.

 ಈಗ ಚಾಮರಾಜನಗರ ಜಿಲ್ಲೆ ಮೇಲಿದೆ ಬಿಜೆಪಿ ಕಣ್ಣು! ಈಗ ಚಾಮರಾಜನಗರ ಜಿಲ್ಲೆ ಮೇಲಿದೆ ಬಿಜೆಪಿ ಕಣ್ಣು!

ಮಾಜಿ ಸಚಿವ ಎ. ಮಂಜು ಅವರನ್ನು ಮಂಡ್ಯ ಜಿಲ್ಲೆಯ ಪ್ರಭಾರಿಯಾಗಿ ನೇಮಕ ಮಾಡಲಾಗಿದೆ. ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ ಡಿ. ಎನ್. ಜೀವರಾಜ್ ಅವರನ್ನು ಶಿವಮೊಗ್ಗಕ್ಕೆ ಪ್ರಭಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಕರುನಾಡ ಮುಖ್ಯಮಂತ್ರಿಗಳ ಕಣ್ಣೀರು ಕಹಾನಿ ಹೇಳಿದ ನಳಿನ್ ಕುಮಾರ್ ಕಟೀಲ್ ಕರುನಾಡ ಮುಖ್ಯಮಂತ್ರಿಗಳ ಕಣ್ಣೀರು ಕಹಾನಿ ಹೇಳಿದ ನಳಿನ್ ಕುಮಾರ್ ಕಟೀಲ್

ಪ್ರಭಾರಿಗಳ ಪಟ್ಟಿ

ಪ್ರಭಾರಿಗಳ ಪಟ್ಟಿ

* ಬಾಗಲಕೋಟೆ - ಶಾಸಕ ಅಭಯ ಪಾಟೀಲ
* ಉಡುಪಿ - ಉಮಾನಾಥ ಕೋಟ್ಯಾನ್
* ಯಾದಗಿರಿ - ಭಗವಂತ ಖೂಬಾ
* ತುಮಕೂರು - ಪ್ರತಾಪ್ ಸಿಂಹ

ಯಾವ ಜಿಲ್ಲೆಗೆ ಯಾರು ಪ್ರಭಾರಿ

ಯಾವ ಜಿಲ್ಲೆಗೆ ಯಾರು ಪ್ರಭಾರಿ

* ಬೆಂಗಳೂರು ಗ್ರಾಮಾಂತರ - ಪಿ. ಸಿ. ಮೋಹನ್
* ಬೀದರ್ - ಮಾಲೀಕಯ್ಯ ಗುತ್ತೇದಾರ್
* ಚಿತ್ರದುರ್ಗ - ತುಳಸಿ ಮುನಿರಾಜು ಗೌಡ
* ಕೋಲಾರ - ಜಯಶಂಕರ ರೆಡ್ಡಿ

Recommended Video

122 ಉಗ್ರರ ಬಂಧನ, ರಾಜ್ಯದಲ್ಲಿ ರಕ್ಕಸರ ಹಾವಳಿ | Oneindia Kannada
ಸಂಘಟನಾತ್ಮಕ ಜಿಲ್ಲೆಗಳು

ಸಂಘಟನಾತ್ಮಕ ಜಿಲ್ಲೆಗಳು

* ಬೆಂಗಳೂರು ಉತ್ತರ- ವಿನಯ ಬಿದರೆ
* ಬೆಂಗಳೂರು ಕೇಂದ್ರ - ಕೆ. ಎಸ್. ನವೀನ್
* ಬೆಂಗಳೂರು ದಕ್ಷಿಣ - ಸಂಜೀವ ಮಠಂದೂರು
* ರಾಮನಗರ - ಸತೀಶ್ ರೆಡ್ಡಿ

ಸಂಪೂರ್ಣ ಪಟ್ಟಿ ಇಲ್ಲಿದೆ

ಬಿಜೆಪಿ ಕರ್ನಾಟಕ ಬಿಡುಗಡೆ ಮಾಡಿರುವ ಸಂಘಟನಾತ್ಮಕ ಜಿಲ್ಲೆಗಳ ಪ್ರಭಾರಿಗಳು / ಸಹ ಪ್ರಭಾರಿಗಳ ಪಟ್ಟಿ ಇಲ್ಲಿದೆ.

English summary
Karnataka BJP unit appointed prabhari to various districts. Here are the list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X