ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ವೋಟರ್ ಐಡಿ: ಸಿ.ಎಂ. ಇಬ್ರಾಹಿಂರಿಂದ ಕಾನೂನು ಉಲ್ಲಂಘನೆ?

|
Google Oneindia Kannada News

Recommended Video

ಕಾಂಗ್ರೆಸ್ ಮುಖಂಡ, ಸಿ ಎಂ ಇಬ್ರಾಹಿಂ ಬಳಿಯಿದೆ 2 ವೋಟರ್ ಐ ಡಿ | ಕಾನೂನು ಉಲ್ಲಂಘನೆ | Oneindia Kannada

ಬೆಂಗಳೂರು, ಆಗಸ್ಟ್ 31: ವಿಧಾನಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಎರಡು ಕಡೆ ಮತದಾನದ ಗುರುತಿನ ಚೀಟಿ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.

ಸಿ.ಎಂ. ಇಬ್ರಾಹಿಂ ಅವರು ಎರಡು ಕಡೆ ಗುರುತಿನ ಚೀಟಿ ಹೊಂದಿದ್ದರು, ಇದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾಗಿದೆ.

ಕಾಂಗ್ರೆಸ್ಸಿನ 'ಕೈ' ಗುರುತು ತೆಗೆದು ಹಾಕುವಂತೆ ಆಯೋಗಕ್ಕೆ ಮನವಿಕಾಂಗ್ರೆಸ್ಸಿನ 'ಕೈ' ಗುರುತು ತೆಗೆದು ಹಾಕುವಂತೆ ಆಯೋಗಕ್ಕೆ ಮನವಿ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರ ಮತ್ತು ಬೆಂಗಳೂರು ನಗರ ಜಿಲ್ಲೆಯ ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಇಬ್ರಾಹಿಂ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ.

ಲೋಕಸಭಾ ಚುನಾವಣೆಗೆ ಬ್ಯಾಲೆಟ್ ಪೇಪರ್: ಕಾಂಗ್ರೆಸ್ ಆಗ್ರಹ?ಲೋಕಸಭಾ ಚುನಾವಣೆಗೆ ಬ್ಯಾಲೆಟ್ ಪೇಪರ್: ಕಾಂಗ್ರೆಸ್ ಆಗ್ರಹ?

bjp accused CM ibrahim as he has two voter IDs

ವಿಧಾನಪರಿಷತ್ ಸದಸ್ಯನಾಗುವ ಆಸೆಯಿಂದ ಅವರು ಕಾನೂನು ಬಾಹಿರವಾಗಿ ಎರಡು ಕಡೆ ಗುರುತಿನ ಚೀಟಿ ಪಡೆದುಕೊಂಡಿದ್ದಾರೆ ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಲಿದೆ. ಬಿಬಿಎಂಪಿ ವಿರೋಧ ಪಕ್ಷದ ನಾಯಕರಾಗಿರುವ ಪದ್ಮನಾಭ ರೆಡ್ಡಿ ನೇತೃತ್ವದಲ್ಲಿ ಬಿಜೆಪಿ ದೂರು ಕೊಡಲಿದೆ.

ಒಂದು ದೇಶ, ಒಂದು ಚುನಾವಣೆ ಸಾಧ್ಯವಿಲ್ಲ ಎಂದ ಚುನಾವಣಾ ಆಯೋಗಒಂದು ದೇಶ, ಒಂದು ಚುನಾವಣೆ ಸಾಧ್ಯವಿಲ್ಲ ಎಂದ ಚುನಾವಣಾ ಆಯೋಗ

ಜನರು ಒಂದೇ ಮತಗಟ್ಟೆಯಲ್ಲಿ ಗುರುತಿನ ಚೀಟಿ ಹೊಂದಲು ಅವಕಾಶವಿದೆ. ಕಾನೂನಿನ ಪ್ರಕಾರ ಎರಡು ವಿಳಾಸಗಳಲ್ಲಿ ಗುರುತಿನ ಚೀಟಿ ಹೊಂದುವುದು ಅಪರಾಧ. ಹೀಗಾಗಿ ಸಿಎಂ ಇಬ್ರಾಹಿಂ ಅವರು ಚುನಾವಣಾ ಆಯೋಗದ ಕಣ್ಣಿಗೆ ಮಣ್ಣೆರಚಿದ್ದಾರೆ ಎಂದು ಆರೋಪಿಸಲಾಗಿದೆ.

English summary
BJP decided to complaint against Congress leader CM Ibrahim for having two voter ID's in his name.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X