ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್‌ವೈ ಆಪ್ತ ಬಿ.ಜೆ.ಪುಟ್ಟಸ್ವಾಮಿ ರಾಜೀನಾಮೆ, ಬೇಸರದ ಪತ್ರ!

By Gururaj
|
Google Oneindia Kannada News

Recommended Video

ಬಿ ಎಸ್ ಯಡಿಯೂರಪ್ಪನವರ ಪರಮಾಪ್ತ ಕಮಲಕ್ಕೆ ರಾಜೀನಾಮೆ | Oneindia Kannada

ಬೆಂಗಳೂರು, ಜೂನ್ 18 : ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಪ್ತ ಬಿ.ಜೆ.ಪುಟ್ಟಸ್ವಾಮಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪರಿಷತ್ ಸ್ಥಾನಕ್ಕೆ ಆಯ್ಕೆ ವಿಚಾರದಲ್ಲಿ ಅವರು ಯಡಿಯೂರಪ್ಪ ವಿರುದ್ದ ಅಸಮಾಧಾನಗೊಂಡಿದ್ದರು.

ಸೋಮವಾರ ಬಿ.ಜೆ.ಪುಟ್ಟಸ್ವಾಮಿ ಅವರು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ತಮ್ಮನ್ನು ಕಡೆಗಣಿಸಿದ್ದಾರೆ ಎಂದು ಅವರು ಬೇಸರಗೊಂಡಿದ್ದರು.

ವಿಧಾನಸಭೆಯಿಂದ ವಿಧಾನಪರಿಷತ್ತಿಗೆ 11 ಸದಸ್ಯರನ್ನು ಆಯ್ಕೆ ಮಾಡಲು ಜೂನ್ 11ರಂದು ಚುನಾವಣೆ ನಿಗದಿಯಾಗಿತ್ತು. ವಿಧಾನಸಭೆಯಲ್ಲಿ ಬಿಜೆಪಿ 104 ಸದಸ್ಯ ಬಲವನ್ನು ಹೊಂದಿದ್ದು, 5 ಸದಸ್ಯರನ್ನು ಆಯ್ಕೆ ಮಾಡಿ ಕಳಿಸಬಹುದಾಗಿತ್ತು.

ಬಿಜೆಪಿ ಬಿಡಲಿದ್ದಾರೆ ಬಿ.ಎಸ್.ಯಡಿಯೂರಪ್ಪ ಆಪ್ತ?ಬಿಜೆಪಿ ಬಿಡಲಿದ್ದಾರೆ ಬಿ.ಎಸ್.ಯಡಿಯೂರಪ್ಪ ಆಪ್ತ?

ಪಕ್ಷ ಬಿಜೆಪಿ ರಘುನಾಥ ಮಲ್ಕಾಪುರೆ, ಎನ್.ರವಿಕುಮಾರ್, ತೇಜಸ್ವಿನಿ ಗೌಡ, ಕೆ.ಪಿ.ನಂಜುಂಡಿ, ಎಸ್.ರುದ್ರೇಗೌಡ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಚುನಾವಣೆ ನಡೆಯದೇ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದರು.

ಪರಿಷತ್ತಿಗೆ ಒಟ್ಟಿಗೆ ಆಯ್ಕೆಯಾಗಿ ಇತಿಹಾಸ ಬರೆದ ಸಹೋದರರು!ಪರಿಷತ್ತಿಗೆ ಒಟ್ಟಿಗೆ ಆಯ್ಕೆಯಾಗಿ ಇತಿಹಾಸ ಬರೆದ ಸಹೋದರರು!

ಮತ್ತೊಮ್ಮೆ ಪರಿಷತ್ ಪ್ರವೇಶಿಸುವ ಬಿ.ಜೆ.ಪುಟ್ಟಸ್ವಾಮಿ ಅವರ ನಿರೀಕ್ಷೆ ಹುಸಿಯಾಗಿತ್ತು. ಬಿ.ಜೆ.ಪುಟ್ಟಸ್ವಾಮಿ ಬದಲು ಕೆ.ಪಿ.ನಂಜುಂಡಿ ಅವರನ್ನು ಆಯ್ಕೆ ಮಾಡಲಾಗಿತ್ತು. ಇದರಿಂದ ಬಿ.ಜೆ.ಪುಟ್ಟಸ್ವಾಮಿ ಅಸಮಾಧಾನಗೊಂಡಿದ್ದು, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಯಾವ ತಪ್ಪಿಗೆ ಎಂದು ತಿಳಿಯುತ್ತಿಲ್ಲ

ಯಾವ ತಪ್ಪಿಗೆ ಎಂದು ತಿಳಿಯುತ್ತಿಲ್ಲ

ರಾಜೀನಾಮೆ ಪತ್ರದ ಕೊನೆಯಲ್ಲಿ ಬಿ.ಜೆ.ಪುಟ್ಟಸ್ವಾಮಿ ಅವರು, 'ನನ್ನ ಜೀವನದ ಕೊನೆ ಹಂತದಲ್ಲಿ ಸಕ್ರಿಯ ರಾಜಕೀಯಕ್ಕೆ ತೆರೆ ಎಳೆದಿರುವುದು ಯಾವ ತಪ್ಪಿಗೆ ಎಂದು ತಿಳಿಯುತ್ತಿಲ್ಲ. ಅತೀವ ನೋವಾಗಿದೆ' ಎಂದು ಹೇಳಿದ್ದಾರೆ.

ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರಲಿಲ್ಲ

ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರಲಿಲ್ಲ

ನನ್ನ ಪ್ರಾಣ ಹತ್ಯೆಗೆ ಮತ್ತು ನನ್ನ ಮನೆಯ ಮೇಲೆ ದಾಳಿ ನಡೆದರೂ ಸಹ ನನ್ನ ನಿಷ್ಠೆಯನ್ನು ಬದಲಿಸದೆ ಮತ್ತಷ್ಟು ಧೈರ್ಯದಿಂದ ಸವಾಲುಗಳನ್ನು ಎದುರಿಸಿದ್ದೇನೆ. ಕಷ್ಟಕಾಲದಲ್ಲಿಯೂ ಯಾರೊಬ್ಬರೂ ಸಹಾಯಕ ಬರಲಿಲ್ಲ ಎಂದು ತಿಳಿಸಲು ಬಯಸುತ್ತೇನೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಹಿಂದುಳಿದ ವರ್ಗದ ಸಮಾವೇಶ

ಹಿಂದುಳಿದ ವರ್ಗದ ಸಮಾವೇಶ

ತಮ್ಮ ಆದೇಶದಂತೆ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 75 ದಿನಗಳ ಕಾಲ ಪ್ರವಾಸ ಮಾಡಿ ಹಿಂದುಳಿದ ವರ್ಗದವರನ್ನು ಸಂಘಟಿಸಿ ಹಿಂದೆ ಎಂದೂ ನಡೆಯದಂತಹ ಚಿರಸ್ಮರಣೀಯ ಬೃಹತ್ ಹಿಂದುಳಿದ ವರ್ಗಗಳ ಏಕತಾ ಸಮಾವೇಶವನ್ನು 27/11/2016ರಂದು ನಡೆಸಲು ಶ್ರಮಿಸಿದ್ಧೇನೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಪಕ್ಷಕ್ಕಾಗಿ ಕೆಲಸ

ಪಕ್ಷಕ್ಕಾಗಿ ಕೆಲಸ

ಸುಮಾರು 45 ವರ್ಷಗಳಿಂದ ಹಿಂದುಳಿದ ವರ್ಗಗಳ ಹಕ್ಕು ಮತ್ತು ಕಲ್ಯಾಣಕ್ಕಾಗಿ ಸತತವಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಪ್ರಸ್ತುತ ಮೀಸಲಾತಿ ಮತ್ತು ಸ್ಥಳೀಯ ಸಂಸ್ಥೆ ಮೀಸಲಾತಿಯಲ್ಲಿ ನನ್ನ ಪರಿಶ್ರಮವೂ ಇದೆ.

English summary
After the Legislative Council elections BJP senior leader and Karnataka BJP president B.S.Yeddyrappa close aide B.J.Puttaswamy resigned for BJP OBC Morcha president post. He upset with party leaders for not nominate his name for Legislative Council elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X