ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕವಳ್ಳಿಗೆ ಲಗ್ಗೆಯಿಟ್ಟ ಕಾಡೆಮ್ಮೆ: ಓಡಿಸಲು ಹರಸಾಹಸ ಪಟ್ಟ ಸ್ಥಳೀಯರು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

Recommended Video

ಲೋಕವಳ್ಳಿಗೆ ಲಗ್ಗೆಯಿಟ್ಟ ಕಾಡೆಮ್ಮೆ: ಓಡಿಸಲು ಹರಸಾಹಸ ಪಟ್ಟ ಸ್ಥಳೀಯರು | Oneindia Kannada

ಚಿಕ್ಕಮಗಳೂರು, ಜುಲೈ.18: ಜಿಲ್ಲೆ‌ಯ ಮೂಡಿಗೆರೆ ತಾಲೂಕಿನ‌ ಲೋಕವಳ್ಳಿ ಬಳಿ ಇಂದು ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಏಕಾಏಕಿ ಕಾಡೆಮ್ಮೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕಾಫಿತೋಟದ ಮೂಲಕ ಊರಂಚಿಗೆ ಬಂದ ಕಾಡೆಮ್ಮೆಯನ್ನು ಓಡಿಸಲು ಗ್ರಾಮಸ್ಥರು ಕೆಲ ಕಾಲ ಹರಸಾಹಸಪಟ್ಟಿದ್ದಾರೆ.

ಇನ್ನು ಕೆಲ ಯುವಕರು ಅಪರೂಪದ ಅತಿಥಿ ಗ್ರಾಮಕ್ಕೆ ಲಗ್ಗೆ ಇಟ್ಟಿದ್ದನ್ನು ಕಂಡು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಎಂಜಾಯ್ ಮಾಡಿದ್ದಾರೆ. ಕಾಡೆಮ್ಮೆ ಬೆಳಗ್ಗೆಯಿಂದ ಗ್ರಾಮದಲ್ಲಿ ಬೀಡು ಬಿಟ್ಟಿದ್ದು, ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಕಾಡೆಮ್ಮೆ ಓಡಿಸಲು ಹರಸಾಹಸ ಪಡುತ್ತಿದ್ದಾರೆ.

ಪಶ್ಚಿಮ ಘಟ್ಟದ ತಪ್ಪಲಿನಿಂದ ಕಡ್ತಲ ಗ್ರಾಮಕ್ಕೆ ಬಂದ ಕಾಳಿಂಗಪಶ್ಚಿಮ ಘಟ್ಟದ ತಪ್ಪಲಿನಿಂದ ಕಡ್ತಲ ಗ್ರಾಮಕ್ಕೆ ಬಂದ ಕಾಳಿಂಗ

ಹಾವು ಪ್ರತ್ಯಕ್ಷ: ಮತ್ತೊಂದು ಘಟನೆಯಲ್ಲಿ ಚಿಕ್ಕಮಗಳೂರಿನ ಕಾಳಿದಾಸನಗರದ ಸತ್ಯನಾರಾಯಣ ಎಂಬುವರ ಮನೆಯ ಸ್ನಾನದ ಕೊಠಡಿಯಲ್ಲಿ ನಾಲ್ಕು ಅಡಿ ಉದ್ದದ ಗೋಧಿ ನಾಗರ ಹಾವು ಪ್ರತ್ಯಕ್ಷವಾಗಿದೆ. ಸತ್ಯನಾರಾಯಣ ನಾದಿನಿ ಮೈತ್ರಿ ಬೆಡ್ ರೂಂ ಗೆ ವಿಶ್ರಾಂತಿ ಪಡೆಯಲು ಹೋದಾಗ ಈ ನಾಗರಹಾವು ಕಾಣಿಸಿದೆ.

Bison was visible at Lokavalli

ಸ್ನಾನದ ಕೊಠಡಿ ಬೆಡ್ ರೂಂ ಪಕ್ಕದಲ್ಲೇ ಇದ್ದು, ರಟ್ಟಿನ ಬಾಕ್ಸ್ ಮೇಲಿದ್ದ ಹಾವು ನೋಡಿ ಮೈತ್ರಿ ಭಯಗೊಂಡಿದ್ದಾರೆ. ನಂತರ ಮನೆಯವರೆಲ್ಲಾ ಹಾವು ನೋಡಿ ಭಯಗೊಂಡು ಹೊರಬಂದಿದ್ದಾರೆ.

ನಂತರ ಮನೆ ಮಾಲೀಕ ಸ್ನೇಕ್ ನರೇಶ್ ಗೆ ಮಾಹಿತಿ ನೀಡಿದ ಮೇಲೆ, ಸ್ನೇಕ್ ನರೇಶ್ ಹಾವನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

English summary
Bison was visible at 11 am on Wednesday at Lokavalli in Mudigere Taluk. Bison come to town through coffee plantation. Forest officers have come to the place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X