ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆರೆ ಸಂತ್ರಸ್ತರ ನೆರವಿಗೆ ನಿಂತ ಬಿಗ್ ಎಫ್‌ಎಂ, ಗಂಧದಗುಡಿ ಫೌಂಡೇಶನ್‌

|
Google Oneindia Kannada News

ಬೆಂಗಳೂರು, ಆಗಸ್ಟ್ 21: ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ಮತ್ತು ಕೇರಳದ ಹಲವಾರು ಭಾಗಗಳನ್ನು ಒಳಗೊಂಡಂತೆ ದಕ್ಷಿಣ ಭಾರತದ ಲಕ್ಷಾಂತರ ಕುಟುಂಬಗಳಿಗೆ ಈ ವರ್ಷದ ಮಾನ್ಸೂನ್ ದುಃಸ್ವಪ್ನವಾಗಿ ಕಾಡಿದೆ. ದೇಶದ ಅತಿದೊಡ್ಡ ನೆಟ್‌ವರ್ಕ್‌ಗಳಲ್ಲಿ ಒಂದಾದ 92.7 ಬಿಗ್ ಎಫ್ ಎಂ ಸಮಾಜದಲ್ಲಿ ಗುಣಮಟ್ಟದ ಬದಲಾವಣೆ ತರಲು ಮತ್ತೆ ಮುಂದಾಗಿದೆ.

ಬಿಗ್ ಎಫ್‌ಎಂ, ಗಂಧದಗುಡಿ ಫೌಂಡೇಶನ್‌ನ ಸಹಯೋಗದೊಂದಿಗೆ, ಈ ಪ್ರದೇಶಗಳಿಗೆ ಅಗತ್ಯವಾದ ಪರಿಹಾರ ಸಾಮಗ್ರಿಗಳನ್ನು ಪೂರೈಸುವ ಮೂಲಕ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹೆಣಗಾಡುತ್ತಿರುವ ಕುಟುಂಬಗಳಿಗೆ ಸಹಾಯ ಹಸ್ತ ನೀಡಲು ಮುಂದಾಗಿದೆ.

ವಿಶೇಷ: ಕೃಷಿಕರಿಗೆ, ನಾಗರಿಕರಿಗೆ ಜಲತಜ್ಞ ದೇವರಾಜ್ ಕೊಟ್ಟ ಎಚ್ಚರಿಕೆವಿಶೇಷ: ಕೃಷಿಕರಿಗೆ, ನಾಗರಿಕರಿಗೆ ಜಲತಜ್ಞ ದೇವರಾಜ್ ಕೊಟ್ಟ ಎಚ್ಚರಿಕೆ

ಬಿಗ್ ಎಫ್‌ಎಂ ಮಂಗಳೂರಿನ ಆರ್‌ಜೆ ಎರ್ರೋಲ್ ಅವರು 'ಟೇಕ್ ಇಟ್ ಈಸಿ' ಕಾರ್ಯಕ್ರಮದ ಮೂಲಕ ಇದನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ಬೆಂಗಳೂರಿನ ಪಟ್ ಪಟ್ ಪಟಾಕಿ ಖ್ಯಾತಿಯ ಶ್ರುತಿ ಅವರೂ ಈ ಕಾರ್ಯದಲ್ಲಿ ಕೈ ಜೋಡಿಸಿದ್ದು, ತಮ್ಮ ಬೆಳಗಿನ ಕಾರ್ಯಕ್ರಮ 'ಪಟಾಕಿ ಮಾರ್ನಿಂಗ್ಸ್' ನಲ್ಲಿ ಕೇಳುಗರಿಗೆ ತಮ್ಮ ಕೈಲಾದ ಕೊಡುಗೆ ನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ.

ಕೊಡುಗೆ ನೀಡಲು ಬಯಸುವವರು ಬಿಗ್ ಎಫ್ ಎಂ ಕಚೇರಿ ಸಂಖ್ಯೆಗೆ ಕರೆ ಮಾಡಬಹುದು ಮತ್ತು ಆರ್ ಜೆ ಎರ್ರೋಲ್ ಅವರೊಂದಿಗೆ ಮಾತನಾಡಬಹುದು ಅಥವಾ ಹೆಚ್ಚಿನ ಮಾಹಿತಿಗಾಗಿ ಪ್ರತಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 5:00 ರಿಂದ 9:00 ರವರೆಗೆ ಅವರ ಕಾರ್ಯಕ್ರಮ 'ಟೇಕ್ ಇಟ್ ಈಸಿ' ಗೆ ಟ್ಯೂನ್ ಮಾಡಬಹುದು.

ಸ್ವಯಂಸೇವಕರಿಗೆ ಸುರಕ್ಷತಾ ಮುಖವಾಡ

ಸ್ವಯಂಸೇವಕರಿಗೆ ಸುರಕ್ಷತಾ ಮುಖವಾಡ

92.7 ಬಿಗ್ ಎಫ್‌ಎಂ, ಗಂಧದಗುಡಿ ಫೌಂಡೇಶನ್ ಜೊತೆಗೆ ಬೃಹತ್ ಟ್ರಕ್‌ಗಳೊಂದಿಗೆ ಹೊರಟಿದ್ದು, ಕರ್ನಾಟಕದ ಪ್ರವಾಹ ಪೀಡಿತ ನಾಲ್ಕು ಜಿಲ್ಲೆಗಳಾದ ಹಾಸನ, ಬಾಗಲಕೋಟೆ, ಜಮಖಂಡಿ ಮತ್ತು ಬೆಳ್ತಂಗಡಿ ಮತ್ತು ಕೊಡಗಿನ ಕುಟುಂಬಗಳಿಗೆ ಅಗತ್ಯ ಪೂರೈಕೆಯ ವಸ್ತುಗಳನ್ನು ವಿತರಿಸಿಲಿದೆ. ಇದಲ್ಲದೆ, ಕಾಳಜಿ ಕೇಂದ್ರ ಸೇರಿದಂತೆ ರಕ್ಷಣಾ ಶಿಬಿರಗಳಲ್ಲಿ ತಂಗಿರುವ ಸಂತ್ರಸ್ತರಿಗೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲಿದೆ ಮತ್ತು ಸ್ವಯಂಸೇವಕರಿಗೆ ಸುರಕ್ಷತಾ ಮುಖವಾಡಗಳನ್ನು ಬಿಗ್ ಎಫ್ಎಂ ವಿತರಿಸಲಿದೆ.

ಬಿಗ್ ಎಫ್‌ಎಂ ಹ್ಯಾಬಿಟ್ಯಾಟ್ಸ್ ಫಾರ್ ಹ್ಯುಮಾನಿಟಿ

ಬಿಗ್ ಎಫ್‌ಎಂ ಹ್ಯಾಬಿಟ್ಯಾಟ್ಸ್ ಫಾರ್ ಹ್ಯುಮಾನಿಟಿ

ಹಾನಿಯುಂಟು ಮಾಡುವ ಮತ್ತು ಸುಳ್ಳು ಸಂದೇಶಗಳ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುವುದನ್ನು ತಪ್ಪಿಸಲು ಆರ್ ಜೆ ಎರ್ರೋಲ್ ಅವರು ಆಯಾ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಆ ಮಾಹಿತಿಯನ್ನು ಸಾಮಾಜಿಕ ಮಾಧ್ಯಮ ಮತ್ತು ವಾಟ್ಸಾಪ್ ಮೂಲಕ ಹರಡಿದ್ದಾರೆ. ಅಭಿಯಾನದ ಎರಡನೇ ಹಂತದಲ್ಲಿ, ಬಿಗ್ ಎಫ್‌ಎಂ ಹ್ಯಾಬಿಟ್ಯಾಟ್ಸ್ ಫಾರ್ ಹ್ಯುಮಾನಿಟಿ ಎಂಬ ಎನ್‌ಜಿಒ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಅವರು ರೇಡಿಯೊ ಕೇಂದ್ರದೊಂದಿಗೆ ಸೇರಿ ಉತ್ತರ ಕರ್ನಾಟಕ ಮತ್ತು ಕೂರ್ಗ್‌ನ ಬಹುಪಾಲು ಪ್ರದೇಶಗಳಲ್ಲಿ 500 ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದಾರೆ.

ಮಾತನಾಡಿದ ಬಿಗ್ ಎಫ್‌ಎಂ ವಕ್ತಾರರು

ಮಾತನಾಡಿದ ಬಿಗ್ ಎಫ್‌ಎಂ ವಕ್ತಾರರು

ಪ್ರವಾಹ ಪೀಡಿತ ಕುಟುಂಬಗಳಿಗೆ ಸಹಾಯ ಮಾಡುವ ಕಾರ್ಯಗಳ ಕುರಿತು ಮಾತನಾಡಿದ ಬಿಗ್ ಎಫ್‌ಎಂ ವಕ್ತಾರರು, "ನಾವು 92.7 ಬಿಗ್ ಎಫ್‌ಎಂ ಎಂಬ ವೇದಿಕೆಯ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತೇವೆ. ನಮ್ಮ ಆರ್ ಜೆ ಗಳು ಕೂಡ ಸಮಾಜದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಾರೆ. ಗಂಧದಗುಡಿ ಫೌಂಡೇಶನ್ ಮತ್ತು ಹ್ಯಾಬಿಟ್ಯಾಟ್ಸ್ ಫಾರ್ ಹ್ಯುಮಾನಿಟಿಯೊಂದಿಗಿನ ಒಡನಾಟದಿಂದ ಈ ಆಂದೋಲನ ಮತ್ತಷ್ಟು ಎತ್ತರಕ್ಕೆ ಏರಿದೆ. ನಮ್ಮ ಈ ಮುಂದಾಳತ್ವದ ಮೂಲಕ ರಾಜ್ಯದ ನಾಗರಿಕರಿಗೆ ನೆರವಾಗಲು ನಮಗೆ ಸಂತೋಷವಿದೆ" ಎಂದರು.

ನೈಸರ್ಗಿಕ ವಿಪತ್ತಿನಿಂದ ಬಳಲುತ್ತಿರುವ ಕುಟುಂಬಗಳು

ನೈಸರ್ಗಿಕ ವಿಪತ್ತಿನಿಂದ ಬಳಲುತ್ತಿರುವ ಕುಟುಂಬಗಳು

ಪ್ರವಾಹದ ಪರಿಹಾರ ನೀಡುವ ಈ ಆಂದೋಲನದ ಮುಂದಾಳತ್ವ ವಹಿಸುವ ಆರ್ ಜೆ ಎರ್ರೋಲ್, "ಪ್ರತಿ ವರ್ಷ ಬರುವ ಭಾರೀ ಮಳೆಯಿಂದಾಗಿ ದಕ್ಷಿಣ ಭಾರತದಲ್ಲಿ ಅದರಲ್ಲೂ ಕೂರ್ಗ್ ಮತ್ತು ಮಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಈ ವರ್ಷವೂ ಆರ್.ಜೆ.ಶೃತಿ ಮತ್ತು ನಾನು ಈ ನೈಸರ್ಗಿಕ ವಿಪತ್ತಿನಿಂದ ಬಳಲುತ್ತಿರುವ ಕುಟುಂಬಗಳಿಗೆ ವೈದ್ಯಕೀಯ ಅಗತ್ಯಗಳ ಮತ್ತು ಆಹಾರ ಉತ್ಪನ್ನಗಳನ್ನು ಒದಗಿಸುವ ಪ್ರಯತ್ನ ಮಾಡಿದ್ದೇನೆ. ಈ ಮುಂದಾಳತ್ವದಲ್ಲಿ ಮುಂದುವರಿಯಲು ಎಲ್ಲ ರೀತಿಯಲ್ಲಿ ಬೆಂಬಲ ನೀಡಿದ್ದಕ್ಕಾಗಿ ಬಿಗ್ ಎಫ್‌ಎಂಗೆ ಧನ್ಯವಾದ ಹೇಳಲು ನಾನು ಬಯಸುತ್ತೇನೆ " ಎಂದರು

ಈ ಕುರಿತು ಪ್ರತಿಕ್ರಿಯಿಸಿದ ಆರ್.ಜೆ.ಶೃತಿ

ಈ ಕುರಿತು ಪ್ರತಿಕ್ರಿಯಿಸಿದ ಆರ್.ಜೆ.ಶೃತಿ

ಈ ಕುರಿತು ಪ್ರತಿಕ್ರಿಯಿಸಿದ ಆರ್.ಜೆ.ಶೃತಿ, "ಈ ಸಮಯದಲ್ಲಿ ಮಾನವೀಯತೆಗಿಂತ ದೊಡ್ಡ ಧರ್ಮವಿಲ್ಲ ಮತ್ತು ಮಾನವ ಜನಾಂಗವೆಲ್ಲ ಒಂದೇ ಎಂಬುದು ಅರ್ಥವಾಗುತ್ತದೆ! ನೈಸರ್ಗಿಕ ವಿಪತ್ತುಗಳು ನಮ್ಮ ನಿಯಂತ್ರಣದಲ್ಲಿಲ್ಲ ಆದರೆ ಸಮಸ್ಯೆ ಹುಟ್ಟಿಕೊಂಡಾಗ, ಬಿಕ್ಕಟ್ಟಿನ ಸಮಯದಲ್ಲಿ ಸಹಾಯ ಹಸ್ತ ನೀಡುವುದು ನಮ್ಮ ಜವಾಬ್ದಾರಿಯೂ ಆಗಿರುತ್ತದೆ. ಪೀಡಿತ ಕುಟುಂಬಗಳಿಗೆ ಎಲ್ಲೆಡೆಯಿಂದ ಹರಿದು ಬರುತ್ತಿರುವ ಪ್ರೀತಿ ಮತ್ತು ಕಾಳಜಿ ಹೃದಯಸ್ಪರ್ಶಿಯಾಗಿದೆ. ಅವರಿಗೆ ಬೇಕಿರುವುದು ಸಹಾನುಭೂತಿಯಲ್ಲ ಬದಲಾಗಿ ಶುದ್ಧ ಅನುಭೂತಿ. ಇದನ್ನು ಅರ್ಥೈಸಿಕೊಂಡ ಕಾರಣಕ್ಕೆ ನಮಗೆ ಕೃಷ್ಣ ನದಿ ತೀರದ ಹಳ್ಳಿಗಳಿರುವ ಪ್ರದೇಶಗಳಿಗೆ ಪರಿಹಾರ ಸಾಮಗ್ರಿಗಳನ್ನು ತಲುಪಿಸಲು ಸಾಧ್ಯವಾಗಿದೆ. ಇದು ಕೇವಲ ಪ್ರಾರ್ಥನೆಯಾಗಿದ್ದರೂ ಸಾಕು, ನೊಂದ ಜನರಿಗೆ ಸಾಧ್ಯವಾದಷ್ಟು ರೀತಿಯಲ್ಲಿ ಕೊಡುಗೆ ನೀಡುವಂತೆ ನಾನು ಸಮಸ್ತ ಮಾನವಕುಲದಲ್ಲಿ ಮನವಿ ಮಾಡಿಕೊಳ್ಳುತ್ತೇನೆ! ಬಯಸುತ್ತೇನೆ! ಲಕ್ಷಾಂತರ ಪ್ರಾರ್ಥನೆಗಳ ಶಕ್ತಿಯು ದೊಡ್ಡ ಪರಿಣಾಮವನ್ನೇ ಬೀರುತ್ತದೆ" ಎಂದರು.

1 ಟನ್‌ಗಿಂತ ಹೆಚ್ಚಿನ ಪರಿಹಾರ ಸಾಮಗ್ರಿ

1 ಟನ್‌ಗಿಂತ ಹೆಚ್ಚಿನ ಪರಿಹಾರ ಸಾಮಗ್ರಿ

ಕಳೆದ ವರ್ಷ, ಕೊಡಗು ಮತ್ತು ಕೇರಳದ ಮೇಲೆ ಪ್ರವಾಹ ಪ್ರತಿಕೂಲ ಪರಿಣಾಮ ಬೀರಿದ್ದ ಸಮಯದಲ್ಲಿ, ಬಿಗ್ ಎಫ್ಎಂ ಮಂಗಳೂರು ಮುಂದಾಳತ್ವದಲ್ಲಿ ಆ ಪ್ರದೇಶಗಳಿಗೆ ಪರಿಹಾರ ಸಾಮಗ್ರಿಗಳು ವಿತರಿಸಿತ್ತು. ಬಿಗ್ ಎಫ್‌ಎಂ, ಸ್ವಯಂಸೇವಕರೊಂದಿಗೆ 1 ಟನ್‌ಗಿಂತ ಹೆಚ್ಚಿನ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ಅದನ್ನು ಕರಾವಳಿ ಕಾವಲು ಅಧಿಕಾರಿಗಳಿಗೆ ಹಸ್ತಾಂತರಿಸಿತ್ತು. 92.7 ಬಿಗ್ ಎಫ್‌ಎಂ ಅಗತ್ಯವಿರುವ ಸಂದರ್ಭದಲ್ಲಿ ನಾಗರಿಕರಿಗೆ ಬೆಂಬಲ ನೀಡುತ್ತದೆ ಹಾಗು ಭವಿಷ್ಯದಲ್ಲಿಯೂ ಇದನ್ನು ಮುಂದುವರಿಸಲಿದೆ.

English summary
Big FM, In Association With Gandhadagudi Foundation, Extends A Helping Hand In The Hour Of Need In Flood-affected Areas Of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X