ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾರ ವಿರುದ್ಧ ಸ್ಪರ್ಧಿಸಲು ಬಿಲ್ಡಪ್ ಪ್ರಥಮ್ ಸಜ್ಜಾಗುತ್ತಿದ್ದಾರೆ?

By ನಮ್ಮ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಜನವರಿ 30: ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 4ರ ವಿಜೇತ 'ಒಳ್ಳೆ ಹುಡುಗ' ಬಿಲ್ಡಪ್ ಪ್ರಥಮ್ ಅವರು ಚುನಾವಣಾ ಕಣಕ್ಕೆ ಧುಮುಕುತ್ತಿರುವುದು ಹೊಸ ಸುದ್ದಿಯೇನಲ್ಲ.

ಆದರೆ, ಯಾವ ಯಾವ ಸ್ಪರ್ಧೆಗಳ ವಿರುದ್ಧ ಸೆಣಸಲು ಬಯಸುತ್ತಾರೆ? ದೇವೇಗೌಡರ ಮೇಲೆ ಅಭಿಯಾನ, ಬಿಜೆಪಿ ಟಿಕೆಟ್ ಬಯಕೆ ಎಲ್ಲದರ ಬಗ್ಗೆ ನಮ್ಮ ಪ್ರತಿನಿಧಿ ಜತೆ ಮಾತನಾಡಿದ್ದಾರೆ.

ಹೊಸ ಕ್ಷೇತ್ರ ಹನೂರಿನಿಂದ ಅವರು ಟಿಕೆಟ್ ಆಕಾಂಕ್ಷಿಯಾಗಿರುವುದು ಈಗಾಗಲೇ ಹೇಳಿಕೊಂಡಿದ್ದಾರೆ. ಆದರೆ, ಯಾರ ವಿರುದ್ಧ ಸ್ಪರ್ಧೆ ಬಯಸಿದ್ದಾರೆ. ಹನೂರು ಬಿಟ್ಟರೆ ಬೇರೆ ಯಾವ ಕ್ಷೇತ್ರದ ಟಿಕೆಟ್ ಗಳಿಸಲು ಯತ್ನಿಸುತ್ತಿದ್ದಾರೆ ಎಂಬುದರ ಬಗ್ಗೆ ಪ್ರಥಮ್ ಹೇಳಿದ್ದಾರೆ.

ನನಗೆ ಸಿನಿಮಾಗಿಂತಲೂ ರಾಜಕೀಯವೇ ಹೆಚ್ಚು ಆಸಕ್ತಿಯ ಕ್ಷೇತ್ರ, ಯಾವ ಪಕ್ಷ ಟಿಕೆಟ್ ಕೊಟ್ಟರೂ ಸರಿ, ಇಲ್ಲವಾದರೆ ಪಕ್ಷೇತರವಾಗಿಯಾದರೂ ಚುನಾವಣೆಗೆ ಸ್ಪರ್ಧಿಸುತ್ತೇನೆ, ಕೈಲಿರುವ ಸಿನಿಮಾಗಳನ್ನು ಮುಗಿಸಿಕೊಂಡು ಆಮೇಲೆ ಫುಲ್ ಟೈಂ ರಾಜಕಾರಣಿಯಾಗುತ್ತೇನೆ ಎಂದಿದ್ದಾರೆ.

ಹನೂರಿನಿಂದ ನಾನು ಚುನಾವಣೆಗೆ ಸ್ಪರ್ಧಿಸಬೇಕು ಎಂಬುದು ನನ್ನ ಆಸೆಯಷ್ಟೇ ಅಲ್ಲ, ಜನರ ಆಸೆಯಾಗಿದೆ. ಟಿಕೆಟ್ ಗಾಗಿ ಬಿಜೆಪಿ ನಾಯಕರ ಜತೆ ಮಾತನಾಡಿದ್ದೇನೆ ಎಂದಿದ್ದಾರೆ. ಪ್ರಥಮ್ ಅವರ ಯೋಜನೆಗಳ ಬಗ್ಗೆ ಇನ್ನಷ್ಟು ವಿವರ ಮುಂದೆ ನಿರೀಕ್ಷಿಸಿ...

ಹನೂರು ಕ್ಷೇತ್ರದ ವಿಷಯಕ್ಕೆ ಬಂದರೆ

ಹನೂರು ಕ್ಷೇತ್ರದ ವಿಷಯಕ್ಕೆ ಬಂದರೆ

ಹನೂರು ಕ್ಷೇತ್ರದ ವಿಷಯಕ್ಕೆ ಬಂದರೆ, ಅದು ನನ್ನ ಊರು, ನನ್ನ ಜನರಿದ್ದಾರೆ. ವಿ ಸೋಮಣ್ಣ ಅವರು ಇಲ್ಲಿ ಟಿಕೆಟ್ ಗೆ ಯತ್ನಿಸುತ್ತಿದ್ದಾರೆ ಎಂಬ ಮಾತಿದೆ. ಆದರೆ, ಅವರು ವಿ ಸೋಮಣ್ಣ ಅವರು ಪುಟ್ಟಣ್ಣ ಕಣಗಾಲ್ ಇದ್ದಂತೆ ನಾನು ವಿಷ್ಣುವರ್ಧನ್ ಇದ್ದಂಗೆ. ಪರಿಷತ್ ಸದಸ್ಯರಿಗೆ ಟಿಕೆಟ್ ಇಲ್ಲ ಎಂಬ ಮಾತಿದೆ. ಹೀಗಾಗಿ, ನನ್ನ ಪ್ರಯತ್ನ ಮುಂದುವರೆದಿದೆ.

ಬಿಜೆಪಿ ಟಿಕೆಟ್ ಟ್ರೈ ಮಾಡ್ತಾ ಇರೋದು ನಿಜ

ಬಿಜೆಪಿ ಟಿಕೆಟ್ ಟ್ರೈ ಮಾಡ್ತಾ ಇರೋದು ನಿಜ

ಚಾಮರಾಜಪೇಟೆ ಅಥವಾ ಹನೂರು ಕ್ಷೇತ್ರದಲ್ಲಿ ನಾನು ಸ್ಪರ್ಧಿಸಲು ಪ್ರಯತ್ನ ಪಡ್ತಾ ಇದ್ದೀನಿ. ಈ ನಿಟ್ಟಿನಲ್ಲಿ ಪಕ್ಷಾಂತರ ತಪ್ಪಲ್ಲ, ಇದಕ್ಕಾಗಿ ನಾನು ಬಿಜೆಪಿ ನಾಯಕರ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ನನ್ನ ಇಲ್ಲಿ ತನಕದ ಪ್ರೊಫೈಲ್ ಫೈಲ್ ಕಳಿಸಿದ್ದೇನೆ. ನಾನಂತೂ ಆಶಾವಾದಿಯಾಗಿದ್ದೇನೆ.

ಯಾರ ವಿರುದ್ಧ ಸ್ಪರ್ಧೆ ಬಯಸಿದ್ದೀರಾ?

ಯಾರ ವಿರುದ್ಧ ಸ್ಪರ್ಧೆ ಬಯಸಿದ್ದೀರಾ?

ನಮ್ಮ ರಾಜ್ಯಕ್ಕೆ ಹೆಮ್ಮೆ, ರೈತ ಪರ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ನಾಲಗೆ ಹರಿಬಿಟ್ಟ ಜಮೀರ್ ಅಹ್ಮದ್ ಸೋಲಿಸಬೇಕು
ಎಂಬಿ ಪಾಟೀಲ- ಪ್ರತ್ಯೇಕ ಧರ್ಮ ಹುಟ್ಟು ಹಾಕಿತ್ತೀನಿ ಎಂದು ಹೇಳಿ ಅಖಂಡ ಹಿಂದೂತ್ವ ವಿಭಜನೆಗೆ ಯತ್ನಿಸುತ್ತಿದ್ದಾರೆ. ಅವರನ್ನು ಸೋಲಿಸಬೇಕು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆಗೆ ಕಾರಣರಾಗಿರ ಸಚಿವ ರಮಾನಾಥ್ ರೈ ಸೋಲಬೇಕು ಎಂಬುದು ನನ್ನ ಅನಿಸಿಕೆ

ರಾಜಕೀಯ ಏಕೆ? ಅಧಿಕಾರ ಬೇಕು ಅಂತಾನಾ?

ರಾಜಕೀಯ ಏಕೆ? ಅಧಿಕಾರ ಬೇಕು ಅಂತಾನಾ?

ಸಿನಿಮಾಗಿಂತ ನನ್ನ ಆಸಕ್ತಿ ಕ್ಷೇತ್ರ ಅಥವಾ ವೃತ್ತಿ ರಾಜಕೀಯ ಕ್ಷೇತ್ರ ಮನೆಯಲ್ಲಿ ವಿರೋಧವಿದೆ. ಬಿಗ್ ಬಾಸ್ ಆಯ್ತು, ಸಿನಿಮಾ ಕೈಲಿದೆ. ಊರಲ್ಲಿ ತೋಟ ನೋಡಿಕೊಂಡು ಇರು, ರಾಜಕೀಯಕ್ಕೆ ಬಂದರೆ ವಿರೋಧ ಹೆಚ್ಚಾಗುತ್ತದೆ ಇದು ನಮ್ಮದ್ದಲ್ಲದ ಕ್ಷೇತ್ರ, ಕ್ಯಾನ್ವಸ್ ಹೋಗು ಎಂದು ಕಿವಿಮಾತು ಹೇಳಿದ್ದಾರೆ.

English summary
Big Boss Kannada 4 winner Pratham reveals his plan for Elections 2018. I dare to contest against Minister Ramanath Rai, MB Patil or JDS rebel Zameer Ali Khan. I prefer to contest with BJP ticket from Hanur in Chamarajanagar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X