ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸಗೊಬ್ಬರ ಕೊರತೆ: ಕೇಂದ್ರ ಸಚಿವ ಭಗವಂತ್ ಖೂಬಾರನ್ನು ಪ್ರಶ್ನಿಸಿದ ಸರ್ಕಾರಿ ಶಿಕ್ಷಕ ಅಮಾನತು

|
Google Oneindia Kannada News

ಗಳೂರು, ಜೂ. 27: ರಸಗೊಬ್ಬರ ಕೊರತೆ ಬಗ್ಗೆ ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ಅವರನ್ನು ಕೇಳಿದ ಶಿಕ್ಷಕನನ್ನು ಅಮಾನತು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಹೇದದಪುರ ಸರ್ಕಾರಿ ಶಾಲೆಯ ಶಿಕ್ಷಕ ಕುಶಾಲ್ ಪಾಟೀಲ್ ಅವರನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆ ಆದೇಶಿಸಿದೆ. ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಕರೆ ಮಾರಿ ರಸಗೊಬ್ಬರ ಕೇಳಿದ್ಧಕ್ಕೆ ಶಿಕ್ಷಕನನ್ನೇ ಅಮಾನತು ಮಾಡಿರುವ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.

ನಾನು ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವನು. ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಗೊಬ್ಬರ ಕೇಳಿದ್ದಕ್ಕೆ ನನಗೆ ಸಚಿವರು ಅಮಾನತು ಶಿಕ್ಷೆ ಕೊಡಿಸಿದ್ದಾರೆ. ನಾನು ಕೇಂದ್ರದ ರಾಜ್ಯ ಸಚಿವರಿಗೆ ರಸಗೊಬ್ಬರ ಸಮಸ್ಯೆ ಬಗ್ಗೆ ಕೇಳಿದ್ದಕ್ಕೆ ತೊಂದರೆ ಎದುರಿಸುವಂತಾಗಿದೆ ಎಂದು ಶಿಕ್ಷಕ ಕುಶಾಲ್ ಪಾಟೀಲ್ ತಿಳಿಸಿದ್ದಾರೆ.

Bidar teachersuspended for questioning Union Minister Bhagwanth Khuba on fertiliser supply

ರೈತರಿಗೆ ರೊಸಗೊಬ್ಬರ ಕೊರತೆ ಸಂಬಂಧ ಶಿಕ್ಷಕ ಕುಶಾಲ್ ಪಾಟೀಲ್ ಹಾಗೂ ಕೇಂದ್ರ ಸಚಿವ ಭಗವಂತ್ ಖೂಬಾ ನಡುವಿನ ಮಾತುಕತೆಯ ಅಡಿಯೋ ಕ್ಲಿಪ್ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ರಸಗೊಬ್ಬರ ಕೇಳಿದ ರೈತನ ಬಳಿ ಕೂಬ ಆಡಿದ್ದ ಮಾತುಗಳಿಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಅಡಿಯೋ ವೈರಲ್ ಆಗುತ್ತಿದ್ದಂತೆ ಶಿಕ್ಷಕ ಕುಶಾಲ್ ಪಾಟೀಲ್ ನನ್ನು ಸರ್ಕಾರಿ ಶಿಕ್ಷಕ ಹುದ್ದೆಯಿಂದ ಅಮಾನತು ಮಾಡಲಾಗಿದೆ. ವೃತ್ತಿಯಲ್ಲಿ ಶಿಕ್ಷಕ ಆಗಿದ್ದರೂ ಕುಶಾಲ್ ಪಾಟೀಲ್ ರೈತ ಹಿನ್ನೆಲೆ ಹೊಂದಿದ್ದರು. ಮೊದಲಿನಿಂದಲೂ ಭಗವಂತ ಖೂಬಾ ಅವರಿಗೆ ಪರಿಚಯಸ್ಥರಾಗಿದ್ದರು.

ಔರಾದ್ ತಾಲೂಕಿಗೆ ರಸಗೊಬ್ಬರ ಇನ್ನೂ ಬಂದಿಲ್ಲ ಎಂಬುದರ ಬಗ್ಗೆ ಶಿಕ್ಷಕ ಕುಶಾಲ್ ಪಾಟೀಲ್ ಕೇಂದ್ರದ ರಾಜ್ಯ ಖಾತೆ ಸಚಿವ ಭಗವಂತ ಖೂಬಾ ಅವರನ್ನು ಪ್ರಶ್ನೆ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು, ನಾನು ಕೇಂದ್ರದ ಮಂತ್ರಿ. ನಾನು ಕೇಂದ್ರ ಸರ್ಕಾರಕ್ಕೆ ಜವಾಬ್ದಾರಿ. ನಾನು ರಾಜ್ಯಗಳನ್ನು ನೋಡಿಕೊಳ್ಳುತ್ತೇನೆ. ನೀನು ನಿನ್ನ ಕ್ಷೇತ್ರದ ಶಾಸಕರು ಹಾಗೂ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಉಡಾಫೆಯಿಂದ ಮಾತನಾಡಿದ್ದಾರೆ.

ಇದರಿಂದ ಕುಪಿತಗೊಂಡಿರುವ ಶಿಕ್ಷಕ ಕುಶಾಲ್ ಪಾಟೀಲ್ ಕೂಡ, "ಆಯ್ತು ನೀವು ಮುಂದಿನ ಚುನಾವಣೆಗೆ ಬನ್ನಿ. ಸೋಲಿಸೋದು ಗೊತ್ತು ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇದಕ್ಕೆ ಪ್ರತಿ ಉತ್ತರ ಕೊಟ್ಟಿರುವ ಖೂಬಾ ಅವರು, ನಾನು ಚುನವಣೆಯಲ್ಲಿ ಗೆಲ್ಲುವುದು ನನಗೆ ಗೊತ್ತು. ನನಗೆ ನೀನು ಪಾಠ ಮಾಡೋಕೆ ಬರಬೇಡ ಎಂದು ಅವಾಜ್ ಬಿಟ್ಟಿದ್ದಾರೆ. ಇದಾಗಿ ಕೆಲವೇ ತಾಸಿನ ಬಳಿಕ ಆ ಅಡಿಯೋ ವೈರಲ್ ಆಗಿದ್ದು, ಕೇಂದ್ರದ ರಾಜ್ಯ ಖಾತೆ ಸಚಿವ ಭಗವಂತ ಕೂಬಾ ಮರ್ಯಾದೆ ಮೂರು ಕಾಸಿಗೆ ಹರಾಜಾಗಿದೆ. ಸದ್ಯ ಈ ಅಡಿಯೋ ವೈರಲ್ ಆಗಿದ್ದು, ಒಬ್ಬ ಸಚಿವನಾಗಿ ಈ ರೀತಿ ಮಾತನಾಡುವುದು ಸರಿಯೇ," ಎಂಬ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗುತ್ತಿದೆ.

Recommended Video

ಒಳ್ಳೆ ಪ್ರದರ್ಶನ ಕೊಡು , ಆಮೇಲೆ ನೋಡೋನ ! ಖಡಕ್ ಎಚ್ಚರಿಕೆ ಕೊಟ್ಟ ಬಿಸಿಸಿಐ | *Cricket | OneIndia Kannada

English summary
Teacher Kushal Patil in Bidar dist who questioned a Union Minister Bhagwanth Khuba about fertiliser supply was suspended after an allegedly recorded audio went viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X