ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್ : ಲಿಂಗಾಯತ ಸ್ವತಂತ್ರ ಧರ್ಮ ಮನ್ನಣೆಗಾಗಿ ಹೋರಾಟ

By Mahesh
|
Google Oneindia Kannada News

ಬೀದರ್, ಜುಲೈ 10: ಲಿಂಗಾಯತ ಸ್ವತಂತ್ರ ಧರ್ಮ ಮನ್ನಣೆ ಪಡೆಯಲು ಜನಜಾಗೃತಿ ಮೂಲಕ ಹೋರಾಟ ಸಂಘಟಿಸಲಾಗುತ್ತಿದೆ. ಅದಕ್ಕಾಗಿ ಸಮಾನ ಮನಸ್ಕ ಮಠಾಧೀಶರು, ಗಣ್ಯರು, ಸಾಹಿತಿಗಳನ್ನು ಒಳಗೊಂಡ ಲಿಂಗಾಯತ ಸಮನ್ವಯ ಸಮಿತಿ ರಚಿಸಲಾಗಿದೆ. ರಾಜ್ಯದ ಎಲ್ಲ ಮಠಾಧೀಶ ರನ್ನು ಸಂಪರ್ಕಿಸಿ ಹೋರಾಟ ರೂಪಿಸಲಾಗುವುದು. ಜುಲೈ 19ರಂದು ಬೀದರ್‌ನಲ್ಲಿ ಮೆರವಣಿಗೆ ಜಾಥಾ ಆಯೋಜಿಸಲಾಗಿದೆ ಎಂದು ಮಾತೆ ಮಹಾದೇವಿ ಹೇಳಿದರು.

<strong>ಲಿಂಗಾಯತ vs ವೀರಶೈವ : ಎರಡೂ ಅಪ್ಪಟ ಜಂಗಮ ತತ್ವ</strong>ಲಿಂಗಾಯತ vs ವೀರಶೈವ : ಎರಡೂ ಅಪ್ಪಟ ಜಂಗಮ ತತ್ವ

'ಲಿಂಗಾಯತ ಶ್ರೀಸಾಮಾನ್ಯನ ಧರ್ಮ. ಬಸವಣ್ಣ ಧರ್ಮಗುರು. ಆದರೆ ಪಂಚಪೀಠಗಳು ಇದನ್ನು ಒಪ್ಪಿಕೊಳ್ಳುವುದಿಲ್ಲ. ಅವರು ಬೇಕಿದ್ದರೆ ವೀರಶೈವಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಲಿ. ಆದರೆ, ಲಿಂಗಾಯತ ಧರ್ಮಕ್ಕೆ ತಗಲು ಹಾಕುವುದು ಬೇಡ' ಎಂದರು.

Mate Mahadevi

'ವೀರಶೈವ ಎಂಬುದು ವೇದ ಮತ್ತು ಆಗಮಗಳ ಆಧಾರದ ಮೇಲೆ ರೂಪುಗೊಂಡ ಶೈವ ಪಂಥದ ಶಾಖೆಯಾಗಿದೆ. ಅದಕ್ಕೆ ಸ್ವತಂತ್ರ ಧರ್ಮದ ಮನ್ನಣೆ ಸಾಧ್ಯವಿಲ್ಲ. ಹಾಗಾಗಿ ಲಿಂಗಾಯತ ಹಾಗೂ ವೀರಶೈವ ಪದಗಳ ಸಮಾನಾರ್ಥಕ ಬಳಕೆ ಸರಿಯಲ್ಲ. ವೀರಶೈವ ಎಂಬುದು ಲಿಂಗಾಯತ ಸಮುದಾಯದಲ್ಲಿ ನಂತರ ಬಂದು ಸೇರಿಕೊಂಡ ಒಂದು ಉಪ ಪಂಗಡ ಮಾತ್ರ' ಎಂದು ವಿವರಿಸಿದರು.

ಲಿಂಗಾಯತ ಪದಕ್ಕೆ ಸಮನಾರ್ಥಕವಾಗಿ ವೀರಶೈವ ಪದ ಬಳಕೆ ಮಾಡುತ್ತಿರುವ ಕಾರಣ ಇಲ್ಲಿಯವರೆಗೆ ಸ್ವತಂತ್ರ ಧರ್ಮ ಸ್ಥಾನಮಾನ ಸಿಕ್ಕಿಲ್ಲ. ಮಹಾಸಭಾದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬೀದರ್‌ನ ಖಂಡ್ರೆ ಪರಿವಾರ, ಈಗಿನ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಗೊಂದಲ ಹೆಚ್ಚಿಸುತ್ತಿದ್ದಾರೆ. ಎಲ್ಲಾ ವಿಚಾರ ಗೊತ್ತಿರುವ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅವರು ಅರ್ಧ ಸತ್ಯ ಮಾತ್ರ ಹೇಳುತ್ತಿದ್ದಾರೆ ಎಂದು ಮಾತೆ ಮಹಾದೇವಿ ಬೇಸರ ವ್ಯಕ್ತಪಡಿಸಿದರು.

English summary
Bidar: Declare Lingayat community as independent religion a protest rally will be held on July 19 said Basava Dharma Peetha chief spiritual leader Mate Mahadevi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X