ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಂಗಾನಾಚ್ ವಿಡಿಯೋ : ಯಾರು ಏನು ಹೇಳಿದರು?

By Srinath
|
Google Oneindia Kannada News

ಬೀದರ್, ಅ.4: ಬಿಜೆಪಿಯ ಜಿಲ್ಲಾ ನಾಯಕರ ನಂಗಾನಾಚ್ ಸಂಸ್ಕೃತಿ ಮತ್ತೊಮ್ಮೆ ಬಟಾಬಯಲಾಗುತ್ತಿದ್ದಂತೆ ರಾಜ್ಯಾದ್ಯಂತ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಈ ಸಂಬಂಧ ಟಿವಿ ಮಾದ್ಯಮಗಳಲ್ಲಿ ಬೆಳಗ್ಗೆಯಿಂದ ವಿಡಿಯೋ ದೃಶ್ಯಗಳು ಒಂದೇ ಸಮನೆ ಪ್ರಸಾರವಾಗುತ್ತಿವೆ. ಬಿಜೆಪಿಯ ಬೀದರ್ ಜಿಲ್ಲಾ ಘಟಕದ ನಾಯಕ ಬಾಬು ವಾಲಿ ಅವರೇ ಸ್ವತಃ ಈ ನಂಗಾನಾಚ್ ಕಾರ್ಯಕ್ರಮವನ್ನು ಗೆಸ್ಟ್ ಹೌಸ್ ನಲ್ಲಿ ಏರ್ಪಡಿಸಿದ್ದರು ಎಂದು ಆರೋಪಿಸಲಾಗಿದೆ. ಇವರ ಜತೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿಎಸ್ ಕುದುರೆ, ಡಿಸಿಸಿ ಬ್ಯಾಂಕ್ ನ ಮಾಜಿ ಎಂಡಿ ಪತ್ರಿ ಅವರುಗಳೂ ಕೈಜೋಡಿಸಿದ್ದಾರೆ ಎನ್ನಲಾಗಿದೆ.

ಆದರೆ ಈ ಮೂವರು ದೃಶ್ಯಗಳಲ್ಲಿರುವುದು ತಾವು ಅಲ್ಲವೇ ಅಲ್ಲ. ಒಂದು ವೇಳೆ ತಮ್ಮ ತಪ್ಪು ಸಾಬೀತಾದರೆ ವಿಧಾನಸೌಧದ ಎದುರು ನೇಣುಹಾಕಿಕೊಳ್ಳುತ್ತೇವೆ ಎಂದಿದ್ದಾರೆ. ಹೈದರಾಬಾದಿನಿಂದ ಕರೆತಂದ ಯುವತಿಯರ ಬೆತ್ತಲೆ ನೃತ್ಯದ ವಿರುದ್ಧ ಏನೆಲ್ಲ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ ಎಂಬುದು ಈ ಸ್ಲೈಡಿನಲ್ಲಿದೆ.

'ವಾಲಿ, ಕುದುರೆ, ಪತ್ರಿ ನಂಗಾನಾಚ್ ಸೂತ್ರಧಾರರು'

'ವಾಲಿ, ಕುದುರೆ, ಪತ್ರಿ ನಂಗಾನಾಚ್ ಸೂತ್ರಧಾರರು'

ಈ ನಂಗಾನಾಚ್ ಎಲ್ಲಾ ಬಾಬು ವಾಲಿ ಆದೇಶದಂತೆ ನಡೆದಿದೆ. ಆ ರಾಜಕಾರಣಿಗಳು ನಮಗೆ ತೀವ್ರ ಕಿರುಕುಳ ನೀಡುತ್ತಾರೆ. ನೃತ್ಯ ಮಾಡುವುದಿಲ್ಲ ಅಂದಿದ್ದಕ್ಕೆ ದೈಹಿಕವಾಗಿಯೂ ಹಿಂಸೆ ನೀಡಿದ್ದಾರೆ. ಬಾಬು ವಾಲಿ, ಬಿಎಸ್ ಕುದುರೆ ಮತ್ತು ಎಂಡಿ ಪತ್ರಿ ಅವರೇ ಈ ನಂಗಾನಾಚ್ ಸೂತ್ರಧಾರರು ಎಂದು ನಂಗಾನಾಚ್ ಬೆತ್ತಕೆ ನೃತ್ಯದಲ್ಲಿ ಪಾಳ್ಗೊಂಡಿದ್ದಾಳೆ ಎನ್ನಲಾದ ಹೈದರಾಬಾದ್ ಯುವತಿ ಕಸ್ತೂರಿ ನ್ಯೂಸ್ ಚಾನೆಲಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾಳೆ.

ನಂಗಾನಾಚ್ ಯುವತಿ ಅಚ್ಚ ಉರ್ದು ಭಾಷೆಯಲ್ಲಿ ಪ್ರತಿಕ್ರಿಯೆ

ನಂಗಾನಾಚ್ ಯುವತಿ ಅಚ್ಚ ಉರ್ದು ಭಾಷೆಯಲ್ಲಿ ಪ್ರತಿಕ್ರಿಯೆ

ಮೋಜು ಮಸ್ತಿಗಾಗಿ ಹಲವಾರು ಬಾರಿ ಹೈದರಾಬಾದ್‌ಗೆ ಬರುವ ಜನಪ್ರತಿನಿಧಿಗಳು ಅಲ್ಲಿ ಗೆಸ್ಟ್‌ಹೌಸ್, ರೆಸಾರ್ಟ್‌ಗಳ ವ್ಯವಸ್ಥೆ ಮಾಡಿ ಯುವತಿಯರನ್ನು ಕರೆಸಿಕೊಳ್ಳುತ್ತಾರೆ. ಅವರ ಎದುರು ಬೆತ್ತಲೆಯಾಗಿ ನೃತ್ಯ ಮಾಡಬೇಕಾಗುತ್ತದೆ. ಒಂದು ಹಂತದಲ್ಲಿ ಕಿರುಕುಳವನ್ನೂ ಅನುಭವಿಸಬೇಕು ಎಂದು ಅಳಲು ತೋಡಿಕೊಂಡಿದ್ದಾಳೆ. ಜನ ವಿಶ್ವಾಸವಿಟ್ಟು ಇವರನ್ನು ಆಯ್ಕೆ ಮಾಡುತ್ತಾರೆ. ಆದರೆ, ಈ ರೀತಿಯ ಅನೈತಿಕತೆಯಲ್ಲಿ ತೊಡಗುವವರು ಜನಪ್ರತಿನಿಧಿಗಳು ಹೇಗಾಗುತ್ತಾರೆ ಎಂದು ಆಕೆ ಪ್ರಶ್ನಿಸಿದ್ದಾಳೆ.

ಬಿಜೆಪಿ ನಂಗಾನಾಚ್: ಸಚಿವೆ ಉಮಾಶ್ರೀ ಪ್ರತಿಕ್ರಿಯೆ

ಬಿಜೆಪಿ ನಂಗಾನಾಚ್: ಸಚಿವೆ ಉಮಾಶ್ರೀ ಪ್ರತಿಕ್ರಿಯೆ

ಬಿಜೆಪಿ ಸಂಸ್ಕೃತಿ ಈ ಹಿಂದೆಯೇ ಇಡೀ ಪ್ರಪಂಚಕ್ಕೆ ಗೊತ್ತಾಗಿದೆ. ಅದನ್ನು ಬಯಲಿಗೆಳೆದ ಮಾಧ್ಯಮಗಳಿಗೆ ಧನ್ಯವಾದಗಳು. ಇದು ನಿಜಕ್ಕೂ ಅಸಹ್ಯಕರ. ರಾಜಕಾರಣಿಗಳು ಇದರಲ್ಲಿ ಭಾಗವಹಿಸಿದ್ದಾರೆ ಎಂಬುದು ತೀರಾ ಅವಮಾನಕರ, ನಾಚಿಕೆಯಿಂದ ತಲೆ ತಗ್ಗಿಸುವಂತಹುದು. ವಿಡಿಯೋದಲ್ಲಿ ನೋಡಿದಾಗ ಹೆಣ್ಣು ಮಕ್ಕಳೂ ಆ ನಗ್ನನೃತ್ಯಗಳನ್ನು ಆನಂದಿಸುತ್ತಿರುವುದು ಹೇಯ. ವಿಕೃತಮನಸ್ಸಿನ ಈ ರಾಜಕಾರಣಿಗಳು ಮನುಷ್ಯರೇ ಅಲ್ಲ. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಜತೆ ಮಾತನಾಡಿರುವೆ. ಯಾವುದೇ ಪಕ್ಷದವರೇ ಆಗಿದ್ದರೂ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿರುವೆ. ಬೀದರ್ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ

ಬೀದರ್ ನಂಗಾನಾಚ್: ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ

ಬೀದರ್ ನಂಗಾನಾಚ್: ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ

ನಾವು ಬಿಜೆಪಿ ಬಿಟ್ಟ ಮೇಲೆ ಪಕ್ಷವು ಈ ಸ್ಥಿತಿಗೆ ತಲುಪಿರುವುದು ಬೇಸರ ತರಿಸುತ್ತಿದೆ. ಬಿಜೆಪಿ ಸಂಸ್ಕೃತಿ ಯಾವಾಗಲೋ ಹಾಳಾಗಿ ಹೋಗಿದೆ. ಇಡೀ ಪ್ರಕರಣದ ಬಗ್ಗೆ ಪೊಲೀಸರು ಆಳವಾದ ತನಿಖೆ ನಡೆಬೇಕು. ಸತ್ಯ ಬಯಲಿಗೆ ತರಬೇಕು- ಶೋಭಾ ಕರಂದ್ಲಾಜೆ ಮಾಜಿ ಬಿಜೆಪಿ ಸಚಿವೆ, ಕೆಜೆಪಿ ನಾಯಕಿ.

ರಘುನಾಥ್ ಮಲ್ಕಾಪುರೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ

ರಘುನಾಥ್ ಮಲ್ಕಾಪುರೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ

ವಿಡಿಯೋದಲ್ಲಿ ಕಂಡುಬಂದಿರುವ ವಾಲಿ ಮತ್ತು ಕುದುರೆ ಅವರು ನಮ್ಮವರಲ್ಲ. ಆದರೂ ಇದರ ಬಗ್ಗೆ ರಾಜ್ಯ ನಾಯಕರ ಜತೆ ಮಾತನಾಡಿರುವೆ. ಪಕ್ಷದ ಶಿಸ್ತು ಸಮಿತಿ ಮುಂದಿನ ಕ್ರಮ ಕೈಗೊಳ್ಳುತ್ತದೆ. ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಈಗಾಗಲೇ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಬಿಜೆಪಿ ನಾಯಕರಿಗೆ ಸೂಚಿಸಿದ್ದಾರೆ

ಧರ್ಮಸಿಂಗ್, ಸಂಸದ

ಧರ್ಮಸಿಂಗ್, ಸಂಸದ

ಪ್ರಕರಣದ ಬಗ್ಗೆ ಸತ್ಯಾಂಶ ತಿಳಿದು ಮಾತನಾಡುವೆ. ತನಿಖೆಯಾಗಲಿ. ಆಮೇಲೆ ಮಾತನಾಡುವೆ. ಆದರೆ ನಂಗಾನಾಚ್ ಅನ್ನು ಖಂಡಿತಾ ವಿರೋಧಿಸುವೆ. ಅದನ್ನು ಖಮಡಿತಸಬೇಕು.

English summary
Bidar BJP leaders nanga naach video case reactions pour in. Hyderabad girls nanga naach video shows Bidar BJP leaders in awkward positions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X