ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂ ವಿಮಾನ ನಿಲ್ದಾಣ: ಡಿ. 14ಕ್ಕೆ ಹೊಸ ಹೆಸರು

By Srinath
|
Google Oneindia Kannada News

Bangalore International Airport Kempegowda International Airport from December 14
ಬೆಂಗಳೂರು, ನ.25- ಬೆಂಗಳೂರಿಗರ ಬಹುದಿನಗಳ ಬೇಡಿಕೆ ಕೊನೆಗೂ ಈಡೇರುತ್ತಿದೆ. ಮುಂದಿನ ತಿಂಗಳು 14ಕ್ಕೆ ಹೊಸ ಹೆಸರಿನೊಂದಿಗೆ ಬೆಂಗಳೂರು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕಾರ್ಯನಿರ್ವಹಿಸಲಿದೆ.

ಡಿಸೆಂಬರ್ 14ರಂದು ಹೊಸದಾಗಿ ನಿರ್ಮಾಣಗೊಂಡಿರುವ ಟರ್ಮಿನಲ್ 1ಎ ಸಹ ಅಂದು ಕಾರ್ಯಗತಗೊಳ್ಳಲಿದ್ದು, ಈಗಿರುವ Bangalore International Airport Limited (BIAL) ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೊಸ ಹೆಸರಿನ ನಾಮಧಾರಣೆಯಾಗಲಿದೆ.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಅಜಿತ್ ಸಿಂಗ್ ಅವರು ಮರುನಾಮಕರಣ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಹಾಲಿ ವಿಮಾನ ನಿಲ್ದಾಣನಲ್ಲಿ ದಿನೇ ದಿನೆ ಟ್ರಾಫಿಕ್ ಹೆಚ್ಚಾಗುತ್ತಿದ್ದು, ಹೊಸ ಟರ್ಮಿನಲ್ ನಿರ್ಮಿಸಲಾಗಿದೆ. ಇದು ಈಗಿನದಕ್ಕಿಂತ ದುಪ್ಪಟ್ಟು ವಿಮಾನ ಟ್ರಾಫಿಕ್ ಅನ್ನು ನಿರ್ವಹಿಸಬಲ್ಲದು. ನೂತನ ಟರ್ಮಿನಲ್, 1.50 ಲಕ್ಷ ಚದರ ಮೀಟರ್ ವಿಸ್ತೀರ್ಣ ಹೊಂದಿದೆ.

'ಬೆಂಗಳೂರು ನಗರದ ನಿರ್ಮಾತೃ ಕೆಂಪೇಗೌಡರಿಗೆ ಗೌರವ ಸೂಚಿಸಲು ಅವರ ಹೆಸರಿನಲ್ಲಿ ಇನ್ಮುಂದೆ BIAL ಚಾಲ್ತಿಗೆ ಬರಲಿದೆ' ಎಂದು ವ್ಯವಸ್ಥಾಪಕ ನಿರ್ದೇಶಕ ಜಿವಿ ಸಂಜಯ್ ರೆಡ್ಡಿ ತಿಳಿಸಿದ್ದಾರೆ.

ನೂತನ Terminal 1A ಅಂತಾರಾಷ್ಟ್ರೀಯ ಮಟ್ಟದ್ದಾಗಿದ್ದು, ಎಲ್ಲ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಜತೆಗೆ, ಬೆಂಗಳೂರು ನಗರದ ಸಂಸ್ಕೃತಿಯನ್ನು ಇಲ್ಲಿ ವಿಶೇಷವಾಗಿ ಪ್ರತಿಬಿಂಬಿಸಲಾಗಿದೆ ಎಂದು ಸಂಜಯ್ ರೆಡ್ಡಿ ಹೇಳಿದ್ದಾರೆ.

English summary
Bangalore International Airport Limited (BIAL) would be rechristened as Kempegowda International Airport on December 14, with the opening of the new Terminal 1A. The name change initiation and T1A will be inaugurated by Karnataka Chief Minister Siddaramaiah and Civil Aviation Minister Ajith Singh BIAL Managing Director G. V. Sanjay Reddy said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X