ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವನಸಮುದ್ರ ಬಳಿ ಬಿಎಚ್ಇಎಲ್ ಸೌರ ವಿದ್ಯುತ್ ಘಟಕ

|
Google Oneindia Kannada News

ಬೆಂಗಳೂರು, ಜು. 28 : ಬಿಎಚ್ಇಎಲ್ ಮಂಡ್ಯ ಜಿಲ್ಲೆಯ ಶಿವನಸಮುದ್ರ ಬಳಿ 10 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರ ಸ್ಥಾಪಿಸಲಿದೆ. ಕರ್ನಾಟಕ ವಿದ್ಯುತ್ ನಿಗಮದೊಂದಿಗೆ ಈ ಬಗ್ಗೆ ಬಿಎಚ್ಇಎಲ್ ಒಪ್ಪಂದ ಮಾಡಿಕೊಂಡಿದೆ.

ಮಂಡ್ಯ ಜಿಲ್ಲೆಯ ಶಿವನಸಮುದ್ರ ಬಳಿಯ ಬೆಳಕವಾಡಿ ಗ್ರಾಮದಲ್ಲಿ ಈ 10 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರ ನಿರ್ಮಾಣಗೊಳ್ಳಲಿದೆ. ಸುಮಾರು 68 ಕೋಟಿ ರೂ.ಗಳ ವೆಚ್ಚದಲ್ಲಿ ಬಿಎಚ್‌ಇಎಲ್ ಇದನ್ನು ನಿರ್ಮಿಸುತ್ತಿದ್ದು, ಮೂರು ವರ್ಷಗಳ ಅವಧಿಗೆ ಸ್ಥಾವರವನ್ನು ಸಂಸ್ಥೆಯೇ ಸಂರಕ್ಷಣೆ ಮಾಡಲಿದೆ.

Shivanasamudra

ಬಿಎಚ್‌ಇಎಲ್ ಈಗಾಗಲೇ ರಾಯಚೂರಿನ ಬಳಿ 3 ಮೆಗಾವ್ಯಾಟ್ ಹಾಗೂ ಶಿವನಸಮುದ್ರದ ಬಳಿ 5 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಸದ್ಯ ಶಿವನಸಮುದ್ರ ಬಳಿ 10 ಮೆಗಾವ್ಯಾಟ್ ಸಾಮರ್ಥ್ಯದ ಮತ್ತೊಂದು ಸ್ಥಾವರ ಸ್ಥಾಪಿಸಲು ಮುಂದಾಗಿದೆ. [ಶಿವನಸಮುದ್ರ ಬಳಿ ತಲೆ ಎತ್ತಿದ ಸೌರ ವಿದ್ಯುತ್ ಘಟಕ]

2ರಿಂದ 10 ಮೆಗಾವ್ಯಾಟ್ ಸಾಮರ್ಥ್ಯದ ಸೌರವಿದ್ಯುತ್ ಸ್ಥಾವರ ಸ್ಥಾಪಿಸುವಲ್ಲಿ ಮುಂಚೂಣಿಯಲ್ಲಿರುವ ಬಿಎಚ್‌ಇಎಲ್ ಈಗಾಗಲೇ ನೆರೆಯ ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತ್ರಿಪುರ ಹಾಗೂ ಉತ್ತರ ಪ್ರದೇಶದಲ್ಲಿ ಸೌರವಿದ್ಯುತ್ ಉತ್ಪಾದಿಸಿ ಪ್ರಮುಖ ಜಾಲಕ್ಕೆ ವರ್ಗಾವಣೆ ಮಾಡುತ್ತಿದೆ. [ಅಬ್ದುಲ್ ಕಲಾಂನಷ್ಟೇ ಬುದ್ದಿವಂತ ರೈತ ಕೃಷ್ಣಪ್ಪ]

ಸೌರ ವಿದ್ಯುತ್ ಘಟಕ ಸ್ಥಾಪನೆ ಕುರಿತು ಕರ್ನಾಟಕ ವಿದ್ಯುತ್ ನಿಗಮದೊಂದಿಗೆ ಬಿಎಚ್ಇಎಲ್ ಒಪ್ಪಂದ ಮಾಡಿಕೊಂಡಿದ್ದು, ಈ ಯೋಜನೆಯಲ್ಲಿ ಬಿಎಚ್‌ಇಎಲ್ ಕಾರ್ಯವ್ಯಾಪ್ತಿಯಲ್ಲಿ ಸೌರವಿದ್ಯುತ್ ಸ್ಥಾವರದ ವಿನ್ಯಾಸ, ಉತ್ಪಾದನೆ, ಸರಬರಾಜು, ಸ್ಥಾಪನೆ ಮತ್ತು ಕಾರ್ಯಾಚರಣೆ ಸೇರಿದೆ.

ಹೊಸ ಘಟಕಗಳ ಸ್ಥಾಪನೆ : 2012ರಲ್ಲಿ ಬಿಎಚ್ಇಎಲ್ ರಾಜ್ಯದ 10 ಕಡೆ ಸೌರ ವಿದ್ಯುತ್ ಘಟಕ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿತ್ತು. ಹಾವೇರಿ, ಬಾಗಲಕೋಟೆ, ತುಮಕೂರು, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳಲ್ಲಿ ತಲಾ 10 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಘಟಕಗಳು ನಿರ್ಮಾಣಗೊಳ್ಳಲಿವೆ.

English summary
Bangalore-based Bharat Heavy Electrical Limited (BHEL) plan to setting up an Eco-friendly, grid-connected solar power plant of 10-MW capacity Belakawadi village near Shivanasamudra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X