ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಟ್ಕಳ ಮೂಲದ ಐಎಸ್‌ಐಎಸ್ ಉಗ್ರ ಶಫಿ ಅರ್ಮರ್ ಸಾವು

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮಾರ್ಚ್ 26 : ಐಎಸ್‌ಐಎಸ್‌ ಉಗ್ರ ಸಂಘಟನೆಯಲ್ಲಿದ್ದ ಭಟ್ಕಳ ಮೂಲದ ಶಫಿ ಅರ್ಮರ್ ಮೃತಪಟ್ಟಿದ್ದಾನೆ. ಹಲವು ಸುತ್ತಿನ ಪರಿಶೀಲನೆಗಳ ಬಳಿಕ ಗುಪ್ತಚರ ಇಲಾಖೆ ಈ ಮಾಹಿತಿಯನ್ನು ಖಚಿತಪಡಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

2016ರ ಏಪ್ರಿಲ್ ಸಮಯದಲ್ಲಿ ಶಫಿ ಅರ್ಮರ್ ಸಾವನ್ನಪ್ಪಿದ್ದಾನೆ ಎಂದು ಒನ್ ಇಂಡಿಯಾಕ್ಕೆ ಗುಪ್ತಚರ ಇಲಾಖೆ ಮೂಲಗಳು ಖಚಿತಪಡಿಸಿವೆ. ಐಎಸ್‌ಐಸ್‌ಗೆ ಭಾರತದಿಂದ ಉಗ್ರರನ್ನು ಶಫಿ ಅರ್ಮರ್ ಯೂಸೂಫ್ ಅಲ್ ಹಿಂದಿ ಎಂಬ ಹೆಸರಿನಿಂದ ನೇಮಕ ಮಾಡಿಕೊಳ್ಳುತ್ತಿದ್ದ.

ಐಎಸ್‌ಐಎಸ್‌ನಲ್ಲಿದ್ದ ಭಟ್ಕಳ ಮೂಲದ ಶಫಿ ಅರ್ಮರ್ ಹತ್ಯೆ?ಐಎಸ್‌ಐಎಸ್‌ನಲ್ಲಿದ್ದ ಭಟ್ಕಳ ಮೂಲದ ಶಫಿ ಅರ್ಮರ್ ಹತ್ಯೆ?

26 ವರ್ಷದ ಕರ್ನಾಟಕದ ಭಟ್ಕಳ ಮೂಲದ ಶಫಿ ಅರ್ಮರ್ ಉಗ್ರ ಸಂಘಟನೆಗೆ ಭಾರತದಿಂದ ಯುವಕರನ್ನು ಗುರುತಿಸುತ್ತಿದ್ದ, ತಾನೇ ನೇಮಕವನ್ನು ಮಾಡಿಕೊಳ್ಳುತ್ತಿದ್ದ. ಸಿರಿಯಾದಲ್ಲಿ ನಡೆದ ವಾಯು ಸೇನೆಯ ದಾಳಿಯಲ್ಲಿ ಆತ ಮೃತಪಟ್ಟಿದ್ದಾನೆ.

Bhatkals armar brothers who ran ISIS confirmed dead

ಶಫಿ ಅರ್ಮರ್ ಸಹೋದರ ಸುಲ್ತಾನ್ ಅರ್ಮರ್ 2015ರಲ್ಲಿ ಮೃತಪಟ್ಟಿದ್ದ. ಬಳಿಕ ಈತ ಭಾರತದಲ್ಲಿನ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದ. ಸಹೋದರರಿಬ್ಬರು ಮೊದಲು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯಲ್ಲಿದ್ದರು. ಬಳಿಕ ಐಎಸ್‌ಐಎಸ್ ಸೇರಿದ್ದರು.

ಭಟ್ಕಳ ಮೂಲದ ಶಫಿ ಭಾರತದಲ್ಲಿ ಐಎಸ್‌ಐಎಸ್‌ಗೆ ಮುಖ್ಯಸ್ಥಭಟ್ಕಳ ಮೂಲದ ಶಫಿ ಭಾರತದಲ್ಲಿ ಐಎಸ್‌ಐಎಸ್‌ಗೆ ಮುಖ್ಯಸ್ಥ

ಭಾರತದಲ್ಲಿನ ಐಎಸ್‌ಐಎಸ್ ಉಗ್ರ ಸಂಘಟನೆ ಚಟುವಟಿಕೆಯನ್ನು ಎನ್‌ಐಎ ಪತ್ತೆ ಹಚ್ಚಿದಾಗ ಮೊದಲು ಸಿಕ್ಕ ಹೆಸರುಗಳು ಸುಲ್ತಾನ್ ಅರ್ಮರ್ ಮತ್ತು ಶಫಿ ಅರ್ಮರ್.

ಸುಲ್ತಾನ್ ಅರ್ಮರ್ ಐಎಸ್‌ಐಎಸ್‌ನ ಭಾರತೀಯ ಶಾಖೆ ಅನ್ಸರ್-ಉತ್-ತಾಹಿದ್ ಅನ್ನು ಸ್ಥಾಪನೆ ಮಾಡಿದ್ದ. 2015ರಲ್ಲಿ ಸುಲ್ತಾನ್ ಸಾವನ್ನಪ್ಪಿದ ಬಳಿಕ ಶಫಿ ಅರ್ಮರ್ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದ.

ಅರ್ಮರ್ ಹತ್ಯೆಯಾದಾಗ ಐಎಸ್‌ಐಎಸ್ ಸಾಮಾಜಿಕ ಜಾಲತಾಣದಲ್ಲಿ ಶೋಕ ಸಂದೇಶಗಳನ್ನು ಹಾಕಲಾಗಿತ್ತು. ಇವುಗಳ ಮೇಲೆ ಕಣ್ಣಿಟ್ಟಿದ್ದ ಗುಪ್ತಚರ ಇಲಾಖೆ ಶಫಿ ಅರ್ಮರ್ ಮೃತಪಟ್ಟಿರಬಹುದು ಎಂದು ಶಂಕಿಸಿತ್ತು. ಈಗ ಅಧಿಕೃತ ಮಾಹಿತಿ ಸಿಕ್ಕಿದೆ.

English summary
After various rounds it has finally been confirmed that the dreaded Shafi Armar is dead. Armar (26) had died in Syria and he is a resident of Bhatkal, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X