• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಜೋಡೋ ಯಾತ್ರೆಯ ರಾಹುಲ್ ಗಾಂಧಿಯವರೇ ಈ 10 ಪ್ರಶ್ನೆಗಳಿಗೆ ಉತ್ತರಿಸಿ: ರವಿಕುಮಾರ್

|
Google Oneindia Kannada News

ಬೆಂಗಳೂರು, ಅ.3: ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಬಿಜೆಪಿಯ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ 10 ಪ್ರಶ್ನೆಗಳಿಗೆ ಉತ್ತರಿಸಿ ಎಂದು ಕೇಳಿದ್ದಾರೆ.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ದೇಶದ್ರೋಹಿಗಳ ಮತ್ತು ಭ್ರಷ್ಟಾಚಾರಿಗಳ ಪಕ್ಷ. ರಾಹುಲ್ ಗಾಂಧಿಯವರು ಕರ್ನಾಟಕ ಸರಕಾರವನ್ನು 40 ಶೇಕಡಾ ಕಮಿಷನ್ ಸರಕಾರ ಎಂದು ಹೇಳಿದ್ದಾರೆ. ಕಬ್ಬಿಣದ ಕಾಲಿನ ರಾಹುಲ್ ಗಾಂಧಿ ಅವರು ಇದಕ್ಕೆ ಆಧಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಲೋಕಾಯುಕ್ತಕ್ಕೆ ದಾಖಲೆ ಕೊಡಲಿ. ಪೊಲೀಸರಿಗೆ ಕೊಡಬಹುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿದ್ದಾರೆ. ಆದರೂ ಕೂಡ ಸಾಕ್ಷ್ಯಾಧಾರ ಇಲ್ಲದ ಕಾರಣ ದೂರು ಸಲ್ಲಿಸಲು ಆಗುತ್ತಿಲ್ಲ. ಒಂದು ರೀತಿಯಲ್ಲಿ ಬೀದಿಯಲ್ಲಿ ಹೋಗುವ ರಾಮಣ್ಣ, ಸೋಮಣ್ಣನ ಹಾಗೆ ಕಬ್ಬಿಣದ ಕಾಲಿನ ರಾಹುಲಣ್ಣನೂ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. ಹೆಸರಾಂತ ಪ್ರಧಾನಮಂತ್ರಿಗಳ ಕುಟುಂಬ ಹಾಗೂ ಹೆಸರಾಂತ ಗಾಂಧಿ ಕುಟುಂಬದಿಂದ ಬಂದ ಅವರಿಗೆ ಇಷ್ಟೊಂದು ಕನಿಷ್ಠ ಜ್ಞಾನ ಇಲ್ಲವೇ? ಎಂದು ಪ್ರಶ್ನಿಸಿದರಲ್ಲದೆ ಈ ಧೋರಣೆಯನ್ನು ಬಿಜೆಪಿ ಖಂಡಿಸುತ್ತದೆ ಎಂದು ತಿಳಿಸಿದರು.

ಈ 10 ಪ್ರಶ್ನೆಗಳಿಗೆ ಉತ್ತರಿಸಿ:

1) ನಿಮ್ಮ ಪಾದಯಾತ್ರೆ ಪಾಪದ ಪ್ರಾಯಶ್ಚಿತ್ತದ್ದಾ?

ನಿಮ್ಮ ಕುಟುಂಬ ಪಕ್ಷ 1947ರಲ್ಲಿ ದೇಶವನ್ನು ವಿಭಜಿಸಿದ್ದಕ್ಕೆ ,ಮುಸ್ಲಿಮರಿಗೆ ಪಾಕಿಸ್ತಾನ ಕೊಟ್ಟಿದ್ದಕ್ಕೆ, ಹಿಂದುಗಳಿಗೆ ಹಿಂದೂಸ್ತಾನವನ್ನು ಕೊಡದೇ ಇದ್ದಿದ್ದಕ್ಕೆ ,ನೀವು ಮಾಡುತ್ತಿರುವುದು ದೇಶಭಂಜನೆಯ ಪಾಪದ ಪ್ರಾಯಶ್ಚಿತ್ತದ ಪಾದಯಾತ್ರೇನಾ?ಮೊದಲು ಕ್ಷಮೆ ಯಾಚಿಸಿ ಅನಂತರ ಪಾಪದ ಪ್ರಾಯಶ್ಚಿತ್ತ ಪಾದಯಾತ್ರೆ ಮಾಡಬೇಕಲ್ಲವೇ?

2) ನಿಮ್ಮ ಒಡೆದು ಹೋಗಿರುವ ಮನಸ್ಸುಗಳಿಂದ, ಒಡೆದು ಹೋಗಿರುವ ನಿಮ್ಮ ಪಕ್ಷದಿಂದ ಭಾರತವನ್ನು ಜೋಡಿಸಲು ಸಾಧ್ಯವಾ?

ಅಖಂಡ ಭಾರತವನ್ನು ತುಂಡು ಮಾಡಿದ ನಿಮ್ಮ ಪಕ್ಷ ನಿಮ್ಮ ಕುಟುಂಬ ಹಾಗೂ ನೀವು 75 ವರ್ಷಗಳ ಬಳಿಕ ಈಗ "ಭಾರತ್ ಜೋಡೋ" ಮಾಡಲು ಹೊರಟಿದ್ದೀರಿ! ಅಭಿನಂದನೆಗಳು!! ಆದರೆ ಭಾರತವನ್ನು ತುಂಡರಿಸುವ ನಿಮ್ಮ ಪಕ್ಷದಿಂದ ನಿಮ್ಮ ಕುಟುಂಬದಿಂದ ಭಾರತವನ್ನು ಜೋಡಿಸಲು ಸಾಧ್ಯವಾ? ಪ್ರಾಮಾಣಿಕವಾಗಿ ಉತ್ತರಿಸಿ?

'ಯಾತ್ರೆಯನ್ನು ತಡೆಯಲು ಯಾವುದರಿಂದಲೂ ಸಾಧ್ಯವಿಲ್ಲ'; ಮಳೆ ನಡುವೆ ರಾಹುಲ್ ಭಾಷಣ'ಯಾತ್ರೆಯನ್ನು ತಡೆಯಲು ಯಾವುದರಿಂದಲೂ ಸಾಧ್ಯವಿಲ್ಲ'; ಮಳೆ ನಡುವೆ ರಾಹುಲ್ ಭಾಷಣ

3)1919ರ ಖಿಲಾಫತ್ ಚಳುವಳಿಯಿಂದ ಹಿಡಿದು ಬಾರತ-ಪಾಕಿಸ್ತಾನ, ಭಾರತ-ಬಾಂಗ್ಲಾ, ಕಾಶ್ಮೀರಕ್ಕೆ 370ನೇ ವಿಧಿ, ವಂದೇ ಮಾತರಂ ವಿಭಜನೆ, ಹೀಗೆ ಮೊನ್ನೆನೊನ್ನೆಯ ಸಿ.ಎ.ಎ.ಕಾಯಿದೆಯವರೆಗೆ ನಿಮ್ಮದು ಹಿಂದೂಗಳನ್ನು ಅನಾಥರನ್ನಾಗಿಸುವ ಭಾರತದ ಐಕ್ಯತೆಯನ್ನು ಭಗ್ನಗೊಳಿಸಿದ ತೋಡೋ ಯಾತ್ರೆ ಇದಲ್ಲವೇ?

ನೀವು ಯುವಕರು ರಾಜಕಾರಣಕ್ಕೆ ಬಂದು ದಶಕಗಳೇ ಆಗಿವೆ. ಜೆಎನ್ಯೂ ನಲ್ಲಿ ಭಾರತ ಬರ್ಬಾದ್ ಆಗಲಿ (ಭಾರತ್ ತೇರೆ ತುಕಡೆ ಹೋಂಗೆ, ಅನ್ಸಾ ಅಲ್ಲಾ ಅನ್ಸಾ ಅಲ್ಲಾ, ಕಾಶ್ಮೀರ ಸ್ವತಂತ್ರವಾಗಲಿ, ಕಾಶ್ಮೀರ್ ಕೋ ಚಾಹಿಯೇ ಆಜಾದಿ) ಎಂಬ ಇತ್ಯಾದಿ ಘೋಷಣೆಗಳನ್ನು ಕೂಗಿದ ಯುವಕರ ದಾರಿ ತಪ್ಪಿಸಿದ ಕನ್ಹಯ್ಯಾ ಕುಮಾರ್ ಅಂಥವರನ್ನು ಪಕ್ಷಕ್ಕೆ ಸೇರಿಸಿಕೊಂಡಿರಿ, ಸದಾ ಭಾರತವನ್ನು ಪ್ರಾದೇಶಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ತುಂಡು ಮಾಡುತ್ತಾ ಬಂದಿರುವ ನಿಮ್ಮ ಪಕ್ಷಕ್ಕೆ ಕುಟುಂಬಕ್ಕೆ ಸಿದ್ಧಾಂತಕ್ಕೆ ನಾಯಕತ್ವಕ್ಕೆ ಕಾರ್ಯಕರ್ತರಿಗೆ ನಿಮಗೆ ಎಂದಾದರೂ ಭಾರತವನ್ನು ಜೋಡಿಸಿರುವ ಅನುಭವ ಇದೆಯಾ? ಇದ್ದರೆ ತಿಳಿಸಿ.

4) ದೇಶವನ್ನು ಲೂಟಿ ಮಾಡಿದವರು ನಿಮ್ಮ ಪಕ್ಷ ನಿಮ್ಮ ಕುಟುಂಬವರಲ್ಲವೇ?

ನೆಹರೂ ಅವರ ಸಚಿವಸಂಪುಟಕ್ಕೆ ಶ್ಯಾಮಪ್ರಸಾದ್ ಮುಖರ್ಜಿ ಅವರು ರಾಜೀನಾಮೆ ನೀಡಿದ್ದು ಏಕೆ? ಅಂಬೇಡ್ಕರ್ ರವರು ನಾನು ಜೀವಂತ ಇರುವವರೆಗೂ ಕಾಂಗ್ರೆಸ್ ಪಕ್ಷ ಸೇರಲಾರೆ, ಕಾಂಗ್ರೆಸ್ ಎನ್ನುವುದು ಒಂದು ಉರಿಯುವ ಮನೆ ಎಂದಿದ್ದು ಏಕೆ? ಉತ್ತರಿಸುವಿರಾ?

ಕಾಶ್ಮೀರದ ಬಗ್ಗೆ ಹಿಂದೂಕೋಡ್ ಬಿಲ್ ಬಗ್ಗೆ ನಿಮ್ಮ ಅಜ್ಜ ನೆಹರೂ ನಿಮ್ಮ ಪಕ್ಷ ಕಾಂಗ್ರೆಸ್ ಯಾವ ನಿಲುವು ತಳೆಯಿತೆಂಬ ಇತಿಹಾಸದ ಬಗ್ಗೆ ತಿಳಿಸುವಿರಾ? 1947ರಲ್ಲಿ ಅಧಿಕಾರ ಸಿಕ್ಕೊಡನೆ ದಲಿತರನ್ನು ದೇಶದ ಗಡಿಯಲ್ಲಿನ ಹಿಂದುಗಳನ್ನು ಕಡೆಗಣಿಸಿದಿರಿ ಮುಸ್ಲಿಂ ಲೀಗಿನೊಂದಿಗೆ ಕಮ್ಯುನಿಸ್ಟ್ ರೊಂದಿಗೆ ಅಧಿಕಾರ ಹಂಚಿಕೊಂಡು ದೇಶವನ್ನು ಲೂಟಿ ಮಾಡಿದವರು ನಿಮ್ಮ ಪಕ್ಷ ನಿಮ್ಮ ಕುಟುಂಬವರಲ್ಲವೇ? ನೀವು ನಿಮ್ಮ ಡಿ.ಕೆ.ಶಿ. ಬೇಲಿನ ಮೇಲೆ ಹೊರಗಿರುವ ಮಹಾ ಭ್ರಷ್ಟಾಚಾರದ ಆರೋಪಿಗಳು. ನಿಮ್ಮದೇ ಹಿರಿಯ ನಾಯಕ ಶಾಸಕ ರಮೇಶ್ ಕುಮಾರ್ ಅವರು "ನೆಹರೂ ಅವರ ಕಾಲದಿಂದ ಇಂದಿನವರೆಗೆ ದೇಶವನ್ನು ಲೂಟಿ ಮಾಡಿ ನಾಲ್ಕು ತಲೆಮಾರಿಗೆ ಆಗುವಷ್ಟು ಸಂಪಾದಿಸಿದ್ದೇವೆ" ಎಂದಿರುವ ಬಗ್ಗೆ ನಿಮ್ಮ ನಿಲುವೇನು?

5) ನಿಮ್ಮದು "ಒಳಗೆ ಭಾರತ ತೋಡೋ ಹೊರಗೆ ಭಾರತ ಜೋಡೋ ಒಳಗೆ ಭ್ರಷ್ಟಾಚಾರದ ಪರ, ಹೊರಗೆ ಭ್ರಷ್ಟಾಚಾರ ವಿರೋಧಿ" ಇಂತಹ ಆತ್ಮ ವಂಚನೆ ನಿಮಗೇಕೆ?

ನಿಮ್ಮದು "ಒಳಗೆ ಭಾರತ ತೋಡೋ ಹೊರಗೆ ಭಾರತ ಜೋಡೋ ಒಳಗೆ ಭ್ರಷ್ಟಾಚಾರದ ಪರ ಹೊರಗೆ ಭ್ರಷ್ಟಾಚಾರ ವಿರೋಧಿ" ಈ ವಂಚನೆಯೇಕೆ?

ಇಂಥ ಎಡಬಿಡಂಗಿತನ ಬುದ್ಧ-ಬಸವಣ್ಣನವರ ನಾಡಿನಲ್ಲಿ ನಡೆಯುವುದಿಲ್ಲ. ಈ ನಿಮ್ಮ ನಾಟಕವನ್ನು ಅಂಬೇಡ್ಕರ್ ವಾದಿಗಳು ಶ್ಯಾಮಪ್ರಸಾದ ಮುಖರ್ಜಿ ವಾದಿಗಳು ಸಹಿಸುವುದಿಲ್ಲ ಎಂಬುದು ನಿಮಗೆ ಗೊತ್ತೇ?

6) ಕರ್ನಾಟಕದಲ್ಲಿ ನಿಮ್ಮ ಪಕ್ಷದ ಡಿ.ಕೆ.ಶಿವಕುಮಾರ್- ಸಿದ್ಧರಾಮಯ್ಯ ಅವರನ್ನು ಜೋಡಿಸಲಾಗದ ನಿಮಗೆ ಭಾರತವನ್ನು ಜೋಡಿಸಲು ಸಾಧ್ಯವೇ? ನೀವು ಕರ್ನಾಟಕದ ಕಾಂಗ್ರೇಸನ್ನು ಜೋಡಿಸಬಲ್ಲಿರಾ?

Bharat Jodo Yatra: Rahul Gandhi Answer these 10 questions- Karnataka BJP Asking

ನೀವು ದಾವಣಗೆರೆಯಲ್ಲಿ ಡಿಕೆಶಿ ಅವರಿಗೆ ಸಿದ್ದರಾಮಯ್ಯ ಅವರನ್ನು ಅಪ್ಪಿಕೊಳ್ಳಲು ಬಹಿರಂಗವಾಗಿ ಹೇಳಿದಿರಿ. ಮನವಿಲ್ಲದ ಮನದಲ್ಲಿ ಡಿಕೆಶಿ ಅಪ್ಪಿದರು, ಸಿದ್ದು ಡಿಚ್ಚಿ ಕೊಡುತ್ತಿದ್ದಾರೆ. ಡಿಕೆಶಿ ಬಂಡೆ ಸಿಡಿಸುತ್ತಿದ್ದಾರೆ. ಪಾಪ ಜನನಾಯಕ ಸಿದ್ದರಾಮಯ್ಯ ಅವರು ನಿಮ್ಮನ್ನು ಸಿದ್ಧರಾಮೋತ್ಸವಕ್ಕೆ ಕರೆದು ಗೌರವಿಸಿದರು. ಆದರೆ ನಿಮ್ಮ ಪಕ್ಷ ಭಾರತ ಜೋಡೋ ಯಾತ್ರೆಯ ಸಭೆಗೆ ಸಿದ್ಧರಾಮಯ್ಯ ಅವರನ್ನೇ ಕರೆಯಲಿಲ್ಲ. ಅವರು ನನ್ನನ್ನು ಕರೆದಿಲ್ಲ ನಾನ್ಯಾಕೆ ಬರಲಿ ಎಂದು ಸಿಡಿಮಿಡಿಗೊಂಡರು. ಇದು ಹಿರಿಯ ನಾಯಕರಿಗೆ ಕರ್ನಾಟಕದ ದೊಡ್ಡ ಕುರುಬ ಸಮುದಾಯಕ್ಕೆ ಮಾಡಿದ ಅಗೌರವವಲ್ಲವೇ? ಒಕ್ಕಲಿಗರು ಕುರುಬರ ನಡುವೆ ಕದನ ಹಚ್ಚಿ ದಲಿತ ನಾಯಕರಾದ ಪರಮೇಶ್ವರರನ್ನು ಸೋಲಿಸಿ, ಖರ್ಗೆಯವರು ಮುಖ್ಯಮಂತ್ರಿಯ ಕನಸನ್ನು ಕರ್ನಾಟಕದಿಂದಲೇ ಕಣ್ಮರೆಯಾಗುವಂತೆ ಮಾಡಿರುವ ನೀವು ಕರ್ನಾಟಕದಲ್ಲಿ ಕಾಂಗ್ರೇಸನ್ನು ಜೋಡಿಸಬಲ್ಲಿರಾ?

7) ಭಾರತೀಯರು ಕಾಂಗ್ರೆಸ್ ಮುಕ್ತ ಭಾರತವನ್ನು ಬಯಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನೇ ಜೋಡಿಸಲಾರದ ನಿಮ್ಮಿಂದ ಭಾರತವನ್ನು ಜೋಡಿಸುವುದು ಸಾಧ್ಯವೇ? ಕಾಂಗ್ರೆಸ್ ಜೋಡೋ ಯಾತ್ರೆಗೇಕೆ ಭಾರತಜೋಡೋ ಎಂದು ಕರೆದಿದ್ದೀರಿ?

ಕಾಂಗ್ರೆಸ್ ಛೋಡೋ ಯಾತ್ರೆ ಮೊನ್ನೆ ಮೊನ್ನೆಯ ಕಪಿಲ್ ಸಿಬಲ್ ,ಗುಲಾಂ ನಬಿ ಆಜಾದ್, ಕರ್ನಾಟಕದ ಸಿ.ಎಂ.ಇಬ್ರಾಹಿಂ ಅವರ ವರೆಗೆ ನಿರಂತರವಾಗಿ ಪ್ರತಿ ರಾಜ್ಯದಲ್ಲಿ ನಿಮ್ಮ ನಾಯಕರುಗಳಿಂದ ಕಾಂಗ್ರೆಸ್ ಛೋಡೋ ನಡೆಯುತ್ತಿದೆ. ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ಸೋತಿದೆ. ಆದರೆ ನೀವು ಭಾರತ ಜೋಡೋ ಅನ್ನುತ್ತಿದ್ದೀರಿ. ಅದು ನಿಮ್ಮದೇ ಪಕ್ಷದ ಹಿರಿಯ ದಲಿತ, ಹಿಂದುಳಿದ ಅಲ್ಪಸಂಖ್ಯಾತ ನಾಯಕರಿಗೆ ಕಾಂಗ್ರೆಸ್ ಛೋಡೋ ಎಂದಂತೆ ಕೇಳಿಸುತ್ತಿದೆ. ಭಾರತೀಯರು ಕಾಂಗ್ರೆಸ್ ಮುಕ್ತ ಭಾರತವನ್ನು ಬಯಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನೇ ಜೋಡಿಸಲಾರದ ನಿಮ್ಮಿಂದ ಭಾರತವನ್ನು ಜೋಡಿಸುವುದು ಸಾಧ್ಯವೇ? ಕಾಂಗ್ರೆಸ್ ಜೋಡೋ ಯಾತ್ರೆಗೇಕೆ ಭಾರತಜೋಡೋ ಎಂದು ಕರೆದಿದ್ದೀರಿ? ಭಾರತವೆಂದರೆ ಕಾಂಗ್ರೆಸ್ ಅಲ್ಲ ಕಾಂಗ್ರೆಸ್ ಎಂದರೆ ಭಾರತ ಅಲ್ಲ, ಅಲ್ಲವೇ? ಸೂಕ್ಷ್ಮವಾಗಿ ಯೋಚಿಸಿ. ಪಕ್ಷಕ್ಕಿಂತ ದೇಶಮುಖ್ಯ ಮೊದಲು ಪೂರ್ಣವಾಗಿ ಭಾರತದ ಪ್ರಜೆಯೇ ಆಗಿರದ ನೀವು "ವಿದೇಶದಲ್ಲಿ ಜೀವ ಭಾರತದಲ್ಲಿ ದೇಹ" ಎಂಬ ಸ್ಥಿತಿ ಇದೆ. ವಿದೇಶಗಳಲ್ಲಿ ಭಾರತವನ್ನು ನಿಂದಿಸಿದ ನಿಮ್ಮಿಂದ ಭಾರತ ಯಾವ ವೈಭವವನ್ನು ಬಯಸಬಹುದು? ಮೊದಲು ಭಾರತೀಯ ಆಗಿ ಅನಂತರ ಪಾದಯಾತ್ರೆ ಮಾಡಿ....

8) ಆತ್ಮಸಾಕ್ಷಿಯಿಂದ ಹೇಳಿ ಇದು ನಿಮ್ಮ ಆತ್ಮವಂಚನೆಯ ಪಾದಯಾತ್ರೆ ಅಲ್ಲವೇ? ನಿಮ್ಮ ಪಕ್ಷದ ಇತಿಹಾಸ ನೋಡಿದರೆ ಅಂದಿನ ಮೂರ್ತಿ ಭಂಜಕರಿಗೂ ಇಂದಿನ ಭಾರತ ಭಂಜಕರಿಗೂ ಏನು ವ್ಯತ್ಯಾಸವಿದೆ? ಮೂರ್ತಿ ಭಂಜಕರಂತೆ ನೀವು ಭಾರತ ಭಂಜಕರಾಗಬಾರದಲ್ಲವೇ?

370ನೆ ವಿಧಿ ತೆಗೆದಿದ್ದನ್ನು ಸಿ.ಎ.ಎ ಕಾನೂನು ತಂದದ್ದನ್ನು ವಿರೋಧಿಸಿದಿರಿ, ಸೈನ್ಯದ ನೈತಿಕ ಸ್ಥೈರ್ಯವನ್ನು ಕುಗ್ಗುಸ್ತೀರಿ, ಕಾಶ್ಮೀರದ ಹಿಂದುಗಳ ಹತ್ಯೆಗಳನ್ನು ಕಡೆಗಣಿಸ್ತೀರಿ, ಒಳಗೊಳಗೇ ಭಯೋತ್ಪಾದಕರನ್ನು ಬೆಂಬಲಿಸ್ತೀರಿ, ದೇಶದಲ್ಲಿ ಹಿಂದುಗಳ ಹತ್ಯೆಯಾದಾಗ ಮೌನವಾಗಿ ಸಂಭ್ರಮಿಸ್ತೀರಿ, ಬಿಜೆಪಿಯನ್ನು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ವಿರೋಧಿಸುವುವುದಕ್ಕಾಗಿ ದೇಶವನ್ನೇ ವಿರೋಧಿಸುವ ದೇಶದ್ರೋಹದ ಮಟ್ಟಕ್ಕೂ ಇಳಿಯುತ್ತೀರಿ ಬಾಯಲ್ಲಿ ಮಾತ್ರ ಭಾರತಜೋಡೋ ಎನ್ನುತ್ತೀರಿ. ಎದೆಯಲ್ಲಿ ಭಾರತ ಭಂಜಕರಾಗಿದ್ದೀರಿ. ಆತ್ಮಸಾಕ್ಷಿಯಿಂದ ಹೇಳಿ ಇದು ನಿಮ್ಮ ಆತ್ಮವಂಚನೆಯ ಪಾದಯಾತ್ರೆ ಅಲ್ಲವೇ? ನಿಮ್ಮ ಪಕ್ಷದ ಇತಿಹಾಸ ನೋಡಿದರೆ ಅಂದಿನ ಮೂರ್ತಿ ಭಂಜಕರಿಗೂ ಇಂದಿನ ಭಾರತ ಭಂಜಕರಿಗೂ ಏನು ವ್ಯತ್ಯಾಸವಿದೆ? ಮೂರ್ತಿ ಭಂಜಕರಂತೆ ನೀವು ಭಾರತ ಭಂಜಕರಾಗಬಾರದಲ್ಲವೇ?

9) ನಿಮಗೆ ನಿಮ್ಮ ಪಕ್ಷಕ್ಕೆ ಭಾರತವನ್ನು ಜೋಡಿಸುವ ಪ್ರಾಮಾಣಿಕ ಉದ್ದೇಶವಿದ್ದರೆ ಮುಂದಿನ ಚುನಾವಣೆಯಲ್ಲಿ ಸಮಾನತೆಯನ್ನು ತರಲು ಹಿಂದು-ಮುಸ್ಲಿಂ ಸಮಾನರೆಂಬ ಕಾನೂನನ್ನು ತರುತ್ತೇವೆ ಎಂದು ಘೋಷಿಸುತ್ತೀರಾ?

ಭಾರತದಲ್ಲಿ ಮತಾಂತರವನ್ನು ಬೆಂಬಲಿಸುತ್ತಾ ಕ್ರಿಶ್ಚಿಯನ್ ಭಾರತ ಮಾಡಲು ಹೊರಟಿರುವ ನೀವು ಮತಾಂತರವನ್ನು ನಿಷೇಧಿಸುವಿರಾ? ಮುಸ್ಲಿಂ ಮಾತುಗಳಿಂದ ಅಧಿಕಾರವನ್ನು ಹಿಡಿಯಬೇಕೆಂದು ಭಾರತದ ಮುಸ್ಲಿಂ ಮಹಿಳೆಯರು ಬುರ್ಕಾದಲ್ಲೇ ಇರಬೇಕು. ಮದರಸಾದಲ್ಲೇ ಇರಬೇಕು. ಜಿಹಾದಿ ಮನೋಭಾವದವರು ಹಿಂದುಗಳನ್ನು ಕೊಲ್ಲುತ್ತಿರಬೇಕೆಂಬ ನಿಲುವಿನಿಂದಿರುವ ನಿಮ್ಮ ಪಕ್ಷ ಗೋಹತ್ಯೆ ನಿಷೇಧ, ಬುರ್ಕಾ ಹಿಜಾಬ್ ನಿಷೇಧ, ತಲಾಖ್ ನಿಷೇಧ, ಮದರಸಾದಲ್ಲಿ ಆಧುನಿಕ ಶಿಕ್ಷಣ ನೀಡಬಾರದು, ಎನ್ನುವ ನಿಮ್ಮ ದೇಶ ವಿಭಜನೆಯ ಭಾವನೆಗಳನ್ನು ಹೊಂದಿರುವ ಪಕ್ಷ ಭಾರತದಲ್ಲಿ ಸಮಾನತೆಯನ್ನು ತರಬಲ್ಲದೇ?

10) ನೀವು ಈಗಾಗಲೇ ಪ್ರತ್ಯೇಕತೆಯ ಬೀಜ ಬಿತ್ತಿ, ಭಾರತದಲ್ಲಿ ರಕ್ತಪಾತಕ್ಕೆ ಕಾರಣರಾಗಿದ್ದೀರಿ. ಮುಸ್ಲಿಂ ಲೀಗ್ ಕಮ್ಯುನಿಸ್ಟ್ ಹಾಗೂ ದೇಶವಿರೋಧಿಗಳ ಸಹವಾಸದಿಂದ ನಿಮ್ಮ ಪಕ್ಷ ದೇಶದ ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ನಿಮ್ಮಲ್ಲಿರುವ ನಾಯಕರೇ ಕಾಂಗ್ರೆಸ್ ಛೋಡೋ ಯಾತ್ರೆ ಆರಂಭಿಸಿದ್ದಾರೆ. ಈಗ ನಿಮ್ಮೊಡನೆ ಭಾರತವನ್ನು ಜೋಡಿಸುವ ಯಾವ ಸಿದ್ಧಾಂತ ಯಾವ ಆದರ್ಶವಾದಿ ಪಕ್ಷ ಯಾವ ಪ್ರಾಮಾಣಿಕತೆ ನಿಮಗಿದೆ?

ಭಾರತದ ಬಹುಸಂಖ್ಯಾತ ಹಿಂದೂಗಳನ್ನು ಬಲಿಕೊಡುತ್ತಾ ಮುಸ್ಲಿಮರ ಮೂಗಿಗೆ ತುಪ್ಪ ಸವರುತ್ತಾ ದಲಿತರನ್ನು ಬಳಸಿ ಬಿಸಾಕುತ್ತಾ ಬಂದ ನಿಮ್ಮ ಪಕ್ಷ ಮತ್ತು ನೀವು ಹಿಂದುಗಳ ಮುಸ್ಲಿಮರ ದೀನದಲಿತರ ಬಡವರ ನಂಬಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೀರಿ. ನಿಮ್ಮ ಓಟ್ ಬ್ಯಾಂಕ್ ರಾಜಕಾರಣ ಮುಗಿದು ಹೋಗಿದೆ. ಭಾರತವನ್ನು ಜೋಡಿಸುವ ಯಾವ ಸಿದ್ಧಾಂತ, ಯಾವ ಆದರ್ಶವಾದಿ, ಪಕ್ಷ ಯಾವ ಪ್ರಾಮಾಣಿಕ ಅನುಭವೀ ನಾಯಕರಿದ್ದಾರೆ? ಕಾಂಗ್ರೇಸನ್ನೇ ಜೋಡಿಸಲಾಗದ ನೀವು ಈಗ ಭಾರತವನ್ನು ಜೋಡಿಸುವ ಯಾತ್ರೆ ನಡೆಸುತ್ತಿರುವುದು ದೇಶದ ಜನರ ಪಕ್ಷದ ಕಾರ್ಯಕರ್ತರನ್ನು ವಂಚಿಸುವ ಒಂದು ನಾಟಕ ಎಂದೆನಿಸುವುದಿಲ್ಲವೇ? ಇವುಗಳಿಗೆ ಆತ್ಮಸಾಕ್ಷಿಯಿಂದ ಪ್ರಾಮಾಣಿಕವಾಗಿ ಉತ್ತರಿಸಿ ಎಂದು ತಿಳಿಸಿದ್ದಾರೆ.

English summary
During the Bharat Jodo Yatra, BJP State General Secretary and Legislative Council member N. Ravikumar asked Congress leader Rahul Gandhi to answer 10 questions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X