ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.10 ರಂದು ಭಾರತ ಬಂದ್, ಏನಿರುತ್ತೆ? ಏನಿರೋಲ್ಲ?

|
Google Oneindia Kannada News

Recommended Video

Bharath Bandh : Fuel Price Hike | ಸೋಮವಾರ ಭಾರತಬಂದ್ ಗೆ ಕರೆ

ಬೆಂಗಳೂರು, ಸೆಪ್ಟೆಂಬರ್ 08: ಗಗನಕ್ಕೇರಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ವಿರೋಧಿಸಿ ಕಾಂಗ್ರೆಸ್ ಮತ್ತು ಇನ್ನಿತರ ವಿರೋಧ ಪಕ್ಷಗಳು ಸೆಪ್ಟೆಂಬರ್ 10ರಂದು ಸೋಮವಾರ ಭಾರತ್ ಬಂದ್ ಗೆ ಕರೆನೀಡಿವೆ.

ಬಹುಪಾಲು ನಗರಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 80 ರೂಪಾಯಿಯ ಗಡಿ ದಾಟಿದ್ದು, ಡೀಸೆಲ್ ಬೆಲೆ ಲೀಟರ್ ಗೆ ರೂ.75 ರ ಆಸುಪಾಸಿನಲ್ಲಿದೆ. ಇಂಧನ ದರ ದಿನೇ ದಿನೇ ಏರಿಕೆಯಾಗುತ್ತಿದ್ದು ಜನಸಾಮಾನ್ಯನಿಗೆ ಕೈಗೆಟುಕದ ಸ್ಥಿತಿ ತಲುಪಿದೆ. ಡಾಲರ್ ಎದುರು ರೂಪಾಯಿ ಭಾರೀ ಕುಸಿತ ಕಂಡಿದ್ದು(ಪ್ರತಿ ಡಾಲರ್ ಗೆ 72ರೂ.) ಇಂಧನ ಬೆಲೆ ಏರಿಕೆಗೆ ಬಹುಮುಖ್ಯ ಕಾರಣ.

ತೈಲ ಬೆಲೆ ಏರಿಕೆಗೆ ವಿರೋಧ: ಸೆಪ್ಟೆಂಬರ್ 10ರಂದು ಭಾರತ್ ಬಂದ್‌ತೈಲ ಬೆಲೆ ಏರಿಕೆಗೆ ವಿರೋಧ: ಸೆಪ್ಟೆಂಬರ್ 10ರಂದು ಭಾರತ್ ಬಂದ್‌

ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಂದ್ ಗೆ ಕರೆನೀಡಿದ್ದು ಕಾಂಗ್ರೆಸ್ ಮತ್ತು ಇನ್ನಿತರ ವಿರೋಧಪಕ್ಷಗಳೇ ಆಗಿರುವುದರಿಂದ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಬಂದ್ ಬಿಸಿ ಹೆಚ್ಚಾಗುವ ಸಾಧ್ಯತೆ ಇದ್ದು, ಕರ್ನಾಟಕಕ್ಕೂ ಆ ಬಿಸಿ ತಟ್ಟಲಿದೆ. ಸೆ.10 ರಂದು ಬಿಎಂಟಿಸಿ ಕಾರ್ಯ ನಿರ್ವಹಿಸುತ್ತಾ? ನಮ್ಮ ಮೆಟ್ರೋ ಕಥೆ ಏನು? ಶಾಲೆ-ಕಾಲೇಜಿಗೆ ರಜಾನಾ? ಆಟೋ, ಟ್ಯಾಕ್ಸಿ ರಸ್ತೆಲಿಕಾಣಿಸಿಕೊಳ್ಳುತ್ತಾ? ಇಲ್ಲಿದೆ ನೋಡಿ ಮಾಹಿತಿ.

ಬಿಎಂಟಿಸಿ ಬಸ್ ಇರುತ್ತಾ?

ಬಿಎಂಟಿಸಿ ಬಸ್ ಇರುತ್ತಾ?

AITUC(ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್) ಸಹ ಬಂದ್ ಗೆ ಬೆಂಬಲ ನೀಡಿರುವುದರಿಂದ ಅದರ ಬೆಂಬಲಿತ ಸಂಸ್ಥೆಗಳಾದ ಕೆಎಸ್ ಆರ್ ಟಿಸಿ ಸಹ ಬಂದ್ ಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಆದ್ದರಿಂದ ಬಿಎಂಟಿಸಿ ಮತ್ತು ಕೆಎಸ್ ಆರ್ ಟಿಸಿ, NWKRTC, NEKRTC ಬಸ್ ವ್ಯವಸ್ಥೆಗಳು ವ್ಯತ್ಯಯವಾಗಲಿವೆ. ಸುರಕ್ಷತೆಯ ದೃಷ್ಟಿಯಿಂದಲೂ ಬಸ್ ಸಂಚಾರ ಸ್ಥಗಿತಗೊಳಿಸಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಬಂದ್ ದಿನ ಬೆಳಿಗ್ಗಿನ ಪರಿಸ್ಥಿತಿ ಅವಲೋಕಿಸಿ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಿಎಂಟಿಸಿ, ಕೆಎಸ್ ಆರ್ ಟಿಸಿ ಆಡಳಿತ ಮಂಡಳಿ ತಿಳಿಸಿದೆ.

ನಮ್ಮ ಮೆಟ್ರೋ ಕತೆ ಏನು?

ನಮ್ಮ ಮೆಟ್ರೋ ಕತೆ ಏನು?

ಬೆಂಗಳೂರಿನ ಹಲವರು ಇದೀಗ ಸಾರ್ವಜನಿಕ ಸಾರಿಗೆಯಾಗಿ ನಮ್ಮ ಮೆಟ್ರೋ ಮೇಲೆಯೇ ಅವಲಂಬಿತವಾಗಿದ್ದಾರೆ. ಆದರೆ ಬಂದ್ ದಿನ ನಮ್ಮ ಮೆಟ್ರೋ ಸೇವೆ ಸ್ಥಗಿತಗೊಂಡರೆ ಏನು ಮಾಡುವುದು ಎಂಬ ತಲೆಬಿಸಿಯಲ್ಲಿದ್ದರೆ, ಖಂಡಿತ ಚಿಂತೆ ಬೇಡ. ನಮ್ಮ ಮೆಟ್ರೋ ಸೇವೆ ಎಂದಿನಂತೆಯೇ ಬಂದ್ ದಿನವೂ ಮುಂದುವರಿಯಲಿದೆ. ಅಹಿತಕರ ಘಟನೆಗಳೇನಾದರೂ ಸಂಭವಿಸಿದರೆ ನಂತರ ಸಂಚಾರ ಸ್ಥಗಿತಗೊಳ್ಳಬಹುದು.

ಕ್ಯಾಬ್, ಏರ್ ಪೋರ್ಟ್ ಟ್ಯಾಕ್ಸಿ?

ಕ್ಯಾಬ್, ಏರ್ ಪೋರ್ಟ್ ಟ್ಯಾಕ್ಸಿ?

ಕರ್ನಾಟಕ ಟ್ಯಾಕ್ಸಿ ಓನರ್ ಅಸೋಸಿಯೇಶನ್ ಈ ಬಂದ್ ಗೆ ಬೆಂಬಲ ನೀಡುವುದಾಗಿ ಹೇಳಿರುವುದರಿಂದ ಓಲಾ, ಊಬರ್ ನಂಥ ಟ್ಯಾಕ್ಸಿ ಸೇವೆಗಳು ಅಲಭ್ಯವಾಗಲಿವೆ. ಆದರೆ ಬೆಂಗಳೂರು ಟೂರಿಸ್ತ್ ಟ್ಯಾಕ್ಸಿ ಆಪರೇಟರ್ಸ್ ಅಸೋಸಿಯೇಶನ್ ಬಂದ್ ಗೆ ಈ ವರೆಗೆ ಬೆಮಬಲ ನೀಡಿಲ್ಲ. ಆದ್ದರಿಂದ ಏರ್ ಪೋರ್ಟ್ ಟ್ಯಾಕ್ಸಿಗಳು ಎಂದಿನಂತೇ ಕಾರ್ಯ ನಿರ್ವಹಿಸಲಿವೆ. ದೂರದೂರುಗಳಿಂದ ವಿಮಾನಕ್ಕೆ ಬೆಂಗಳೂರಿಗೆ ಬಂದವರು ಮನೆ ತಲುಪಲು ತಾಪತ್ರಯ ಪಡಬೇಕಾದ ಅಗತ್ಯವಿಲ್ಲ.

ಆಟೋಗಳು ಇರುತ್ತಾ?

ಆಟೋಗಳು ಇರುತ್ತಾ?

ಆಟೋ ಸೇವೆ ಇರುತ್ತಾ ಅಥವಾ ಇರೋಲ್ವಾ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆಟೋ ರಿಕ್ಷಾ ಡ್ರೈವರ್ಸ್ ಅಸೋಸಿಯೇಶನ್ ಮತ್ತು ಆದರ್ಶ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೇಶನ್ ಶನಿವಾರ ತಮ್ಮನಿರ್ಧಾರವನ್ನು ಪ್ರಕಟಿಸಲಿವೆ. ಕರ್ನಾಟಕ ಲಾರಿ ಓನರ್ ಅಸೋಸಿಯೇಶನ್ ಬಂದ್ ಗೆ ಬಾಹ್ಯ ಬೆಂಬಲ ನೀಡಿದ್ದು, ನೇರ ಬೆಂಬಲ ಘೋಷಿಸಿಲ್ಲ.

ಶಾಲೆ-ಕಾಲೇಜಿಗೆ ರಜೆ?

ಶಾಲೆ-ಕಾಲೇಜಿಗೆ ರಜೆ?

ಶಾಲೆ ಕಾಲೇಜುಗಳು ಸೋಮವಾರ ರಜೆ ಘೋಷಿಸುತ್ತವೆಯೇ ಇಲ್ಲವೇ ಎಂಬುದು ಶನಿವಾರ ನಿರ್ಧಾರವಾಗಲಿದ್ದು, ಅಕಸ್ಮಾತ್ ಸೋಮವಾರ ಪರೀಕ್ಷೆಗಳೇನಾದರೂ ನಿಗದಿಯಾಗಿದ್ದರೆ ಅವುಗಳನ್ನು ಮುಂದೂಡುವುದು ಬಹುತೇಕ ಖಚಿತವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸುವ ಸಾಧ್ಯೆ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮೈತ್ರಿಕೂಟದ್ದೇ ಸರ್ಕಾರವಾಗಿರುವುದರಿಂದ ರಾಜ್ಯದಲ್ಲಿ ಬಂದ್ ಬಿಸಿ ತಟ್ಟುವುದು ಗ್ಯಾರಂಟಿ.

English summary
Congress and other opposition parties call Bharat Bandh on September 10 to protest against fuel price hike. Here are details which essential services are available or not available on Monday(Sep 10)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X