ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಳೆ ಕೂಡ ಬಸ್ ಸಂಚಾರ ಬಂದ್?: ಸಾರಿಗೆ ಸಚಿವರು ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಜನವರಿ 8: ಬಂದ್‌ನ ಪರಿಸ್ಥಿತಿ ನೋಡಿಕೊಂಡು ಮಧ್ಯಾಹ್ನ ಹಾಗೂ ಬುಧವಾರದ ಬಸ್ ಸಂಚಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಹೇಳಿದ್ದಾರೆ.

ಭಾರತ್ ಬಂದ್ ವೇಳೆ ಕಂಡ ಚಿತ್ರಣಗಳು

ಬಸ್‌ಗಳಿಲ್ಲದೆ ಜನರು ಪರದಾಡುತ್ತಿದ್ದಾರೆ. ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿರುವುದರಿಂದ ಬಸ್ ಓಡಾಟಕ್ಕೆ ಅನುವು ಮಾಡಿಕೊಡುವಂತೆ ಕಾರ್ಮಿಕ ಸಂಘಟನೆಗಳನ್ನು ಕೋರುತ್ತೇವೆ. ನೌಕರರು ಅದಕ್ಕೆ ಸ್ಪಂದಿಸಿದರೆ ಬಸ್ ಓಡಿಸಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದ್ದಾರೆ.

ಭಾರತ್ ಬಂದ್ LIVE: ರಾಜ್ಯದ ಹಲವೆಡೆ ತಟ್ಟದ ಬಂದ್ ಬಿಸಿಭಾರತ್ ಬಂದ್ LIVE: ರಾಜ್ಯದ ಹಲವೆಡೆ ತಟ್ಟದ ಬಂದ್ ಬಿಸಿ

ಇಡೀ ದೇಶದಲ್ಲಿನ ಕೈಗಾರಿಕೆಗಳು, ವಿವಿಧ ಇಲಾಖೆಗಳ ಕಾರ್ಮಿಕರು ಸೇರಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಬಸ್‌ಗಳ ಓಡಾಟಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು ಆಗುವುದಿಲ್ಲ. ಖಾಸಗಿ ವಾಹನ ಸೇವೆಗಳು ಬಂದ್ ಮಾಡುವುದಿಲ್ಲ ಎಂದಿದ್ದಾರೆ.

bharat bandh karnataka ksrtc bmtc transport minister dc thammanna

ಕೆಂಪೇಗೌಡ ಏರ್‌ಪೋರ್ಟ್‌ಗೆ ವಾಯುವಜ್ರ ಬಸ್‌ ಸೇವೆ ಅಬಾಧಿತ ಕೆಂಪೇಗೌಡ ಏರ್‌ಪೋರ್ಟ್‌ಗೆ ವಾಯುವಜ್ರ ಬಸ್‌ ಸೇವೆ ಅಬಾಧಿತ

ಬಂದ್ ವೇಳೆ ಕಲ್ಲುತೂರಾಟದಂತಹ ಘಟನೆಗಳು ಸಾಮಾನ್ಯ. ಮಧ್ಯಾಹ್ನದ ನಂತರ ಬಂದ್ ಸನ್ನಿವೇಶ ಹೇಗಿರುತ್ತದೆಯೋ ಅವಲೋಕಿಸುತ್ತೇವೆ.

ಬಂದ್ : ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್ ಸಂಚಾರ ಅನುಮಾನಬಂದ್ : ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್ ಸಂಚಾರ ಅನುಮಾನ

ನಾವು ನೌಕರರ ಪರವಾಗಿ ಇರುತ್ತೇವೆ. ಅವರ ಬೇಡಿಕೆಗಳಿಗೆ ಸ್ಪಂದಿಸುತ್ತೇವೆ. ಹೀಗಾಗಿ ಜನಸಾಮಾನ್ಯರಿಗೆ ತೊಂದರೆ ಕೊಡಬೇಡಿ ಎಂದು ಅವರಿಗೆ ಮನವಿ ಮಾಡುತ್ತೇವೆ. ಸಾರಿಗೆ ಇಲಾಖೆ ಬಸ್ ಸಂಚಾರ ಆರಂಭಿಸುವ ಎಲ್ಲ ಕ್ರಮಗಳಿಗೂ ಸಜ್ಜಾಗಿದೆ ಎಂದು ತಿಳಿಸಿದ್ದಾರೆ.

ಭಾರತ್ ಬಂದ್ ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ಭಾರತ್ ಬಂದ್ ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

ಈ ರೀತಿ ಬಂದ್ ಮಾಡುವುದರಿಂದ ನಷ್ಟವೇ ಹೆಚ್ಚು. ರಾಜಕೀಯ ಪಕ್ಷಗಳು, ಸಂಘಟನೆಗಳು ನಡೆಸುವ ಬಂದ್ ಅನ್ನು ನಿಷೇಧಿಸುವಂತೆ ಸೂಕ್ತ ನೀತಿ ತರುವ ಅಗತ್ಯವಿದೆ ಎಂದು ತಮ್ಮಣ್ಣ ಅಭಿಪ್ರಾಯಪಟ್ಟಿದ್ದಾರೆ.

English summary
Karnataka Transport Minister DC Thammanna said that, they will decide to start transportation according to the situation of bandh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X