ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಬಂದ್: ರಾಜ್ಯದೆಲ್ಲೆಡೆ ಬೆಳಿಗ್ಗೆಯೇ ಪ್ರತಿಭಟನೆಯ ಬಿಸಿ

|
Google Oneindia Kannada News

ಬೆಂಗಳೂರು: ಕೇಂಧ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ ಬಂದ್‌ಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಬೆಳ್ಳಂಬೆಳಗ್ಗೆಯೇ ರೈತರು ರಸ್ತೆಗಿಳಿದು ಪ್ರತಿಭಟಿಸುವ ಮೂಲಕ ಬಂದ್ ನ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ.

ಆದರೆ, ಬೆಂಗಳೂರಿನಲ್ಲಿ ಕೆ.ಆರ್. ಮಾರುಕಟ್ಟೆಯಲ್ಲಿ ವ್ಯವಹಾರ ಬೆಳಗ್ಗೆ ಎಂದಿನಂತೆಯೇ ನಡೆದಿತ್ತು. ಸುತ್ತಮುತ್ತಲ ಜಿಲ್ಲೆಗಳಿಂದ ತರಕಾರಿ ಮತ್ತು ಹೂ ಮಾರುಕಟ್ಟೆಗೆ ಬಂದಿದ್ದು, ನಗರದ ವರ್ತಕರು, ಜನಸಾಮಾನ್ಯರು ಮಾರುಕಟ್ಟೆಗೆ ತೆರಳಿ ಅಗತ್ಯ ವಸ್ತುಗಳನ್ನು ಖರೀದಿ ಮಾಡುವಲ್ಲಿ ಯಾವುದೇ ವತ್ಯಯ ಕಂಡುಬಂದಿಲ್ಲ. ಬಿಎಂಟಿಸಿ ಚಾಲಕರು ನೈತಿಕ ಬೆಂಬಲ ಮಾತ್ರ ವ್ಯಕ್ತಪಡಿಸಿದ್ದರಿಂದ ಬಸ್‌ಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ. ಮೆಟ್ರೋ, ಕ್ಯಾಬ್ ಗಳ ಸೇವೆ ಎಂದಿನಂತೆಯೇ ಇದ್ದರಿಂದ ಬೆಳಗಿನ ಜಾವ ಬಂದ್ ಬಿಸಿ ಅಷ್ಟಾಗಿ ಇನ್ನೂ ತಾಗಿಲ್ಲ. ಕೆ.ಆರ್. ಪುರ, ಯಶವಂತಪುರ ತರಕಾರಿ ಮಾರುಕಟ್ಟೆಗಳಲ್ಲಿ ಬೆಳಗಿನ ವ್ಯವಹಾರ ಎಂದಿನಂತಯೇ ನಡೆಯುತ್ತಿದೆ.

ದಾವಣಗೆರೆಯಲ್ಲಿ ಬೆಳಗ್ಗೆ 4 ಗಂಟೆಯಿಂದಲೇ ಪ್ರತಿಭಟನೆ ಆರಂಭವಾಗಿದೆ. ರೈತ ಮುಖಂಡರು ಮತ್ತು ಅಮ್ ಆದ್ಮಿ ಪಕ್ಷದ ಕಾರ್ಯಕರ್ತರು ಬಸ್ ನಿಲ್ದಾಣಕ್ಕೆ ತೆರಳಿ ಬಸ್ ಸಂಚಾರಕ್ಕೆ ಅಡ್ಡಿ ಉಂಟು ಮಾಡುವ ಪ್ರಯತ್ನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಕೆಲ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ರೈತ ಮುಖಂಡರು ನಗರದ ಆಟೋ ಚಾಲಕರು ಮತ್ತು ಬಸ್ ಚಾಲಕರಿಗೆ ಕೈಮುಗಿದು ಬಂದ್ ಗೆ ಬೆಂಬಲ ವ್ಯಕ್ತಪಡಿಸುವಂತೆ ಕೋರಿದ್ದಾರೆ. ಇದಕ್ಕೂ ಮುನ್ನ ಜಯದೇವ ವೃತ್ತದ ಬಳಿ ತರಕಾರಿ ರಸ್ತೆಗೆ ಸುರಿದು ಕೆಲ ಯುವ ರೈತರು ಪ್ರತಿಭಟನೆ ನಡೆಸಿದರು. ತಮ್ಮ ಬೆಳೆಗೆ ಸೂಕ್ತ ಬೆಲೆ ಒದಗಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಕೃಷಿ ಕಾಯ್ದೆಗಳಿಂದ ತಮ್ಮ ಜೀವನ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಲಿದೆ ಎಂದು ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

Bharat Bandh- Karnataka farmers protest

ಟೈರ್ ಗೆ ಬೆಂಕಿ:

ಬೆಳಗಾವಿ ಮತ್ತು ಚಾಮರಾಜನಗರದಲ್ಲಿ ರೈತರು ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆಯ ಬಿಸಿ ತೋರಿಸಲಾಯಿತು. ಈ ಸಂದರ್ಭದಲ್ಲಿ ಬೆಳಗ್ಗೆಯೇ ವಿವಿಧೆಡೆಗಳಿಂದ ಬರುವ ಬಸ್‌ಗಳನ್ನು ತಡೆಯುವಂತ ಪ್ರಯತ್ನ ಸಹ ಮಾಡಲಾಯಿತು. ಚಿಕ್ಕಬಳ್ಳಾಪುರದಲ್ಲಿ ರೈತರು ಬೆಳಿಗ್ಗೆಯೇ ಪಂಜಿನ ಮೆರವಣಿಗೆ ನಡೆಸಿದರು. ಬಾಗಲಕೋಟ ಜಿಲ್ಲೆಯ ಹುನಗುಂದದಲ್ಲಿ ಸೊಲ್ಲಾಪುರ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರು ಟೈರ್ ಗೆ ಬೆಂಕಿ ಹಚ್ಚಿ ಹೆದ್ದಾರಿ ತಡೆದರು. ಇದರಿಂದ ಕೆಲ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸ್ಥಗಿತಗೊಂಡವು. ಕಲಬುರ್ಗಿಯಲ್ಲಿಯೂ ಸಹ ರೈತರು ಬಸ್ ನಿಲ್ದಾಣಕ್ಕೆ ನುಗ್ಗಿ ಬಸ್‌ಗಳನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಕೆಲ ಕಾಲ ಗೊಂದಲ ಉಂಟಾಗಿ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.

Recommended Video

RCB ಉಳಿದರುವ ಪಂದ್ಯಗಳನ್ನು ಈ ರೀತಿ ಸೋಲುವ ಹಾಗಿಲ್ಲ | Oneindia Kannada

ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ನಗರದ ಕಾವೇರಿ ವೃತ್ತದಲ್ಲಿ ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರೈತ ವಿರೋಧಿ ಕಾಯ್ದೆಗಳನ್ನು ಕೂಡಲೇ ವಾಪಸ್ ಪಡೆಯುವಂತೆ ಒತ್ತಾಯ ಮಾಡಿದರು.

English summary
With several organisations extending their support to the Samyukt Kisan Morcha’s (SKM) call for a Bharat Bandh Today( September 27), to mark the first anniversary of the three ‘controversial’ farm laws getting Presidential assent, traffic in Bengaluru city And All Over Karnataka is likely to take a hit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X