ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ಮೂರು ದಿನ ಬೆಂಗಳೂರಿನಲ್ಲಿ ಭಾರಿ ಮಳೆಯ ಎಚ್ಚರಿಕೆ

|
Google Oneindia Kannada News

ಬೆಂಗಳೂರು, ಜೂನ್ 26: ರಾಜ್ಯಕ್ಕೆ ಮುಂಗಾರು ಪ್ರವೇಶವಾದ ಬಳಿಕ ಮೊದಲ ಬಾರಿಗೆ ಬೆಂಗಳೂರಲ್ಲಿ ಹೆಚ್ಚು ಮಳೆ ಸುರಿದಿದೆ.

ಗುರುವಾರ ಸಂಜೆ 4.45ಕ್ಕೆ ಆರಂಭವಾದ ಮಳೆ ಸುಮಾರು 6.30ರವರೆಗೂ ಸುರಿದಿದೆ. ಮತ್ತೆ ಕೊಂಚ ಬಿಡುವು ಪಡೆದು ಮತ್ತೆ ಆರಂಭವಾದ ಮಳೆ ರಾತ್ರಿ ಸುಮಾರು 1 ಗಂಟೆ ವೇಳೆಗೆ ಕಡಿಮೆಯಾಗಿತ್ತು.

ನಗರದ ದಕ್ಷಿಣ ಭಾಗದಲ್ಲಿ ಜೋರು ಮಳೆ ಸುರಿದ ಪರಿಣಾಮ ವೃಷಭಾವತಿ ಕಾಲುವೆಯಲ್ಲಿ ರಭಸದಿಂದ ನೀರು ಹರಿದಿತ್ತು. ಇದರಿಂದ ಮೈಲಸಂದ್ರ ಬಳಿ ಮೈಸೂರು ರಸ್ತೆಗೆ ಹೊಂದಿಕೊಂಡಂತೆ ನಿರ್ಮಿಸಿದ್ದ ತಡೆಗೋಡೆಯು 200-300 ಮೀಟರ್‌ನಷ್ಟು ಕುಸಿದಿದೆ.

ಜೂನ್ 26ರಿಂದ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆಜೂನ್ 26ರಿಂದ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ

ಕೆಂಗೇರಿಯಲ್ಲಿ 91 ಮಿ.ಮೀ., ರಾಜರಾಜೇಶ್ವರಿ ನಗರದಲ್ಲಿ 70 ಮಿ.ಮೀ.,ನಾಯಂಡಹಳ್ಳಿಯಲ್ಲಿ 76 ಮಿ.ಮೀ., ಮಾರುತಿ ಮಂದಿರದಲ್ಲಿ 61 ಮಿ.ಮೀ., ನಾಗರಬಾವಿಯಲ್ಲಿ 57 ಮಿ.ಮೀ., ಹಂಪಿನಗರದಲ್ಲಿ 49 ಮಿ.ಮೀ., ಜ್ಞಾನಭಾರತಿಯಲ್ಲಿ 45 ಮಿ.ಮೀ., ಚಾಮರಾಜಪೇಟೆಯಲ್ಲಿ 40 ಮಿ.ಮೀ., ಗಾಳಿ ಆಂಜನೇಯ ದೇವಸ್ಥಾನ ಬಳಿ 35 ಮಿ.ಮೀ., ಬಸವೇಶ್ವರ ನಗರದಲ್ಲಿ 30 ಮಿ.ಮೀ., ದಯಾನಂದನಗರದಲ್ಲಿ 29 ಮಿ.ಮೀ., ದಾಸನಪುರದಲ್ಲಿ 26 ಮಿ.ಮೀ. ಮಳೆಯಾಗಿದೆ.

ಪ್ರವಾಹದಂತೆ ಹರಿದ ಕಾಲುವೆ ನೀರು

ಪ್ರವಾಹದಂತೆ ಹರಿದ ಕಾಲುವೆ ನೀರು

ಕಾಲುವೆಯ ನೀರು ರಸ್ತೆಯಲ್ಲಿ ಪ್ರವಾಹದಂತೆ ಹರಿದಿದ್ದರಿಂದ ಹಲವು ಬಸ್‌, ಕಾರು, ದ್ವಿಚಕ್ರ ವಾಹನಗಳು ಮುಳುಗಡೆಯಾಗಿದ್ದವು. ಮಳೆಗೆ ಐದು ಕಡೆ ಮರಗಳು ಧರೆಗುರುಳಿ ಬಿದ್ದಿವೆ. ವಿದ್ಯಾಪೀಠ ಸರ್ಕಲ್‌, ಆರ್‌ಪಿಸಿ ಲೇಔಟ್‌ನ 7ನೇ ಕ್ರಾಸ್‌, ಕಾಡುಗೋಡಿ-ಚನ್ನಸಂದ್ರ ರಸ್ತೆ, ನಾಯಂಡಹಳ್ಳಿ, ಹಂಪಿನಗರದಲ್ಲಿ ಮರಗಳು ನೆಲಕ್ಕುರುಳಿವೆ. ಮಳೆಯ ಆರ್ಭಟಕ್ಕೆ ಹಲವೆಡೆ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು.

ರಾಜ್ಯದಲ್ಲಿ ಮಳೆ

ರಾಜ್ಯದಲ್ಲಿ ಮಳೆ

ಮೋಡ ಕವಿದ ವಾತಾವರಣ ಇರಲಿದೆ. ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮಳೆಯಾಗುವ ಸಾಧ್ಯತೆ ಇದೆ. ಇಂದು ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ತುಮಕೂರು, ರಾಮನಗರ, ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗಲಿದೆ. ಆದರೆ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಮುಂಗಾರು ದುರ್ಬಲವಾಗಿದೆ.

ಮಂಡ್ಯದಲ್ಲಿ ವಾತಾವರಣ ಹೇಗಿದೆ?

ಮಂಡ್ಯದಲ್ಲಿ ವಾತಾವರಣ ಹೇಗಿದೆ?

ಮಂಡ್ಯದಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹಾಗೆಯೇ ಬಳ್ಳಾರಿಯಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ

ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ

ಬೆಂಗಳೂರು: 28-20, ಮಂಗಳೂರು: 29-24,ಶಿವಮೊಗ್ಗ: 31-22, ಬೆಳಗಾವಿ: 29-22, ಮಂಡ್ಯ: 31-21, ರಾಮನಗರ: 31-21, ಮಡಿಕೇರಿ: 24-17, ಹಾಸನ: 24-19, ಚಾಮರಾಜನಗರ: 30-21, ಚಿಕ್ಕಬಳ್ಳಾಪುರ: 30-21, ಕೋಲಾರ: 29-21, ತುಮಕೂರು: 30-21, ಉಡುಪಿ: 30-21, ಕಾರವಾರ: 29-26 , ಚಿಕ್ಕಮಗಳೂರು: 27-19, ದಾವಣಗೆರೆ: 32-22,ಚಿತ್ರದುರ್ಗ: 31-21, ಹಾವೇರಿ: 32-22, ಬಳ್ಳಾರಿ: 34-24 ಇರಲಿದೆ.ಧಾರವಾಡ: 31-22,ಗದಗ: 32-22, ಕೊಪ್ಪಳ: 33-23,ರಾಯಚೂರು: 34-24,ಯಾದಗಿರಿ: 34-24, ವಿಜಯಪುರ: 28-21,ಬೀದರ್: 32-23, ಕಲಬುರಗಿ: 34-24, ಬಾಗಲಕೋಟೆ: 33-23 ಇದೆ.

English summary
Meteorological Department Predicts that Next 3 Days Heavy Rainfall will occur In Bengaluru, Monsoon Weak over Coastal Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X