ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

BTS2020: ವರ್ಚುಯಲ್ ವೇದಿಕೆಯಲ್ಲಿ ಬೆಳಗಿದ ಬೆಂಗಳೂರು ಟೆಕ್‌ ಸಮಿಟ್!

|
Google Oneindia Kannada News

ಬೆಂಗಳೂರು, ನ. 21: ಮೂರು ದಿನಗಳ ಜಾಗತಿಕ ಮಟ್ಟದ ಬೆಂಗಳೂರು ಟೆಕ್‌ ಸಮಿಟ್-2020 ಯಶಸ್ವಿಯಾಗಿದ್ದು, ಇದೇ ಮೊದಲ ಬಾರಿಗೆ ವರ್ಚುಯಲ್ ವೇದಿಕೆಯ ಮೂಲಕ ನಡೆದ ಈ ಪ್ರತಿಷ್ಠಿತ ಶೃಂಗವು 2.5 ಕೋಟಿಗೂ ಹೆಚ್ಚು ದೇಶ-ವಿದೇಶಿಯರನ್ನು ತಲುಪಿದೆ.

ಕೋವಿಡ್ ಸಂಕಷ್ಟ ಕಾಲದಲ್ಲಿ ನಡೆದ ಈ ಶೃಂಗವು ಸಫಲವಾಗಿದೆ. ಈವರೆಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ಮೂಲಕ ಕರ್ನಾಟಕವನ್ನು ಗುರುತಿಸುತ್ತಿದ್ದ ಜಗತ್ತಿನ ಪ್ರಮುಖ ದೇಶಗಳು, ಈಗ ತಂತ್ರಜ್ಞಾನದ ಮೂಲಕವೂ ರಾಜ್ಯವನ್ನು ಅಚ್ಚರಿಯಿಂದ ನೋಡುತ್ತಿವೆ ಎಂದು ಐಟಿ ಬಿಟಿ ಸಚಿವ, ಡಿಸಿಎಂ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ಟೆಕ್‌ ಸಮಿಟ್‌-2020 ಸಮಾರೋಪದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂಕಷ್ಟದ ಮಧ್ಯೆ ಈವರೆಗೆ ಜಗತ್ತಿನಲ್ಲೇ ನಡೆದ ಅತಿದೊಡ್ಡ ತಂತ್ರಜ್ಞಾನ ಶೃಂಗ ಇದಾಗಿದೆ. ಮಾರಕ ವೈರಸ್‌ ನಡುವೆಯೂ ಯಶಸ್ವಿಯಾಗಿ ನಡೆಸಿದ ರಾಜ್ಯದ ಕಾರ್ಯಕ್ಷಮತೆಯ ಬಗ್ಗೆ ಆವಿಷ್ಕಾರ ಮೈತ್ರಿಕೂಟದ (ಜಿಐಎ) 25 ದೇಶಗಳು ಅಚ್ಚರಿ ಮತ್ತು ಮೆಚ್ಚುಗೆ ವ್ಯಕ್ತಪಡಿಸಿವೆ ಎಂದು ಡಾ. ಅಶ್ವಥ್ ನಾರಾಯಣ್ ಹೇಳಿದ್ದಾರೆ.

ಮೂರು ದಿನಗಳ ಕಾಲ ನಡೆದ ಬೆಂಗಳೂರು ತಂತ್ರಜ್ಞಾನ ಮೇಳ-2020ರ ಸಂಪೂರ್ಣ ಮಾಹಿತಿ ಇಲ್ಲಿದೆ.

2.5 ಕೋಟಿಗೂ ಹೆಚ್ಚು ಜನ

2.5 ಕೋಟಿಗೂ ಹೆಚ್ಚು ಜನ

ಭೌತಿಕವಾಗಿ (ಆಫ್‌ಲೈನ್)‌ ಹೊರತಾಗಿ ಇದೇ ಮೊದಲ ಬಾರಿಗೆ ಸಂಪೂರ್ಣ ಆನ್‌ಲೈನ್‌ ಮೂಲಕವೇ ನಡೆದ ಈ ಶೃಂಗವು ತಂತ್ರಜ್ಞಾನದ ಮೂಲಕ ಎರಡೂವರೆ ಕೋಟಿಗೂ ಹೆಚ್ಚು ಜನರನ್ನು ತಲುಪಿದೆ. ಎಲೆಕ್ಟ್ರಾನಿಕ್‌ ಸುದ್ದಿ ಮಾಧ್ಯಮ, ಸಾಮಾಜಿಕ ಜಾಲತಾಣಗಳು, ಡಿಜಿಟಲ್‌ ಮಾಧ್ಯಮ, ಯುಟ್ಯೂಬ್, ಬಿಟಿಎಸ್ ವರ್ಚುವಲ್‌ ವೇದಿಕೆ, ಬಿಟಿಎಸ್ ಯುಟ್ಯೂಬ್ ಚಾನೆಲ್‌, ಫೇಸ್‌ಬುಕ್‌ ಪೇಜ್‌ಗಳು, ವೆಬ್‌ ಪೇಜ್‌ಗಳು ಸೇರಿದಂತೆ ಹೊಸ ತಲೆಮಾರಿನ ಎಲ್ಲ ತಂತ್ರಜ್ಞಾನ ಕಂಟೆಂಟ್ ವಾಹಕಗಳ ಮೂಲಕ ಜನಸಮೂಹವನ್ನು ಟೆಕ್‌ ಸಮಿಟ್ ತಲುಪಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ದೇಶ ವಿದೇಶಗಳ ಪ್ರತಿನಿಧಿಗಳು

ದೇಶ ವಿದೇಶಗಳ ಪ್ರತಿನಿಧಿಗಳು

ಬಿಟಿಎಸ್‌- 2020ಯಲ್ಲಿ ನಿರೀಕ್ಷೆಗೂ ಮೀರಿ ಪ್ರತಿನಿಧಿಗಳು ಭಾಗಿಯಾಗಿದ್ದರು. ಆರಂಭದಲ್ಲಿ 4,000 ಪ್ರತಿನಿಧಿಗಳು ಭಾಗವಹಿಸಬಹುದು ಎಂದು ಅಂದಾಜು ಮಾಡಲಾಗಿತ್ತು. ಆದರೆ, ಅಂದಾಜಿಗಿಂತ ದುಪ್ಪಟ್ಟು ಅಂದರೆ; 8,507 ಪ್ರತಿನಿಧಿಗಳು ನೋಂದಾಯಿಸಿಕೊಂಡು ಭಾಗಿಯಾಗಿದ್ದು ಈ ಶೃಂಗದ ದೊಡ್ಡ ದಾಖಲೆ. ಇನ್ನು ಭಾಷಣ, ಸಮ್ಮೇಳನ, ಪ್ರಶಸ್ತಿಗಳು, ರಸಪ್ರಶ್ನೆ ಸ್ಪರ್ಧೆ ವಿಭಾಗಗಳಲ್ಲಿ 19,381 ಪ್ರತಿನಿಧಿಗಳು ಪಾಲ್ಗೊಂಡಿದ್ದರು. 12 ಮುಖ್ಯ ಅಧಿವೇಶನಗಳು, 93 ಸೆಷನ್‌ಗಳು, 357 ಭಾಷಣಕಾರರು ಭಾಗವಹಿಸಿದ್ದರು.

ಇತರ ದೇಶಗಳಿಂದ ಉತ್ತಮ ಪ್ರತಿಕ್ರಿಯೆ

ಇತರ ದೇಶಗಳಿಂದ ಉತ್ತಮ ಪ್ರತಿಕ್ರಿಯೆ

ಜಾಗತಿಕ ಆವಿಷ್ಕಾರ ಮೈತ್ರಿಕೂಟ (ಜಿಐಎ)ದ 25 ದೇಶಗಳಿಂದ 731 ಪ್ರತಿನಿಧಿಗಳು ಭಾಗಿಯಾಗಿದ್ದರು. ಹತ್ತು ಸಚಿವ ಮಟ್ಟದ ನಿಯೋಗಗಳು ಶೃಂಗದಲ್ಲಿ ಭಾಗಿಯಾಗಿದ್ದವು. ಕಳೆದ ವರ್ಷದ ಆಫ್‌ಲೈನ್ ಶೃಂಗದಲ್ಲಿ 21 ದೇಶಗಳು, 253 ಪ್ರತಿನಿಧಿಗಳು, ಕೇವಲ 44 ಸೆಷನ್‌ಗಳು, 262 ಸ್ಪೀಕರ್‌ಗಳು ಮಾತ್ರ ಭಾಗಿಯಾಗಿದ್ದರು. 4 ಮುಖ್ಯ ಅಧಿವೇಶನಗಳಷ್ಟೇ ನಡೆದಿದ್ದವು.

ಬಿ2ಬಿ ಸಭೆಗಳ ದಾಖಲೆ

ಬಿ2ಬಿ ಸಭೆಗಳ ದಾಖಲೆ

ಪ್ರಸಕ್ತ ಶೃಂಗ ಗುರುತಿಸಿಕೊಳ್ಳಲಿದೆ. ವ್ಯವಹಾರಿಕ ಸಭೆಗಳು ದಾಖಲೆ ಪ್ರಮಾಣದಲ್ಲಿ ನಡೆದಿದ್ದು, ಅಂತಹ ಒಟ್ಟು 312 ಸಭೆಗಳು ಜರುಗಿವೆ. ಇಂಥ ಇನ್ನೂ ಅನೇಕ ಸಭೆಗಳು, ಮಾತುಕತೆಗಳು ನಡೆದಿದ್ದು, ಈ ತಿಂಗಳ ಕೊನೆಯವರೆಗೂ ಮುಂದುವರಿಯಲಿವೆ.

ದಾಖಲೆಯ ಪ್ರದರ್ಶನ

ದಾಖಲೆಯ ಪ್ರದರ್ಶನ

ವರ್ಚುಯಲ್ ಆಗಿ ನಡೆದರೂ ಈ ಶೃಂಗದಲ್ಲಿ ಪ್ರದರ್ಶನ ಮಳಿಗೆಗಳ ಸ್ಥಾಪನೆಯಲ್ಲೂ ದಾಖಲೆ ಆಗಿದೆ. ಕಳೆದ ವರ್ಷ ಭೌತಿಕವಾಗಿ ನಡೆದ ಶೃಂಗಕ್ಕಿಂತ ಈ ಬಾರಿ ವರ್ಚುಯಲ್ ಶೃಂಗದಲ್ಲಿ 248 ಪ್ರದರ್ಶನಕಾರರು ಪಾಲ್ಗೊಂಡಿದ್ದರು. ಆಸ್ಟ್ರೇಲಿಯಾ, ಕೆನಡಾ, ಯುಎಸ್ಎ, ಬ್ರಿಟನ್‌, ಜರ್ಮನಿ ಮುಂತಾದ ದೇಶಗಳ ಕಂಪನಿಗಳು ಪ್ರದರ್ಶನದಲ್ಲಿ ಭಾಗಿಯಾಗಿದ್ದವು. ಇದರಲ್ಲಿ ಐಟಿ, ಎಲೆಕ್ಟ್ರಾನಿಕ್ಸ್, ಹೆಲ್ತ್‌ಕೇರ್, ಮೆಡಿಕಲ್‌, ಅಗ್ರಿಟೆಕ್, ನೆಟ್‌ವರ್ಕ್‌ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರದರ್ಶನಗಳಿದ್ದವು. ಜತೆಗೆ, 146 ಸ್ಟಾರ್ಟಪ್‌ಗಳು ಕೂಡ ಮಳಿಗೆಗಳನ್ನು ತೆರೆದಿದ್ದವು. ಸುಮಾರು 9,870 ಜನ ಈ ಮಳಿಗೆಗಳಿಗೆ ಭೇಟಿ ನೀಡಿದ್ದಾರೆ.

ಒಟ್ಟು ಎಂಟು ಒಪ್ಪಂದಗಳು

ಒಟ್ಟು ಎಂಟು ಒಪ್ಪಂದಗಳು

ಟೆಕ್‌ ಸಮಿಟ್‌ನಲ್ಲಿ ಈಗಾಗಲೇ ಎಂಟು ಒಪ್ಪಂದಗಳನ್ನು ಜಿಐಎ ದೇಶಗಳ ಜತೆ ಮಾಡಿಕೊಳ್ಳಲಾಗಿದ್ದು, ಅಂಕಿತವೂ ಬಿದ್ದಿದೆ. ಇನ್ನೂ ನಾಲ್ಕು ಒಪ್ಪಂದಗಳು ಅಂತಿಮ ಹಂತದಲ್ಲಿದ್ದು, ಅಂಕಿತಕ್ಕೆ ಬಾಕಿ ಇವೆ. ಕಳೆದ ವರ್ಷ ಕೇವಲ ಒಂದೇ ಒಂದು ಒಪ್ಪಂದ ಆಗಿತ್ತು. ಇವಿಷ್ಟೂ ಒಪ್ಪಂದಗಳ ಕಾರಣದಿಂದ ಕರ್ನಾಟಕಕ್ಕೆ ದೊಡ್ಡ ಬಲ ಬಂದಂತೆ ಆಗಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಇವುಗಳ ಫಲಶ್ರುತಿ ಗೋಚರವಾಗಲಿದೆ. ಇದುವರೆಗೂ ಐಟಿ-ಬಿಟಿ ಹಬ್ ಆಗಿದ್ದ ಕರ್ನಾಟಕ ಇನ್ನು ಮುಂದೆ ಟೆಕ್ನಾಲಜಿ ಹಬ್ ಆಗಿ ಜಾಗತಿಕವಾಗಿ ಗುರುತಿಸಿಕೊಳ್ಳಲಿದೆ.

Recommended Video

Covid Vaccine ಹಂಚುವಿಕೆ ಬಗ್ಗೆ ಮುಖ್ಯಮಂತ್ರಿಗಳ ಸಭೆ ಕರೆದ Modi | Oneindia Kannada
ಮುಂದಿನ ಬಿಟಿಎಸ್‌ಗೆ ದಿನ ನಿಗದಿ

ಮುಂದಿನ ಬಿಟಿಎಸ್‌ಗೆ ದಿನ ನಿಗದಿ

ಇದೇ ವೇಳೆ ಡಿಸಿಎಂ ಅವರು, ಮುಂದಿನ ವರ್ಷದ ಬೆಂಗಳೂರು ಟೆಕ್‌ ಸಮಿಟ್‌ಗೆ ದಿನಾಂಕವನ್ನೂ ಪ್ರಕಟಿಸಿದರು. 2021ರ ನವೆಂಬರ್ 18, 19 ಮತ್ತು 20ರಂದು ಶೃಂಗವು ನಡೆಯಲಿದ್ದು, ಅದು 2019ರ ಆಫ್‌ಲೈನ್‌ ಹಾಗೂ 2020ರ ಆನ್‌ಲೈನ್‌ ಕಾಂಬಿನೇಷನ್‌ನಲ್ಲಿ ಅಂದರೆ ಹೈಬ್ರಿಡ್ ಆಗಿ‌ ನಡೆಯಲಿದೆ. ಆಗ ಪ್ರಸಕ್ತ ಶೃಂಗ ದಾಖಲೆಗಳನ್ನು ಮೀರುವಂತೆ ಅದನ್ನು ಯಶಸ್ವಿಗೊಳಿಸಲಾಗುವುದು. ಅದಕ್ಕೆ ಈಗಿನಿಂದಲೇ ತಯಾರಿ ಮಾಡಲಾಗುವುದು ಎಂದು ಡಾ. ಅಶ್ವಥ್ ನಾರಾಯಣ್ ಅವರು ಹೇಳಿದ್ದಾರೆ.

ಈ ಶೃಂಗದ ಫಲವು ರಾಜ್ಯದ ಕಟ್ಟಕಡೆಯ ಪ್ರಜೆಗೂ ಖಚಿತವಾಗಿ ತಲುಪಲಿದೆ. ಮುಖ್ಯವಾಗಿ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಕೃತಕ ಬುದ್ಧಿಮತ್ತೆ ಟೆಕ್ನಾಲಜಿ ಮೂಲಕ ಕೃಷಿಗೆ ಬಹಳ ಪ್ರಯೋಜನವಾಗಲಿದೆ. ಬಯೋ ಕ್ಷೇತ್ರದಲ್ಲಿ 300 ಶತಕೋಟಿ ಡಾಲರ್‌ ಆರ್ಥಿಕತೆ ಸಾಧಿಸುವ ಗುರಿಗೆ ಇದು ಪೂರಕವಾಗಿದೆ ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ್ ಮಾಹಿತಿ ನೀಡಿದರು.

English summary
Bengaluru Tech Summit Highlights in kannada: Due to the Covid-19 pandemic, this year BTS 2020 is streamed online. here are the highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X