ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷ್ಮೀ ಪುತ್ರ ಡಿ.ಕೆ.ಸುರೇಶ್ ಅವರ ಒಟ್ಟು ಆಸ್ತಿ ಎಷ್ಟು?

|
Google Oneindia Kannada News

Recommended Video

Lok Sabha Elections 2019: ಬೆಂಗಳೂರು ಗ್ರಾಮಾಂತರದ ಮೈತ್ರಿ ಅಭ್ಯರ್ಥಿ ಡಿ ಕೆ ಸುರೇಶ್ ಒಟ್ಟಾರೆ ಆಸ್ತಿ ಎಷ್ಟು?

ಬೆಂಗಳೂರು, ಮಾರ್ಚ್ 28: ಅಕ್ರಮ ಹಣ ಹೂಡಿಕೆ, ಆದಾಯ ತೆರಿಗೆ ವಂಚನೆಗಳ ಆರೋಪ ಕೊರಳಿಗೆ ಸುತ್ತಿಸಿಕೊಂಡಿರುವ ಸಚಿವ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಡಿ.ಕೆ.ಸುರೇಶ್ ಅವರು ನಾಮಪತ್ರವನ್ನು ಸಲ್ಲಿಸಿದ್ದು, ಆಸ್ತಿ ವಿವರವನ್ನು ಸಹ ಸಲ್ಲಿಸಿದ್ದಾರೆ. ಮೊದಲ ಹಂತದ ಚುನಾವಣೆಯಲ್ಲಿ ಈ ವರೆಗೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಡಿ.ಕೆ.ಸುರೇಶ್ ಅವರ ಆಸ್ತಿಯೇ ಹೆಚ್ಚು ಇದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಡಿ.ಕೆ.ಸುರೇಶ್ ಅವರು ಚುನಾವಣಾ ಆಯೋಗಕ್ಕೆ ನೀಡಿರುವ ಮಾಹಿತಿಯಂತೆ ಅವರ ಮೇಲೆ ಐದು ಕ್ರಿಮಿನಲ್ ಪ್ರಕರಣಗಳಿವೆ. ಎಲ್ಲವೂ ಅರಣ್ಯ ಇಲಾಖೆಗೆ ಸಂಬಂಧಿಸಿದಂತವು.

ಡಿ.ಕೆ.ಸುರೇಶ್ ಅವರಿಗೆ ಈ ಆರ್ಥಿಕ ವರ್ಷದಲ್ಲಿ 1.87 ಕೋಟಿ ಆದಾಯ ಬಂದಿದೆ. ಅವರ ಬಳಿ 22.35 ಲಕ್ಷ ನಗದು ಹಣವಿದೆ. ವಿವಿಧ ಬ್ಯಾಂಕ್ ಖಾತೆಗಳಲ್ಲಿ 3.23 ಕೋಟಿ ಹಣ ಇದೆ. ಸುರೇಶ್ ಅವರು ವಿವಿಧ ಷೇರು, ಬಾಂಡುಗಳಲ್ಲಿ ಹೂಡಿಕೆ ಮಾಡಿರುವ ಒಟ್ಟು ಮೊತ್ತ 2.55 ಕೋಟಿ ರೂಪಾಯಿಗಳು. ಸುರೇಶ್ ಅವರು ಜೀವ ವಿಮೆಯಲ್ಲಿ 7.77 ಲಕ್ಷ ಹೂಡಿಕೆ ಮಾಡಿದ್ದಾರೆ.

ಅಣ್ಣ-ಅಣ್ಣನ ಮಗಳಿಗೂ ಸಾಲ ನೀಡಿದ್ದಾರೆ

ಅಣ್ಣ-ಅಣ್ಣನ ಮಗಳಿಗೂ ಸಾಲ ನೀಡಿದ್ದಾರೆ

ಡಿ.ಕೆ.ಸುರೇಶ್ ಅವರು ಸಾಲವಾಗಿ ಹಾಗೂ ಮುಂಗಡವಾಗಿ 26.67 ಕೋಟಿ ಹಣವನ್ನು ನೀಡಿದ್ದಾರೆ. ಅಣ್ಣ ಡಿ.ಕೆ.ಶಿವಕುಮಾರ್ ಗೆ 1.03 ಕೋಟಿ ನೀಡಿದ್ದಾರೆ, ಡಿ.ಕೆ.ಶಿವಕುಮಾರ್ ಅವರ ಮಗಳು ಐಶ್ವರ್ಯಗೆ 6.87 ಕೋಟಿ ಸಾಲ ನೀಡಿದ್ದಾರೆ. ಇದರಲ್ಲಿ ದೆಹಲಿಯಲ್ಲಿ ಐಟಿ ಇಲಾಖೆಯಿಂದ ವಶಪಡಿಸಿಕೊಳ್ಳಲಾಗಿರುವ 26.20 ಲಕ್ಷ ಹಣವೂ ಸೇರಿದೆ. ಕ್ವಾರಿಗಳ ಲೀಸ್‌ಗೆ ನೀಡಿರುವ ಹಣ 20.93 ಲಕ್ಷ ಇದೆ.

ಸುರೇಶ್ ಅವರ ಹೆಸರಲ್ಲಿ ಎಷ್ಟು ಕಾರಿದೆ?

ಸುರೇಶ್ ಅವರ ಹೆಸರಲ್ಲಿ ಎಷ್ಟು ಕಾರಿದೆ?

ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿರುವ ಡಿ.ಕೆ.ಸುರೇಶ್ ಅವರ ಹೆಸರಿನಲ್ಲಿ ಒಂದೂ ಕಾರು ಅಥವಾ ಇನ್ನಾವುದೇ ಮೋಟಾರು ವಾಹನ ಇಲ್ಲ. ಅವರ ಪುತ್ರ ಕೆಶಿನ್ ಸುರೇಶ್ ಅವರ ಹೆಸರಿನಲ್ಲಿ 14.80 ಲಕ್ಷ ಮೌಲ್ಯದ ಒಂದು ಕಾರಿದೆ. ಸುರೇಶ್ ಅವರ ಬಳಿ 23.45 ಲಕ್ಷ ಮೌಲ್ಯದ ಚಿನ್ನಾಭರಣ ಇದೆ. ಅವರ ಪುತ್ರನ ಬಳಿ 8.30 ಲಕ್ಷ ಚಿನ್ನದಾಭರಣ ಇದೆ. ಪೀಠೋಪಕರಣ ಮುಂತಾದವುಗಳ ಮೌಲ್ಯ 6.87 ಲಕ್ಷ ಇದೆ.

ಭಾರಿ ಮೌಲ್ಯದ ಕೃಷಿಯೇತರ ಜಮೀನು ಸುರೇಶ್ ಅವರಿಗಿದೆ

ಭಾರಿ ಮೌಲ್ಯದ ಕೃಷಿಯೇತರ ಜಮೀನು ಸುರೇಶ್ ಅವರಿಗಿದೆ

ಸುರೇಶ್ ಅವರ ಬಳಿ 76.15 ಎಕರೆ ಕೃಷಿ ಭೂಮಿ ಇದೆ, ಇವುಗಳ ಈಗಿನ ಮಾರುಕಟ್ಟೆ ಮೌಲ್ಯ 4.19 ಕೋಟಿ ಇದೆ. ಸುರೇಶ್ ಅವರ ಹೆಸರಲ್ಲಿರುವ ಕೃಷಿಯೇತರ ಆಸ್ತಿಯ ಇಂದಿನ ಮಾರುಕಟ್ಟೆ ಮೌಲ್ಯ 248.23 ಕೋಟಿ ಆಗುತ್ತದೆ. ಸುರೇಶ್ ಅವರ ಬಳಿ 35.23 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡಗಳು ಇವೆ. 16.05 ಕೋಟಿ ಮೌಲ್ಯದ ವಸತಿ ಕಟ್ಟಡಗಳು ಇವೆ. ಇದನ್ನು ಹೊರತುಪಡಿಸಿ ಭಾಗಿದಾರಿಕೆಯಲ್ಲಿ 1.88 ಕೋಟಿ ಮೌಲ್ಯದ ಕಟ್ಟಡಗಳು ಇವೆ. ಡಿ.ಕೆ.ಸುರೇಶ್ ಅವರಿಗೆ 35.58 ಕೋಟಿ ಸಾಲವಿದೆ. ಇದರ ಜೊತೆಗೆ 16.35 ಕೋಟಿಯನ್ನು ಮುಂಗಡವಾಗಿ ಪಡೆದಿದ್ದಾರೆ.

ರಾಜ್ಯದ ಅತ್ಯಂತ ಶ್ರೀಮಂತ ಚುನಾವಣಾ ಅಭ್ಯರ್ಥಿ

ರಾಜ್ಯದ ಅತ್ಯಂತ ಶ್ರೀಮಂತ ಚುನಾವಣಾ ಅಭ್ಯರ್ಥಿ

ಡಿ.ಕೆ.ಸುರೇಶ್ ಅವರ ಚರಾಸ್ತಿ 33.06 ಕೋಟಿ ಮೌಲ್ಯದ್ದಾಗಿದೆ. ಅವರ ಸ್ಥಿರಾಸ್ತಿ ಬರೋಬ್ಬರಿ 305.59 ಕೋಟಿ ಇದೆ. ಅವರ ಮೇಲೆ ಇರುವ ಸಾಲ ಹಾಗೂ ಪಡೆದಿರುವ ಮುಂಗಡ 51.93 ಕೋಟಿ ಇದೆ. ಅವರ ಈ ವರ್ಷದ ಆದಾಯವನ್ನು ಸೇರಿಸಿ ಸುರೇಶ್ ಅವರ ಒಟ್ಟು ಆಸ್ತಿಯ ಮೌಲ್ಯ 342.65 ಕೋಟಿ ಆಗುತ್ತದೆ. ಅವರು ಮೇಲಿರುವ 51.93 ಕೋಟಿ ಸಾಲವನ್ನು ಒಟ್ಟು ಆಸ್ತಿಗೆ ಸೇರಿಸಲಾಗಿಲ್ಲ. ಬಹುಷಃ ಕರ್ನಾಟಕದ ಅತಿ ಶ್ರೀಮಂತ ಲೋಕಸಭೆ ಚುನಾವಣೆ ಅಭ್ಯರ್ಥಿ ಸುರೇಶ್ ಅವರೇ ಆಗಿದ್ದಾರೆ.

English summary
Bengaluru rural constituency congress candidate DK Suresh is the richest candidate of Karnataka. Here is the detail of his total assets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X