ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಬಿಜೆಪಿಗೆ ಮತ್ತೆ 'ಸಾಮ್ರಾಟ್' ಆಗಿ ಹೊರಹೊಮ್ಮಿದ ಅಶೋಕ್!

|
Google Oneindia Kannada News

Recommended Video

Karnataka Elections 2018 : ಸಾಮ್ರಾಟನಾಗಿ ಮತ್ತೆ ಹೊರ ಬಂದ ಬಿಜೆಪಿ ನಾಯಕ ಆರ್ ಅಶೋಕ್ | Oneindia Kannada

ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಪ್ರಾಭ್ಯಲ್ಯವನ್ನು ಹೊಂದಿರುವ ಬಿಜೆಪಿಯ ಅತ್ಯುತ್ತಮ ಸಂಘಟನಕಾರ ಆರ್ ಅಶೋಕ್, ಪರಿವರ್ತನಾ ರ‍್ಯಾಲಿಯ ಉದ್ಘಾಟನಾ ಸಮಾವೇಶಕ್ಕೆ ಜನ ಸೇರಿಸುವಲ್ಲಿ ವಿಫಲರಾಗಿ ಪಕ್ಷದ ಮುಖಂಡರ ಎದುರು ಮುಜುಗರ ಎದುರಿಸ ಬೇಕಾಗಿಬಂದಿತ್ತು.

ನಿಮ್ಮ ಕನಸಿನ ಕರ್ನಾಟಕ ಸಚಿವ ಸಂಪುಟ ರಚಿಸಿನಿಮ್ಮ ಕನಸಿನ ಕರ್ನಾಟಕ ಸಚಿವ ಸಂಪುಟ ರಚಿಸಿ

ಇದಾದ ನಂತರ ಪರಿವರ್ತನಾ ರ‍್ಯಾಲಿ ಬೆಂಗಳೂರು ವ್ಯಾಪ್ತಿಗೆ ಬಂದಿದ್ದಾಗ ಉತ್ತಮವಾಗಿ ಕಾರ್ಯಕ್ರಮ ಆಯೋಜಿಸಿದ್ದ ಅಶೋಕ್, ಬೆಂಗಳೂರು ರಕ್ಷಿಸಿ ಪಾದಯಾತ್ರೆಯ ಮೂಲಕ, ಪಕ್ಷದೊಳಗೆ 'ಸಾಮ್ರಾಟ್' ಎಂದು ಏನು ಕರೆಸಿಕೊಳ್ಳುತ್ತಿದ್ದಾರೋ, ಅದೇ ರೀತಿ ತನ್ನ ಸಂಘಟನಾ ಶಕ್ತಿಯನ್ನು ಪ್ರದರ್ಶಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ರಾಜಧಾನಿ ವ್ಯಾಪ್ತಿಯಲ್ಲೇ ಸಾಗುವ 'ಬೆಂಗಳೂರು ರಕ್ಷಿಸಿ' ಎನ್ನುವ ಅಪರೂಪದ ಪಾದಯಾತ್ರೆಯನ್ನು ನಿರೀಕ್ಷಿತ ಮಟ್ಟಕ್ಕಿಂತಲೂ ಹೆಚ್ಚಾಗಿ ಯಶಸ್ವಿಗೊಳಿಸಿ, ಚುನಾವಣಾ ಸಮಯದಲ್ಲಿ ಮತ್ತೆ ಅಶೋಕ್ ತನ್ನ ಖದರ್ ತೋರಿಸಿದ್ದಾರೆ.

ಬಿಜೆಪಿಯ ಆರ್.ಅಶೋಕ್ ಮೇಲೆ ಸರ್ಕಾರದಿಂದ ಸಿಐಡಿ ಅಸ್ತ್ರಬಿಜೆಪಿಯ ಆರ್.ಅಶೋಕ್ ಮೇಲೆ ಸರ್ಕಾರದಿಂದ ಸಿಐಡಿ ಅಸ್ತ್ರ

28 ಅಸೆಂಬ್ಲಿ ಕ್ಷೇತ್ರವನ್ನು ಹೊಂದಿರುವ ಬೆಂಗಳೂರು ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ನಿರ್ಣಾಯಕ ಎಂದು ಅರಿತಿರುವ ಅಶೋಕ್, ರೈಟ್ ಟೈಂನಲ್ಲಿ ಪಾದಯಾತ್ರೆಯನ್ನು ಯಶಸ್ವಿಯಾಗಿ ಶನಿವಾರ (ಮಾ 17) ನಗರದ ವಿಜಯನಗರ/ಗೋವಿಂದರಾಜ ನಗರ ವ್ಯಾಪ್ತಿಯನ್ನು ಮುಗಿಸಿದ್ದಾರೆ.

ಅಶೋಕ್ ಖೇಣಿ ಕಾಂಗ್ರೆಸ್‌ಗೆ : ಆರ್.ಅಶೋಕ್ ಹೇಳಿದ್ದೇನು?ಅಶೋಕ್ ಖೇಣಿ ಕಾಂಗ್ರೆಸ್‌ಗೆ : ಆರ್.ಅಶೋಕ್ ಹೇಳಿದ್ದೇನು?

ನಗರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಹಾದುಹೋಗುವ 'ಬೆಂಗಳೂರು ರಕ್ಷಿಸಿ' ಪಾದಯಾತ್ರೆ ಗವಿಪುರಂನಲ್ಲಿರುವ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಆರಂಭವಾದಾಗ, ಯಡಿಯೂರಪ್ಪನವರಾಗಲಿ ಅಥವಾ ಕೇಂದ್ರ ಬಿಜೆಪಿ ನಾಯಕರಾಗಲಿ ಅಶೋಕ್ ಅವರಿಗೆ ಪಾದಯಾತ್ರೆಯ ಜವಾಬ್ದಾರಿಯನ್ನು ವಹಿಸಿರಲಿಲ್ಲ. ಮುಂದೆ ಓದಿ

ಸಿಕ್ಕ ಅವಕಾಶವನ್ನು ಅಶೋಕ್ ಭರ್ಜರಿಯಾಗಿ ಬಳಸಿಕೊಂಡರು

ಸಿಕ್ಕ ಅವಕಾಶವನ್ನು ಅಶೋಕ್ ಭರ್ಜರಿಯಾಗಿ ಬಳಸಿಕೊಂಡರು

ಆದರೆ, ತಾನೇ ಖುದ್ದಾಗಿ ಪಾದಯಾತ್ರೆಯಲ್ಲಿ ಮಂಚೂಣಿಯಲ್ಲಿ ನಿಂತು, ದಿನದಿಂದ ದಿನಕ್ಕೆ ಇದನ್ನು ಯಶಸ್ವಿಗೊಳಿಸುವಲ್ಲಿ ಯಾವಾಗ ಶಕ್ತರಾದರೋ, ಪಾದಯಾತ್ರೆಯ ನೇತೃತ್ವ ಅಶೋಕ್ ಎಂದು ಬಿಜೆಪಿ ಅಧಿಕೃತವಾಗಿ ಘೋಷಿಸಿತು. ಸಿಕ್ಕ ಅವಕಾಶವನ್ನು ಅಶೋಕ್ ಭರ್ಜರಿಯಾಗಿ ಬಳಸಿಕೊಂಡರು.

ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್

ಬಹುತೇಕ ಅಶೋಕ್ ಇಡೀ ಪಾದಯಾತ್ರೆಯ ಹೀರೋ

ಬಹುತೇಕ ಅಶೋಕ್ ಇಡೀ ಪಾದಯಾತ್ರೆಯ ಹೀರೋ

ಪ್ರತೀ ಅಸೆಂಬ್ಲಿ ಕ್ಷೇತ್ರದ ಹಾಲೀ ಶಾಸಕರು, ಕಾರ್ಪೊರೇಟರ್, ಪ್ರಮುಖರನ್ನು ಪಾದಯಾತ್ರೆ ಸಾಗಿ ಬರುವ ಮೊದಲೇ ಸಂಪರ್ಕಿಸಿದ ಅಶೋಕ್ ಯಾತ್ರೆ ಯಶಸ್ವಿಗೊಳಿಸಲು ಸೂಚನೆಯನ್ನು ನೀಡಿದ್ದರು. ರಾಜ್ಯದ ಮೊದಲ ಪಂಕ್ತಿಯ ನಾಯಕರು ಅಲ್ಲಲ್ಲಿ ಪಾದಯಾತ್ರೆಯನ್ನು ಸೇರಿಕೊಂಡಿದ್ದನ್ನು ಬಿಟ್ಟರೆ, ಬಹುತೇಕ ಅಶೋಕ್ ಅವರೇ ಇಡೀ ಈ ಪಾದಯಾತ್ರೆಯ ಹೀರೋ.

ಪ್ರತಿಯೊಂದು ಅಸೆಂಬ್ಲಿ ಕ್ಷೇತ್ರದಲ್ಲೂ ಕನಿಷ್ಟ 2ರಿಂದ 4ಸಾವಿರ ಜನ

ಪ್ರತಿಯೊಂದು ಅಸೆಂಬ್ಲಿ ಕ್ಷೇತ್ರದಲ್ಲೂ ಕನಿಷ್ಟ 2ರಿಂದ 4ಸಾವಿರ ಜನ

ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕ್ರೈಂ ರೇಟಿಂಗ್, ನಲಪಾಡ್ ಹಗರಣ, ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿಯವರ ಮೇಲಿನ ಹಲ್ಲೆ ಮುಂತಾದ ಗಂಭೀರ ವಿಚಾರಗಳನ್ನು ಇಟ್ಟುಕೊಂಡು ಅಶೋಕ್, ಕಾಂಗ್ರೆಸ್ ವಿರುದ್ದ ಹರಿಹಾಯಲು ಪಾದಯಾತ್ರೆಯನ್ನು ಸಮರ್ಥವಾಗಿ ಬಳಸಿಕೊಂಡರು. ಪ್ರತಿಯೊಂದು ಅಸೆಂಬ್ಲಿ ಕ್ಷೇತ್ರದಲ್ಲೂ ಕನಿಷ್ಟ ಎರಡರಿಂದ ನಾಲ್ಕು ಸಾವಿರ ಜನರನ್ನು ಮತ್ತು ಕಾರ್ಯಕರ್ತರನ್ನು ಸೇರಿಸುವಲ್ಲಿ ಅಶೋಕ್ ಯಶಸ್ವಿಯಾದರು.

ನಲಪಾಡ್ ಪ್ರಕರಣದಲ್ಲಿ ಪೊಲೀಸರಿಂದಲೇ ಸಾಕ್ಷ್ಯ ನಾಶ:ಆರ್.ಅಶೋಕ್ನಲಪಾಡ್ ಪ್ರಕರಣದಲ್ಲಿ ಪೊಲೀಸರಿಂದಲೇ ಸಾಕ್ಷ್ಯ ನಾಶ:ಆರ್.ಅಶೋಕ್

ಕಾರ್ಯಕರ್ತರನ್ನು ಒಗ್ಗೂಡಿಸುವಲ್ಲಿ ಅಶೋಕ್ ಯಶಸ್ವಿ

ಕಾರ್ಯಕರ್ತರನ್ನು ಒಗ್ಗೂಡಿಸುವಲ್ಲಿ ಅಶೋಕ್ ಯಶಸ್ವಿ

ಎಲ್ಲಕ್ಕಿಂತಲೂ ಹೆಚ್ಚಾಗಿ ಬೆಂಗಳೂರು ರಕ್ಷಿಸಿ ಪಾದಯಾತ್ರೆ ಕಾರ್ಯಕರ್ತರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಪ್ರಮುಖವಾಗಿ, ಚುನಾವಣಾ ಈ ಸಮಯದಲ್ಲಿ ಕಾರ್ಯಕರ್ತರು ಸಕ್ರಿಯರಾಗಿರಬೇಕಾಗಿರುವುದು ಎಲ್ಲಾ ಪಕ್ಷಗಳಿಗೂ ಅತ್ಯಂತ ಪ್ರಮುಖ. ಆ ಕೆಲಸವನ್ನು ಅಶೋಕ್ ಅಚ್ಚುಕಟ್ಟಾಗಿ ಸದ್ಯಕ್ಕೆ ಮಾಡಿ ಮುಗಿಸಿದ್ದಾರೆ ಎನ್ನುವ ಮಾತು ಬಿಜೆಪಿ ವಲಯದಿಂದ ಕೇಳಿಬರುತ್ತಿದೆ.

ಬಿಜೆಪಿಯಿಂದ 'ಬೆಂಗಳೂರು ರಕ್ಷಿಸಿ' ಪಾದಯಾತ್ರೆಬಿಜೆಪಿಯಿಂದ 'ಬೆಂಗಳೂರು ರಕ್ಷಿಸಿ' ಪಾದಯಾತ್ರೆ

ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಅಶೋಕ್

ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಅಶೋಕ್

ಒಟ್ಟಿನಲ್ಲಿ ಪರಿವರ್ತನಾ ರ‍್ಯಾಲಿಯ ನಂತರ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಅಶೋಕ್, ಚುನಾವಣಾ ಹೊಸ್ತಿಲಲ್ಲಿ ಮತ್ತೆ ಮುನ್ನಲೆಗೆ ಬಂದಿದ್ದಾರೆ. ಪಕ್ಷದ ಟಿಕೆಟ್ ಹಂಚಿಕೆಯಲ್ಲಿ ರಾಜ್ಯ ಮುಖಂಡರ ಮಾತಿಗೆ ವರಿಷ್ಠರು ಬೆಲೆನೀಡುವುದು ಡೌಟು ಎನ್ನುವ ಸತ್ಯವನ್ನು ಅಶೋಕ್ ಅರಿಯದೇ ಇರರು. ಆದರೆ, ರಾಜ್ಯದ ಪಕ್ಷದ ಪ್ರಮುಖ ಮುಖಂಡರಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿರುವ ಅಶೋಕ್, ಅಮಿತ್ ಶಾ ಅವರ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುತ್ತವೆ ಪಕ್ಷದೊಳಗಿನ ಮಾಹಿತಿಗಳು.

English summary
16 day 'Bengaluru Rakshisi' padayatre in 28 assembly constituency in Bengaluru by BJP concluded on March 17. R Ashok taken responsibility of this padayatre and he is succeed in party get good mileage from this yatra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X