ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರ ಕಾಲ ಬೆಂಗಳೂರು ಥಂಡಾ ಥಂಡಾ ಕೂಲ್ ಕೂಲ್

|
Google Oneindia Kannada News

ಬೆಂಗಳೂರು, ನವೆಂಬರ್, 16: ಬೆಂಗಳೂರಿನ ಚಳಿ ಯಾವ ಹಿಮಾಲಯಕ್ಕೆ ಕಡಿಮೆಯಿಲ್ಲ. ಅತ್ತ ತಮಿಳುನಾಡಿನಲ್ಲಿ ಮಳೆ ಅಬ್ಬರ ಮುಂದುವರಿದಿದೆ. ರಾಜ್ಯದ ದಕ್ಷಿಣ ಒಳನಾಡಿನಾದ್ಯಂತ ಇನ್ನೂ ಮೂರು ದಿನಗಳ ಕಾಲ ವ್ಯಾಪಕ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಅಲ್ಲದೇ ರಾಜ್ಯದ ಕರಾವಳಿ ಪ್ರದೇಶದಲ್ಲಿ ಕೆಲವೆಡೆ ಮಳೆ ಕಾಣಿಸಿಕೊಳ್ಳಲಿದೆ. ಉತ್ತರ ಒಳನಾಡು ಪ್ರದೇಶದ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ನಾಲ್ಕು ದಿನಗಳ ಕಾಲ ಮೋಡ ಕವಿದ ವಾತಾವರಣವಿರಲಿದ್ದು ಎರಡು ದಿನ ಭಾರೀ ಮಳೆಯಾಗುವ ನಿರೀಕ್ಷೆಯಿದೆ.['ರೋನು' ಅಬ್ಬರಕ್ಕೆ ರೋದಿಸುತ್ತಿರುವ ತಮಿಳುನಾಡು]

Bengaluru: Rain and cold weather to persist for next 3 Days

ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನಾದ್ಯಂತ ಮಳೆ ಆರ್ಭಟ ಮುಂದುವರಿದಿದ್ದಿ ಇನ್ನು 24 ಗಂಟೆಗಳ ಕಾಲ ಇದೇ ವಾತಾವರಣ ಇರಲಿದೆ.

ರಾಜಧಾನಿ ಥಂಡಾ ಥಂಡಾ ಕೂಲ್ ಕೂಲ್

ಬೆಂಗಳೂರಿನ ಉಷ್ಣತೆ 18 ಡಿಗ್ರಿಗೆ ಇಳಿದಿದೆ. ವಾರದಿಂದ ಮುಸುಕಿರುವ ಥಂಡಿ ವಾತಾವರಣ ನಾಗರಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಭಾನುವಾರ ಬೆಳಿಗ್ಗೆಯಿಂದ ಎಡಬಿಡದೆ ಸುರಿದ ಜಿಟಿ ಜಿಟಿ ಮಳೆ, ರಾಜಧಾನಿ ಮಂದಿಯ ವಾರಾಂತ್ಯದ ಓಡಾಟಕ್ಕೆ ಬ್ರೇಕ್ ಹಾಕಿತು. ಮಳೆಯಾಟದಿಂದಾಗಿ ಎಲ್ಲೆಡೆ ಮಂಜು ಮುಸುಕಿದ ವಾತಾವರಣ ಕಂಡುಬಂತು. ಎಂ.ಜಿ. ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಜಯನಗರ 4ನೇ ಬ್ಲಾಕ್, ಕೆ.ಆರ್‌. ಮಾರುಕಟ್ಟೆ, ಸಂಪಿಗೆ ರಸ್ತೆ ಸೇರಿದಂತೆ ಹಲವೆಡೆ ಗ್ರಾಹಕರ ದಟ್ಟಣೆ ತಗ್ಗಿತ್ತು.[2ನೇ ಟೆಸ್ಟ್: ಭಾರತಕ್ಕೆ ಮೊದಲ ದಿನದ ಗೌರವ]

Bengaluru: Rain and cold weather to persist for next 3 Days

ಮಳೆಗೆ ಬಲಯಾದ 2ನೇ ಟೆಸ್ಟ್

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಬೆಂಗಳೂರಲ್ಲಿ ನಡೆಯುತ್ತಿದ್ದ 2ನೇ ಟೆಸ್ಟ್ ನ ಮೂರನೇ ದಿನದ ಆಟವೂ ಆರಂಭವಾಗಿಲ್ಲ. ಮೊದಲ ದಿನದ ಆಟಕ್ಕೆ ಮಾತ್ರ ಮಳೆ ಅವಕಾಶ ನೀಡಿದ್ದು ಭಾರತ ಮೆಲುಗೈ ಸಾಧಿಸಿತ್ತು.

English summary
The low pressure area over Southwest Bay of Bengal and Sri Lanka has also affected the city of Bengaluru. The city had a maximum temperature of 20.9 and 18.7 degree Celsius on Sunday and recorded 5.8mm of rain. This same kind of whether condition Will continue upcoming 3 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X