ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Matific ಗಣಿತ ಅನ್‌ಲೈನ್ ಪರೀಕ್ಷೆ: ಕೋರಮಂಗಲ ಪೊಲೀಸ್ ಪಬ್ಲಿಕ್ ಶಾಲೆ ನಂಬರ್ 1

|
Google Oneindia Kannada News

ಬೆಂಗಳೂರು, ಸೆ. 23: ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ದೇಶದ ಅಗ್ರಗಣ್ಯ ಸಂಸ್ಥೆ ಒಲಂಪಿಯಾಡ್ ಪ್ರಸಕ್ತ ಸಾಲಿನಲ್ಲಿ ನಡೆಸಿದ "ಮ್ಯಾಟಿಫಿಕ್" ಜೂನಿಯರ್ ಮ್ಯಾಥ್ಸ್ ಚಾಂಪಿಯನ್ ಶಿಪ್ ನಲ್ಲಿ ದೇಶದಲ್ಲಿ ನಂಬರ್ ಒನ್ ಶಾಲೆಯಾಗಿ ಕೋರಮಂಗಲದ ಪೊಲೀಸ್ ಪಬ್ಲಿಕ್ ಶಾಲೆ ಹೊರ ಬಿದ್ದಿದೆ.

ಪೂರ್ವ ಪ್ರಾಥಮಿಕ ಹಂತದಿಂದ ಆರನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಒಲಂಪಿಯಾಡ್ ಸಂಸ್ಥೆ ಆನ್‌ಲೈನ್ ಮೂಲಕ "ಮ್ಯಾಟಿಫಿಕ್" ಚಾಂಪಿಯನ್‌ಶಿಪ್ ರಾಷ್ಟ್ರ ಮಟ್ಟದ ಸ್ಪರ್ಧೆಯನ್ನು ಏರ್ಪಡಿಸಿತ್ತು. ಕೋರಮಂಗಲದಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆಯ 163 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ದೆಹಲಿಯ ಸರಪ್ ಪಬ್ಲಿಕ್ ಶಾಲೆಯ ಪಾರ್ಥ ಪಿ. ನಂಬರ್ ಒನ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಎರಡನೇ rankನ್ನು ದೆಹಲಿ ಪಬ್ಲಿಕ್ ಸ್ಕೂಲ್, ಬೆಂಗಳೂರು ದಕ್ಷಿಣ ವಿಭಾಗ ತನ್ನದಾಗಿಸಿಕೊಂಡಿದೆ.

ಚಾಂಪಿಯನ್ ಶಾಲೆ ವಿಭಾಗದಲ್ಲಿ ಕೋರಮಂಗಲದಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆ ನಂಬರ್ ಒನ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಮೂರು ದಿನದ ನಡೆದ ಮ್ಯಾಟಿಫಿಕ್ ಸ್ಪಧೆಯಲ್ಲಿ ಮೂರು ದಿನವೂ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎಲ್‌ಕೆಜಿ ಯಿಂದ ನರ್ಸರಿ ವರೆಗೆ ಕೋರಮಂಗಲ ಪೊಲೀಸ್ ಪಬ್ಲಿಕ್ ಶಾಲೆಯ 163 ವಿದ್ಯಾರ್ಥಿಗಳು ಮ್ಯಾಟಿಫಿಕ್ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ ಏಳು ವಿದ್ಯಾರ್ಥಿಗಳು ವೈಯಕ್ತಿಕ ವಿಭಾಗದಲ್ಲಿ ಚಾಂಪಿಯನ್ ಗಳಾಗಿ ಹೊರ ಹೊಮ್ಮಿದ್ದಾರೆ.

Bengaluru police public school became as Number 1 school in Matific championship 2021

ಆದರೆ, ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲ್ಗೊಂಡಿದ್ದು, ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಕರು ಸಲಹೆ ಮಾಡಿದ, ಮತ್ತಿತರ ಮಾನದಂಡಗಳನ್ನು ಅನುಸರಿಸಿ ಕೊಡುವ ಚಾಂಪಿಯನ್ ಶಾಲೆ ವಿಭಾಗದಲ್ಲಿ ನಮ್ಮ ಶಾಲೆ ದೇಶದ ನಂಬರ್ ಒನ್ ಚಾಂಪಿಯನ್ ಶಾಲೆಯಾಗಿ ಹೊರ ಹೊಮ್ಮಿದೆ ಎಂದು ಕೋರಮಂಗಲದ ಪೊಲೀಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ನಂದಾ ಅವರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಹೊಸ ಕಲ್ಪನೆ ಶಿಕ್ಷಣಕ್ಕೆ ನಾಂದಿ ಹಾಡಿದ ಪೊಲೀಸ್ ಶಾಲೆ: ಮ್ಯಾಟಿರಿಕ್ ಚಾಂಪಿಯನ್‌ಶಿಪ್‌ನಲ್ಲಿ ಕೋರಮಂಗಲದ ಪೊಲೀಸ್ ಪಬ್ಲಿಕ್ ಶಾಲೆ ಅಗ್ರಗಣ್ಯ ಸ್ಥಾನ ಗಳಿಸಿದ್ದಕ್ಕೆ ಶಾಲೆ ನಿರ್ವಹಣಾ ಸಮಿತಿ ಮುಖ್ಯಸ್ಥರಾಗಿರುವ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ಒನ್ಇಂಡಿಯಾ ಕನ್ನಡ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Bengaluru police public school became as Number 1 school in Matific championship 2021

ರಾಜ್ಯದಲ್ಲಿ ಕಮ್ಯುನಿಟಿ ಶಿಕ್ಷಣ ಕನಸಿನೊಂದಿಗೆ 2008 ರಲ್ಲಿ ಆರಂಭವಾಗಿದ್ದು ಕೋರಮಂಗಲದ ಪೊಲೀಸ್ ಪಬ್ಲಿಕ್ ಶಾಲೆ. ಪೊಲೀಸ್ ಅಧಿಕಾರಿಗಳಿಗೆ ಯಾವ ಶಾಲೆಯಲ್ಲಿ ಬೇಕಾದರೂ ಸೀಟು ಸಿಗುತ್ತೆ. ಆದರೆ ಪೊಲೀಸ್ ಸಿಬ್ಬಂದಿಗೆ ಎಷ್ಟೇ ಲಾಬಿ ಮಾಡಿದರೂ ಒಳ್ಳೆಯ ಶಾಲೆಗಳಲ್ಲಿ ಸೀಟು ಸಿಗಲ್ಲ. ಇನ್ನು ಕಡಿಮೆ ಸಂಬಳಕ್ಕೆ ದುಡಿಯುವ ಪೊಲೀಸ್ ಸಿಬ್ಬಂದಿಗೆ ದೊಡ್ಡ - ದೊಡ್ಡ ಶಾಲೆಗಳಲ್ಲಿ ಶಾಲಾ ಶುಲ್ಕ ಕಟ್ಟಲು ಸಾಧ್ಯವಿಲ್ಲ. ಹೀಗಾಗಿ ಯಾವುದೇ ಲಾಭ- ನಷ್ಟದ ಉದ್ದೇಶವಿಲ್ಲದ ಕಲ್ಪನೆಯೊಂದಿಗೆ ಹುಟ್ಟಿಕೊಂಡಿದ ಶಾಲೆ ಪೊಲೀಸ್ ಪಬ್ಲಿಕ್ ಶಾಲೆ. ಅಮೆರಿಕಾ ಸೇರಿದಂತೆ ಬಹುತೇಕ ಶಾಲೆಗಳಲ್ಲಿ ಕಮ್ಯುನಿಟಿ ಶಾಲೆಗಳೇ ಉತ್ತಮ ಶಿಕ್ಷಣ ನೀಡುತ್ತಿವೆ. ಈ ಉದ್ದೇಶದಿಂದ ಆರಂಭವಾದ ಪೊಲೀಸ್ ಪಬ್ಲಿಕ್ ಶಾಲೆಗಳು ಇದೀಗ ಮೈಸೂರು, ದಾವಣಗೆರೆ, ಶಿಗ್ಗಾಂವಿ, ಗುಲ್ಬರ್ಗಾ ಸೇರಿ ಐದು ಕಡೆ ಪ್ರಾರಂಭವಾಗಿವೆ. ಎಲ್ಲಾ ಕಡೆ ಅತ್ಯುತ್ತಮವಾಗಿ ನಡೆದುಕೊಂಡು ಹೋಗಿವೆ. ಮೊದಲು ಅರಂಭವಾದ ಶಾಲೆ ಇದೀಗ ಅಗ್ರಗಣ್ಯ ಶಾಲೆಯಾಗಿ ಹೊರ ಹೊಮ್ಮಿದೆ ಎಂದು ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ತಿಳಿಸಿದರು.

Bengaluru police public school became as Number 1 school in Matific championship 2021

ನಾನು ಅಪರಾಧ ವಿಭಾಗದ ಡಿಸಿಪಿಯಾಗಿದ್ದಾಗ, ಕೆಎಸ್ಆರ್‌ಪಿ ಸಿಬ್ಬಂದಿಯ ಮಕ್ಕಳು ಅನೇಕ ಅಪರಾಧ ಪ್ರಕರಣದಲ್ಲಿ ಸಿಕ್ಕಿ ಬೀಳುತ್ತಿದ್ದರು. ಅವರಿಗೆ ಸೂಕ್ತ ಶಿಕ್ಷಣ, ಒಳ್ಳೆಯ ಸಹವಾಸ, ಪರಿಸರದ ಕೊರತೆ ಇಲ್ಲದಿರುವುದು ಕಾಣುತ್ತಿತ್ತು. ಇದೀಗ ಕಾಲ ಬದಲಾಗಿದೆ. ಕೆಎಸ್ಆರ್‌ಪಿ ಸಿಬ್ಬಂದಿಯಲ್ಲ, ಪೊಲೀಸ್ ಸಿಬ್ಬಂದಿಯ ಮಕ್ಕಳು ಸಿವಿಲ್ ಸೇವೆಗೆ ತಯಾರಿ ನಡೆಸುವ ಮಟ್ಟಕ್ಕೆ ಬದಲಾಗಿದ್ದಾರೆ. ಪೊಲೀಸ್ ಸಿಬ್ಬಂದಿಗೆ ಗುಣಮಟ್ಟದ ಶಿಕ್ಷಣವನ್ನು ಪೊಲೀಸ್ ಪಬ್ಲಿಕ್ ಶಾಲೆಗಳ ಮೂಲಕ ನೀಡಲಾಗಿತ್ತಿದೆ. ಮುಂದಿನ ದಿನಗಳಲ್ಲಿ ಈ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಪೊಲೀಸ್ ಪಬ್ಲಿಕ್ ಶಾಲೆಗೆ ಶಿಕ್ಷಕರನ್ನು ನೇಮಿಸಿಕೊಳ್ಳುವ ಸಂಬಂಧ ಯುಪಿಎಸ್‌ಸಿ ಮಾದರಿ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳುತ್ತೇವೆ. ಸಂದರ್ಶನದಲ್ಲಿ ಆಯ್ಕೆಯಾದವರಿಗೆ ಅವಕಾಶ ಕೊಡುತ್ತೇವೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.

Bengaluru police public school became as Number 1 school in Matific championship 2021

Recommended Video

ಐಪಿಎಲ್ ತಂಡವನ್ನ ಕಾಡುತ್ತಿರುವ ಕೊರೋನ ಸೋಂಕು | Oneindia Kannada

ಕೋರಮಂಗಲ ಪೊಲೀಸ್ ಪಬ್ಲಿಕ್ ಶಾಲೆ: ಕರ್ನಾಟಕ ಪೊಲೀಸ್ ಇಲಾಖೆ ಪೊಲೀಸರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ 2008 ರಲ್ಲಿ ಆರಂಭವಾಗಿದ್ದು ಪೊಲೀಸ್ ಪಬ್ಲಿಕ್ ಶಾಲೆ. ಕೋರಮಂಗಲದ ಕೆಎಸ್ಆರ್‌ಪಿ ಸಿಬ್ಬಂದಿ ನೆಲೆಸಿರುವ ಜಾಗದಲ್ಲಿ ಶಾಲೆ ಪ್ರಾರಂಭದ ಮೂಲಕ ಪೊಲೀಸ್ ಸಿಬ್ಬಂದಿಯ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡುವ ಅವಕಾಶ ಕಲ್ಪಿಸಲಾಗಿದೆ. ಕಮ್ಯುನಿಟಿ ಶಾಲೆ ಪ್ರಾರಂಭದ ಮೂಲಕ ಪೊಲೀಸ್ ಸಿಬ್ಬಂದಿ ಕಡಿಮೆ ಶುಲ್ಕಕ್ಕೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕೋರಮಂಗಲದಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಸುಮಾರು 1300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸುಸಜ್ಜಿತ ಲ್ಯಾಬ್, ಆಟದ ಮೈದಾನ ಸೇರಿದಂತೆ ಗುಣಮಟ್ಟದ ಶಿಕ್ಷಣವನ್ನು ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ನೀಡಲಾಗುತ್ತಿದೆ.

English summary
Koramangala Police Public School has emerged as the number one school in the country for the Matific online maths test know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X