ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

OLX ಗಿರಾಕಿಗಳಿಗೆ ಕಾರು ಟೆಸ್ಟ್ ಡ್ರೈವ್ ಕೊಡುವ ಮುನ್ನ ಈ ಸ್ಟೋರಿ ಓದಿ ಸೇಫ್ ಆಗಿ!

|
Google Oneindia Kannada News

ಬೆಂಗಳೂರು, ಮೇ. 17: ನೀವು ಕಾರನ್ನು ಮಾರಬೇಕು ಎಂದು ಭಾವಿಸಿ OLX ನಲ್ಲಿ ಪೋಸ್ಟ್ ಹಾಕಿದ್ದೀರಾ? ಹಾಗಿದ್ದರೆ ಒಎಲ್‌ಎಕ್ಸ್ ನಲ್ಲಿ ನಿಮ್ಮ ಪೋಸ್ಟ್ ನೋಡಿಕೊಂಡು ಬರುವ ಗಿರಾಕಿಗಳಿಗೆ ನಿಮ್ಮ ಕಾರು ಟೆಸ್ಟ್ ಡ್ರೈವ್ ಕೊಡುವ ಮುನ್ನ ಹುಷಾರ್. ಟೆಸ್ಟ್ ಡ್ರೈವ್ ಹೆಸರಿನಲ್ಲಿ ಕಾರು ತೆಗೆದುಕೊಂಡು ಎಸ್ಕೇಪ್ ಆಗುವ ಕಿರಾತಕರ ಸಂಖ್ಯೆ ಬೆಂಗಳೂರಿನಲ್ಲಿ ಜಾಸ್ತಿಯಾಗಿದೆ.

ಟೆಸ್ಟ್ ಡ್ರೈವ್ ಹೆಸರಿನಲ್ಲಿ ಕಾರನ್ನು ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ವೆಂಕಟೇಶ್ ನಾಯಕ್ ಬಂಧಿತ ಅರೋಪಿ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಅಮೃತನಗರ ನಿವಾಸಿ. ತನ್ನ ಕಾರನ್ನು ಮಾರಾಟ ಮಾಡುವುದಾಗಿ ಅಮೃತಹಳ್ಳಿ ಕಾಫಿ ಬೋರ್ಡ್ ನಿವಾಸಿ ರವೀಂದ್ರ ಎಲ್ಲೂರಿ ಒಎಲ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ. ಮಾರುತಿ ಬ್ರಿಜ್ಝಾ ಕಾರನ್ನು ಮಾರಾಟ ಮಾಡುವುದಾಗಿ ಪೋಟೋ ಸಮೇತ ಎಲ್ಲೂರಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ನೋಡಿ ಐದು ಮಂದಿ ಕರೆ ಮಾಡಿದ್ದರು.

ಅರೋಪಿ ವೆಂಕಟೇಶ್ ಸಹ ಕಾರು ಖರೀದಿ ಮಾಡುವ ಸೋಗಿನಲ್ಲಿ ಎಲ್ಲೂರಿಗೆ ಕರೆ ಮಾಡಿದ್ದಾರೆ. ಮನೆ ಬಳಿ ಬರುವಂತೆ ಎಲ್ಲೂರಿ ತಿಳಿಸಿದ್ದರು. ಅದರಂತೆ ವೆಂಕಟೇಶ್ ನಾಯಕ್ ಅಮೃತಹಳ್ಳಿಯ ಕಾಫಿ ಬೋರ್ಡ್ ಸಮೀಪದ ಎಲ್ಲೂರಿ ಮನೆ ಹತ್ತಿರ ಹೋಗಿದ್ದಾರೆ. ಕಾರನ್ನು ನೋಡಿ ಖರೀದಿ ಮಾಡುವುದಾಗಿ ಮಾತುಕತೆ ನಡೆಸಿದ್ದಾರೆ. ಆ ಬಳಿಕ ನಿನ್ನ ಕಾರ್ ನ ಕಂಡೀಷನ್ ನೋಡುವುದಾಗಿ ಹೇಳಿ ಟೆಸ್ಟ್ ಡ್ರೈವ್ ಪಡೆದು ಕಾರು ಸಮೇತ ಎಸ್ಪೇಪ್ ಆಗಿದ್ದಾರೆ. ಟೆಸ್ಟ್ ಡ್ರೈವ್ ಅಂತ ಕಾರು ಸಮೇತ ಹೋದ ವೆಂಕಟೇಶ್ ಎಸ್ಕೇಪ್ ಆಗಿದ್ದ. ಈ ಕುರಿತು ಎಲ್ಲೂರಿ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಕುರಿತು ಎಲ್ಲೂರಿ ನೀಡಿದ ದೂರಿನ ಮೇಲೆ ಪೊಲೀಸರು ತನಿಖೆ ನಡೆಸಿದಾಗ, ಕರೆ ಮಾಡಲು ಬಳಿಸಿದ್ದ ಪೋನ್ ಕಳ್ಳತನ ಮಾಡಿದ್ದು ಆಗಿತ್ತು. ಹೀಗಾಗಿ ಮೊಬೈಲ್ ನಂಬರ್ ನಿಂದ ಆರೋಪಿಯನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಆ ಬಳಿಕ ಸುಮಾರು OLX ನಿಂದ 2500 ಐಪಿ ಅಡ್ರೆಸ್ ಪಡೆದು ಪರಿಶೀಲನೆ ನಡೆಸಿದ ಅಮೃತಹಳ್ಳಿ ಪೊಲೀಸರು ಆರೋಪಿ ವೆಂಕಟೇಶ್ ನಾಯ್ಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೆಬ್ ಐಪಿ ಅಡ್ರಸ್ ವಿಳಾಸ ಜಾಡು ಹಿಡಿದು ಅರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಚುನಾವಣೆ ಸಾಲ ತೀರಿಸಲು ಕಾರು ಕದ್ದಿದ್ದ:

ಚುನಾವಣೆ ಸಾಲ ತೀರಿಸಲು ಕಾರು ಕದ್ದಿದ್ದ:

ಈ ಕುರಿತು ಆರೋಪಿ ವೆಂಕಟೇಶ್ ನಾಯ್ಕ್ ನನ್ನು ವಿಚಾರಣೆ ನಡೆಸಿದಾಗ, 2020 ರಲ್ಲಿ ನಡೆದಿದ್ದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪತ್ನಿ ಸ್ಪರ್ಧಿಸಿದ್ದರು. ಇದ್ದ ಹಣವನ್ನು ಚುನಾವಣೆಗೆ ವೆಚ್ಚ ಮಾಡಿ ಸಾಲಗಾರನಾಗಿದ್ದ. ಈ ವೇಳೆ ಸಾಲ ತೀರಿಸಲು ತನ್ನ ಸ್ವಂತ ಕಾರು ಮಾರುತಿ ಬ್ರೀಜಾ ಕಾರನ್ನು ಮಾರಾಟ ಮಾಡಿದ್ದ. ಆದರೆ ಇದರಿಂದ ಊರಿನಲ್ಲಿ ಅವಮಾನಕ್ಕೆ ಗುರಿಯಾಗಿದ್ದ. ಕಾರು ಇಲ್ಲದೇ ಓಡಾಡಿದರೆ ಮರ್ಯಾದೆ ಹೋಗುತ್ತೆ ಅಂತ ಭಾವಿಸಿ ಎಲ್ಲೂರಿ ಕಾರನ್ನು ಖರೀದಿ ಮಾಡುವ ಸೋಗಿನಲ್ಲಿ ಕದ್ದಿದ್ದ. ಅದೂ ಕದ್ದ ಪೋನ್ ಬಳಿಸ ಟೆಸ್ಟ್ರ ಡ್ರೈವ್ ಹೆಸರಿನಲ್ಲಿ ಪಡೆದುಕೊಂಡು ಅದರ ನಂಬರ್ ಬದಲಿಸಿ ತಿರುಗಾಡುತ್ತಿದ್ದ ಎಂಬ ಸಂಗತಿ ಗೊತ್ತಾಗಿದೆ. ಆರೋಪಿಯಿಂದ ಕಾರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಡ್ವಾನ್ಸ್ ಹೆಸರಲ್ಲಿ ಖರೀದಿದಾರರಿಗೂ ಟೋಪಿ:

ಅಡ್ವಾನ್ಸ್ ಹೆಸರಲ್ಲಿ ಖರೀದಿದಾರರಿಗೂ ಟೋಪಿ:

ಒಎಲ್‌ಎಕ್ಸ್ ನಲ್ಲಿ ಬೈಕ್ ಮತ್ತು ಕಾರು ಮಾರಾಟ ಮಾಡುವರನ್ನು ಟಾರ್ಗೆಟ್ ಮಾಡಿ ವಂಚಿಸುವ ದೊಡ್ಡ ಗ್ಯಾಂಗ್ ಹುಟ್ಟಿಕೊಂಡಿದೆ. ಅದರಲ್ಲಿ ಕೆಲವು ಖರೀದಿದಾರರಿಗೆ ಮೋಸ ಮಾಡಿದರೆ, ಇನ್ನೂ ಕೆಲವರು ಮಾರಾಟಗಾರರಿಗೆ ಮೋಸ ಮಾಡುತ್ತಾರೆ. ಹೊಸ ಬೈಕ್ ನ ಚಿತ್ರ ಹಾಕಿ ಅತಿ ಕಡಿಮೆ ಬೆಲೆಗೆ ಬೈಕ್ ಮಾರಾಟ ಮಾಡುವುದಾಗಿ ಪೋಸ್ಟ್ ಹಾಕುತ್ತಾರೆ. ಇದನ್ನು ನಂಬಿ ಕರೆ ಮಾಡಿದ್ರೆ, ಐದು ಸಾವಿರ ರೂ. ಅಡ್ವಾನ್ಸ್ ಕಳಿಸಿ ಎಂದು ಆನ್‌ಲೈನ್ ನಲ್ಲಿ ಹಣ ವರ್ಗಾವಣೆ ಮಾಡಿಸಿಕೊಂಡು ಸ್ವಿಚ್‌ ಆಫ್ ಮಾಡಿಕೊಳ್ಳುತ್ತಾರೆ. ಈ ತರಹದ ಅನೇಕ ಪ್ರಕರಣ ವರದಿಯಾದರೂ ಯಾರೂ ದೂರು ನೀಡಲ್ಲ. ಈ ರೀತಿಯ ಅನೇಕ ಅಪರಾಧಗಳು ಪದೇ ಪದೇ ವರದಿಯಾಗುತ್ತಿವೆ.

ನಂಬಿಸಿ ಕಾರು ಬೈಕ್ ಪಡೆದು ಮೋಸ ಹುಷಾರ್ :

ನಂಬಿಸಿ ಕಾರು ಬೈಕ್ ಪಡೆದು ಮೋಸ ಹುಷಾರ್ :

ಇನ್ನು ಕಾರನ್ನು ಮಾರಾಟ ಮಾಡುವುದಾಗಿ ಪೋಸ್ಟ್ ಹಾಕುವರ ಕಾರು, ಬೈಕ್ ಟೆಸ್ಟ್ ಡ್ರೈವ್ ಪಡೆಯುವ ಸೋಗಿನಲ್ಲಿ ಪಡೆದು ವಂಚಿಸುವ ಕಿರಾತಕರ ಸಂಖ್ಯೆಯೂ ಹೆಚ್ಚಾಗಿದೆ. ಸಾಮಾನ್ಯರಂತೆ ಬಿಂಬಿಸಿಕೊಂಡು ಎಲ್ಲಾ ವ್ಯಾಪಾರ ಮುಗಿಸಿ ಟೆಸ್ಟ್ ಡ್ರೈವ್ ಹೆಸರಿನಲ್ಲಿ ಪಡೆದು ನಾಮ ಹಾಕುತ್ತಾರೆ. ಈತರಹದ ಪ್ರಕರಣಗಳು ಇತ್ತೀಚೆಗೆ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿವೆ. ಟೆಸ್ಟ್ ಡ್ರೈವ್ ಕೊಡಲೇಬಾರದು ಎನ್ನುತ್ತಾರೆ ಪೊಲೀಸರು.

ಒಎಲ್ ಎಕ್ಸ್ನಲ್ಲಿ ಕಾರು ಮಾರೊಕೆ ಹೋಗಿ ಟೆಕ್ಕಿ ಕಣ್ಮರೆ:

ಒಎಲ್ ಎಕ್ಸ್ನಲ್ಲಿ ಕಾರು ಮಾರೊಕೆ ಹೋಗಿ ಟೆಕ್ಕಿ ಕಣ್ಮರೆ:

ಇದು ಇಡೀ ದೇಶವನ್ನೆ ಬೆಚ್ಚಿ ಬೀಳಿಸಿದ್ದ ಪ್ರಕರಣ. 2017 ರಲ್ಲಿ ಬೆಂಗಳೂರಿನಲ್ಲಿ ನಡೆದಿತ್ತು. ಬೆಂಗಳೂರಿನ ಟೆಕ್ಕಿ ಅಜಿತಾಬ್ ಐದು ವರ್ಷದ ಹಿಂದೆ OLX ನಲ್ಲಿ ಕಾರು ಮಾರಲು ಹೋಗಿದ್ದ. ಟೆಸ್ಟ ಡ್ರೈವ್ ಎಂದು ಕಾರು ತೆಗೆದುಕೊಂಡು ಹೋಗಿದ್ದ ಅಜಿತಾಬ್ ವಾಪಸು ಮನೆಗೆ ಬಂದಿರಲಿಲ್ಲ. ಅಜಿತಾಬ್ ನಾಪತ್ತೆ ಬಗ್ಗೆ ದೂರು ಕೊಟ್ಟರೂ ಎಲ್ಲೂ ಪತ್ತೆಯಾಗಲಿಲ್ಲ. ಕೊನೆಗೆ ಸಿಬಿಐ ತನಿಖೆ ನಡೆಸಿದರೂ ಅಜಿತಾಬ್ ಸುಳಿವು ಸಿಗಲೇ ಇಲ್ಲ. ಈಗಲೂ ಅವರ ತಂದೆ ಅಜಿತಾಬ್ ಗಾಗಿ ಪರಿತಪಿಸುತ್ತಿದ್ದಾರೆ. ಹೀಗೆ ಒಎಲ್ಎ ಕ್ಸ್ ನಲ್ಲಿ ಕಾರು ಮಾರಲು ಹೋದ ಅಜಿತಾಬ್ ಕಣ್ಮರೆಯಾಗಿ ಹೋದವ ಐದು ವರ್ಷವಾದ್ರೂ ಪತ್ತೆಯಾಗಿಲ್ಲ. ಅಜಿತಾಬ್ ಬದುಕಿದ್ದಾನೆ ಎಂಬುದೂ ಗೊತ್ತಿಲ್ಲ. ಅವರ ಕುಟುಂಬ ಮಾತ್ರ ಇನ್ನೂ ಕಣ್ಣೀರು ಸುರಿಸುತ್ತಿದೆ.

ಕಾರು ಹೋದ್ರೆ OLX ಜವಾಬ್ಧಾರಿ ಅಲ್ಲ:

ಕಾರು ಹೋದ್ರೆ OLX ಜವಾಬ್ಧಾರಿ ಅಲ್ಲ:

ಒಎಲ್ ಎಕ್ಸ್ ಒಂದು ಜನರು ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಮಾರಾಟ ಮಾಡಲು ಹಾಗೂ ಖರೀದಿ ಮಾಡಲು ವೇದಿಕೆ ಕಲ್ಪಿಸಿರುವ ಆನ್‌ಲೈನ್ ಜಾಲ ಆಣ. ಯಾವ ಮಧ್ಯವರ್ತಿಗಳ ನೆರವು ಇಲ್ಲದೇ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ಆದರೆ ಇಲ್ಲಿ ಹಾಕುವ ಪೋಸ್ಟ್ ಗಳಿಗೂ ಆಗುವ ವಂಚನೆಗಳಿಗೂ ಒಎಲ್ ಎಕ್ಸ್ ಸಂಸ್ಥೆಗೂ ಸಂಬಂಧ ಇರಲ್ಲ. ಕಾರು ಅಥವಾ ಬೈಕ್ ಕಳೆದುಕೊಂಡರೆ ಒಎಲ್ ಎಕ್ಸ್ ಜವಾಬ್ಧಾರಿ ಆಗಿರುವುದಿಲ್ಲ. ಹೀಗಾಗಿ ವಸ್ತುಗಳನ್ನು ಮಾರಾಟ ಮಾಡುವಾಗ ಸಾರ್ವಜನಿಕರೇ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಮೋಸ ಹೋಗುವುದು ಗ್ಯಾರೆಂಟಿ. ಮೋಸಕ್ಕೂ ಕಂಪನಿಗೂ ಯಾವುದೇ ಸಂಬಂಧ ಇರುವುದಿಲ್ಲ.

English summary
OLX car test drive scam: Beware of car stealing in the name of test drive : Olx car theft case detected by Amrutahalli police know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X