• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಷೇಧಿತ ಡ್ರಗ್ ಜಾಲ ಭೇದಿಸಿದ ಎನ್‌ಸಿಬಿ ಪೊಲೀಸರು

|
Google Oneindia Kannada News

ನಿಷೇಧಿತ ಅಲ್‌ಪ್ರಾಜೋನಮ್ ಡ್ರಗ್ ಜಾಲವನ್ನು ಎನ್‌ಸಿಬಿ ಪೊಲೀಸರು ಭೇದಿಸಿದ್ದಾರೆ.
ಕರ್ನಾಟಕ , ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಎನ್‌ಸಿಬಿ ಪೊಲೀಸರು ಕೋಲಾರದಲ್ಲಿ ಬಂಧಿಸಿದ್ದಾರೆ.
ಆರೋಪಿಗಳಿಂದ 91.5 ಕೆಜಿ ಅಲ್‌ಪ್ರಾಜೋನಮ್ ವಶಪಡಿಸಿಕೊಳ್ಳಲಾಗಿದೆ.

ತನಿಖೆಯಲ್ಲಿ ತಿಳಿದುಬಂದ ಅಂಶಗಳ ಪ್ರಕಾರ ಈ ಡ್ರಗ್‌ನ್ನು ಬೀದರ್‌ನ ಇಂದು ಡ್ರಗ್ ಪ್ರೈವೇಟ್ ಲಿಮಿಟೆಡ್ ಘಟಕದಲ್ಲಿ ಉತ್ಪಾದಿಸಲಾಗಿತ್ತು. ಘಟಕದ ಮೇಲೂ ದಾಳಿ ನಡೆಸಲಾಗಿದ್ದು, ಅಲ್ಲಿಯೇ ಡ್ರಗ್ ಉತ್ಪಾದನೆ ಮಾಡುತ್ತಿದ್ದ ಕುರಿತು ಪೂರಕ ಸಾಕ್ಷಿಗಳು ದೊರೆತಿವೆ ಎಂದು ಎನ್‌ಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದಲ್ಲದೆ ಘಟಕದ ಮಾಲೀಕ ಎನ್‌ವಿ ರೆಡ್ಡಿಯ ಹೈದರಾಬಾದ್ ನಿವಾಸದ ಮೇಲೂ ದಾಳಿ ನಡೆಸಲಾಗಿದೆ. ಅಲ್ಲಿ 62 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣದಲ್ಲಿ ಎಸ್ ಭಾಸ್ಕರ್, ವೈವಿ ರೆಡ್ಡಿ ಕಿಂಗ್‌ಪಿನ್‌ಗಳೆಂದು ತಿಳಿದುಬಂದಿದೆ. ಎನ್‌ಸಿಬಿ ಪೊಲೀಸರು ಪ್ರಕರಣದಲ್ಲಿ ಈ ಇಬ್ಬರು ಕಿಂಗ್‌ಪಿನ್‌ಗಳು ಸೇರಿ ಎಸ್‌ ಮೆನನ್ , ಅಮೃತ್ ಮತ್ತು ಎನ್‌ವಿ ರೆಡ್ಡಿಯನ್ನು ಬಂಧಿಸಿದ್ದಾರೆ.

bengaluru-ncb-sleuths-bust-drug-racket-seize-91-kg-of-alprazolam-5-arrested
   ಪಿನಾಕ ರಾಕೆಟ್ ನ್ನ ಯಶಸ್ವಿಯಾಗಿ ಹಾರಿಸಲಾಗಿದೆ! | Oneindia Kannada

   ಇವರೆಲ್ಲರೂ ತೆಲಂಗಾಣ ನಿವಾಸಿಗಳಾಗಿದ್ದಾರೆ. ಸಿನಿಮೀಯ ಮಾದರಿಯಲ್ಲಿ ಆರೋಪಿಗಳನ್ನು ಚೇಸ್ ಮಾಡಿ, ಬಂಧಿಸಲಾಗಿದೆ ಎಂದು ಎನ್‌ಸಿಬಿ ಪೊಲೀಸರು ತಿಳಿಸಿದ್ದಾರೆ.

   English summary
   The Narcotics Control Bureau (NCB) conducted a raid at bider,hyderabad and seized large quantity of Alprazolam drugs
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X