ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬನ್ನೇರುಘಟ್ಟ ಜೈವಿಕ ಉದ್ಯಾನದ ಸಹದೇವ ಇನ್ನಿಲ್ಲ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್. 25: ಬೆಂಗಳೂರಿನ ಬನ್ನೇರುಘಟ್ಟ ಉದ್ಯಾನವನದಲ್ಲಿ ಉಸಿರಾಟ ತೊಂದರೆಯಿಂದ ಸಿಂಹವೊಂದು ಮೃತಪಟ್ಟಿದೆ. ಸೆಪ್ಟೆಂಬರ್ 24ರಂದು ಸಹದೇವ ಎಂಬ ಹೆಸರಿನ ಸಿಂಹ ಮೃತಪಟ್ಟಿದೆ.

ಸಿಂಹವು ಹಲವು ದಿನಗಳಿಂದ ಶ್ವಾಸಕೋಶ ತೊಂದರೆ ಬಳಲುತ್ತಿತ್ತು. ಸೆಪ್ಟೆಂಬರ್ 19ರಿಂದ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಿಂಹಕ್ಕೆ 6ವರ್ಷ ವಯಸ್ಸಾಗಿತ್ತು. ದೇಹದ ಅಂಗಾಂಗಗಳ ಮಾದರಿಯನ್ನು ತೆಗೆದು ಐಎಎಚ್ ಹಾಗೂ ವಿಬಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ [ಬನ್ನೇರುಘಟ್ಟ ಪಾರ್ಕ್ ಪ್ರವೇಶ ಇನ್ನು ದುಬಾರಿ]

Bengaluru: Lion dies at Bannerghatta Biological Park

ಸಿಂಹಗಳ ವಯಸ್ಸು ಸಾಮಾನ್ಯವಾಗಿ 14-16 ವರ್ಷ. ಕೆಲ ಸಿಂಹಗಳು ಅಪರೂಪಕ್ಕೆ 18 ವರ್ಷ ಬದುಕುತ್ತವೆ. ಆದರೆ ಉಸಿರಾಟ ತೊಂದರೆಗೆ ಸಿಲುಕಿದ ಸಹದೇವ 6ನೇ ವರ್ಷಕ್ಕೆ ಮೃತಪಟ್ಟಿದೆ.

ಕಳೆದ 2010ರ ಅಕ್ಟೋಬರ್ ನಲ್ಲಿ ಗಣೇಶ (14) ಎಂಬ ಹೆಸರಿನ ಚಿರತೆ ಹಾಗೂ ರಾಜಾ (26) ಎಂಬ ಹೆಸರಿನ ಸಿಂಹ ಬನ್ನೇರುಘಟ್ಟ ಉದ್ಯಾನವನದಲ್ಲಿ ಮೃತಪಟ್ಟಿದ್ದವು. ಇವು ಸಹ ಉಸಿರಾಟ ತೊಂದರೆಯಿಂದಲೇ ಸಾವಿಗೀಡಾಗಿದ್ದವು.

English summary
Bengaluru: Six- year- old lion Sahadev, who was ill from the past few days, died on Thursday at the Bannerghatta Biological Park (BBP). He was ill from September and kept under continuous observation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X