ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿ.ಜಯಲಲಿತಾ ಅವರ 11,344 ಸೀರೆ ಮತ್ತು ಚಪ್ಪಲಿ ಹರಾಜಿಗೆ ನಿರ್ದೇಶನ ಕೋರಿ ಸುಪ್ರೀಂಗೆ ಮನವಿ

|
Google Oneindia Kannada News

ಬೆಂಗಳೂರು, ಜೂ. 25: ಕಳೆದ 26 ವರ್ಷದಿಂದ ಬೆಂಗಳೂರಿನ ಖಜಾನೆಯಲ್ಲಿ ಬಿದ್ದಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ 11,344 ಸೀರೆಗಳು, 750 ಜತೆ ಚಪ್ಪಲಿ, 250 ಶಾಲುಗಳು ಸುದ್ದಿ ಕೇಂದ್ರಕ್ಕೆ ಬಂದಿವೆ. ಕರ್ನಾಟಕದ ಖಜಾನೆಯಲ್ಲಿ ಕೊಳೆಯುತ್ತಿರುವ ಜಯಲಲಿತಾ ಸೀರೆಗಳು, ಚಪ್ಪಲಿಗಳನ್ನು ಸಾರ್ವಜನಿಕ ಹರಾಜು ಹಾಕುವಂತೆ ಕೋರಿ ಬೆಂಗಳೂರಿನ ವಕೀಲ ಟಿ. ನರಸಿಂಹಮೂರ್ತಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ. ಅನ್ಯಾಯವಾಗಿ ಕೊಳೆಯುತ್ತಿರುವ ದಿ. ಜಯಲಲಿತಾ ಸೀರೆ ಮತ್ತು ಚಪ್ಪಲಿಗಳನ್ನು ಹರಾಜು ಹಾಕುವಂತೆ ಕೋರಿ ರಾಜ್ಯ ಮುಖ್ಯ ನ್ಯಾಯಮೂರ್ತಿಗಳಿಗೂ ಪತ್ರ ಬರೆದು ಕೋರಿದ್ದಾರೆ.

ದಿವಂಗತ ಕುಮಾರಿ ಜಯಲಲಿತಾ ಅವರು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದರು. ಆದರೆ, ಜಯಲಲಿತಾ 2016 ರಲ್ಲಿಯೇ ನಿಧನರಾಗಿದ್ದಾರೆ. ಜಯಲಲಿತಾ ಅವರಿಗೆ ಸಂಬಂಧಿಸಿದ ಅಕ್ರಮ ಆಸ್ತಿಯನ್ನು ಸಿಬಿಐ ಅಧಿಕಾರಿಗಳು ಜಪ್ತಿ ಮಾಡಿದ್ದ ಚಿನ್ನ, ಬೆಳ್ಳಿ ಬಟ್ಟೆ ಚಪ್ಪಲಿ ಎಲ್ಲವೂ ಕರ್ನಾಟಕದ ವಿಧಾನಸೌಧ ಬಳಿ ಇರುವ ಖಜಾನೆಯಲ್ಲಿವೆ. ಜಯಲಲಿತಾ ಬಳಿ ವಶಪಡಿಸಿಕೊಂಡ ಸೀರೆಗಳನ್ನು ಒಂದು ದಿನಕ್ಕೆ ಒಂದು ಉಟ್ಟುಕೊಂಡರೂ ಸುಮಾರು 38 ವರ್ಷ ಆಗುತ್ತಿತ್ತು. ದಿನಕ್ಕೊಂದು ಚಪ್ಪಲಿ ಧರಿಸಿದರೆ ಒಂದು ಸುತ್ತು ಮುಗಿಯಲು ಎರಡು ವರ್ಷ ಕಾಯಬೇಕಿತ್ತು. ಸೀರೆಗಳ ಹಾಗೂ ಚಪ್ಪಲಿಗಳ ಪ್ರೇಮಿಯಾಗಿದ್ದ ಜಯಲಲಿತಾ ಅವರ ಅಕ್ರಮ ಆಸ್ತಿ ಪತ್ತೆಯಾಗಿದ್ದ ವೇಳೆ ಅವರ ಸೀರೆ ಮತ್ತು ಚಪ್ಪಲಿಗಳೇ ದೊಡ್ಡ ಸುದ್ದಿಯಾಗಿತ್ತು.

ಜಯಲಲಿತಾ ಸೀರೆಗಳ ಬಹಿರಂಗ ಹರಾಜಿಗೆ ಮನವಿ:

ಜಯಲಲಿತಾ ಸೀರೆಗಳ ಬಹಿರಂಗ ಹರಾಜಿಗೆ ಮನವಿ:

ಜಯಲಲಿತಾ ಅವರಿಂದ ವಶಪಡಿಸಿಕೊಂಡಿರುವ ವಸ್ತುಗಳು ಇದೀಗ ಸರ್ಕಾರಕ್ಕೆ ಸೇರಿವೆ. ಜಯಲಲಿತಾ ಅವರಿಂದ ವಶಪಡಿಸಿಕೊಂಡಿರುವ 11,344 ಸೀರೆಗಳು, 750 ಚಪ್ಪಲಿ ಹಾಗೂ 250 ಶಾಲುಗಳು 26 ವರ್ಷದಿಂದ ಕೊಳೆಯುತ್ತಿವೆ. ಇವನ್ನು ಹೀಗೆ ಬಿಟ್ಟರೆ ನಿಷ್ಪ್ರಯೋಜಕವಾಗಲಿವೆ. ಜಯಲಲಿತಾ ಅವರ ಸೀರೆ, ಚಪ್ಪಲಿ ಹಾಗೂ ಶಾಲುಗಳನ್ನು ಸಾರ್ವಜನಿಕ ಹರಾಜು ಹಾಕಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ವಕೀಲ ನರಸಿಂಹಮೂರ್ತಿ ಅವರು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದಾರೆ.

ಜಯಲಲಿತಾ ಸೀರೆ ಹರಾಜಿನಿಂದ ಅಗುವ ಪ್ರಯೋಜನ:

ಜಯಲಲಿತಾ ಸೀರೆ ಹರಾಜಿನಿಂದ ಅಗುವ ಪ್ರಯೋಜನ:

ದಿವಂಗತ ಜಯಲಲಿತಾ ಅವರು ಅಕ್ರಮ ಆಸ್ತಿ ಗಳಿಸಿರುವುದು ಸಾಬೀತಾಗಿದೆ. ಹೀಗಾಗಿ ಜಯಲಲಿತಾ ಅವರ ಅಕ್ರಮ ಅಸ್ತಿ ಸರ್ಕಾರಕ್ಕೆ ಸೇರಿದ್ದು. ಅದು ರಾಷ್ಟ್ರೀಯ ಸಂಪತ್ತು. ಜಯಲಲಿತಾ ಅವರಿಂದ ವಶಪಡಿಸಿಕೊಂಡಿರುವ ಸೀರೆಗಳು, ಚಪ್ಪಲಿಗಳು, ಶಾಲುಗಳು ಈಗಾಗಲೇ 26 ವರ್ಷದಿಂದ ಖಜಾನೆಯಲ್ಲಿ ಕೊಳೆಯುತ್ತಿವೆ. ಹೀಗೇ ಬಿಟ್ಟರೆ ಅವರು ನಿಷ್ಪ್ರಯೋಜಕವಾಗುತ್ತವೆ. ಈಗಾಗಿ ಈ ವಸ್ತುಗಳನ್ನು ಹರಾಜು ಹಾಕುವುದರಿಂದ ಜಯಲಲಿತಾ ಅಭಿಮಾನಿಗಳು ಅವರ ಮೇಲಿನ ಅಭಿಮಾನದಿಂದ ಸೀರೆಗಳನ್ನು ಮಾರುಕಟ್ಟೆ ಬೆಲೆಗಿಂತಲೂ ಹತ್ತು ಪಟ್ಟು ಹೆಚ್ಚು ಕೊಟ್ಟು ಬೆಲೆ ಕೊಟ್ಟು ಖರೀದಿ ಮಾಡಲಿದೆ. ಜಯಲಲಿತಾ ಅವರ ನೆನಪಲ್ಲಿ ಅವನ್ನು ಸಂರಕ್ಷಣೆ ಮಾಡಲಿದ್ದಾರೆ. ಇದರಿಂದ ಸರ್ಕಾರಕ್ಕೆ ಆದಾಯ ಬರುವ ಜತೆಗೆ ಜಯಲಲಿತಾ ಅವರ ವಸ್ತುಗಳನ್ನು ಖರೀದಿ ಮಾಡಿದವರು ಅವರ ನೆನಪನ್ನು ಶಾಶ್ವತವಾಗಿ ಇಟ್ಟುಕೊಳ್ಳಲಿದ್ದಾರೆ. ಹೀಗಾಗಿ ಜಯಲಲಿತಾ ಅವರಿಂದ ವಶಪಡಿಸಿಕೊಂಡ ವಸ್ತುಗಳ ಪೈಕಿ ಕೇವಲ ಸೀರೆ, ಚಪ್ಪಲಿ ಮತ್ತು ಶಾಲುಗಳನ್ನು ಹರಾಜು ಹಾಕಲು ಸರ್ಕಾರಕ್ಕೆ ನಿರ್ದೇಶನ ಕೋರಿ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದಾರೆ.

2014 ರಲ್ಲಿ ಬಂಧನಕ್ಕೆ ಒಳಗಾಗಿದ್ದ ಜಯಲಲಿತಾ

2014 ರಲ್ಲಿ ಬಂಧನಕ್ಕೆ ಒಳಗಾಗಿದ್ದ ಜಯಲಲಿತಾ

ತಮಿಳುನಾಡಿನಲ್ಲಿ ಆರು ಬಾರಿ ಸಿಎಂ ಖುರ್ಚಿ ಅಲಂಕರಿಸಿದ್ದ ಕರ್ನಾಟಕ ಮೂಲದ ನಟಿ ದಿ.ಜಯಲಲಿತಾ ಅವರ 1991-96 ರಲ್ಲಿ ಸಿಎಂ ಆಗಿದ್ದಾಗ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಅರೋಪಿಸಿ ವಕೀಲ ಸುಬ್ರಮಣಿಯಮ್ ಸ್ವಾಮಿ ದೂರು ನೀಡಿದ್ದರು. ಜಯಲಲಿತಾ ಅವರ ಮೇಲೆ ಅಕ್ರಮ ಆಸ್ತಿ ಗಳಿಕೆ ಸಂಬಂಧ ನ್ಯಾಯಾಲಯದ ನಿರ್ದೇಶನದ ಮೇರೆಗೆ ಸಿಬಿಐ 1997 ರಲ್ಲಿ ಪ್ರಕರಣ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಈ ಪ್ರಕರಣ ಗಂಭೀರ ಸ್ವರೂಪವಾಗಿದ್ದರಿಂದ ಸುಪ್ರೀಂಕೋರ್ಟ್ ನಿರ್ದೇಶನ ಮೇರೆಗೆ ನೆರೆ ರಾಜ್ಯ ಕರ್ನಾಟಕದ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಿತು.

ಸುಪ್ರೀಂಕೋರ್ಟ್ ತೀರ್ಪು ವೇಳೆಗೆ ಜಯಲಲಿತಾ ನಿಧನ:

ಸುಪ್ರೀಂಕೋರ್ಟ್ ತೀರ್ಪು ವೇಳೆಗೆ ಜಯಲಲಿತಾ ನಿಧನ:

ಜಯಲಲಿತಾ ತಮಿಳುನಾಡಿನ ಸಿಎಂ ಆಗಿದ್ದರಿಂದ ಅಲ್ಲಿ ಟ್ರಯಲ್ ನಡೆಯೋದು ಬೇಡ ಎಂದು ಡಿಎಂಕೆ ಸುಪ್ರಿಂಕೋರ್ಟ್ ನಲ್ಲಿ ಮನವಿ ಸಲ್ಲಿಸಿದ ಕಾರಣ ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಜೈಲಿನ ಅವರಣದಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಿ ವಿಚಾರಣೆ ನಡೆಸಲಾಗಿತ್ತು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯದ ನ್ಯಾ. ಮೈಕಲ್ ಡಿ. ಕುನ್ನಾ ಅವರು ಜಯಲಲಿತಾ, ಸಹವರ್ತಿ ಶಶಿಕಲಾ, ಇಳವರಸಿ ಸೇರಿದಂತೆ ಅರೋಪಿಗಳಿಗೆ ನಾಲ್ಕು ವರ್ಷ ಸಜೆ ಹಾಗೂ 100 ಕೋಟಿ ರೂ. ದಂಡ ವಿಧಿಸಿ ಮಹತ್ವದ ಆದೇಶ ನೀಡಿತ್ತು. ಈ ವೇಳೆ ಜಯಲಿತಾ, ಶಶಿಕಲಾ ಇತರರನ್ನು ಜೈಲಿಗೆ ಕಳುಹಿಸಲಾಗಿತ್ತು. ವಿಶೇಷ ನ್ಯಾಯಾಲಯ ನೀಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿತ್ತು. ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. 2017 ರಲ್ಲಿ ಸುಪ್ರಿಂಕೋರ್ಟ್ ಅಧೀನ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದಿತ್ತು. 2016 ಡಿಸೆಂಬರ್ ನಲ್ಲಿಯೇ ಜಯಲಲಿತಾ ಅವರು ನಿಧನರಾಗಿದ್ದರು. ಅವರ ಸಹವರ್ತಿ ಶಶಿಕಲಾ, ಇಳವರಸಿ , ಸುಧಾಕರನ್ ಇತರರು ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಿ ಇತ್ತೀಚೆಗೆ ಜೈಲು ಶಿಕ್ಷೆ ಪೂರೈಸಿ ಬಿಡುಗಡೆಯಾಗಿದ್ದರು.

ಜಯಲಲಿತಾ ಚಿನ್ನಕ್ಕಿಂತ ಸೀರೆ, ಚಪ್ಪಲಿಯೇ ಸುದ್ದಿ

ಜಯಲಲಿತಾ ಚಿನ್ನಕ್ಕಿಂತ ಸೀರೆ, ಚಪ್ಪಲಿಯೇ ಸುದ್ದಿ

ಕರ್ನಾಟಕದ ಮೂಲದ ನಟಿ ಜಯಲಲಿತಾ ತನ್ನ ವರ್ಣ ರಜಿಂತ ನಟನಾ ಬದುಕಿನ ಜತೆ ರಾಜಕೀಯಕ್ಕೆ ಪ್ರವೇಶಿಸಿದರು. ಸಹಿಸಲಾರದಷ್ಟು ಅವಮಾನ ಸಹಿಸಿ ಎಐಡಿಎಂಕೆ ಪಕ್ಷವನ್ನು ಬೆಳೆಸಿ ತಮಿಳುನಾಡಿನ ಸಿಎಂ ಪಟ್ಟ ಅಲಂಕರಿಸಿ ಆಡಳಿತ ನಡೆಸಿದರು. ಸೀರೆಗಳು, ಬಟ್ಟೆಗಳು, ಚಪ್ಪಲಿ ಅಂದ್ರೆ ಜಯಲಲಿತಾ ಅವರಿಗೆ ಪಂಚಪ್ರಾಣ. ಅವರ ಮನೆಯಲ್ಲಿ 28 ಕೆಜಿ ಚಿನ್ನ, 700 ಕೆಜಿ ಬೆಳ್ಳಿ ವಸ್ತು, ವಜ್ರ ವೈಢೂರ್ಯ ವಶಪಡಿಸಿಕೊಳ್ಳಲಾಗಿತ್ತು. ದೊಟ್ಟ ಮಟ್ಟದಲ್ಲಿ ಸುದ್ದಿಯಾಗಿದ್ದು ಜಯಲಲಿತಾ ಅವರ 11,344 ಸೀರೆ ಮತ್ತು 750 ಜತೆ ಚಪ್ಪಲಿಗಳು ಮಾತ್ರ.

English summary
Bengaluru Lawyer T. Narasimhamurthy appeals Supreme Court CJI to seek auction of Ex Tamil Nadu CM Jayalalithaa 11,344 sarees which are at the custody of Karnataka courts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X