ಕೆಪಿಎಸ್ಸಿ ಮರುಪರೀಕ್ಷೆ ನಡೆಸಲು ಸರ್ಕಾರಕ್ಕೆ ಡೆಡ್‌ಲೈನ್

Written By:
Subscribe to Oneindia Kannada

ಬೆಂಗಳೂರು, ಮೇ 23: ಸಾಮಾಜಿಕ ತಾಣಗಳನ್ನು ಬಳಸಿಕೊಂಡು ಪ್ರತಿಭಟನೆಗೆ ನಾಂದಿ ಹಾಡಿದ್ದ ಪ್ರಥಮ ದರ್ಜೆ ಸಹಾಯಕರ ನೇಮಕಾತಿ (ಎಫ್ ಡಿ ಎ)ಪರೀಕ್ಷೆ ಬರೆದವರು ಸೋಮವಾರ ನಗರದಲ್ಲಿ ತಮ್ಮ ಆಕ್ರೋಶ ಹೊರಹಾಕಿದರು.

ಸುಮಾರು ಎರಡು ಸಾವಿರಕ್ಕೂ ಅಧಿಕ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಆಮ್ ಆದ್ಮಿ ಪಕ್ಷದ ಮುಖಂಡ ರವಿಕೃಷ್ಣಾ ರೆಡ್ಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.['ಕೆಪಿಎಸ್‌ಸಿ ಅಧ್ಯಕ್ಷರಾಗಲು ಶ್ಯಾಂ ಭಟ್ ಅರ್ಹ ವ್ಯಕ್ತಿಯಲ್ಲ']

kpsc

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರೆ ಕೆ ಪಿ ಎಸ್ ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಇದ್ದಾರೆ. ಆರೋಪಿಗಳ ಜಾಡು ಹುಡುಕುವಲ್ಲಿ ಸರ್ಕಾರ ನಿರ್ಲಜ್ಜ ಭಾವನೆ ತಾಳಿದೆ. ಇದಕ್ಕೆಲ್ಲ ಉತ್ತರ ನೀಡುವ ಕಾಲ ದೂರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.[ಕನ್ನಡದಲ್ಲೇ ಯುಪಿಎಸ್ಸಿ ಬರೆದ ಭೈರಪ್ಪ ಸಂದರ್ಶನ]

ಅಭ್ಯರ್ಥಿಗಳ ಬೇಡಿಕೆಗಳೇನು?
* ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅನುಮಾನ ಕಾಡುತ್ತಿದೆ.
* ಎಫ್ ಡಿ ಎ ಪರೀಕ್ಷಾ ಪತ್ರಿಕೆಗಳು ಲೀಕ್ ಆಗಿರುವ ಬಗ್ಗೆ ಮಾಹಿತಿಯಿದೆ.
* ಸರ್ಕಾರ ಕೂಡಲೇ ಮರು ಪರೀಕ್ಷೆ ನಡೆಸಲು ಕ್ರಮ ತೆಗೆದುಕೊಳ್ಳಬೇಕು.
* ಕೆಲವೆಡೆ ಸಾಮೂಹಿಕ ನಕಲು ನಡೆದಿರುವ ಮಾಹಿತಿಯಿದ್ದು ಅಕ್ರಮದ ಗೂಡಾಗಿರುವ ಪರೀಕ್ಷೆ ರದ್ದು ಮಾಡಿ ವ್ಯವಸ್ಥಿತವಾಗಿ ನಡೆಸಬೇಕು.
* ದಿನಾಂಕ ನಿಗದಿ ಮಾಡಿ ಅಭ್ಯರ್ಥಿಗಳಿಗೆ ಪುನಃ ಬರೆಯುವ ಅವಕಾಶ ಕಲ್ಪಿಸಿ ಕೊಡಬೇಕು.
* ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
* ಅಕ್ಟೋಬರ್ 10, 2015 ರಂದು ನಡೆದ ಪರೀಕ್ಷೆಯ ಪತ್ರಿಕೆ ಸೋರಿಕೆಯಾಗಿದ್ದ ಬಗ್ಗೆ ಸಾಕಷ್ಟು ವರದಿಗಳು ಬಂದಿವೆ. ಆದರೂ ಸರ್ಕಾರ ಹಳೆಯ ಪರೀಕ್ಷೆಯನ್ನೇ ಮಾನ್ಯ ಮಾಡಲು ಮುಂದಾಗಿದೆ ಎಂದು ಆರೋಪ ಮಾಡಿದರು.

-
-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hundreds of youth from across the state who had taken FDA exam conducted by the KPSC are protesting at Freedom Park Bengaluru for demanding justice from the government and KPSC. There are reports that the same gang that was involved in PUC paper leak was also involved in FDA question paper leaks. There are reports that hundreds of candidates are selected from few/specific examination centres.
Please Wait while comments are loading...