ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಸ್‌ಪೋರ್ಟ್‌ಗಾಗಿ ಹುಬ್ಬಳ್ಳಿಯತ್ತ ಮುಖ ಮಾಡಿದ ಬೆಂಗಳೂರಿಗರು!

|
Google Oneindia Kannada News

ಬೆಂಗಳೂರು, ಮೇ 14 : ಪಾಸ್‌ ಪೋರ್ಟ್ ಮಾಡಿಸಲು ಬೆಂಗಳೂರಿನ ಜನರು ಹುಬ್ಬಳ್ಳಿ ಸೇರಿದಂತೆ ಇತರ ನಗರಗಳತ್ತ ಹೋಗುತ್ತಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ಕಾಯುವ ಅವಧಿ ಕಡಿಮೆ ಇರುವುದರಿಂದ ಜನರು ಅತ್ತ ಮುಖ ಮಾಡಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಬೆಂಗಳೂರಿನಲ್ಲಿ ಪಾಸ್‌ಪೋರ್ಟ್‌ ಮಾಡಿಸಲು 30 ರಿಂದ 40 ದಿನಗಳ ಕಾಲ ಕಾಯಬೇಕಿದೆ. ಹುಬ್ಬಳ್ಳಿಯಲ್ಲಿ ಬೇಗ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದು, ಜನರು ಅತ್ತ ಹೋಗುತ್ತಿದ್ದಾರೆ. ಆದರೆ, ತುರ್ತಾಗಿ ಪಾಸ್‌ಪೋರ್ಟ್‌ ಬೇಕಾದವರ ನೆರವಿಗಾಗಿ ಕೋರಮಂಗಲ ಕಚೇರಿಯಲ್ಲಿ ಪ್ರತ್ಯೇಕ ವಿಭಾಗ ತೆರೆಯಲಾಗಿದೆ.

ಚಿತ್ರದುರ್ಗಕ್ಕೆ ಸಿಕ್ಕಿತು ಪಾಸ್‌ಪೋರ್ಟ್ ಸೇವಾಕೇಂದ್ರಚಿತ್ರದುರ್ಗಕ್ಕೆ ಸಿಕ್ಕಿತು ಪಾಸ್‌ಪೋರ್ಟ್ ಸೇವಾಕೇಂದ್ರ

ಪಾಸ್‌ಪೋರ್ಟ್ ಮಾಡಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಸರಳವಾಗಿಸಿದೆ. ಯಾವುದೇ ವ್ಯಕ್ತಿ ದೇಶದ ಯಾವುದೇ ನಗರದಿಂದ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ, ಪೊಲೀಸ್ ಪ್ರಕ್ರಿಯೆ ಮುಗಿದ ಬಳಿಕ ಪಾಸ್‌ಪೋರ್ಟ್ ಸಿಗುತ್ತದೆ.

Bengalureans traveling to Hubballi for passport

ಬೆಂಗಳೂರಿನ ಲಾಲ್‌ಬಾಗ್, ಮಾರತಹಳ್ಳಿ, ಜಾಲಹಳ್ಳಿ ಪ್ರಾದೇಶಿಕ ಕೇಂದ್ರಗಳಲ್ಲಿ ಜನರ ಒತ್ತಡ ಕಡಿಮೆ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲಿಯೂ ಶೀಘ್ರದಲ್ಲಿ ಪ್ರಾದೇಶಿಕ ಕೇಂದ್ರ ಆರಂಭವಾಗಲಿದೆ.

543 ಸಂಸದೀಯ ಕ್ಷೇತ್ರಗಳಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ543 ಸಂಸದೀಯ ಕ್ಷೇತ್ರಗಳಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ

ಬೆಂಗಳೂರಿನ ಲಾಲ್‌ಬಾಗ್‌ ಕೇಂದ್ರದಲ್ಲಿ ಪ್ರತಿದಿನ 1500 ಅರ್ಜಿ ಸ್ವೀಕಾರ ಮಾಡಲಾಗುತ್ತಿದೆ. ಇದನ್ನು ಇನ್ನೂ 50ಕ್ಕೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಮಾರತಹಳ್ಳಿಯಲ್ಲಿ 575 ಅರ್ಜಿ ಸ್ವೀಕರಿಸಲಾಗುತ್ತಿದ್ದು, ಇದನ್ನು 25ಕ್ಕೆ, ಜಾಲಹಳ್ಳಿಯಲ್ಲಿ 80 ಅರ್ಜಿ ಸ್ವೀಕಾರ ಮಾಡಲಾಗುತ್ತಿದ್ದು, ಇದನ್ನು ಹೆಚ್ಚಿಸಲು ಚಿಂತಿಸಲಾಗಿದೆ.

English summary
Bengalureans traveling to Hubballi Passport Seva Kendras where the waiting period is less. In Bengaluru 3 Passport Seva Kendras long waiting period forcing people to travel district center.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X