• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಳ್ತಂಗಡಿ: 5ಬಾರಿಯ ಶಾಸಕ ವಸಂತ ಬಂಗೇರ ಸ್ಪರ್ಧೆಯ ನಿರ್ಧಾರವೇ ಹೈಲೈಟ್

|

ಮಂಗಳೂರು, ಫೆಬ್ರವರಿ 5: ಪಶ್ಚಿಮ ಘಟ್ಟದ ತಪ್ಪಲು, ಹಸಿರು ಸಿರಿಯಿಂದ ಕಂಗೊಳಿಸುವ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರುತ್ತದೆ. ಪ್ರಸ್ತುತ ಈ ಕ್ಷೇತ್ರವನ್ನು ಕಾಂಗ್ರೆಸ್ ನ ವಸಂತ ಬಂಗೇರ ಶಾಸಕರಾಗಿದ್ದಾರೆ. 5 ಬಾರಿ ಬೆಳ್ತಂಗಡಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವಸಂತ ಬಂಗೇರರು ಕಳೆದ 2 ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿದ್ದಾರೆ.

2013 ನೇ ಸಾಲಿನ ಚುನಾವಣೆಯಲ್ಲಿ ವಸಂತ ಬಂಗೇರರು ಎದುರಾಳಿ ಬಿಜೆಪಿಯ ರಂಜನ್ ಜಿ. ಗೌಡ ರನ್ನು 15741 ಮತಗಳ ಅಂತರದಿಂದ ಸೋಲಿಸಿದ್ದರು. ವಸಂತ ಬಂಗೇರ ಕಳೆದ ಬಾರಿ 74,530 ಮತಗಳನ್ನು ಗಳಿಸಿದ್ದರೆ, ಬಿಜೆಪಿಯ ರಂಜನ್ ಜಿ. ಗೌಡ 58,789 ಮತಗಳನ್ನಷ್ಟೇ ಪಡೆಯುವಲ್ಲಿ ಸಫಲರಾಗಿದ್ದರು.

2008ರಿಂದ ಮುಂಬರುವ ಚುನಾವಣೆಯಲ್ಲಿ ಆರೋಗ್ಯ ಸಮಸ್ಯೆಯಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೊಂಡು ಬರುತ್ತಿರುವ ವಸಂತ ಬಂಗೇರ 2013ರಲ್ಲಿ ನಿಂತು ಗೆಲುವು ಸಾಧಿಸಿದ್ದರು. ಈ ಬಾರಿಯೂ ಅದೇ ರೀತಿ ನಿಲ್ಲುವುದಿಲ್ಲ ಎಂದು ಹೇಳುತ್ತಿದ್ದರೂ ಮತ್ತೆ ನಿಂತರೆ ಅಚ್ಚರಿಯೇನಿಲ್ಲ.

ಹಾಗೆ ನೋಡಿದರೆ ಬಂಗೇರರು ಸ್ಪರ್ಧಿಸಲು ಇಚ್ಛಿಸಿದರೆ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿ ಸ್ಥಾನಕ್ಕೆ ಹೆಚ್ಚಿನ ಪೈಪೋಟಿಯೇನಿಲ್ಲ. ಎಂದಿನಂತೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಟಿಕೆಟ್ ಆಕಾಂಕ್ಷಿಯಾದರೂ ಬಂಗೇರರಿಗೇ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚು.

ಆದರೆ ಬಿಜೆಪಿಯಲ್ಲಿ ಮಾತ್ರ ಅಭ್ಯರ್ಥಿ ಸ್ಥಾನಕ್ಕಾಗಿ ಭಾರೀ ಪೈಪೋಟಿ ಇದೆ. ಈ ಹಿಂದೆ ವಸಂತ ಬಂಗೇರ ವಿರುದ್ಧ ಸ್ಪರ್ಧಿಸಿ ಸೋತಿದ್ದ ರಂಜನ್ ಜಿ. ಗೌಡ ಹಾಗೂ ಇದೀಗ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಹರೀಶ್ ಪೂಂಜಾ ನಡುವೆ ಟಿಕೆಟ್ ಗಾಗಿ ಭಾರೀ ಪೈಪೋಟಿ ಇದೆ. ಇನ್ನೊಂದೆಡೆ ವಸಂತ ಬಂಗೇರರ ಸೋದರ ಹಾಗೂ ಎರಡು ಬಾರಿಯ ಮಾಜಿ ಶಾಸಕ ಪ್ರಭಾಕರ ಬಂಗೇರ ಅವರೂ ಸ್ಪರ್ಧೆಗೆ ಉತ್ಸುಕರಾಗಿದ್ದಾರೆ ಎನ್ನುವ ಮಾಹಿತಿ ಇದೆ.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಲ್ಲವ ಹಾಗೂ ಒಕ್ಕಲಿಗ (ಗೌಡ) ಸಮುದಾಯವು ನಿರ್ಣಾಯವಾಗಿದೆ. ಅಲ್ಲದೆ ಅಲ್ಪಸಂಖ್ಯಾತ ಹಾಗೂ ದಲಿತ ಮತಗಳು ಇಲ್ಲಿದ್ದರೂ, ಈ ಎರಡು ಸಮುದಾಯಗಳ ಮತಗಳೇ ಇಲ್ಲಿ ನಿರ್ಧಾರಕ ಅಂಶಗಳಾಗಿವೆ.

ಹಾಲಿ ಶಾಸಕ ವಸಂತ ಬಂಗೇರ ತಾನು ಬಿಲ್ಲವ ಎನ್ನುವ ಟ್ರಂಪ್ ಕಾರ್ಡನ್ನು ಹಲವು ವರ್ಷಗಳಿಂದ ಬಳಸುತ್ತಾ ಬಂದಿದ್ದಾರೆ. ಸರಕಾರದ ಮೂಲಕ ಬರುವ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಅಲ್ಲದೆ ಪಕ್ಷದ ಮತಗಳ ಜೊತೆಗೆ ತನ್ನ ವೈಯುಕ್ತಿಕ ವರ್ಚಸ್ಸಿನ ಮತಗಳನ್ನೂ ಹೊಂದಿರುವ ವಸಂತ ಬಂಗೇರ ಎಲ್ಲವೂ ನಿರೀಕ್ಷಿಸಿದಂತೆ ನಡೆದರೆ ಸುಲಭ ಜಯಗಳಿಸಬಹುದಾಗಿದೆ.

ಆದರೆ ಅವರ ಸಹಜ ಒರಟುತನ, ಸಿಟ್ಟು, ಸರಕಾರದ ಕಾರ್ಯಕ್ರಮಗಳನ್ನು ವಿರೋಧಿಗಳಿಗೆ ದೊರಕದಂತೆ ಮಾಡುವ ಪ್ರವೃತ್ತಿ ಈ ಬಾರಿ ಅವರಿಗೆ ಮುಳುವಾಗಲಿದೆ ಎಂದೂ ಹೇಳಲಾಗುತ್ತಿದೆ.

ಜತೆಗೆ ರಾಜ್ಯ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂಬುದು ಕ್ಷೇತ್ರದ ಬಹುಸಂಖ್ಯಾತ ಜನತೆಯಲ್ಲಿ ಅಸಮಾಧಾನಕ್ಕೂ ಕಾರಣವಾಗಿದೆ. ಇದು ಕಾಂಗ್ರೆಸ್ ವಿರೋಧಿ ಮತಗಳಾಗಿ ಬದಲಾದರೆ, ಪಕ್ಷದ ಗೆಲುವಿಗೆ ಮುಳುವಾಗುವ ಸಂಭವವನ್ನು ತಳ್ಳಿಹಾಕುವಂತಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP is in direct fight with the Congress in Belthangady assembly constituency of Dakshina Kannada district. Vasantha Bangera (Congress) is the sitting MLA of the constituency. Were as Harish Kumar is also in the race for congress ticket. In BJP Ranjan G Gowda, Harish Poonja and Prabhakar Bangera are in the race for ticket
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more