ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಲೇಕೇರಿ ಪ್ರಕರಣ 19ಕಡೆ ಸಿಬಿಐ ದಾಳಿ

|
Google Oneindia Kannada News

ಬೆಂಗಳೂರು, ಫೆ.6 : ಬೇಲಕೇರಿ ಅದಿರು ನಾಪತ್ತೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಬಿಐ ಗುರುವಾರ ದೇಶದ ಹತ್ತು ನಗರಗಳ 19 ಕಡೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ. ಕರ್ನಾಟಕ, ಗೋವಾ, ಕೋಲ್ಕತ್ತಾ, ಮುಂಬೈಗಳಲ್ಲಿ ಏಕಕಾಲದಲ್ಲಿ ಈ ದಾಳಿ ನಡೆಸಿದೆ.

ಕಾರವಾರದ ಬೇಲೇಕೇರಿ ಬಂದರಿನಿಂದ 21 ಲಕ್ಷ ಟನ್‌ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿರುವ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಗುರುವಾರ ಬೆಂಗಳೂರು, ಬಳ್ಳಾರಿ, ಹೊಸಪೇಟೆ, ಸಂಡೂರು, ಗೋವಾ, ಸೇಲಂ, ಕೋಲ್ಕತಾ, ಮುಂಬಯಿ ಹಾಗೂ ಬೆಳಗಾವಿಯಲ್ಲಿ ದಾಳಿ ನಡೆಸಲಾಗಿದ್ದು, ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ.

CBI

ಸುಪ್ರೀಂಕೋರ್ಟ್‌ ಆದೇಶದಂತೆ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, 2013ರ ಅಕ್ಟೋಬರ್‌-ನವೆಂಬರ್‌ನಲ್ಲಿ 22 ಕೇಸುಗಳನ್ನು ಸಿಬಿಐ ದಾಖಲಿಸಿಕೊಂಡಿದ್ದು, ಪ್ರಕರಣದ ವಿಚಾರಣೆ ನಡೆಸುತ್ತಿದೆ. ಕರ್ನಾಟಕದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ಧನ ರೆಡ್ಡಿ, ಕಂಪ್ಲಿ ಶಾಸಕ ಸುರೇಶ್‌ಬಾಬು, ಕೂಡ್ಲಿಗಿ ಶಾಸಕ ನಾಗೇಂದ್ರ, ವಿಜಯನಗರ ಶಾಸಕ ಆನಂದ್‌ಸಿಂಗ್‌, ಕಾರವಾರ ಶಾಸಕ ಸತೀಶ್‌ ಸೈಲ್‌ ಸೇರಿದಂತೆ ಹಲವಾರು ಅಧಿಕಾರಿಗಳು ಬಂಧಿಸಲಾಗಿದೆ.[ಬೇಲೇಕೇರಿ ಪ್ರಕರಣ ರೆಡ್ಡಿ ಆರೋಪಿ ನಂ 1]

ಪ್ರಕರಣಕ್ಕೆ ಸಂಬಂಧಿಸಿದಂರೆ 22 ಎಫ್‌ಐಆರ್‌ಗಳು, 15 ಕಂಪನಿಗಳು, ಆರು ಪಾಲುದಾರಿಕೆ ಹಾಗೂ 2 ಮಾಲೀಕತ್ವಗಳಿಗೆ ಸಂಬಂಧಿಸಿದಂತೆ 50 ವ್ಯಕ್ತಿಗಳನ್ನು ಸಿಬಿಐ ಗುರುತಿಸಿದೆ. ಜೊತೆಗೆ ಗಣಿ ಮತ್ತು ಭೂವಿಜ್ಞಾನ ಅರಣ್ಯ ಮತ್ತಿತರ ಇಲಾಖೆಗಳ ಸಿಬ್ಬಂದಿಗಳನ್ನೂ ಗುರುತಿಸಿದ್ದು, ಇನ್ನೂ ಅನೇಕರನ್ನು ತನಿಖೆ ಸಂದರ್ಭ ಗುರುತಿಸಲಾಗುವುದು ಎಂದು ಸಿಬಿಐ ಹೇಳಿದೆ.

English summary
The Central Bureau of Investigation (CBI) conducted raids on Thursday across many locations in the country including Bangalore, Bellary, Hospet, Goa, Salem in the case of illegal export of iron ore from Belikeri port in Karnataka. The raid conducted is on both public servants and private individuals and across 25 locations including Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X