ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Karnataka Civic Body Elections Results 2021 Live: ಮೂರು ಮಹಾನಗರ ಪಾಲಿಕೆಗಳ ಚುನಾವಣಾ ಫಲಿತಾಂಶ ಲೈವ್

|
Google Oneindia Kannada News

ಕರ್ನಾಟಕ, ಸೆಪ್ಟೆಂಬರ್ 6: ರಾಜ್ಯದ ಬೆಳಗಾವಿ, ಹುಬ್ಬಳ್ಳಿ- ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ಇಂದೇ ಫಲಿತಾಂಶ ಘೋಷಿಸಲಾಗುವುದು.

ಉತ್ತರ ಕರ್ನಾಟಕ ಭಾಗದ ಮೂರು ಮಹಾನಗರ ಪಾಲಿಕೆ ಚುನಾವಣೆಯ ಮತಗಳ ಎಣಿಕೆ ನಡೆಯುತ್ತಿದ್ದು, ಈ ಪಾಲಿಕೆಗಳ ಚುನಾವಣಾ ಫಲಿತಾಂಶಗಳು ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ.

ರಾಜ್ಯದ ಉತ್ತರ ಭಾಗದಲ್ಲಿ ಇರುವ ಈ ಪಾಲಿಕೆಗಳಲ್ಲಿ ಜೆಡಿಎಸ್ ಪ್ರಭಾವ ಕಡಿಮೆ ಇರುವ ಕಾರಣ, ವಾಸ್ತವವಾಗಿ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತದೆ.

 Hubballi- Dharwad, Belagavi and Kalaburagi Corporation Election Results Live Updates and Highlights

ಬುಧವಾರ ಸಂಜೆ 6 ಗಂಟೆಗೆ ಮುಕ್ತಾಯಗೊಂಡ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶೇ.58.59 ರಷ್ಟು ಮತದಾನ ದಾಖಲಾಗಿದ್ದರೆ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಶೇ.53.81 ರಷ್ಟು ಮತದಾನ ದಾಖಲಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

Recommended Video

      ಗಾಯಕ್ಕೆ ತುತ್ತಾದ ರೋಹಿತ್ & ಪೂಜಾರ:5ನೇ ಟೆಸ್ಟ್ ಗೂ ಕಣಕ್ಕಿಳೋದಿಲ್ಲ | Oneindia Kannada

      Newest FirstOldest First
      6:23 PM, 6 Sep

      ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ರಿಸಲ್ಟ್: ವಿಜೇತರ ಪಟ್ಟಿ

      ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಯ ಮತಗಳ ಎಣಿಕೆ ಕಾರ್ಯವು ಇಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಜರುಗಿದ್ದು, ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿದ್ದು, ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ, ಪಕ್ಷೇತರರ ನೆರವಿನಿಂದ ಅಧಿಕಾರ ಚುಕ್ಕಾಣಿ ಹಿಡಿಯಲು ಪ್ರಯತ್ನ ಜಾರಿಯಲ್ಲಿದೆ.
      6:22 PM, 6 Sep

      ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ: ಗೆದ್ದವರ ಪಟ್ಟಿ

      ಭಾರಿ ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದೆ. ಇದೇ ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಭರ್ಜರಿ ಜಯಭೇರಿ ಬಾರಿಸಿದೆ. ಬೆಳಗಾವಿ ಜೊತೆಗೆ ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶವೂ ಇಂದೇ ಪ್ರಕಟವಾಗುತ್ತಿದೆ.
      3:20 PM, 6 Sep

      ಕಲಬುರಗಿ ಅತಂತ್ರ ಫಲಿತಾಂಶ:

      ಬಿಜೆಪಿ 23, ಕಾಂಗ್ರೆಸ್ 27, ಜೆಡಿಎಸ್ 4 ಇತರೆ 1 ಸ್ಥಾನಗಳಲ್ಲಿ ಗೆಲುವು.
      2:56 PM, 6 Sep

      ಬೆಳಗಾವಿ ಪಾಲಿಕೆ ಅಂತಿಮ ಫಲಿತಾಂಶ:

      ಬಿಜೆಪಿ - 35, ಕಾಂಗ್ರೆಸ್ - 10, ಎಐಎಂಐಎಂ - 1, ಎಂಇಎಸ್ - 2, ಇತರೆ - 10 ಸ್ಥಾನ.
      2:52 PM, 6 Sep

      ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಐಎಂಐಎಂ ಪಕ್ಷಕ್ಕೆ ಒಂದು ಸ್ಥಾನ.
      2:33 PM, 6 Sep

      ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಖಾತೆ ತೆರೆದ ಜೆಡಿಎಸ್. 42ನೇ ವಾರ್ಡ್ ನಲ್ಲಿ ಜೆಡಿಎಸ್ ಅಭ್ಯರ್ಥಿ ಅಲಿಮುದ್ದೀನ್ ಪಟೇಲ್ ಗೆಲುವು.
      1:58 PM, 6 Sep

      ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 36 ವಾರ್ಡ್‌ಗಳಲ್ಲಿ ಮುನ್ನಡೆ ಗೆದ್ದಿದ್ದರೆ, ಕಾಂಗ್ರೆಸ್ 9 ವಾರ್ಡ್‌ಗಳಲ್ಲಿ, ಸ್ವತಂತ್ರ ಅಭ್ಯರ್ಥಿಗಳು 12 ವಾರ್ಡ್‌ಗಳಲ್ಲಿ ಮತ್ತು ಎಐಎಂಐಎಂ 1ರಲ್ಲಿ ಗೆಲುವು ಸಾಧಿಸಿವೆ.
      Advertisement
      1:36 PM, 6 Sep

      ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಅತಂತ್ರ ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ ಪಕ್ಷವು 39 ಸ್ಥಾನ ಪಡೆದಿದ್ದು, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸ್ಪಷ್ಟ ಬಹುಮತ ಪಡೆಯಲು ಮೂರು ಸ್ಥಾನಗಳ ಕೊರತೆ ಎದುರಿಸಿತು. ಕಾಂಗ್ರೆಸ್ 33 ಸ್ಥಾನಗಳನ್ನು ಗೆಲ್ಲುವ ಮೂಲಕ ಕೆಚ್ಚೆದೆಯ ಪ್ರದರ್ಶನ ನೀಡಿದೆ. ಇನ್ನು ಜೆಡಿ(ಎಸ್) ಒಂದು ಸ್ಥಾನ ಗೆದ್ದು ನೀರಸ ಪ್ರದರ್ಶನ ನೀಡಿದೆ. ಮೊದಲ ಬಾರಿಗೆ ಸ್ಪರ್ಧಿಸಿದ AIMIM ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ಉತ್ತಮ ಪ್ರದರ್ಶನ ನೀಡಿದೆ. ಆರು ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ.
      1:13 PM, 6 Sep

      ಮೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ವಿಚಾರವಾಗಿ ನಮಗೆ ಸಮಾಧಾನ ತಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
      1:07 PM, 6 Sep

      ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಬಿಜೆಪಿಯ 39 ಅಭ್ಯರ್ಥಿಗಳು ಜಯ ಗಳಿಸಿದ್ದರೆ, ಕಾಂಗ್ರೆಸ್‌ನ 33, ಎಐಎಂಐಎಂ ಪಕ್ಷದ 3, ಜೆಡಿಎಸ್ ಪಕ್ಷದ 1 ಹಾಗೂ 6 ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ.
      12:59 PM, 6 Sep

      ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ: ಕಾಂಗ್ರೆಸ್- 22 ಗೆಲುವು, ಬಿಜೆಪಿ- 20 ಗೆಲುವು, ಜೆಡಿಎಸ್-3 ಗೆಲುವು ಹಾಗೂ ಪಕ್ಷೇತರ-2 ಗೆಲುವು.
      12:51 PM, 6 Sep

      ಧಾರವಾಡದಲ್ಲಿ ವಾರ್ಡ್ ನಂ.8ರಲ್ಲಿ ಮಾಜಿ ಮೇಯರ್ ಶಿವು ಹಿರೇಮಠ ಗೆಲುವು ಸಾಧಿಸಿದ್ದಾರೆ.
      Advertisement
      12:39 PM, 6 Sep

      ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಬಿಜೆಪಿ 34 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ 27 ವಾರ್ಡ್‌ಗಳಲ್ಲಿ, ಕಾಂಗ್ರೆಸ್ 6 ವಾರ್ಡ್‌ಗಳಲ್ಲಿ, ಜೆಡಿಎಸ್ 2 ಮತ್ತು ಎಐಎಂಐಎಂ 2 ರಲ್ಲಿ ಗೆದ್ದಿವೆ.
      12:39 PM, 6 Sep

      ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಜೆಡಿಎಸ್ ಗೆದ್ದು ಖಾತೆ ತೆರೆದಿದೆ. ವಾರ್ಡ್ ನಂ. 25ರಲ್ಲಿ ಲಕ್ಷ್ಮಿ ಹಿಂಡಸಗೇರಿ ಗೆದ್ದಿದ್ದಾರೆ.
      12:12 PM, 6 Sep

      ಎಐಎಂಐಎಂ ಮೊದಲ ಬಾರಿಗೆ ಹುಬ್ಬಳ್ಳಿ- ಧಾರವಾಡ ಪಾಲಿಕೆಯಲ್ಲಿ ತನ್ನ ಖಾತೆಯನ್ನು ತೆರೆದಿದೆ. ವಾರ್ಡ್ ನಂ.71ರಲ್ಲಿ ನಜೀರ್ ಹೊಯ್ನಾಲ್ ಗೆಲುವು ಸಾಧಿಸಿದ್ದಾರೆ.
      12:09 PM, 6 Sep

      ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 10 ವಾರ್ಡ್‌ಗಳಲ್ಲಿ ಗೆದ್ದರೆ, ಕಾಂಗ್ರೆಸ್ 19 ವಾರ್ಡ್‌ಗಳಲ್ಲಿ, ಜೆಡಿಎಸ್ 2 ಮತ್ತು ಸ್ವತಂತ್ರ ಅಭ್ಯರ್ಥಿಗಳು 2 ವಾರ್ಡ್‌ಗಳಲ್ಲಿ ಗೆದ್ದಿದ್ದಾರೆ.
      12:08 PM, 6 Sep

      ಹುಬ್ಬಳ್ಳಿ- ಧಾರವಾಡ ಪಾಲಿಕೆ ಬಿಜೆಪಿ ತೆಕ್ಕೆಗೆ ಬಿದ್ದಿದೆ. ಹುಬ್ಬಳ್ಳಿ- ಧಾರವಾಡ ಪಾಲಿಕೆಯಲ್ಲಿ ಬಿಜೆಪಿ ಹ್ಯಾಟ್ರಿಕ್ ಸಾಧನೆ ಮಾಡಿದೆ. ಬಿಜೆಪಿ ಪಕ್ಷದ 32 ಅಭ್ಯರ್ಥಿಗಳು ಜಯ ಗಳಿಸಿದ್ದರೆ, ಕಾಂಗ್ರೆಸ್ ಪಕ್ಷದ 20 ಅಭ್ಯರ್ಥಿಗಳು ಜಯಿಸಿದ್ದರೆ, ಇತರೆ 5 ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.
      11:57 AM, 6 Sep

      ಹುಬ್ಬಳ್ಳಿ-ಧಾರವಾಡ ಪಾಲಿಕೆ: ಬಿಜೆಪಿ 29 ವಾರ್ಡ್‌ಗಳಲ್ಲಿ ಜಯ ಸಾಧಿಸಿದ್ದು, ಕಾಂಗ್ರೆಸ್ 17 ವಾರ್ಡ್‌ಗಳಲ್ಲಿ, ಸ್ವತಂತ್ರ ಅಭ್ಯರ್ಥಿಗಳು 4 ವಾರ್ಡ್‌ಗಳಲ್ಲಿ ಜಯಗಳಿಸಿದೆ.
      11:48 AM, 6 Sep

      ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸ್ವತಂತ್ರವಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಜೆಪಿ-31, ಕಾಂಗ್ರೆಸ್-8, ಎಂಇಎಸ್​-2, ಪಕ್ಷೇತರ-8 ಗೆದ್ದಿದ್ದಾರೆ. ಇನ್ನು 8 ವಾರ್ಡ್​ಗಳ ಫಲಿತಾಂಶ ಮಾತ್ರ ಬಾಕಿ ಇದೆ.
      11:45 AM, 6 Sep

      ಬೆಳಗಾವಿ ಪಾಲಿಕೆಯಲ್ಲಿ 31 ವಾರ್ಡ್‌ಗಳಲ್ಲಿ ಬಿಜೆಪಿ ಗೆದ್ದರೆ, ಕಾಂಗ್ರೆಸ್ 8 ವಾರ್ಡ್‌ಗಳಲ್ಲಿ, 7 ವಾರ್ಡ್‌ಗಳಲ್ಲಿ ಸ್ವತಂತ್ರರು ಮತ್ತು 1 ವಾರ್ಡ್‌ನಲ್ಲಿ ಎಐಎಂಐಎಂ ಗೆದ್ದಿದೆ.
      11:39 AM, 6 Sep

      ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ನಂ.36ರ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್‌ನ ರಜನಿ ಅಣ್ಣಯ್ಯ ಗೆಲುವು ಕಂಡಿದ್ದಾರೆ. ರಜನಿ ಅಣ್ಣಯ್ಯ ಒಟ್ಟು 1997 ಮತಗಳ ಅಂತರದೊಂದಿಗೆ ಗೆಲುವು ಕಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಲೀಲಾವತಿ, ಬಿಜೆಪಿಯ ಶೋಭಾ ಸ್ಪರ್ಧಿಸಿದ್ದರು.
      11:34 AM, 6 Sep

      ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿದರು ಮತ್ತು ಬೆಳಗಾವಿಯ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದರು.
      11:24 AM, 6 Sep

      ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದತ್ತ ಸಾಗುತ್ತಿದೆ.
      11:22 AM, 6 Sep

      ಕೆಜಿಎಫ್ ನಗರಸಭೆ ವಾರ್ಡ್ ನಂ.12ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೋನಿಶಾ ಗೆದ್ದಿದ್ದಾರೆ. ಅವರು 696 ಪಡೆದುಕೊಂಡಿದ್ದರೆ, ಸ್ವತಂತ್ರ ಅಭ್ಯರ್ಥಿ ಜಯದೇವಿ 338 ಮತ ಪಡೆದರು. ಬಿಜೆಪಿಯ ನಂದಿನಿ ದೇವಿ 293 ಮತ ಪಡೆದಿದ್ದಾರೆ.
      11:19 AM, 6 Sep

      ಬೆಳಗಾವಿಯ ಮಹಾನಗರ ಪಾಲಿಕೆಯ 29 ವಾರ್ಡ್‌ಗಳ ಫಲಿತಾಂಶವನ್ನು ಘೋಷಿಸಲಾಗಿದ್ದು, ಕಾಂಗ್ರೆಸ್ 6 ವಾರ್ಡ್‌ಗಳಲ್ಲಿ ಗೆದ್ದರೆ, ಬಿಜೆಪಿ 14 ವಾರ್ಡ್‌ಗಳಲ್ಲಿ ಗೆದ್ದಿದೆ. ಇನ್ನು ಸ್ವತಂತ್ರ ಅಭ್ಯರ್ಥಿಗಳು 5 ವಾರ್ಡ್‌ಗಳಲ್ಲಿ ಮತ್ತು ಎಐಎಂಐಎಂ 1 ವಾರ್ಡ್‌ನಲ್ಲಿ ಗೆದ್ದಿದೆ.
      11:16 AM, 6 Sep

      ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಮಯ 11.05ರ ಹೊತ್ತಿಗೆ ಕಾಂಗ್ರೆಸ್- 11, ಬಿಜೆಪಿ- 7, ಜೆಡಿಎಸ್-1 ಹಾಗೂ ಸ್ವತಂತ್ರ- 2 ಅಭ್ಯರ್ಥಿಗಳು ಜಯಗಳಿಸಿದ್ದಾರೆ.
      11:14 AM, 6 Sep

      ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಬಿಜೆಪಿ ಪಕ್ಷ 25 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 14 ಸ್ಥಾನಗಳನ್ನು ಗೆದ್ದಿದೆ ಮತ್ತು ಮೂವರು ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ. ಜೆಡಿಎಸ್ ಹಾಗೂ ಎಎಪಿ ಇನ್ನೂ ಖಾತೆ ತೆರೆಯಬೇಕಿದೆ.
      11:03 AM, 6 Sep

      ಚಿಕ್ಕಬಳ್ಳಾಪುರ ಜಿಲ್ಲೆಯ ದೊಡ್ಡಬಳ್ಳಾಪುರ ನಗರಸಭೆ ಫಲಿತಾಂಶ ಅತಂತ್ರವಾಗಿದೆ. ಬಿಜೆಪಿ-12, ಕಾಂಗ್ರೆಸ್-9, ಜೆಡಿಎಸ್-7, ಇತರೆ-3 ಜಯ ಗಳಿಸಿದ್ದಾರೆ. ದೊಡ್ಡಬಳ್ಳಾಪುರ ನಗರಸಭೆಯಲ್ಲಿ BJP ದೊಡ್ಡ ಪಕ್ಷವಾಗಿದ್ದು, ಇದೇ ಮೊದಲ ಬಾರಿ 12 ಸ್ಥಾನಗಳಲ್ಲಿ ಬಿಜೆಪಿ ಜಯ.
      10:57 AM, 6 Sep

      ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪುರಸಭೆ ಕಾಂಗ್ರೆಸ್​ ತೆಕ್ಕೆಗೆ. 23 ಕ್ಷೇತ್ರಗಳಲ್ಲಿ 15 ಕ್ಷೇತ್ರ ಗೆದ್ದ ಕಾಂಗ್ರೆಸ್, 7 ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯ. ತರೀಕೆರೆಯಲ್ಲಿ ಬಿಜೆಪಿ ಕೇವಲ 1 ಕ್ಷೇತ್ರದಲ್ಲಿ ಮಾತ್ರ ಗೆದ್ದಿದೆ. ಇದು ಹಾಲಿ ಶಾಸಕ ಡಿ.ಎಸ್. ಸುರೇಶ್ ಮುಖಭಂಗ ಅನುಭವಿಸಿದ್ದಾರೆ.
      10:55 AM, 6 Sep

      ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದರೆ, ಕಲಬುರಗಿಯಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.
      READ MORE

      English summary
      Karnataka Municipal Election Results 2021 Live Updates: Check out Hubballi-Dharwad, Belagavi and Kalaburagi Municipal Corporation Election Results Live Updates and Highlights. Add Kannada Description
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X