ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಯೋಜಿತ ಜೇಷ್ಠತೆ ಪಟ್ಟಿ ರಚನೆ ಮೊದಲೇ 36 ಅಧಿಕಾರಿಗಳಿಗೆ ಬಡ್ತಿ!

|
Google Oneindia Kannada News

ಅರಣ್ಯ ಸಚಿವರ ಖಾತೆ ಬದಲಾವಣೆಯಾಗುತ್ತಿದ್ದಂತೆ ಸಂಯೋಜಿತ ಜೇಷ್ಠತಾ ಪಟ್ಟಿ ತಯಾರಿಸುವ ಮೊದಲೇ ವಲಯ ಅರಣ್ಯ ಅಧಿಕಾರಿಗಳಿಗೆ ಬಡ್ತಿ ನೀಡಿ ಅರಣ್ಯ ಇಲಾಖೆ ವಿವಾದಕ್ಕೆ ನಾಂದಿ ಹಾಡಿದೆ. ವಲಯ ಅರಣ್ಯ ಅಧಿಕಾರಿ ಹುದ್ದೆಯಿಂದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಬಡ್ತಿ ನೀಡಿ ಅವರಿಗೆ ವಿವಿಧ ಹುದ್ದೆಗಳಿಗೆ ಪ್ರಭಾರದಲ್ಲಿ ನಿಯೋಜಿಸಿ ಆದೇಶಿಸಿರುವ ಸರ್ಕಾರದ ಆದೇಶ ಹೊರ ಬಿದ್ದಿದೆ. ಬಡ್ತಿ ಹೊಂದಿದ ಅಧಿಕಾರಿಗಳಿಗೆ ಹೆಚ್ಚುವರಿ ಪ್ರಭಾರದಲ್ಲಿ ಇರಿಸಿ ನಾನಾ ವೃತ್ತಗಳಿಗೆ ನಿಯೋಜಿಸಲಾಗಿದೆ. ಸಚಿವರೇ ತಡೆ ಮಾಡಿದ್ದ ಪ್ರಸ್ತಾವನೆಯನ್ನು ಸಚಿವರ ಖಾತೆ ಬದಲಾದ ಬಳಿಕ ವಿಲೇವಾರಿಯಾಗಿದ್ದು, ಇದರಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ರಾಜ್ಯದಲ್ಲಿ ವಲಯ ಅರಣ್ಯ ಅಧಿಕಾರಿಗಳ ಬಡ್ತಿ ವಿಚಾರ ಭಾರೀ ವಿವಾದಕ್ಕೆ ನಾಂದಿ ಹಾಡಿತ್ತು. ಬೆಂಗಳೂರು ಸೇರಿದಂತೆ ಐದು ವೃತ್ತಗಳಲ್ಲಿನ ಜೇಷ್ಠತಾ ಪಟ್ಟಿಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ತಡೆ ನೀಡಿತ್ತು. ಅರಣ್ಯ ಇಲಾಖೆಯ ಅವೈಜ್ಞಾನಿಕ ಬಡ್ತಿ ನೀತಿ ವಿರುದ್ಧ ನಲ್ಲಿ ದಾವೆ ಹಾಕಲಾಗಿದೆ. ಇದರ ನಡುವೆಯೂ ವಲಯ ಅರಣ್ಯ ಅಧಿಕಾರಿಗಳಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಬಡ್ತಿ ನೀಡುವ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸಚಿವ ಆನಂದ್ ಸಿಂಗ್ ಅವರು ಸಂಯೋಜಿತ ಜೇಷ್ಠತಾ ಪಟ್ಟಿ ಅಂತಿಮಗೊಳಿಸದೇ ಯಾವುದೇ ಕಾರಣಕ್ಕೂ ಬಡ್ತಿ ನೀಡುವುದಿಲ್ಲ ಎಂದು ಇತ್ತೀಚೆಗೆ ಸ್ಪಷ್ಟಪಡಿಸಿದ್ದರು. ಆದರೆ ಖಾತೆ ಬದಲಾವಣೆ ಹಿನ್ನೆಲೆಯಲ್ಲಿ ಕಡತ ವಿಲೇವಾರಿಗೆ ಸಚಿವರೇ ಸೂಚಿಸಿ ವಿಲೇವಾರಿ ಮಾಡಿಸಿದ್ದಾರೆ ಎನ್ನಲಾಗಿದೆ.

ವಿವಾದಾತ್ಮಕ ಬಡ್ತಿ ಆದೇಶ

ವಿವಾದಾತ್ಮಕ ಬಡ್ತಿ ಆದೇಶ

ಮುಖ್ಯಮಂತ್ರಿ ಯಡಿಯೂರಪ್ಪ ನೂತನ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದರಿಂದ ಖಾತೆಯಲ್ಲಿ ಹಲವು ಬದಲಾವಣೆಯಾಗಿತ್ತು. ಅರಣ್ಯ ಖಾತೆ ಆನಂದ್ ಸಿಂಗ್ ಅವರಿಂದ ಕಸಿದುಕೊಂಡು ಅರವಿಂದ ಲಿಂಬಾವಳಿ ಅವರಿಗೆ ನೀಡಲಾಗಿತ್ತು. ಖಾತೆ ಬದಲಾಗಿದ್ದೇ ತಡ ಸಚಿವ ಆನಂದ್ ಸಿಂಗ್ ಅವರೇ ತಡೆ ಹಿಡಿದಿದ್ದ ಕಡತ ಇದೀಗ ರಾತ್ರೋ ರಾತ್ರಿ ವಿಲೇವಾರಿಯಾಗಿದೆ. ಸಂಯೋಜಿತ ಜೇಷ್ಠತಾ ಪಟ್ಟಿ ತಯಾರಿಸದೇ ಬಡ್ತಿ ನೀಡುವುದರಿಂದ ಸುಮಾರು 36 ಅಧಿಕಾರಿಗಳ ವೇತನ 52 ಸಾವಿರದಿಂದ 97 ಸಾವಿರಕ್ಕೆ ಜಿಗಿಯಲಿದೆ. ಇದರಿಂದ ಅರಣ್ಯ ಇಲಾಖೆಗೆ ಆರ್ಥಿಕವಾಗಿ ಭಾರೀ ಹೊಡೆತ ಬೀಳಲಿದೆ. ಸಂಯೋಜಿತ ಜೇಷ್ಠತಾ ಪಟ್ಟಿ ಇಲ್ಲದೇ ನಿಯಮ ಬಾಹಿರವಾಗಿ ಬಡ್ತಿ ನೀಡಿ ಕೆಲವರಿಗೆ ವರ್ಗಾವಣೆ ಮಾಡಿ ಸರ್ಕಾರ ಹೊರಡಿಸಿರುವ ಆದೇಶ ಅರಣ್ಯ ಇಲಾಖೆ ಸಿಬ್ಬಂದಿಯಲ್ಲಿ ಭಾರೀ ಕೋಲಾಹಲ ಎಬ್ಬಿಸಿದೆ.

ಒತ್ತಡಕ್ಕೆ ಮಣಿದ ಯಡಿಯೂರಪ್ಪ; ಮತ್ತೆ ಸಚಿವರ ಖಾತೆ ಮರು ಹಂಚಿಕೆ!ಒತ್ತಡಕ್ಕೆ ಮಣಿದ ಯಡಿಯೂರಪ್ಪ; ಮತ್ತೆ ಸಚಿವರ ಖಾತೆ ಮರು ಹಂಚಿಕೆ!

ಷರತ್ತು ವಿಧಿಸಿ ಬಡ್ತಿ

ಷರತ್ತು ವಿಧಿಸಿ ಬಡ್ತಿ

ನ್ಯಾಯಾಲಯದ ಆದೇಶ, ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯ ಆದೇಶದ ಉಲ್ಲಂಘನೆಯಾಗಲಿದೆ ಎಂಬ ಕಾರಣಕ್ಕೆ ಸೇವಾ ನಿಯಮ 32 ರ ಅಡಿಯಲ್ಲಿ ಕೆಲವು ಷರತ್ತು ವಿಧಿಸಿ ಬಡ್ತಿ ನೀಡಿ ಪ್ರಭಾರ ಹುದ್ದೆಗಳಿಗೆ ನಿಯೋಜಿಸಲಾಗಿದೆ.

ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ಹಾಗೂ ಹೈಕೋರ್ಟ್ ನೀಡುವ ತೀರ್ಪುಗಳಿಗೆ ಒಳಪಡಿಸಿ ಮುಂದಿನ ದಿನಗಳಲ್ಲಿ ಈ ಬಡ್ತಿ ಆದೇಶವನ್ನು ಬದಲಾವಣೆ ಮಾಡಲು ಆದೇಶದಲ್ಲಿ ಅವಕಾಶ ಕಲ್ಪಿಸಿದೆ. ಅಲ್ಲದೇ, ಬಡ್ತಿ ಹೊಂದಿದ ಅಧಿಕಾರಿಗಳಿಗೆ ನೇರ ನೇಮಕಾತಿಯಿಂದ ತುಂಬ ಬೇಕಿರುವ ಹುದ್ದೆಗಳಿಗೂ ನಿಯೋಜಿಸಲಾಗಿದೆ. ಸಂಯೋಜಿತ ಜೇಷ್ಠತಾ ಪಟ್ಟಿ ಸಂಬಂಧ ಆಡಳಿತ ಸುಧಾರಣೆ ಇಲಾಖೆ ಹಾಗೂ ಕಾನೂನು ಇಲಾಖೆ ನೀಡುವ ಅಭಿಪ್ರಾಯಕ್ಕೆ ಒಳಪಟ್ಟು ಈ ಆದೇಶದಲ್ಲಿ ಬದಲಾವಣೆ ತರಬಹುದು ವಲಯ ಅರಣ್ಯ ಅಧಿಕಾರಿಗಳನ್ನು ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಸ್ವತಂತ್ರ ಪ್ರಭಾರದಲ್ಲಿರಿಸಿರುವ ಈ ಆದೇಶವನ್ನು ಯಾವ ಸಂದರ್ಭದಲ್ಲಾದರೂ ಹಿಂಪಡೆಬಹುದು ಎಂಬ ನಿಯಮವನ್ನು ಸೇರಿಸಿ ಉನ್ನತ ಅಧಿಕಾರಿಗಳು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಹಾದಿ ಹಿಡಿದುಕೊಂಡಿದ್ದಾರೆ.

ಕೋರ್ಟ್ ಮೊರೆ

ಕೋರ್ಟ್ ಮೊರೆ

ಶಾಸಕ ಆನಂದ್ ಸಿಂಗ್ ಅರಣ್ಯ ಖಾತೆ ಕಳೆದುಕೊಂಡ ಬಳಿಕ ಹೊರಡಿಸಿರುವ ನಿಯಮ ಬಾಹಿರ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಕೆಲ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಸಂಯೋಜಿತ ಜೇಷ್ಠತಾ ಪಟ್ಟಿ ತಯಾರಿಸದೇ ಯಾವ ವರ್ಗಾವಣೆ ಮಾಡುವುದಿಲ್ಲ. ಬಡ್ತಿಯೂ ನೀಡುವುದಿಲ್ಲ ಎಂದು ಸಚಿವರೇ ಹೇಳಿದ್ದರು. ಅವರು ಖಾತೆ ಬದಲಾವಣೆಯಾಗುತ್ತಿದ್ದಂತೆ ಅದೇ ಸಚಿವರು ಈ ಕೊನೆ ಆದೇಶ ಹೊರಡಿಸಿರುವುದು ಅನ್ಯಾಯದಿಂದ ಕೂಡಿದೆ. ಸುಮಾರು ಅಧಿಕಾರಿಗಳಿಗೆ ಇದರಿಂದ ಅನ್ಯಾಯವಾಗಿದ್ದು, ಸರ್ಕಾರದ ಈ ಅಧಿಸೂಚನೆ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿದೆ. ಈ ಕುರಿತು ನ್ಯಾಯಾಲಯದಲ್ಲಿ ದಾವೆ ಹೂಡಲು ತಯಾರಿ ನಡೆಸಿದ್ದೇವೆ.

ಅರಣ್ಯ ಇಲಾಖೆಯಲ್ಲಿ ಜೇಷ್ಠತಾ ಪಟ್ಟಿ ಇಲ್ಲದೇ ಮುಂಬಡ್ತಿಗೆ ಕರಸತ್ತು!ಅರಣ್ಯ ಇಲಾಖೆಯಲ್ಲಿ ಜೇಷ್ಠತಾ ಪಟ್ಟಿ ಇಲ್ಲದೇ ಮುಂಬಡ್ತಿಗೆ ಕರಸತ್ತು!

ಇದಕ್ಕೆ ತಡೆ ನೀಡಿ

ಇದಕ್ಕೆ ತಡೆ ನೀಡಿ

ಅರಣ್ಯ ಖಾತೆಯ ನೂತನ ಸಚಿವ ಅರವಿಂದ ಲಿಂಬಾವಳಿ ಅವರು ಸಂಯೋಜಿತ ಜೇಷ್ಠತಾ ಪಟ್ಟಿ ತಯಾರಿಸದೇ ಹೊರಡಿಸಿರುವ ಈ ಬಡ್ತಿ ಆಧಾರಿತ ವರ್ಗಾವಣೆ ಆದೇಶವನ್ನು ಕೂಡಲೇ ತಡೆ ಹಿಡಿಯ ಬೇಕು. ಈ ಅದೇಶದಿಂದ ಅನೇಕ ಅಧಿಕರಿಗಳಿಗೆ ಅನ್ಯಾಯವಾಗಲಿದೆ. ಈಗ ಬಡ್ತಿ ಹೊಂದಿರುವರಿಗಿಂತಲೂ ಸೇವಾ ಜೇಷ್ಠತೆಯಲ್ಲಿ ಅಗ್ರಗಣ್ಯದಲ್ಲಿರುವರು ಅನ್ಯಾಯಕ್ಕೆ ಒಳಗಾಗಿದ್ದಾರೆ. ಸಂಯೋಜಿತ ಜೇಷ್ಠತಾ ಪಟ್ಟಿ ತಯಾರಿಸಿ ವಿವಾದ ಬಗೆ ಹರಿಸಿದ ಬಳಿಕ ಬಳಿಕವೇ ಬಡ್ತಿ ಮಾಡಬೇಕು. ಈ ಆದೇಶದ ಹಿಂದೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿರುವುದರಿಂದ ಕೂಡಲೇ ತಡೆ ಹಿಡಿಯಬೇಕು ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪೋನ್ ಎತ್ತದ ಸಂಜಯ್ ಮೋಹನ್

ಪೋನ್ ಎತ್ತದ ಸಂಜಯ್ ಮೋಹನ್

ಇನ್ನು ವಿವಾದಿತ ಬಡ್ತಿ ಆಧಾರಿತ ಬಡ್ತಿ ಆದೇಶ ಕುರಿತು ಪ್ರತಿಕ್ರಿಯೆ ನೀಡಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಅವರು ನಿರಾಕರಿಸಿದರು. ಒನ್ ಇಂಡಿಯಾ ಕನ್ನಡ ಹಲವು ಸಲ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ. ಅಧಿಕಾರಿಗಳಿಗೆ ಅನ್ಯಾಯ ಆಗುತ್ತಿರುವ ಬಗ್ಗೆ ಅರಣ್ಯ ಪಡೆಯ ಮುಖ್ಯಸ್ಥರೇ ತುಟಿ ಬಿಚ್ಚದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Recommended Video

ಇನ್ನೂ ಮುಂದೆ BJP ಗೆ ಕಾದಿದೆ ಸಂಕಷ್ಟ !! | Oneindia Kannada
ವಲಯ ಅರಣ್ಯ ಅಧಿಕಾರಿ ಹುದ್ದೆಯಿಂದ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಬಡ್ತಿ ಹೊಂದಿದವರ ಪಟ್ಟಿ

ವಲಯ ಅರಣ್ಯ ಅಧಿಕಾರಿ ಹುದ್ದೆಯಿಂದ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಬಡ್ತಿ ಹೊಂದಿದವರ ಪಟ್ಟಿ

ನಂದ ಗೋಪಾಲ್ - ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಾಂತ್ರಿಕ ಸಹಾಯಕ ಅರಣ್ಯ ಭವನ,

ಸಾಯೀಂದ್ರ ಕುಮಾರ್ - ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಾಂತ್ರಿಕ ಸಹಾಯಕ ಅರಣ್ಯ ಭವನ

ಸುರಪುರ ಎಚ್‌.ಎಸ್. ತಾಂತ್ರಿಕ ಸಹಾಯಕರು, ಅರಣ್ಯ ಭವನ( ಸಂಶೋಧನೆ)

ಹರೀಶ ಪಿ. ದೇವಜಿ, ತಾಂತ್ರಿಕ ಸಹಾಯಕರು, ( ಪ್ರಚಾರ ಮತ್ತು ಐಸಿಟಿ) ಅರಣ್ಯ ಭವನ,

ಸಂತೋಚ ಚೌವ್ಹಾಣ- ಸರ್ಕಾರಿ ನಾಟಾ ಸಂಗ್ರಹಾಲಯ, ದಾಂಡೇಲಿ

ಪ್ರವೀಣ್ ಕುಮಾರ್ ಶೆಟ್ಟಿ- ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು

ಸಯ್ಯದ್ ನಿಜಾಮುದ್ದೀನ್ - ತಾಂತ್ರಿಕ ಸಹಾಯಕ ( ಕಾನೂನು ಕೋಶ) ಅರಣ್ಯ ಭವನ

ಸಂಗಮೇಶ್ ಎನ್‌. ಪ್ರಭಾಕರ್ - ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾವೇರಿ,

ಆರ್‌. ರಮೇಶ್- ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ತಾಂತ್ರಿಕ ಸಹಾಯಕ ( ಕಾರ್ಯ ಯೋಜನೆ) ಅರಣ್ಯ ಭವನ

ಸತೀಶ್ ಎನ್‌. - ಸಹಾಯಕ, ಅರಣ್ಯ ಸಂರಕ್ಷಣಾಧಿಕಾರಿ ಕುದುರೆಮುಖ ವನ್ಯ ಜೀವಿ ಉಪ ವಿಭಾಗ,

ಸರಿತಾ ಪಿ.ಎಂ. - ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಬೆಂಗಳೂರು ಗ್ರಾಮಾಂತರ

ಕ್ಲಿಪೋರ್ಡ್ ಲೋಬೋ- ಅರಣ್ಯ ಸಂಚಾರಿ ದಳ, ಉಡುಪಿ,

ಐ.ಆರ್. ದಫೇದಾರ್- ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಕಾರವಾರ,

ಗೋಂಡಾ ಪಿ.ಎಸ್. - ತಾಂತ್ರಿಕ ಸಹಾಯಕ ( ಭೂ ದಾಖಲೆ) ಅರಣ್ಯ ಭವನ

ಮಹೇಶ್ ವಿ. ಮಾಲಗತ್ತಿ - ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಹಾಸನ

ಆರ್. ಎನ್‌. ಗೋಂಡಾ- ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಕೆಎಫ್ ಡಿಸಿ , ಶಿವಮೊಗ್ಗ

ರವೀಂದ್ರ ಜಿ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಾಂತ್ರಿಕ ಸಲಹೆಗಾರ( ಜಾಗೃತ) ಅರಣ್ಯ ಭವನ

ಗಿರೀಶ್ ಫಕೀರಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ತಿಪಟೂರು ವಿಭಾಗ

ಪಿ.ಸಿ. ರವೀಂದ್ರ- ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಹಾಸನ

ವಿ.ಕೆ. ರೂಪಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ- ಗದಗ

ಸಂತೋಷ್ ಕುಮಾರ್ ಎಮ್. ಎಸ್. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಬೆಂಗಳೂರು ಉತ್ತರ ವಿಭಾಗ

ಹಿಮವತಿ ಭಟ್- ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಮಂಚಿಕೇರಿ , ಯಲ್ಲಾಪುರ

ಶಂಕರಗೌಡ ಅಲಗೊಂಡ- ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಿಜಯಪುರ

ಕೃಷ್ಣ ಅಣ್ಣಯ್ಯ ಗೌಡ- ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಚಕ್ರ ತರಬೇತಿ ಸಂಸ್ಥೆ, ಹೊಸನಗರ

ಭಾಗ್ಯವಂತ್ ಎನ್. ಮಸೂದಿ- ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಮೈಸೂರು

ಮೋಹನ್ ಬಿದರಿ- ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಇಲವಾಲ ತರಬೇತಿ ಕೇಂದ್ರ ಮೈಸೂರು

ಕೆ.ಬಿ. ಮೋಹನ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಶ್ರೀಗಂಧ ಕೋಠಿ, ಶಿವಮೊಗ್ಗ

ಟಿ.ಎಂ. ದೇವರಾಜ್- ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಬೆಂಗಳೂರು

ಎಸ್‌. ಕೆ. ಅಪೂರ್ವ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ, ಬೆಂಗಳೂರು

ಜ್ಞಾನಾನಂದ್ , ಎಸ್. ತಾಂತ್ರಿಕ ಸಹಾಯಕರು ( ವನ್ಯಜೀವಿ) ಅರಣ್ಯ ಭವನ

ಉಮರ್ ಬಾದ್ ಶಾ. ಎನ್‌. - ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ದಾವಣಗೆರೆ

ಕೆ.ಸಿ. ಜಯೇಶ್- ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸಂಚಾರಿದಳ ಚಿಕ್ಕಮಗಳೂರು

ವಾಸಿಮ್ ರಾಜಾ, ಎಸ್‌. ತೆಲನಗಿ - ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂಚಾರಿ ದಳ ಬೆಳಗಾವಿ,

ಭಾಗ್ಯಲಕ್ಷ್ಮೀ ಎಂ.ಸಿ. - ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹನೂರು,

ಸಿ.ಎನ್‌. ಹರೀಶ್- ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾರವಾರ,

ಶ್ರೀನಿವಾಸ್ ನಾಯಕ್- ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸಂಚಾರಿ ದಳ ಮಡಿಕೇರಿ

English summary
As the forest minister's account changed, 36 zonal forest officials were promoted to the post of assistant forest conservation officer without a combined seniority list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X